Karnataka murder politics : ನನಗೆ ವಿಷ ಹಾಕಿ ಸಾಯಿಸ್ತಾರೆಂದು ಭಯ ವ್ಯಕ್ತಪಡಿಸಿದ ಸಂಸದ ಜಿ.ಎಂ. ಸಿದ್ದೇಶ್ವರ್!
ರಾಜ್ಯದಲ್ಲಿ ರಾಜಕಾರಣಿಗಳಿಗೇ ಜೀವ ಭಯ ಶುರುವಾಗಿದೆ. ಈಗ ರಾಜ್ಯದ ಮತ್ತೊಮ್ಮ ರಾಜಕಾರಣಿ ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ ಅವರಿಗೆ ಜೀವ ಭಯ ಒಡ್ಡಲಾಗಿದೆ.
ದಾವಣಗೆರೆ (ಜ.14): ರಾಜ್ಯದಲ್ಲಿ ರಾಜಕಾರಣಿಗಳಿಗೇ ಜೀವ ಭಯ ಶುರುವಾಗಿದೆ. ಈಗಾಗಲೇ ಮಾಜಿ ಪ್ರಧಾನಮಂತ್ರಿ ದೇವೇಗೌಡರ ಪುತ್ರ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರಿಗೆ ಜೀವ ಭಯ ಒಡ್ಡಲಾಗಿದೆ. ಈಗ ರಾಜ್ಯದ ಮತ್ತೊಮ್ಮ ರಾಜಕಾರಣಿ ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ ಅವರಿಗೆ ಜೀವ ಭಯ ಒಡ್ಡಲಾಗಿದೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಜಿ.ಎಂ. ಸಿದ್ದೇಶ್ವರ ಅವರು, ಜೀವ ಬೆದರಿಕೆ ಬಗ್ಗೆ ಹೇಳಿಕೊಂಡಿದ್ದಾರೆ. ನನ್ನನ್ನು ಇಲ್ಲಿಂದ ತೆಗೆಯಬೇಕು ಎಂದು ಕೆಲವರು ಕಾಯುತ್ತಿದ್ದಾರೆ. ಕಾಲು ತೆಗೆಯಬೇಕು, ವಿಷ ಹಾಕಿ ಸಾಯಿಸಬೇಕು ಎಂದು ಹೊಂಚು ಹಾಕುತ್ತಿದ್ದಾರೆ. ಅದ್ದರಿಂದ ನಾನು ಎಲ್ಲೇ ಹೋದರೂ ಎಚ್ಚರಿಕೆಯಿಂದ ಇರುತ್ತೇನೆ. ಯಾರು ಏನೇ ಕೊಟ್ಟರೂ ತಿನ್ನುವುದಿಲ್ಲ. ದಾವಣಗೆರೆಯಿಂದ ಸಿದ್ದೇಶಪ್ಪನನ್ನು ತೆಗೆಯಬೇಕು ಎಂದು ಹೊಂಚು ಹಾಕಿದ್ದಾರೆ. ನನ್ನ ಸ್ನೇಹ ಬಳಗದಲ್ಲೇ ಈ ರೀತಿಯಾಗಿ ಹೊಂಚು ಹಾಕುತ್ತಿದ್ದಾರೆ ಎಂದು ಸಂಸದ ಜಿಎಂ ಸಿದ್ದೇಶ್ವರ್ ಭಯವನ್ನು ಬಿಚ್ಚಿಟ್ಟಿದ್ದಾರೆ.
ನಾಲ್ಕು ವರ್ಷದಿಂದ ನನ್ನ ಕೊಲೆಗೆ ಸಂಚು ನಡೀತಿದೆ; ಆದ್ರೆ, ನನ್ನ ಆಪ್ತನ ಮೇಲೆ ಅಟ್ಯಾಕ್ ಆಗಿದೆ: ಹೆಚ್.ಡಿ. ರೇವಣ್ಣ
ಇದಕ್ಕೂ ಮುನ್ನ ದಾವಣಗೆರೆ ಹೊಂಡದ ಸರ್ಕಲ್ ಚಂದ್ರಮೌಳೇಶ್ವರ ದೇವಾಲಯದಲ್ಲಿ ದಾವಣಗೆರೆ ಜಿಲ್ಲಾ ಬಿಜೆಪಿ ಘಟಕದಿಂದ ಸ್ವಚ್ಚತಾ ಕಾರ್ಯ ಕೈಗೊಳ್ಳಾಗಿತ್ತು. ದಾವಣಗೆರೆ ಸಂಸದ ಜಿ ಎಂ ಸಿದ್ದೇಶ್ವರ್ ನೇತೃತ್ವದಲ್ಲಿ ಹಮ್ಮಿಕೊಂಡ ಸ್ವಚ್ಛಾತಾ ಕಾರ್ಯದಲ್ಲಿ ಎಂ ಎಲ್ ಸಿ ಎನ್ ರವಿಕುಮಾರ್ ಸೇರಿದಂತೆ ಜಿಲ್ಲಾ ಮುಖಂಡರು ಪಾಲ್ಗೊಂಡಿದ್ದರು. ಜೈ ಶ್ರೀರಾಮ್ ಘೋಷಣೆಯೊಂದಿಗೆ ಸತತ ಒಂದು ಗಂಟೆಗಳ ಕಾಲ ಸಂಸದರು ಬಿಜೆಪಿ ಮುಖಂಡರು ಶ್ರಮದಾನ ಮಾಡಿದರು. ಪ್ರಧಾನಿ ಮೋದಿಯವರೇ ಸ್ವಚ್ಚತಾ ಅಭಿಯಾನಕ್ಕೆ ಪ್ರೇರಣೆಯ ಯಾಗಿದ್ದ ಅವರ ಒಂದು ಕರೆಗೆ ಸಾವಿರಾರು ದೇವಾಲಯಗಳು ಇಂದು ಸ್ಚಚ್ಚಗೊಂಡಿವೆ. ಆಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಗೊಳ್ಳುತ್ತಿದ್ದು ನಿಜಕ್ಕು ನಾಡಿನಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದ್ದರು.
ನಾಲ್ಲು ವರ್ಷದಿಂದ ನನ್ನ ಕೊಲೆಗೆ ಸಂಚು ನಡೆದಿದೆ: ನಾಲ್ಕು ವರ್ಷದಿಂದ ನನ್ನನ್ನು ಟಾರ್ಗೆಟ್ ಮಾಡಿದ್ದಾರೆ. ನನ್ನನ್ನು ಕೊಲೆ ಮಾಡಲು ಸಂಚು ನಡೆದಿತ್ತು. ಆದರೆ, ನನ್ನ ಆಪ್ತ ಅಶ್ವತ್ಥನ ಕಾರನ್ನು ಅಡ್ಡಗಟ್ಟಿ ಅಟ್ಯಾಕ್ ಮಾಡಿದ್ದಾರೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಆತಂಕಕಾರಿ ವಿಚಾರವನ್ನು ಹೊರ ಹಾಕಿದ್ದಾರೆ. ಭಾನುವಾರ ಬೆಳಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನನ್ನು ಟಾರ್ಗೆಟ್ ಮಾಡಿದ್ದಾರೆ, ನನ್ನ ಕೊಲೆಗೂ ಸಂಚು ನಡೆದಿತ್ತು. 4 ವರ್ಷಗಳಿಂದ ನನ್ನ ವಿರುದ್ದ ಸಂಚು ನಡೀತಿದೆ. ನನ್ನ ಆಪ್ತ ಅಶ್ವತ್ಥ ಮೇಲೆ ಅಟ್ಯಾಕ್ ಆದಾಗ ನನ್ನನ್ನು ಟಾರ್ಗೆಟ್ ಮಾಡಿದ್ದರು. ಇಂತಹ ಬ್ಲಾಕ್ ಮೆಲ್ ರಾಜಕೀಯಕ್ಕೆ ಕಾನೂನಿನ ಪ್ರಕಾರ ಉತ್ತರ ಕೊಡುತ್ತೇನೆ. ಅಶ್ವತ್ಥ ಕಾರು ಅಡ್ಡಗಟ್ಟಿ ಕೊಲೆಯತ್ನ ಪ್ರಯತ್ನ ನಡೆದಿತ್ತು. ನನ್ನನು ಮುಗಿಸಲು ಪ್ಲಾನ್ ನಡೆದಿತ್ತು. ನಾನು ಯಾವುದಕ್ಕೂ ಹೆದರೋದಿಲ್ಲ. ಇವರನ್ನು ಕಾನೂನಿನ ಮೂಲಕ ಎದುರಿಸುವೆ ಎಂದು ಹೇಳಿದರು.
ಹಾಸನ: ರೇವಣ್ಣ ಆಪ್ತನ ಹತ್ಯೆಗೆ ಯತ್ನ, ಗುತ್ತಿಗೆದಾರನಿಂದ ಮಾಹಿತಿ ಪಡೆದ ಎಸ್‌ಪಿ ಸುಜೀತಾ
ಕೊಲೆ ಮಾಡುವುದಕ್ಕೆ ಬೇರೆ ಕರೆಯಿಂದ ಕರೆಸಲಾಗಿದೆ: ಈ ಜಿಲ್ಲೆಯೊಳಗೆ ಇಲ್ಲಿಯವರಲ್ಲ, ಬೇರೆ ಕಡೆಯವರು ಬಂದು ಇಲ್ಲಿ ಅಟ್ಯಾಕ್ ಮಾಡುತ್ತಿದ್ದಾರೆ. ಅವರಿಗೆ ಯಾರಾರು ದುಡ್ಡು ಕೊಡ್ತಾರೆ, ಯಾರಾರು ಏನು ಮಾಡ್ತಾರೆ ಎನ್ನುವುದು ನನಗೆ ಗೊತ್ತಿದೆ. ಅದ್ಯಾವಂದು ಆಸ್ತಿ ಬರೆಸಿಕೊಂಡಿದ್ದೀನಿ, ಈ ಜಿಲ್ಲೆಯೊಳಗೆ ಜನ ಸಾಮಾನ್ಯರಿಗೆ ತೊಂದರೆ ಮಾಡುವಂತದ್ದು ನಾನು ಏನು ಮಾಡಿದ್ದೀನಿ. ನಾವೆಲ್ಲ ಈ ತರಹದ ಕೆಲಸ ಮಾಡುವುದಕ್ಕೆ ಆಗುತ್ತೇನ್ರಿ? ಕೆಲವು ರಾಜಕಾರಣಿಗಳು ದೇವೇಗೌಡನ ಕುಟುಂಬವನ್ನು ಎದುರಿಸಲಿಕ್ಕಾಗದೇ ಇಂತಹ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.