'ಕೇರಳ ಸ್ಟೋರಿ' ಬ್ಯಾನ್ ಬೆಂಬಲಿಸಿ ಹೇಳಿಕೆ ವೈರಲ್: ನಟ ನವಾಜುದ್ದೀನ್ ಸಿದ್ಧಿಕಿ ಕೆಂಡಾಮಂಡಲ
'ಕೇರಳ ಸ್ಟೋರಿ' ಬ್ಯಾನ್ ಬೆಂಬಲಿಸಿ ಹೇಳಿಕೆ ನೀಡಿದ್ದಾರೆ ಎನ್ನುವ ವೈರಲ್ ಸುದ್ದಿಗೆ ನಟ ನವಾಜುದ್ದೀನ್ ಸಿದ್ಧಿಕಿ ಕೆಂಡಾಮಂಡಲರಾಗಿದ್ದಾರೆ.
ದಿ ಕೇರಳ ಸ್ಟೋರಿ ಸಿನಿಮಾ ರಿಲೀಸ್ ಆಗಿ 20 ದಿನಗಳ ಮೇಲಾದರೂ ಒಂದಲ್ಲೊಂದು ವಿಚಾರಕ್ಕೆ ಸದ್ದು ಮಾಡುತ್ತಲೇ ಇದೆ. ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿರುವ ಕೇರಳ ಸ್ಟೋರಿ ಇಂದಿಗೂ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. 200 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ದಿ ಕೇರಳ ಸ್ಟೋರಿ ಮುನ್ನುಗ್ಗುತ್ತಿದೆ. ಭಾರಿ ವಿರೋಧ, ವಿವಾದ ಮತ್ತು ಬ್ಯಾನ್‌ಗಳ ನಡುವೆಯೂ ಕೇರಳ ಸ್ಟೋರಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಖ್ಯಾತ ನಟ ನವಾಜುದ್ದೀನ್ ಸಿದ್ದಿಕಿ ಹೇಳಿದ್ದಾರೆ ಎನ್ನುವ ಮಾತು ವೈರಲ್ ಆಗಿದೆ. ಅನೇಕ ರಾಜ್ಯಗಳಲ್ಲಿ ಬ್ಯಾನ್ ಮಾಡಿರುವ ಬಗ್ಗೆ ನವಾಜುದ್ದೀನ್ ಸಿದ್ದಿಕಿ ಸಮರ್ಥಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಎಲ್ಲಾ ಕಕಡೆ ಹರಿದಾಡುತ್ತಿದೆ. ಈ ಬಗ್ಗೆ ನಟ ನವಾಜುದ್ದೀನ್ ಕೆಂಡಾಮಂಡಲರಾಗಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿರುವ ನವಾಜುದ್ದೀನ್ ಸಿದ್ಧಕ್ಕಿ ಇಂಥ ಸುಳ್ಳು ಸುದ್ದಿಗಳನ್ನು ಹಬ್ಬಿಸುವುದನ್ನು ನಿಲ್ಲಿಸಿ ಎಂದು ಕಿಡಿ ಕಾರಿದ್ದಾರೆ. ಅಷ್ಟಕ್ಕೂ ನವಾಜಿದ್ದೀನ್ ಸಿದ್ಧಿಕಿ ಬಗ್ಗೆ ವೈರಲ್ ಆಗಿರುವ ಹೇಳಿಕೆ ಏನು?
ವೈರಲ್ ಹೇಳಿಕೆ
'ಯಾವುದೇ ಕಾದಂಬರಿ ಅಥವಾ ಸಿನಿಮಾಗಳು ಯಾರಿಗಾದರೂ ನೋವುಂಟುಮಾಡಿದರೆ, ಅದು ತಪ್ಪು' ಎಂದು ಹೇಳಿದ್ದರು. ಈ ಮೂಲಕ ಸಿನಿಮಾ ಬ್ಯಾನ್ ಅನ್ನು ಬೆಂಬಲಿಸಿದ್ದರು ಎನ್ನುವ ಸುದ್ದಿ ವೈರಲ್ ಆಗಿತ್ತು. ಇದಕ್ಕೆ ನಟ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ನವಾಜುದ್ದೀನ್ ಪ್ರತಿಕ್ರಿಯೆ
ತಾನು ಯಾವುದೇ ಸಿನಿಮಾಗಳನ್ನು ಬ್ಯಾನ್ ಮಾಡುವುದನ್ನು ಒಪ್ಪುವುದಿಲ್ಲ, ಇಂಥ ಸುದ್ದಿಯನ್ನು ಹಬ್ಬಿಸುವುದನ್ನು ನಿಲ್ಲಿಸಿ ಎಂದು ಹೇಳಿದ್ದಾರೆ. ವೀಕ್ಷಕರನ್ನು ಹೆಚ್ಚಿಸಿಕೊಳ್ಳುವ ಅಥವ ಹಿಟ್ ಪಡೆಯುವ ಉದ್ದೇಶಕ್ಕೆ ಸುಳ್ಳು ಸುದ್ದಿ ಹರಡುವುದನ್ನು ದಯವಿಟ್ಟು ನಿಲ್ಲಿಸಿ. ಅದನ್ನು ಅಗ್ಗದ ಟಿಆರ್‌ಪಿ ಎಂದು ಕರೆಯಲಾಗುತ್ತದೆ. ನಾನು ಯಾವತ್ತು ಇಂಥ ಹೇಳಿಕೆ ನೀಡಿಲ್ಲ. ಯಾವುದೇ ಸಿನಿಮಾಗಳನ್ನು ನಿಷೇಧಿಸಬೇಕೆಂದು ನಾನು ಬಯಸುವುದಿಲ್ಲ. ಸಿನಿಮಾಗಳನ್ನು ಬ್ಯಾನ್ ಮಾಡುವುದನ್ನು ನಿಲ್ಲಿಸಿ. ನಕಲಿ ಸುದ್ದಿಗಳನ್ನು ಹರಡುವುದನ್ನು ನಿಲ್ಲಿಸಿ' ಎಂದು ಅವರು ಟ್ವೀಟ್ ಮೂಲಕ ಕಿಡಿ ಕಾರಿದ್ದಾರೆ.
The kerala story ಸಿನಿಮಾ ನೋಡೋಕೆ ಕಾಲೇಜು ಹುಡ್ಗೀರಿಗೆ ಫ್ರೀ ಟಿಕೆಟ್
ನವಾಜುದ್ದೀನ್ ವಿರುದ್ದ ಅಗ್ನಿಹೋತ್ರಿ ಕಿಡಿ
ನವಾಜುದ್ದೀನ್ ಸಿದ್ದಿಕಿ ಹೇಳಿದ್ದಾರೆ ಎನ್ನುವ ಮಾತುಗಳಿಗೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕಿಡಿ ಕಾರಿದ್ದಾರೆ. ಅವರ ಹೆಚ್ಚಿನ ಸಿನಿಮಾಗಳು ಮತ್ತು ಒಟಿಟಿ ಶೋಗಳನ್ನು ಸಹ ಬ್ಯಾನ್ ಮಾಡಲಾಗಿದೆ. ಸಿನಿಮಾಗಳು ಅನಗತ್ಯ ನಿಂದನೆ, ಹಿಂಸೆ ಮತ್ತು ವಿಕೃತಿಯನ್ನು ಒಳಗೊಂಡಿರುತ್ತವೆ. ಅವು ಜನರನ್ನು ನೋಯಿಸುತ್ತವೆ' ಎಂದು ಆರೋಪಿಸಿದರು.
The Kerala Story ನಟಿ ಅದಾ ಶರ್ಮಾ ಮೊಬೈಲ್ ನಂಬರ್ ಆನ್‌ಲೈನ್‌ನಲ್ಲಿ ಸೋರಿಕೆ
ಭಾರತದ ಮಧ್ಯಮ ವರ್ಗದ ಹೆಚ್ಚಿನ ಕುಟುಂಬಗಳು ಸಿನಿಮಾಗಳಲ್ಲಿನ ಅನಗತ್ಯ ನಿಂದನೆ, ಹಿಂಸೆ ಮತ್ತು ವಿಕೃತಿಯನ್ನು ಅನುಭವಿಸುತ್ತವೆ. OTT ಶೋಗಳು ಕುಟುಂಬಕ್ಕೆ ಮತ್ತು ಮಕ್ಕಳಿಗೆ ನೋವುಂಟುಮಾಡುತ್ತವೆ. ನವಾಜ್ ಅವರ ಹೆಚ್ಚಿನ ಚಲನಚಿತ್ರಗಳು ಮತ್ತು OTT ಪ್ರದರ್ಶನಗಳನ್ನು ನಿಷೇಧಿಸಬೇಕೆ ಎಂದು ಸಲಹೆ ನೀಡಬಹುದೇ? ನಿಮ್ಮ ಅಭಿಪ್ರಾಯಗಳೇನು?' ಎಂದು ಟ್ವೀಟ್ ಮಾಡಿದ್ದಾರೆ.
ನವಾಜುದ್ದೀನ್ ಹೇಳಿದ್ದಾರೆ ಎನ್ನುವ ಮಾತು ವೈರಲ್ ಆದ ಬಳಿಕ ನಟ ಪ್ರತಿಕ್ರಿಯೆ ನೀಡಿ ಸ್ಪಷ್ಟನೆ ನೀಡಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಕೇಳಿಕೊಂಡಿದ್ದಾರೆ.