ಆಫ್ಘನ್‌ನಿಂದ ಮರಳಿದ 80 ಉಗ್ರರ ಭಾರತಕ್ಕೆ ಕಳಿಸಲು ಪಾಕ್‌ ಸಿದ್ಧತೆ

  • ಗಡಿ ಪ್ರದೇಶದಲ್ಲಿ ಕ್ಯಾಂಪ್‌ಗಳಲ್ಲಿ ತರಬೇತಿ
  • ಸೇನೆಯ ಹಿರಿಯ ಅಧಿಕಾರಿಗಳಿಂದ ಎಚ್ಚರಿಕೆ
  • 2019ರಲ್ಲಿ ಇಂಥ ಉಗ್ರ ನೆಲೆಗಳ ಮೇಲೆ ಭಾರತ ದಾಳಿ
Pakistan plan to send 80 afghanistan return terrorist to India says Army Reports ckm

ಶ್ರೀನಗರ(ಏ.20): ಅಷ್ಘಾನಿಸ್ತಾನದಿಂದ ಹಿಂದಿರುಗಿದವರು ಎಂದು ಹೇಳಲಾದ ಕನಿಷ್ಠ 80 ಉಗ್ರರನ್ನು ಭಾರತಕ್ಕೆ ಕಳುಹಿಸಲು ಪಾಕಿಸ್ತಾನ ಸಿದ್ಧತೆ ನಡೆಸಿದೆ. ಅವರಿಗೆಲ್ಲಾ ಗಡಿ ಪ್ರದೇಶದಲ್ಲಿ ಕ್ಯಾಂಪ್‌ಗಳಲ್ಲಿ ಭಾರತದಲ್ಲಿ ದುಷ್ಕೃತ್ಯ ಎಸಗುವ ಕುರಿತು ತರಬೇತಿ ನೀಡಲಾಗುತ್ತಿದೆ ಎಂದು ಸೇನೆಯ ಹಿರಿಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. 2019ರಲ್ಲಿ ಇಂಥ ಉಗ್ರ ನೆಲೆಗಳ ಮೇಲೆ ಭಾರತ ಸತತ ದಾಳಿ ನಡೆಸಿದ ಬಳಿಕ, ಪಾಕಿಸ್ತಾನ ಇಂಥ ಕ್ಯಾಂಪ್‌ಗಳನ್ನು ರದ್ದು ಮಾಡಿತ್ತು. ಆದರೆ ಇದೀಗ ಮತ್ತೆ ಭಾರತದ ಗಡಿ ಪ್ರದೇಶದಲ್ಲೇ ಅಂಥ ತರಬೇತಿ ಕ್ಯಾಂಪ್‌ಗಳನ್ನು ತೆರೆದು ಅಲ್ಲಿ ಉಗ್ರರಿಗೆ ತರಬೇತಿ ನೀಡುತ್ತಿದೆ ಎಂದು ಹೇಳಿದ್ದಾರೆ.

ಕಾಶ್ಮೀರದಲ್ಲಿ ಭಯೋತ್ಪಾದನೆ ಇನ್ನು ಶೋಕಿ ಅಲ್ಲ: ಲೆ.ಜ. ಪಾಂಡೆ
ಭಯೋತ್ಪಾದನೆಯು ಶೋಕಿ ಎಂದು ಜಮ್ಮುಕಾಶ್ಮೀರದ ಯುವಜನತೆ ತಿಳಿದಿದ್ದರೆ ಅದು ಖಂಡಿತ ಸಾಧ್ಯವಿಲ್ಲ. ಕಳೆದ ವರ್ಷ ಜನವರಿಯಿಂದ ಪ್ರಸಕ್ತ ಜನವರಿಯವರೆಗೆ ಒಟ್ಟು 216 ಉಗ್ರರನ್ನು ಸೇನೆ ಹೊಡೆದುರುಳಿಸಿದ್ದೇ ಇದಕ್ಕೆ ಸಾಕ್ಷಿ ಎಂದು ಸೇನಾ ಕಮಾಂಡರ್‌ ಲೆ.ಜನರಲ್‌ ಡಿ.ಪಿ. ಪಾಂಡೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಪಾಕ್‌ ಉಗ್ರರಿಂದ ಆಧಾರ್‌ ಕಾರ್ಡು ದುರ್ಬಳಕೆ!

ಉಗ್ರರ ಉಪಟಳ ಕಂಡುಬಂದತೆಲ್ಲಾ ಸೇನೆ ಅದನ್ನು ನಿಗ್ರಹಿಸುತ್ತಾ ಬಂದಿದೆ ಹಾಗೂ ಉಗ್ರರು ತಮ್ಮ ಅಸ್ಥಿತ್ವವನ್ನು ಕಳೆದುಕೊಳ್ಳಲಾರಂಭಿಸಿದ್ದಾರೆ. ದೇಶಕ್ಕೆ ಸತ್ೊ್ರಜೆ ಆಗದೆ ಭಯೋತ್ಪಾದನೆಗೆ ಸೇರುತ್ತಾ ಹೋದರೆ ಅಂತಹ ಉಗ್ರರನ್ನು ನಿರ್ನಾಮ ಮಾಡುತ್ತೇವೆ’ ಎಂದು ಅವರು ಹೇಳಿದ್ದಾರೆ.

‘20ರಿಂದ 25 ವಯೋಮಾನದೊಳಗಿನವರೇ ಹೆಚ್ಚಿನ ಸಂಖ್ಯೆಯಲ್ಲಿ ಭಯೋತ್ಪಾದನೆಗೆ ಸೇರುವವರಾಗಿದ್ದಾರೆ. ಆದರೆ ಈಗ ಅವರಿಗೂ ಭಯೋತ್ಪಾದನಾ ಶೋಕಿಯಿಂದ ಜೀವ ಕಳೆದುಕೊಳ್ಳಬೇಕಾಗಿದೆ ಎಂದು ಅರಿವಾಗಿದೆ. ಪರಿಣಾಮವಾಗಿ ಭಯೋತ್ಪಾದನೆಗೆ ಸೇರುವ ಯುವಕರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ’ ಎಂದು ಪಾಂಡೆ ತಿಳಿಸಿದ್ಧಾರೆ.

ಪುಲ್ವಾಮಾದಲ್ಲಿ ಉಗ್ರರ ದಾಳಿಗೆ ರೈಲ್ವೇ ಪೊಲೀಸ್ ಅಧಿಕಾರಿ ಬಲಿ

ಕಾಶ್ಮೀರದ ಶೋಪಿಯಾನ್‌ ಎನ್‌ಕೌಂಟರ್‌ನಲ್ಲಿ 4 ಲಷ್ಕರ್‌ ಉಗ್ರರ ಹತ್ಯೆ
ಜಮ್ಮು ಕಾಶ್ಮೀರದ ಶೋಪಿಯಾನ್‌ನಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ನಾಲ್ವರು ಲಷ್ಕರ್‌ ಉಗ್ರರು ಹತರಾಗಿದ್ದಾರೆ. ಎನ್‌ಕೌಂಟರ್‌ ಸ್ಥಳಕ್ಕೆ ಧಾವಿಸುತ್ತಿದ್ದಾಗ ನಡೆದ ಅಪಘಾತದಲ್ಲಿ ಇಬ್ಬರು ಯೋಧರು ಸಾವಿಗೀಡಾಗಿದ್ದಾರೆ.ಶೋಪಿಯಾನ್‌ನ ಝೈನ್‌ಪೋರಾದ ಬಾದಿಗಾಮ್‌ ಪ್ರದೇಶದಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿಯ ಮೇಲೆ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿದ್ದವು. ಈ ಸಮಯದಲ್ಲಿ ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದರಿಂದ ಯೋಧರು ಪ್ರತಿದಾಳಿ ನಡೆಸಿದರು. ಈ ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರು ಹತರಾಗಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಧಾವಿಸುತ್ತಿದ್ದ ಸೈನಿಕರ ವಾಹನಕ್ಕೆ ಅಫಘಾತ ಸಂಭವಿಸಿದ ಕಾರಣ ಇಬ್ಬರು ಯೋಧರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಜಮ್ಮು ಪೊಲೀಸರು ತಿಳಿಸಿದ್ದಾರೆ.

ಉಗ್ರರಿಂದ ಬಿಜೆಪಿ ಬೆಂಬಲಿಗ ಗ್ರಾ.ಪಂ ಅಧ್ಯಕ್ಷನ ಹತ್ಯೆ
ಗ್ರಾಮ ಪಂಚಾಯ್ತಿ ಅಧ್ಯಕ್ಷರೊಬ್ಬರನ್ನು ಉಗ್ರರು ಗುಂಡಿಟ್ಟು ಹತ್ಯೆ ನಡೆಸಿದ ಘಟನೆ ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಪಟ್ಟಾನ್‌ ಪ್ರದೇಶದಲ್ಲಿ ನಡೆದಿದೆ.ಹತ್ಯೆಯಾದವರನ್ನು ಮನ್ಸೂರ್‌ ಅಹ್ಮದ್‌ ಎಂದು ಗುರುತಿಸಲಾಗಿದೆ. ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿದ್ದರು ಎಂದು ಹೇಳಲಾಗುತ್ತಿದ್ದರೂ ಅಧಿಕೃತವಾಗಿ ಅವರು ಯಾವುದೇ ಪಕ್ಷದಲ್ಲಿ ಗುರುತಿಸಿಕೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಉಗ್ರರ ಗುಂಡಿನ ದಾಳಿಯಿಂದಾಗಿ ತೀವ್ರ ಗಾಯಗೊಂಡಿದ್ದ ಮನ್ಸೂರ್‌ರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಘಟನೆಯ ಬಳಿಕ ಪಟ್ಟಾನ್‌ ಪ್ರದೇಶಾದ್ಯಂತ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಉಗ್ರರಿಗಾಗಿ ಶೋಧ ನಡೆದಿದೆ ಪೊಲೀಸರು ತಿಳಸಿದ್ದಾರೆ.

Latest Videos
Follow Us:
Download App:
  • android
  • ios