Asianet Suvarna News Asianet Suvarna News

PFI ಪ್ರತಿಭಟನೆಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ, ವಿಡಿಯೋ ವೈರಲ್!

ಎನ್ಐಎ ಹಾಗೂ ರಾಜ್ಯ ಪೊಲೀಸರ ದಾಳಿಯಿಂದ ಕೆರಳಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ದೇಶಾದ್ಯಂತ ಪ್ರತಿಭಟನೆ ಆಯೋಜಿಸಿದೆ. ಹಿಂಸಾತ್ಮಕ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳತ್ತಿದೆ. ಇಷ್ಟೇ ಅಲ್ಲ ಈ ಪ್ರತಿಭಟನೆಯಲ್ಲಿ ಪಾಕಿಸ್ತಾನ ಜಿಂದಾಬ್ ಘೋಷಣೆ ಕೂಗಲಾಗಿದೆ 

Pakistan zindabad slogans raised in pune during PFI and Islamic outfit protest against NIA and state police raids ckm
Author
First Published Sep 24, 2022, 5:53 PM IST

ಪುಣೆ(ಸೆ.24): ಕಾನೂನುಬಾಹಿರ ಚಟುವಟಿಕೆ ನಡೆಸುತ್ತಿರುವ ಆರೋಪ ಹೊತ್ತಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮೇಲೆ ರಾಷ್ಟ್ರೀಯ ತನಿಖಾ ಹಾಗೂ ಆಯಾ ರಾಜ್ಯ ಪೊಲೀಸರು ದಾಳಿ ನಡೆಸಿದೆ. ಹಲವು ಮುಖಂಡರನ್ನು ಬಂಧಿಸಲಾಗಿದೆ. ಇದರಿಂದ ಕೆರಳಿರುವ ಪಿಎಫ್ಐ ಕಾರ್ಯಕರ್ತರು ದೇಶಾದ್ಯಂತ ಹಿಂಸಾತ್ಮಕ ಪ್ರತಿಭಟನೆ ಕೈಗೊಂಡಿದ್ದಾರೆ. ಕೇರಳದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಇದೀಗ ಪುಣೆಯಲ್ಲಿ ಪಿಎಫ್ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೀಗ ಬಿಜೆಪಿ ದೇಶವಿರೋಧಿ ಕೃತ್ಯದಲ್ಲಿ ತೊಡಗಿರುವ ಪಿಎಫ್ಐ ಬ್ಯಾನ್ ಜೊತೆಗೆ ದೇಶ ದ್ರೋಹದ ಘೋಷಣೆ ಕೂಗಿದ ಪಿಎಫ್ಐ ಕಾರ್ಯಕರ್ತರು, ಮುಖಂಡರನ್ನು ಬಂಧಿಸುವಂತೆ ಆಗ್ರಹಿಸಿದೆ.

ಪುಣೆಯ ಜಿಲ್ಲಾಧಿಕಾರಿ ಕಚೇರಿ ಹೊರಗಡೆ  ಭಾರಿ ಸಂಖ್ಯೆಯಲ್ಲಿ ಸೇರಿದ್ದ ಪಿಎಫ್ಐ ಕಾರ್ಯಕರ್ತರು ಪ್ರತಿಭಟನೆ(PFI Protest) ನಡೆಸಿದ್ದಾರೆ. ದೇಶಾದ್ಯಂತ ಎನ್ಐಎ ದಾಳಿ(NIA Raids) ಹಾಗೂ ಬಂಧಿತರನ್ನು(Arrest) ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದೆ. ಈ ವೇಳೆ ಪೊಲೀಸರು 40ಕ್ಕೂ ಹೆಚ್ಚು ಮಂದಿ ಪಿಎಫ್ಐ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಪೊಲೀಸರು ಪಿಎಫ್ಐ ಮುಖಂಡರು(popular front of india), ಕಾರ್ಯಕರ್ತರನ್ನು ವಶಕ್ಕೆ ಪಡೆಯುತ್ತಿದ್ದಂತೆ ಪಾಕಿಸ್ತಾನ ಜಿಂದಾಬಾದ್(Pakistan Zindabad) ಘೋಷಣೆ ಕೂಗಲಾಗಿದೆ.

ಭಾರತವನ್ನು ಇಸ್ಲಾಮೀಕರಣ ಮಾಡಲು ಹೊರಟ PFI ವಿರುದ್ಧ NIA ದಾಳಿ, 45 ಶಂಕಿತರು ಅರೆಸ್ಟ್!

ಫಿಎಫ್ಐ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಇದರ ನಡುವೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿರುವುದು ಗಮನಕ್ಕೆ ಬಂದಿದೆ. ಈ ಕುರಿತು ವಿಡಿಯೋಗಳು ಲಭ್ಯವಾಗಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪುಣೆ ಡೆಪ್ಯೂಟಿ ಕಮಿಷನರ್ ಪೊಲೀಸ್(Police) ಸಾಗರ್ ಪಾಟಿಲ್ ಹೇಳಿದ್ದಾರೆ.

 

 

ಈ ಘಟನೆ ವಿರುದ್ಧ ಬಿಜೆಪಿ ನಾಯಕರು(BJP) ಕೆರಳಿದ್ದಾರೆ. ಪಿಎಫ್ಐ ಕಾರ್ಯಕರ್ತರ ವಿರುದ್ದ ಕಠಿಣ ಕ್ರಮಕ್ಕೆ ಬಿಜೆಪಿ ಒತ್ತಾಯಿಸಿದೆ. ಇಷ್ಟೇ ಅಲ್ಲ ಇಂತಹ ದೇಶದ್ರೋಹದ ಸಂಘಟನೆಯನ್ನು ನಿಷೇಧಿಸಿಲು ಆಗ್ರಹಿಸಿದೆ. 

ED NIA raid PFI; ಶಿರಸಿಯಲ್ಲಿ ದೇಶವಿರೋಧಿ ಚಟುವಟಿಕೆಯಲ್ಲಿದ್ದ ಎಸ್‌ಡಿಪಿಐ ಮುಖಂಡನ ಬಂಧನ

ಪಿಎಫ್‌ಐ ಕೇರಳ ಬಂದ್‌ ವೇಳೆ ವ್ಯಾಪಕ ಹಿಂಸೆ
ಎನ್‌ಐಎ ದಾಳಿ ಖಂಡಿಸಿ ವಿವಾದಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಶುಕ್ರವಾರ ಕರೆ ನೀಡಿದ್ದ ‘ಕೇರಳ ಬಂದ್‌’ ಹಿಂಸಾರೂಪಕ್ಕೆ ತಿರುಗಿದೆ. ಅನೇಕ ಕಡೆ ಅಂಗಡಿ-ಮುಂಗಟ್ಟುಗಳನ್ನು ಹಾಗೂ ವಾಹನಗಳನ್ನು ಧ್ವಂಸಗೊಳಿಸಲಾಗಿದೆ. ಸರ್ಕಾರಿ ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಈ ವೇಳೆ ಚಾಲಕರು ಹಾಗೂ ನಿರ್ವಾಹಕರಿಗೆ ಕಲ್ಲೇಟು ಬಿದ್ದು ಗಾಯಗಳಾಗಿವೆ. ಅನೇಕ ಕಡೆ ಹಿಂಸೆಗಳಲ್ಲಿ ಪೊಲೀಸರೂ ಗಾಯಗೊಂಡಿದ್ದಾರೆ. ಹಿಂಸೆ ನಡೆಸಿದ 100ಕ್ಕೂ ಹೆಚ್ಚು ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಲಾಗಿದೆ. ರಾಜ್ಯದ ಅನೇಕ ಭಾಗಗಳಲ್ಲಿ ಪಿಎಫ್‌ಐ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದು, ರಸ್ತೆ ತಡೆಗಳನ್ನು ನಡೆಸಿದ್ದಾರೆ. ಅಂಗಡಿಗಳು, ಮಾರುಕಟ್ಟೆಗಳನ್ನು ಬಲವಂತವಾಗಿ ಮುಚ್ಚಿಸಿದ್ದಾರೆ. ಏತನ್ಮಧ್ಯೆ ಕಣ್ಣೂರಿನ ಆರೆಸ್ಸೆಸ್‌ ಕಚೇರಿ ಮೇಲೆ ಪೆಟ್ರೋಲ್‌ ಬಾಂಬ್‌ ಅನ್ನು ದುಷ್ಕರ್ಮಿಗಳು ಎಸೆದಿದ್ದಾರೆ.
 

Follow Us:
Download App:
  • android
  • ios