Asianet Suvarna News Asianet Suvarna News

ಮುಂದಿನ 10 ವರ್ಷಗಳಲ್ಲಿ ಪಾಕಿಸ್ತಾನ ಭಾರತದ ಭಾಗವಾಗಲಿದೆ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್!

ಲೋಕಸಭಾ ಚುನಾವಣೆಗೂ ಮುನ್ನವೇ ಪಾಕ್‌ ಆಕ್ರಮಿತ ಕಾಶ್ಮೀರವನ್ನು ನಾವು ವಾಪಸ್ ಪಡೆಯುತ್ತೇವೆ. ಮುಂದಿನ 10 ವರ್ಷಗಳಲ್ಲಿ ಪಾಕಿಸ್ತಾನವು ಭಾರತದ ಭಾಗವಾಗಲಿದೆ.

Pakistan will become part of India in next 10 years said Basanagowda Patil Yatnal sat
Author
First Published Jan 14, 2024, 3:48 PM IST

ವಿಜಯಪುರ (ಜ.14): ಲೋಕಸಭಾ ಚುನಾವಣೆಗೂ ಮುನ್ನವೇ ಪಾಕ್‌ ಆಕ್ರಮಿತ ಕಾಶ್ಮೀರವನ್ನು ನಾವು ವಾಪಸ್ ಪಡೆಯುತ್ತೇವೆ. ಜೊತೆಗೆ, ಮುಂದಿನ 10 ವರ್ಷಗಳಲ್ಲಿ ಪಾಕಿಸ್ತಾನವು ಭಾರತದ ಭಾಗವಾಗಲಿದೆ. ಆಗ ಪಾಕಿಸ್ತಾನ ಭಾರತದ ಒಂದು ರಾಜ್ಯವಾಗಿರುತ್ತದೆ ಎಂದು ಮಾಜಿ ಕೇಂದ್ರ ಸಚಿವ, ಹಾಲಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್‌ ಹೇಳಿದ್ದಾರೆ.

ವಿಜಯಪುರದಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಾಲದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ 5ನೇ ಬಲಾಢ್ಯ ಆರ್ಥಿಕ ರಾಷ್ಟ್ರವಾಗಿದೆ. ಜಮ್ಮು ಕಾಶ್ಮೀರಕ್ಕೆ ಇದ್ದ ವಿಶೇಷ ಮಾನ್ಯತೆಯನ್ನು ರದ್ದುಗೊಳಿಸಲಾಗಿದೆ. ಈಗ ನಾವು  ಆಕ್ರಮಿತ ಕಾಶ್ಮೀರವನ್ನು ನಾವು ಹಿಂಪಡೆಯುತ್ತೇವೆ. ಲೋಕಸಭಾ ಚುನಾವಣೆಗೂ ಮುನ್ನವೇ ಪಾಕ್ ಆಕ್ರಮಿತ ಕಾಶ್ಮೀರವನ್ನು (Pakistan Occupied Kashmir) ವಾಪಸ್ ಪಡೆಯುತ್ತೇವೆ. ಮುಂದಿನ 10 ವರ್ಷಗಳಲ್ಲಿ ಪಾಕಿಸ್ತಾನವು ಭಾರತದ ಭಾಗವಾಗಲಿದೆ. ಆಗ ಪಾಕಿಸ್ತಾನವು ಭಾರತದ ಒಂದು ರಾಜ್ಯವಾಗಲಿದೆ. ಭಾರತದ ಹಿಂದೂ ಧರ್ಮ ಇಡೀ ಜಗತ್ತನ್ನೇ ಆಳುತ್ತದೆ ಎಂದು ಹೇಳಿದರು.

Karnataka murder politics : ನನಗೆ ವಿಷ ಹಾಕಿ ಸಾಯಿಸ್ತಾರೆಂದು ಭಯ ವ್ಯಕ್ತಪಡಿಸಿದ ಸಂಸದ ಜಿ.ಎಂ. ಸಿದ್ದೇಶ್ವರ್!

ರಾಹುಲ್ ಗಾಂಧಿ ನೇತೃತ್ವದಲ್ಲಿ ನ್ಯಾಯಯಾತ್ರೆ ಕುರಿತು ಮಾತನಾಡಿದ ಅವರು,  ಈ ದೇಶಕ್ಕೆ ಅನ್ಯಾಯ ಮಾಡಿದವರು, ದೇಶವನ್ನು ವಿಭಜನೆ ಮಾಡಿದವರು, ದೇಶವನ್ನು ತುಂಡರಿಸಿದವರು, ದೇಶ ವಿಭಜನೆಯಲ್ಲಿ ಕೋಟ್ಯಾಂತರ ಹಿಂದೂಗಳ ಕೊಲೆಗೆ ಕಾರಣವಾಗಿದ್ದೆ ಈ ನಕಲಿ ಗಾಂಧಿ ಕುಟುಂಬವಾಗಿದೆ. ಇವರು ಅಧಿಕಾರದಲ್ಲಿದ್ದಾಗ ದೇಶದ ಅಭಿವೃದ್ಧಿ ಆಗಲಿಲ್ಲ. ಮೋದಿ ಅವರ ಕಾಲದಲ್ಲಿ ಭಾರತ ಐದನೇ ಬಲಾಢ್ಯ ಆರ್ಥಿಕ ರಾಷ್ಟ್ರವಾಗಿದೆ. ರಾಹುಲ್ ಗಾಂಧಿ ಸಾವಿರಾರು ಕಿಲೋಮೀಟರ್ ಪಾದಯಾತ್ರೆ ಮಾಡಿದರೇನು? ಆತನ ಒಂದು ಸ್ಟೇಟ್ಮೆಂಟ್ ಮತಗಳನ್ನೇ ಕಳೆದುಕೊಂಡು ಬಿಡುತ್ತದೆ ಎಂದು ಹೇಳಿದರು.

ವಂಶಾಡಳಿತ ರಾಜಕಾರಣ ಅಂತ್ಯ: ದೇಶದಲ್ಲಿ ಮೂರನೇ ಬಾರಿ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಆಯ್ಕೆಯಾಗುತ್ತಾರೆ. ಮೋದಿ ಮತ್ತೆ ಪ್ರಧಾನಿಯಾಗುವುದನ್ನು ತಡೆಯಲು ಜಗತ್ತಿನ ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ. ಮೋದಿ ಪ್ರಧಾನಿಯಾದ ಬಳಿಕ ಇಡೀ ದೇಶದಲ್ಲಿ ವಂಶಾಡಳಿತ, ಭ್ರಷ್ಟಾಚಾರ, ಹೊಂದಾಣಿಕೆ ರಾಜಕಾರಣ ಅಂತ್ಯವಾಗುತ್ತದೆ. ಮುಂಬರುವ ಜುಲೈ ನಲ್ಲಿ ಇಡೀ ದೇಶಕ್ಕೆ ಸಂದೇಶ ಕೊಡುತ್ತಾರೆ. ವಂಶಾಡಳಿತ ರಾಜಕಾರಣ ಕೊನೆಯಾಗಲಿದೆ. ಈ ಮೂಲಕ ಬಿಜೆಪಿಯಲ್ಲಿ ಹೊಸ ಯುಗ ಪ್ರಾರಂಭವಾಗುತ್ತದೆ ಎಂದು ತಿಳಿಸಿದರು.

'ಗಾಂಧಿ ಕುಟುಂಬಕ್ಕಿದೆ ಗೋಪಾಷ್ಟಮಿ ಶಾಪ..' ಅನಂತ್‌ ಕುಮಾರ್‌ ಹೆಗಡೆ ಮಾತಿನ ಅಸಲಿಯತ್ತೇನು?

ರಾಹುಲ್‌ ಗಾಂಧಿಗೂ ಶಾಪವಿದೆ: ಗಾಂಧಿ ಮನೆತನಕ್ಕೆ ಸಂತರ ಶಾಪ ವಿಚಾವಾಗಿ ಮಾತನಾಡಿ,  ಗಾಂಧಿ ಕುಟುಂಬಕ್ಕೆ ಸಂತರ ಶಾಪ ಇರುವುದು ನಿಜ. ಇಂದಿರಾಗಾಂಧಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಗೋಹತ್ಯೆ ನಿಷೇಧ ಮಾಡುವ ಆಶ್ವಾಸನೆ ನೀಡಿದ್ದರು. ಅದರೂ ಗೋ ಹತ್ಯೆ ನಿಷೇಧ ಮಾಡದೆ ಇದ್ದಾಗ ಮುನಿಗಳು ಹೋರಾಟ ಮಾಡಿದ್ದರು. ಆಗ ಇಂದಿರಾ ಗಾಂಧಿ ಅವರ ಮೇಲೆ ಗುಂಡು ಹಾರಿಸಿದ್ದರು. ಆಗ ಸಂತರು ಶಾಪ ನೀಡಿದ್ದಾರೆ. ನಮ್ಮನ್ನ ಹೇಗೆ ರಸ್ತೆಯ ಮೇಲೆ ಕೊಂದಿದ್ದಿರೋ, ಹಾಗೇ ನಿಮ್ಮ ಕುಟುಂಬದವರಿಗೂ ಆಗಲಿ ಎಂದು ಶಾಪವಿದೆ. ಅದಕ್ಕೆ ರಾಜೀವ್ ಗಾಂಧಿ, ಇಂದಿರಾ ಗಾಂಧಿಗೂ ಆಗಿದೆ. ಈಗ ರಾಹುಲ್ ಗಾಂಧಿಗು ಶಾಪವಿದೆ. ಅದಕ್ಕೆ ರಾಹುಲ್ ಗಾಂಧಿ ಪರಿಸ್ಥಿತಿ ಹೀಗಾಗಿದೆ. ಶಾಪದಿಂದಲೇ ರಾಹುಲ್ ಗಾಂಧಿಗೆ ಮದುವೆ ಆಗಿಲ್ಲ. ಶಾಪದಿಂದಲೇ ಅದು ಎಲ್ಲಿ ಇರೋತ್ತೋ, ಹೇಗಿರುತ್ತೋ, ಎಲ್ಲಿ ದೇಶ ಬಿಟ್ಟು ಹೋಗುತ್ತೊ ಗೊತ್ತಿಲ್ಲ. ಶಾಪ ಕ್ರಮೇಣವಾಗಿ ಕುಟುಂಬವನ್ನ ನಾಶ ಮಾಡುತ್ತ ಹೋಗುತ್ತದೆ. ಗಾಂಧಿ ಕುಟುಂಬದ ನಾಶಕ್ಕೂ ಶಾಪವಿದೆ ಎಂದು ಹೇಳಿದರು.

Follow Us:
Download App:
  • android
  • ios