ಭಾರತದ ಮನವಿ ಸಲ್ಲಿಸಿರುವುದನ್ನು ಪಾಕಿಸ್ತಾನ ಒಪ್ಪಿಕೊಂಡಿದ್ದರೂ ಉಭಯ ದೇಶಗಳ ನಡುವೆ ಯಾವುದೇ ಹಸ್ತಾಂತರ ಒಪ್ಪಂದ ಜಾರಿಯಲ್ಲಿಲ್ಲ ಎಂದು ಹೇಳಿದೆ. ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಈತನ ವಿಚಾರಣೆಗಾಗಿ ಹಸ್ತಾಂತರ ಮಾಡಲು ಕೋರಲಾಗಿತ್ತು.

ನವದೆಹಲಿ (ಡಿಸೆಂಬರ್ 30, 2023): 26/11ರ ಮುಂಬೈ ದಾಳಿಯ ಮಾಸ್ಟರ್‌ ಮೈಂಡ್‌, ಲಷ್ಕರ್‌ ಎ ತೊಯ್ಬಾ ಸಂಸ್ಥಾಪಕ ಹಫೀಜ಼್ ಸಯೀದ್‌ನನ್ನು ಹಸ್ತಾಂತರ ಮಾಡುವಂತೆ ಪಾಕಿಸ್ತಾನಕ್ಕೆ ಭಾರತ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಪಾಕಿಸ್ತಾನ ತಿರಸ್ಕರಿಸಿದೆ. ಸಯೀದ್‌ ಈಗಲೂ ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ಹಲವು ಉಗ್ರ ಕೃತ್ಯಗಳಲ್ಲಿ ಆರೋಪಿಯಾಗಿದ್ದು, ಭಾರತದ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ದಾಖಲಿಸಿಕೊಂಡಿರುವ ಹಲವು ಪ್ರಕರಣಗಳಲ್ಲಿ ಈತನನ್ನು ವಿಚಾರಣೆ ಮಾಡುವ ಸಲುವಾಗಿ ಭಾರತಕ್ಕೆ ಹಸ್ತಾಂತರಕ್ಕೆ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿತ್ತು.

ಭಾರತದ ಮನವಿ ಸಲ್ಲಿಸಿರುವುದನ್ನು ಪಾಕಿಸ್ತಾನ ಒಪ್ಪಿಕೊಂಡಿದ್ದರೂ ಉಭಯ ದೇಶಗಳ ನಡುವೆ ಯಾವುದೇ ಹಸ್ತಾಂತರ ಒಪ್ಪಂದ ಜಾರಿಯಲ್ಲಿಲ್ಲ ಎಂದು ಹೇಳಿದೆ. ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಈತನ ವಿಚಾರಣೆಗಾಗಿ ಹಸ್ತಾಂತರ ಮಾಡಲು ಕೋರಲಾಗಿತ್ತು.

ಇದನ್ನು ಓದಿ: ಪಾಕ್ ಚುನಾವಣೆ; ಎಲ್ಲಾ ಸ್ಥಾನಕ್ಕೆ ಸ್ಪರ್ಧಿಸುತ್ತಿದೆ ಮುಂಬೈ ದಾಳಿಕೋರ ಹಫೀಜ್ ಪಕ್ಷ!

ಮುಂಬೈ ದಾಳಿ ಸಂಚುಕೋರ ಸಯೀದ್‌ ಪಾಕ್‌ ಸಂಸತ್‌ ಚುನಾವಣೆಯಲ್ಲಿ ಸ್ಪರ್ಧೆ
ಲಾಹೋರ್: 26/11ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಾಗೂ ಲಷ್ಕರ್‌ ಎ ತೊಯ್ಬಾ ಉಗ್ರ ಸಂಘಟನೆಯ ಸಂಸ್ಥಾಪಕ ಹಫೀಜ್ ಸಯೀದ್ ಇದೀಗ ಪಾಕಿಸ್ತಾನ ರಾಜಕೀಯ ಪ್ರವೇಶಿಸಿದ್ದಾನೆ. ಸಯೀದ್‌ ನೇತೃತ್ವದಲ್ಲಿ ಪಾಕಿಸ್ತಾನ್‌ ಮರ್ಕಾಜಿ ಮುಸ್ಲಿಂ ಲೀಗ್‌ (ಪಿಎಂಎಂಎಲ್‌) ಎಂಬ ಪಕ್ಷವನ್ನು ಸ್ಥಾಪಿಸಲಾಗಿದ್ದು, ಫೆಬ್ರವರಿ 8 ರಂದು ಪಾಕಿಸ್ತಾನದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡುವುದಾಗಿ ಪಕ್ಷ ತಿಳಿಸಿದೆ.

ಭಯೋತ್ಪಾದನೆ ಪ್ರಕರಣದಲ್ಲಿ ಸಯೀದ್‌ 2019 ರಿಂದಲೂ ಜೈಲಿನಲ್ಲಿದ್ದಾನೆ. ಸಯೀದ್‌ನ ಬೆಂಬಲಿಗರು ಅಥವಾ ಲಷ್ಕರ್‌- ಸದಸ್ಯರೇ ಇದೀಗ ಪಕ್ಷ ಸ್ಥಾಪಿಸಿ ಚುನಾವಣೆ ಕಣಕ್ಕಿಳಿದಿದ್ದಾರೆ. ಸಯೀದ್‌ ಪುತ್ರ ತಲ್ಹಾ ಸಯೀದ್‌ ಲಾಹೋರ್‌ನ ಪ್ರಮುಖ ಕ್ಷೇತ್ರವೊಂದರಿಂದ ಸ್ಪರ್ಧಿಸಲಿದ್ದಾನೆ. ಆದಾಗ್ಯೂ ಸಯೀದ್‌ ಮತ್ತು ಪಕ್ಷದ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಪಕ್ಷದ ಮುಖಂಡರು ಹೇಳಿಕೊಂಡಿದ್ದಾರೆ. ಒಂದು ವೇಳೆ ಈ ಚುನಾವಣೆಯಲ್ಲಿ ಪಿಎಂಎಂಎಲ್‌ ಜಯ ಸಾಧಿಸಿದರೆ ಸಯೀದ್‌ ಮತ್ತು ಆತ ಸಂಘಟನೆ ಮತ್ತಷ್ಟು ಪ್ರಬಲವಾಗಲಿದ್ದು, ತನ್ನಿಚ್ಛೆಗೆ ತಕ್ಕ ಕಾನೂನುಗಳನ್ನು ರೂಪಿಸಿಕೊಳ್ಳಲಿದೆ ಎನ್ನಲಾಗಿದೆ.

ಪಾಕ್‌ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಕೆ: ಮೊದಲ ಹಿಂದೂ ಮಹಿಳಾ ಶಾಸಕಿಯಾಗ್ತಾರಾ ಸವೀರಾ ಪ್ರಕಾಶ್?

2018ರಲ್ಲಿ ಮಿಲಿ ಮುಸ್ಲಿಂ ಲೀಗ್‌ ಎಂಬ ಹೆಸರಿನಲ್ಲಿ ಈ ಪಕ್ಷ ಚುನಾವಣೆಗೆ ಸ್ಪರ್ಧಿಸಿ ಹೀನಾಯ ಸೋಲು ಕಂಡಿತ್ತು. ಆದರೆ 2024ರ ಚುನಾವಣೆಗೆ ಸ್ಪರ್ಧಿಸದಂತೆ ಮುಸ್ಲಿಂ ಲೀಗ್‌ಗೆ ನಿಷೇಧ ಹೇರಲಾಯಿತು. ಹೀಗಾಗಿ ಇದೀಗ ಮಾಕಾರ್ಜಿ ಮುಸ್ಲಿಂ ಲೀಗ್‌ ಎಂಬ ಹೊಸ ಹೆಸರಿನ ಮೂಲಕ ಚುನಾವಣೆಗೆ ಸ್ಪರ್ಧಿಸುತ್ತಿದೆ.