ಮೋದಿ ಕಾಶ್ಮೀರ ಭೇಟಿಗೆ ತಕರಾರು ತೆಗೆದು ಪಾಕಿಸ್ತಾನ ಭಾರತದ ಪ್ರದೇಶದ ಕುರಿತು ಮಾತನಾಡುವ ಹಕ್ಕ ಪಾಕ್‌ಗಿಲ್ಲ ಜಮ್ಮು ಮತ್ತು ಕಾಶ್ಮೀರ ಭಾರತದ ಕೇಂದ್ರಾಡಳಿತ ಪ್ರದೇಶ
ನವದೆಹಲಿ(ಏ.29): ಪಂಚಾಯತ್ ರಾಜ್ ದಿವಸ್ ಕಾರ್ಯಕ್ರಮದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಎಪ್ರಿಲ್ 24 ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದರು. ಈ ವೇಳೆ 20,000 ಕೋಟಿ ರೂಪಾಯಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಚಾಲನೆ ನೀಡಿದ್ದರು. ಮೋದಿ ಈ ಭೇಟಿಗೆ ಪಾಕಿಸ್ತಾನ ತಗಾದೆ ತೆದಿತ್ತು. ಒಪ್ಪಂದ ಉಲ್ಲಂಘನೆ ಎಂದಿತ್ತು. ಇದಕ್ಕೆ ಉತ್ತರಿಸಿರುವ ಭಾರತ, ಭಾರತದ ಕೇಂದ್ರಾಡಳಿತ ಪ್ರದೇಶದ ಮೇಲೆ ಮಾತನಾಡುವ ಹಕ್ಕು ಪಾಕಿಸ್ತಾನಕ್ಕಿಲ್ಲ ಎಂದಿದೆ.
ಮೋದಿ ಭೇಟಿ ಕುರಿತು ಟೀಕೆ ಮಾಡಿದ್ದ ಪಾಕಿಸ್ತಾನಕ್ಕೆ ಇದೀಗ ಭಾರತ ತಿರುಗೇಟು ನೀಡಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಕ್ತಾರ ಅರಿಂದಮ್ ಬಗ್ಚಿ ಈ ಕುರಿತು ಉತ್ತರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಾದ ಬದಲಾವಣೆ, ಅಭಿವೃದ್ಧಿ ಕಾರ್ಯಗಳೇ ಉತ್ತರ ಹೇಳುತ್ತಿದೆ. ಕಾಶ್ಮೀರ ಭೇಟಿಯಲ್ಲಿ ಮೋದಿಗೆ ಸಿಕ್ಕ ಸ್ವಾಗತ, ಜನರ ಪ್ರೀತಿ ಈ ಎಲ್ಲಾ ಟೀಕೆಗಳಿಗೆ ಉತ್ತರ ಎಂದು ಬಗ್ಚಿ ಹೇಳಿದ್ದಾರೆ.
ಜಮ್ಮು ಕಾಶ್ಮೀರಕ್ಕೆ ಪ್ರಧಾನಿ ಮೋದಿ ಭೇಟಿ, ಪಾಕಿಸ್ತಾನ ತಗಾದೆ!
ಕಾಶ್ಮೀರ ವಿಚಾರದಲ್ಲಿ ಒಂದು ಅಕ್ಷರ ಮಾತನಾಡಲು ಇಸ್ಲಾಮಾಬಾದ್‌ಗೆ ಯಾವುದೇ ಹಕ್ಕಿಲ್ಲ ಎಂದು ನೇರವಾಗಿ ಪಾಕ್ ಟೀಕೆಗೆ ತಿರುಗೇಟು ನೀಡಿದ್ದಾರೆ. ಭಾರತದ ಉತ್ತರಕ್ಕೆ ಪಾಕಿಸ್ತಾನ ಸೈಲೆಂಟ್ ಆಗಿದೆ.
ಮೋದಿ ಕಾಶ್ಮೀರ ಭೇಟಿಯನ್ನು ಪಾಕಿಸ್ತಾನ ಟೀಕಿಸಿದ್ದು ಯಾಕೆ?
ಕಾಶ್ಮೀರದ ವಿಷಯದಲ್ಲಿ ಒಂದಲ್ಲ ಒಂದು ಕ್ಯಾತೆ ತೆಗೆಯುತ್ತಲೇ ಇರುವ ಪಾಕಿಸ್ತಾನ ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಅವರ ಜಮ್ಮು ಕಾಶ್ಮೀರ ಭೇಟಿಗೂ ಆಕ್ಷೇಪ ವ್ಯಕ್ತಪಡಿಸಿತ್ತು. ಚಿನಾಬ್ ನದಿಗೆ ನಿರ್ಮಿಸಲು ಉದ್ದೇಶಿಸಲಾಗಿರುವ ರಾರಯಟಲ್ ಮತ್ತು ಕ್ವಾರ್ ಜಲವಿದ್ಯುತ್ ಯೋಜನೆಗಳು ಸಿಂಧೂ ನದಿ ಒಪ್ಪಂದದ ಸ್ಪಷ್ಟಉಲ್ಲಂಘನೆ ಎಂದು ಪಾಕ್ ಹೇಳಿತ್ತು
ಆರ್ಟಿಕಲ್ 370 ರದ್ದಾದ ಬಳಿಕ ಮೊದಲ ಬಾರಿ ಭಾನುವಾರ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ್ದ ಮೋದಿ ಅವರು, ಸುಮಾರು 9,800 ಕೋಟಿ ಮೌಲ್ಯದ ಜಲವಿದ್ಯುತ್ ಯೋಜನೆಗಳಿಗೆ ಚಾಲನೆ ನೀಡಿದ್ದರು.
ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಪಾಕಿಸ್ತಾನ, ಕಾಶ್ಮೀರದ ನೈಜ ಸಮಸ್ಯೆಗಳಿಂದ ಗಮನ ಬೇರೆಡೆಗೆ ಸೆಳೆಯಲು 2019ರಿಂದಲೂ ಭಾರತ ಇಂತಹ ಯೋಜನೆಗಳನ್ನು ಘೋಷಿಸುತ್ತಲೇ ಇದೆ. ಈ 2 ಯೋಜನೆಗೆಗಳಿಗೆ ಪ್ರಧಾನಿ ಅಡಿಗಲ್ಲು ಹಾಕಿರುವುದು 1960ರ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ಸ್ಪಷ್ಟಉಲ್ಲಂಘನೆಯಾಗಿದೆ. ಈ ಒಪ್ಪಂದದ ಪ್ರಕಾರ ಭಾರತ ಕುಡಿವ ನೀರಿಗಷ್ಟೇ ನದಿ ನೀರು ಬಳಸಬೇಕು. ಆದರೆ ಜಲವಿದ್ಯುತ್ ಯೋಜನೆ ಒಪ್ಪಂದದ ಉಲ್ಲಘನೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
PM Movis Visit ಕಾಶ್ಮೀರದಲ್ಲಿ ಅಭಿವೃದ್ಧಿಯ ಹೊಸ ಶಕೆ, ಪ್ರಧಾನಿ ಮೋದಿ!
ಭಾರತ 370ನೇ ವಿಧಿಯನ್ನು ರದ್ದು ಮಾಡಿದ ಬಳಿಕ ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟುಹದಗೆಟ್ಟಿದೆ. ಹಲವಾರು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಜಮ್ಮು ಕಾಶ್ಮೀರ ಭಾರತ ಅವಿಭಾಜ್ಯ ಅಂಗ ಎಂದು ಹೇಳುವ ಮೂಲಕ ಭಾರತ ಪಾಕಿಸ್ತಾನಕ್ಕೆ ಬಲವಾದ ಪೆಟ್ಟು ನೀಡಿದೆ. ಪಾಕಿಸ್ತಾನ ಭಯೋತ್ಪಾದನೆ ಬೆಂಬಲ ನೀಡುತ್ತಿದೆ ಎಂದು ಹಲವು ಬಾರಿ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತ ಹೇಳಿರುವುದು ಸಹ ಭಾರತದ ಮೇಲಿನ ಪಾಕಿಸ್ತಾನ ದ್ವೇಷವನ್ನುಹೆಚ್ಚು ಮಾಡಿದೆ.
ಸಿಂಧೂ ನದಿ ಒಪ್ಪಂದ 1960:
ಈ ಒಪ್ಪಂದದ ಪ್ರಕಾರ ಸಿಂಧೂ ನದಿಯ ಪೂರ್ವ ಭಾಗದ ಉಪನದಿಗಳಾದ ಸಟ್ಲೇಜ್, ಬಿಯಾಸ್ ಮತ್ತು ರಾವಿ ನದಿ ನೀರನ್ನು ಭಾರತಕ್ಕೆ ಮತ್ತು ಪಶ್ಚಿಮ ಭಾಗದ ಉಪನದಿಗಳಾದ ಜೀಲಂ ಮತ್ತು ಚಿನಾಬ್ ನದಿಗಳನ್ನು ಪಾಕಿಸ್ತಾನಕ್ಕೆ ಎಂದು ವಿಭಾಗಿಸಲಾಗಿದೆ. ಪಶ್ಚಿಮ ನದಿಗಳನ್ನು ಕುಡಿಯುವ ನೀರಿನ ಉದ್ದೇಶಕ್ಕಲ್ಲದೇ ಬೇರೆ ಉದ್ದೇಶಕ್ಕೆ ಭಾರತ ಬಳಸುವಂತಿಲ್ಲ.
