Asianet Suvarna News Asianet Suvarna News

ಪಾಕಿಸ್ತಾನದ ರಾಷ್ಟ್ರಕವಿ ಮೊಹಮದ್‌ ಇಕ್ಬಾಲ್‌ ಪಠ್ಯಕ್ರಮ ತೆಗೆದು ಹಾಕಲಿದೆ ದೆಹಲಿ ವಿವಿ!

ಇಲ್ಲಿಯವರೆಗೂ ದೆಹಲಿ ವಿಶ್ವವಿದ್ಯಾಲಯದ ಪಠ್ಯಕ್ರಮದಲ್ಲಿದ್ದ ಪಾಕಿಸ್ತಾನದ ರಾಷ್ಟ್ರಕವಿ ಮೊಹಮದ್‌ ಇಕ್ಬಾಲ್‌ ಅವರ ಪಠ್ಯವನ್ನು ತೆಗೆದುಹಾಕುವ ನಿರ್ಧಾರವನ್ನು ದೆಹಲಿ ವಿವಿ ಮಾಡಿದೆ. 'ಸಾರೇ ಜಹಾಂಸೇ ಅಚ್ಚಾ' ಗೀತೆಯನ್ನು ಬರೆದ ಕವಿ ಇವರಾಗಿದ್ದಾರೆ.
 

Pakistan national poet Allama Muhammad Iqbal Chapter Removal in Delhi University Syllabus san
Author
First Published May 27, 2023, 4:05 PM IST

ನವದೆಹಲಿ (ಮೇ.27): ಸುಪ್ರಸಿದ್ಧ ದೇಶಭಕ್ತಿ ಗೀತೆ, ಸಾರೇ ಜಹಾಂಸೇ ಅಚ್ಚಾ, ಹಿಂದುಸ್ತಾನ್‌ ಹಮಾರಾ ಎನ್ನುವ ಗೀತೆಯನ್ನು ಬರೆದ ಕವಿ ಅಲ್ಲಾಮ ಮೊಹಮದ್‌ ಇಕ್ಬಾಲ್‌ ಅವರ ಅಧ್ಯಾಯಯವನ್ನು ದೆಹಲಿ ವಿಶ್ವ ವಿದ್ಯಾಲಯದ ಪಠ್ಯಕ್ರಮದಿಂದ ತೆಗೆದು ಹಾಕುವ ನಿರ್ಧಾರ ಮಾಡಲಾಗಿದೆ. ದೆಹಲಿ ವಿವಿಯ ಅಕಾಡೆಮಿಕ್‌ ಕೌನ್ಸಿಲ್‌ ಶುಕ್ರವಾರ ಈ ಬಗ್ಗೆ ನಿರ್ಣಯವನ್ನು ಅಂಗೀಕಾರ ಮಾಡಿದೆ. ಮಾಡರ್ನ್ ಇಂಡಿಯನ್ ಪೊಲಿಟಿಕಲ್ ಥಾಟ್ ಎಂಬ ಶೀರ್ಷಿಕೆಯ ಅಧ್ಯಾಯವು ಬಿಎ ಆರನೇ ಸೆಮಿಸ್ಟರ್‌ನ ಪಠ್ಯಕ್ರಮದ ಭಾಗವಾಗಿದೆ. ಅದನ್ನು ತೆಗೆದುಹಾಕಲು ವಿಶ್ವವಿದ್ಯಾಲಯದ ಕಾರ್ಯಕಾರಿ ಮಂಡಳಿಗೆ ಮಾಹಿತಿ ನೀಡಲಾಗುವುದು. ಈ ಬಗ್ಗೆ ಅಂತಿಮ ನಿರ್ಧಾರವನ್ನು ಶೀಘ್ರದಲ್ಲೊಯೇ ತೆಗೆದುಕೊಳ್ಳಲಿದ್ದೇವೆ ಎಂದು ದೆಹಲಿ ವಿಶ್ವವಿದ್ಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಜೂನ್‌ 9 ರಂದು ಕೌನ್ಸಿಲ್‌ ಸಭೆ ನಡೆಯಲಿದ್ದು, ಅಲ್ಲಿಯೇ ಈ ಕುರಿತಾಗಿ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ. 1877ರಲ್ಲಿ ಪಾಕಿಸ್ತಾನದ ಸಿಯಾಲ್ಕೋಟ್‌ನಲ್ಲಿ ಜನಿಸಿದ್ದ ಕವಿ ಅಲ್ಲಾಮ ಮೊಹಮದ್‌ ಇಕ್ಬಾಲ್‌, ಪಾಕಿಸ್ತಾನದ ರಾಷ್ಟ್ರಕವಿ ಮಾತ್ರವಲ್ಲ ಪಾಕಿಸ್ತಾನ ಎನ್ನುವ ಹೊಸ ದೇಶದ ಕಲ್ಪನೆಯನ್ನು ಮೊದಲಿಗೆ ಹುಟ್ಟುಹಾಕುವ ಮೂಲಕ ಹೆಸರುವಾಸಿಯಾಗಿದ್ದಾರೆ.

ಪಠ್ಯಕ್ರಮದಲ್ಲಿದೆ ಒಟ್ಟು 11 ಅಧ್ಯಾಯಗಳು: ಪಿಟಿಐ ನೀಡಿರುವ ಮಾಹಿತಿ ಪ್ರಕಾರ, ಅಂತಿಮ ವರ್ಷದ ಬಿಎಯಲ್ಲಿ ಒಟ್ಟು 11 ಅಧ್ಯಾಯದ ಪಠ್ಯಕ್ರಮಗಳಿವೆ. ಇದರಲ್ಲಿ ರಾಜಾ ರಾಮ್‌ಮೋಹನ್‌ ರಾಯ್‌, ಪಂಡಿತ್‌ ರಮಾಬಾಯಿ, ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧೀಜಿ ಹಾಗೂ ಭೀಮರಾವ್‌ ಅಂಬೇಡ್ಕರ್‌ ಅವರಂಥ ವ್ಯಕ್ತಿಗಳ ಕುರಿತಾದ ಅಧ್ಯಯನಗಳಿವೆ. ಇವೆಲ್ಲದರ ನಡುವೆ ಮೊಹಮದ್‌ ಇಕ್ಬಾಲ್‌ ಅವರ ಕುರಿತಾದ ಅಧ್ಯಾಯ ಕೂಡ ಸೇರಿದ್ದವು. ಈಗ ಈ ಅಧ್ಯಾಯವನ್ನು ತೆಗೆದುಹಾಕುವ ಕುರಿತಾಗಿ ನಿರ್ಣಯ ಮಾಡಲಾಗಿದೆ.

ದೆಹಲಿ ವಿವಿ ನಿರ್ಧಾರ ಬೆಂಬಲಿಸಿದ ಎಬಿವಿಪಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ಗೆ ಸಂಯೋಜಿತವಾಗಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನಿರ್ಣಯವನ್ನು ಬೆಂಬಲಿಸಿದೆ. ದೆಹಲಿ ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಮೊಹಮ್ಮದ್ ಇಕ್ಬಾಲ್ ಅವರನ್ನು ಪಠ್ಯಕ್ರಮದಿಂದ ತೆಗೆದುಹಾಕಲು ನಿರ್ಧರಿಸಿದೆ ಎಂದು ಎಬಿವಿಪಿ ಟ್ವೀಟ್‌ ಮಾಡಿದೆ. ಅವರು ಪಾಕಿಸ್ತಾನದ ತಾತ್ವಿಕ ಪಿತಾಮಹ ಮತ್ತು ಆಮೂಲಾಗ್ರ ಮನಸ್ಸಿನ ವ್ಯಕ್ತಿ. ಜಿನ್ನಾರನ್ನು ಮುಸ್ಲಿಂ ಲೀಗ್‌ನ ನಾಯಕನನ್ನಾಗಿ ಮಾಡುವ ಹಿಂದೆ ಇಕ್ಬಾಲ್ ಅವರ ದೊಡ್ಡ ಕೈವಾಡವಿದೆ. ಭಾರತದ ವಿಭಜನೆಗೆ ಜಿನ್ನಾ ಎಷ್ಟು ಕಾರಣವೋ, ಇಕ್ಬಾಲ್‌ ಅವರೂ ಅಷ್ಟೇ ಕಾರಣ ಎಂದು ಹೇಳಿದೆ.

ವಿರೋಧ ವ್ಯಕ್ತಪಡಿಸಿದ ಐವರು: ಇಕ್ಬಾಲ್ ಅವರ ಅಧ್ಯಾಯವನ್ನು ಪಠ್ಯಕ್ರಮದಿಂದ ತೆಗೆದುಹಾಕುವ ನಿಟ್ಟಿನಲ್ಲಿ ಶುಕ್ರವಾರ ಆರಂಭವಾದ ಅಕಾಡೆಮಿಕ್ ಕೌನ್ಸಿಲ್ ಸಭೆ ಶನಿವಾರ ಮಧ್ಯಾಹ್ನದವರೆಗೂ ನಡೆಯಿತು. 100 ಕೌನ್ಸಿಲ್ ಸದಸ್ಯರಲ್ಲಿ ಐದು ಸದಸ್ಯರು ಪಠ್ಯಕ್ರಮವನ್ನು ಬದಲಾಯಿಸುವ ಪ್ರಸ್ತಾಪವನ್ನು ವಿರೋಧಿಸಿದರು. ಇದು ವಿಭಜಕ ನೀತಿ ಎಂದು ಅವರು ಕರೆದಿದ್ದಾರೆ.

'ಕೇರಳ ಸ್ಟೋರಿ' ಬ್ಯಾನ್‌ ಬೆಂಬಲಿಸಿ ಹೇಳಿಕೆ ವೈರಲ್: ನಟ ನವಾಜುದ್ದೀನ್ ಸಿದ್ಧಿಕಿ ಕೆಂಡಾಮಂಡಲ

ದೆಹಲಿ ವಿವಿ ಕುಲಪತಿ ವಿಕಾಸ್‌ ಗುಪ್ತಾ ಈ ಕುರಿತಾಗಿ ಮಾತನಾಡಿದ್ದಾರೆ. 'ಸಭೆಯಲ್ಲಿ ದೇಶ ವಿಭಜನೆ, ಹಿಂದು ಹಾಗೂ ಬುಡಕಟ್ಟು ಅಧ್ಯಯನದಂಥ ಕೇಂದ್ರಗಳನ್ನು ಸ್ಥಾಪನೆ ಮಾಡುವ ಬಗ್ಗೆ ಶಿಫಾರಸು ಮಾಡಲಾಗಿದೆ. ಅದರೊಂದಿಗೆ ಮೊಹಮದ್‌ ಇಕ್ಬಾಲ್‌ ಅವರ ಪಠ್ಯವನ್ನು ತೆಗೆದುಹಾಕುವ ನಿರ್ಣಯ ಮಾಡಲಾಗಿದೆ' ಎಂದಿದ್ದಾರೆ. ಪ್ರಸ್ತಾವನೆಗಳಿಗೆ ವಿಶ್ವವಿದ್ಯಾನಿಲಯದ ಕಾರ್ಯನಿರ್ವಾಹಕ ಮಂಡಳಿಯಿಂದ (EC) ಅನುಮೋದನೆಯ ಅಗತ್ಯವಿರುತ್ತದೆ, ಇದು ಜೂನ್ 9 ರಂದು ಮುಂದಿನ ಸಭೆಗೆ ನಿಗದಿಯಾಗಿದೆ.

The Kerala Story ನಟಿ ಅದಾ ಶರ್ಮಾ ಮೊಬೈಲ್‌ ನಂಬರ್‌ ಆನ್‌ಲೈನ್‌ನಲ್ಲಿ ಸೋರಿಕೆ

Follow Us:
Download App:
  • android
  • ios