ಪಹಲ್ಗಾಮ್ ಘಟನೆಯ ಹಿನ್ನೆಲೆಯಲ್ಲಿ ಉದ್ವಿಗ್ನ ಭಾರತ-ಪಾಕ್ ಸಂಬಂಧಗಳ ನಡುವೆ, ಪಂಜಾಬ್ ಗಡಿಯಲ್ಲಿ ಆಕಸ್ಮಿಕವಾಗಿ ಶೂನ್ಯರೇಖೆ ದಾಟಿದ ಬಿಎಸ್‌ಎಫ್ ಯೋಧ ಪಿಕೆ ಸಿಂಗ್‌ರನ್ನು ಪಾಕ್ ರೇಂಜರ್ಸ್ ಬಂಧಿಸಿದ್ದಾರೆ. ಪಾಕ್ ಮಾಧ್ಯಮಗಳು ಬಂಧನದ ಚಿತ್ರಗಳನ್ನು ಬಿಡುಗಡೆ ಮಾಡಿವೆ. ಯೋಧನ ಬಿಡುಗಡೆಗೆ ಬಿಎಸ್‌ಎಫ್ ಮತ್ತು ಪಾಕ್ ರೇಂಜರ್ಸ್ ನಡುವೆ ಮಾತುಕತೆ ನಡೆಯುತ್ತಿದೆ.
ನವದೆಹಲಿ (ಏ.24): ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಪೈಶಾಚಿಕ ಕೃತ್ಯದ ಬೆನ್ನಲ್ಲಿಯೇ ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ನಡುವೆ ಪಂಜಾಬ್‌ನ ಗಡಿ ಭಾಗದಲ್ಲಿ ಆಕಸ್ಮಿಕವಾಗಿ ಪಾಕ್ ಗಡಿಗೆ ಹೋಗಿದ್ದ ಬಿಎಸ್‌ಎಫ್ ಯೋಧನನ್ನು ಪಾಕಿಸ್ತಾನದ ಗಡಿ ಭದ್ರತಾ ಪಡೆ ಆಗಿರುವ ಪಾಕ್ ರೇಂಜರ್ಸ್ ಬಂಧಿಸಿದೆ.
ಭಾರತದ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧ ಪಿಕೆ ಸಿಂಗ್, ಆಕಸ್ಮಿಕವಾಗಿ ಬಿಎಸ್‌ಎಫ್ ಪೋಸ್ಟ್ ಜಲೋಕೆ ಡೋನಾ ಬಳಿ ಶೂನ್ಯ ರೇಖೆಯನ್ನು ದಾಟಿ ಪಾಕಿಸ್ತಾನ ಪ್ರದೇಶವನ್ನು ಪ್ರವೇಶಿಸಿದರು. ಗಡಿಯಲ್ಲಿ ಪಾಕ್ ರೇಂಜರ್‌ಗಳು ಅವರನ್ನು ಬಂಧಿಸಿದ್ದಾರೆ. ಪಾಕಿಸ್ತಾನಿ ಮಾಧ್ಯಮಗಳು ಸೈನಿಕನನ್ನು ಬಂಧಿಸಿರುವ ಫೋಟೋಗಳನ್ನು ಬಿಡುಗಡೆ ಮಾಡಿವೆ. ಇದರ ನಡುವೆ ಸೈನಿಕನನ್ನು ಬಿಡುಗಡೆ ಮಾಡುವಂತೆ ಬಿಎಸ್‌ಎಫ್ ಹಾಗೂ ಪಾಕ್ ರೇಂಜರ್ಸ್ ಅಧಿಕಾರಿಗಳ ನಡುವೆ ತುತ್ತು ಸಭೆ ನಡೆಯುತ್ತಿದೆ.

ಏಪ್ರಿಲ್ 23, ಬುಧವಾರದಂದು ಪಂಜಾಬ್‌ನ ಫಿರೋಜ್‌ಪುರದಲ್ಲಿ ಕರ್ತವ್ಯದಲ್ಲಿದ್ದ ವೇಳೆ ಆಕಸ್ಮಿಕವಾಗಿ ಅಂತರರಾಷ್ಟ್ರೀಯ ಗಡಿ ದಾಟಿದ ನಂತರ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ನ ಜವಾನನನ್ನು ಪಾಕಿಸ್ತಾನಿ ರೇಂಜರ್‌ಗಳು ಬಂಧಿಸಿದ್ದಾರೆ. ಜವಾನನ ಸುರಕ್ಷಿತ ಮರಳುವಿಕೆಯನ್ನು ಖಚಿತಪಡಿಸಿಕೊಳ್ಳಲು ಧ್ವಜ ಸಭೆ ಕರೆಯಲಾಗಿದೆ ಎಂದು ಹಿರಿಯ ಬಿಎಸ್‌ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.
ಶಿಮ್ಲಾ ಒಪ್ಪಂದ ರದ್ದು ಮಾಡಿದ ಪಾಕ್, 53 ವರ್ಷದ ಹಿಂದಿನ ಒಪ್ಪಂದದ ಬಗ್ಗೆ ಇಲ್ಲಿದೆ ಮಾಹಿತಿ..
ಬಿಎಸ್‌ಎಫ್‌ನಲ್ಲಿ ಕಾನ್ಸ್‌ಸ್ಟೇಬಲ್ ಆಗಿರುವ ಪಿಕೆ ಸಿಂಗ್‌ನ್ನು ಬಂಧಿಸಿ, ಆತನ ಬಳಿಯಲ್ಲಿದ್ದ ಶಸ್ತ್ರಾಸ್ತ್ರ, ಮದ್ದುಗುಂಡುಗಳು ಮತ್ತು ಇತರ ಮಿಲಿಟರಿ ಉಪಕರಣಗಳೊಂದಿಗೆ ಸೆರೆಹಿಡಿಯಲಾಗಿದೆ. ಈಗ ಅವನು ಪಾಕಿಸ್ತಾನಿ ಮಿಲಿಟರಿ ವಶದಲ್ಲಿದ್ದಾನೆ.
Pahalgam Attack: ಏರ್‌ಸ್ಪೇಸ್ ಕ್ಲೋಸ್, ಇಂಡಸ್ ಒಪ್ಪಂದ ರದ್ದು 'Act of War' ಎಂದು ಕರೆದ ಪಾಕಿಸ್ತಾನ!
ಬಿಎಸ್‌ಎಫ್ ಯುನಿಟ್ 24 ಬಿಎಸ್‌ಎಫ್ ಬೆಟಾಲಿಯನ್‌ನ ಕಾನ್ಸ್‌ಟೇಬಲ್ ಎನ್ನಲಾಗಿದೆ. ಈತನಿಂದ ಡಬ್ಲ್ಯೂಪಿಎನ್ ಜಿ 2, 3 ಮ್ಯಾಗ್‌ಗಳು ಮತ್ತು 60 ಎಕ್ಸ್ ಆರ್‌ಡಿಎಸ್, ಒಂದು ನೀರಿನ ಬಾಟಲ್, 2 ಸೊಳ್ಳೆ ಅಗರ್‌ಬತ್ತಿ, ಟಾರ್ಚ್, ವಾಕಿ ಟಾಕಿ ಸೆಟ್,ಲೈಟರ್ ಹಾಗೂ ಬಟ್ಟೆ ಚೀಲವನ್ನು ವಶಪಡಿಸಿಕೊಳ್ಳಲಾಗಿದೆ.


