ಕಾಶ್ಮೀರ ನಿಮ್ಮದು ಎಂದು ಚಿತ್ರಿಸಿದ ಮ್ಯಾಪ್ ಬದಲು ಸರಿಯಾದ ಮ್ಯಾಪ್ ಬಳಸಿ, ಇಲ್ಲವಾದರೆ ಸೆಮಿನಾರ್‌ನಿಂದ ಹೊರನಡೆಯಿರಿ ಎಂದು ಭಾರತದ ನೀಡಿದ ಎಚ್ಚರಿಕೆಯಿಂದ ಇದೀಗ SCO ಶೃಂಗ ಸಭೆಯಿಂದ ಪಾಕಿಸ್ತಾನ ದೂರ ಉಳಿದುಕೊಂಡಿದೆ.
ನವದೆಹಲಿ(ಮಾ.21): ಪ್ರತಿಷ್ಠಿತ ಶಾಂಘೈ ಸಹಕಾರ ಸಂಘಟನೆ( SCO ) ಶೃಂಗ ಸಭೆಗೆ ವೇದಿಕೆ ಸಜ್ಜಾಗುತ್ತಿದೆ. ಹಲವು ಸದಸ್ಯರ ರಾಷ್ಟ್ರಗಳು ಈ ಸಭೆಯಲ್ಲಿ ಪಾಲ್ಗೊಳ್ಳಲು ತಯಾರಿ ಮಾಡಿಕೊಳ್ಳುತ್ತಿದೆ. ಈ ಬಾರಿಯ ಸಭೆಗೆ ಭಾರತ ಆತಿಥ್ಯ ವಹಿಸಿದೆ. ದೆಹಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ಹಲವು ದೇಶದಗಳು ಪಾಲ್ಗೊಳ್ಳುತ್ತಿದೆ. ಇತ್ತೀಚೆಗೆ SCO ಸಭೆಗೆ ಪಾಲ್ಗೊಳ್ಳುವಂತೆ ಭಾರತ ಅಧಿಕಾರಿಗಳು ಪಾಕಿಸ್ತಾನಕ್ಕೆ ಅಹ್ವಾನ ನೀಡಿತ್ತು. ಇದರ ಬೆನ್ನಲ್ಲೇ ಎಚ್ಚರಿಕೆಯೊಂದನ್ನು ನೀಡಿದೆ. ಸರಿಯಾದ ಮ್ಯಾಪ್ ಬಳಸುವುದಾದರೆ ಸಭೆಯಲ್ಲಿ ಪಾಲ್ಗೊಳ್ಳಿ, ಇಲ್ಲವಾದರೆ ಸೆಮಿನಾರ್‌ನಿಂದ ಹೊರನಡೆಯಿರಿ ಎಂಬ ಎಚ್ಚರಿಕೆ ನೀಡಿದೆ. ಇದರ ಪರಿಣಾಮ ಪಾಕಿಸ್ತಾನ ಈ ಬಾರಿಯ SCO ಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ.
ಜುಲೈ ತಿಂಗಳಲ್ಲಿ SCO ಸಭೆ ದೆಹಲಿಯಲ್ಲಿ ನಡೆಯಲಿದೆ. ಕಳೆದ SCO ಸಭೆ ಆನ್‌ಲೈನ್ ಮೂಲಕ ನಡೆದಿತ್ತು. ಕೋವಿಡ್ ಕಾರಣ ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಭೆ ನಡೆಸಲಾಗಿತ್ತು. ಆದರೆ ಈ ಸಭೆಯಲ್ಲಿ ಪಾಕಿಸ್ತಾನ ಬಳಸಿದ ದೇಶದ ಮ್ಯಾಪ್ ಕುರಿತು ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಕಾರಣ ಪಾಕಿಸ್ತಾನ, ಪಾಕ್ ಆಕ್ರಮಿತ ಕಾಶ್ಮೀರವನ್ನು ತನ್ನ ಗಡಿಯೊಳಕ್ಕೆ ಸೇರಿಸಿಕೊಂಡಿತ್ತು. SCO ಸಭೆಯಲ್ಲಿ ಪಾಕಿಸ್ತಾನ ಈ ಮ್ಯಾಪ್ ಪ್ರದರ್ಶಿಸಿತ್ತು.ಈ ಬಾರಿ ಭಾರತದಲ್ಲೇ SCO ಸಭೆ ನಡೆಯುತ್ತಿದೆ. ಭಾರತದಲ್ಲಿ ಕಾಶ್ಮೀರವನ್ನು ಸೇರಿಸಿಕೊಂಡ ಮ್ಯಾಪ್ ಪ್ರದರ್ಶಿಸಿ ವಿವಾದ ಸೃಷ್ಟಿಯಾಗುವ ಮೊದಲೇ ಭಾರತ ಖಡಕ್ ಎಚ್ಚರಿಕೆ ನೀಡಿದೆ.
ಜಂಟಿ ಹೇಳಿಕೆ ಬಿಡುಗಡೆಗೆ ಜಿ20 ವಿಫಲ: ಕೆಲ ಅಂಶಗಳಿಗೆ ರಷ್ಯಾ, ಚೀನಾ ವಿರೋಧ
ಸರಿಯಾದ ಮ್ಯಾಪ್ ಬಳಸಿದರೆ ಮಾತ್ರ SCO ಸೆಮಿನಾರ್‌ನಲ್ಲಿ ಪಾಲ್ಗೊಳ್ಳಿ, ಇಲ್ಲವಾದರೆ ಸಭೆಯಿಂದ ದೂರ ಉಳಿಯಿರಿ ಎಂದು ಭಾರತ ಎಚ್ಚರಿಕೆ ನೀಡಿದೆ. ಭಾರತದ ಎಚ್ಚರಿಕೆ ಬೆನ್ನಲ್ಲೇ ಪಾಕಿಸ್ತಾನ SCO ಸಭೆಯಿಂದ ದೂರ ಉಳಿಯಲು ನಿರ್ಧರಿಸಿದೆ. ಮಿಲಿಟರಿ ಮೆಡಿಸಿನ್, ಆರೋಗ್ಯ ಕ್ಷೇತ್ರ, ಸಾಂಕ್ರಾಮಿಕಗಳ ಎದುರಿಸುವಿಕೆ ಹಾಗೂ ಸವಾಲು ಕುರಿತು ಈ ಬಾರಿಯ SCO ಸಭೆಯಲ್ಲಿ ಪ್ರಮುಖವಾಗಿ ಚರ್ಚೆಯಾಗಲಿದೆ.
ಕಳೆದ ವರ್ಷದ ಅಂತ್ಯದಲ್ಲಿ ಉಜ್ಬೇಕಿಸ್ತಾನದ ಸಮರ್‌ಕಂಡ್‌ನಲ್ಲಿ SCO ಶೃಂಗ ಸಭೆ ನಡೆದಿತ್ತು. ಪ್ರಧಾನಿ ನರೇಂದ್ರ ಮೋದಿ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಪಾಕ್ ಪ್ರಧಾನಿ ಶಹಬಾಜ್ ಷರೀಫ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸೇರಿ 8 ದೇಶಗಳು ಪಾಲ್ಗೊಂಡಿತ್ತು. ಶಾಂಘೈ ಸಹಕಾರ ಸಂಘಟನೆಯ ಸದಸ್ಯ ದೇಶಗಳ ನಡುವೆ ಉತ್ತಮ ಸಹಕಾರ ಹಾಗೂ ಪರಸ್ಪರ ನಂಬಿಕೆಯನ್ನು ಭಾರತ ಬಯಸುತ್ತದೆ. ಉಕ್ರೇನ್ ಯುದ್ಧ ಹಾಗೂ ಕೋವಿಡ್ ಪಿಡುಗು ಜಾಗತಿಕ ಆಹಾರ ಪೂರೈಕೆ ಜಾಲಕ್ಕೆ ಸಾಕಷ್ಟುಅಡ್ಡಿ ಉಂಟು ಮಾಡಿವೆ. ಇದರಿಂದ ವಿಶ್ವ ಕಂಡು ಕೇಳರಿಯದ ಆಹಾರ ಹಾಗೂ ತೈಲ ಸಮಸ್ಯೆ ಎದುರಿಸುತ್ತಿದೆ. ಇಂಥ ಸಂದರ್ಭದಲ್ಲಿ ಎಸ್‌ಸಿಒ ದೇಶಗಳು ಒಟ್ಟಾಗಿ ಕೆಲಸ ಮಾಡಿ ಆಹಾರ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಮೋದಿ ಹೇಳಿದ್ದರು.
World Summit ಆರ್ಥಿಕವಾಗಿ ಬಲ್ಯಾಢ್ಯವಾಗುತ್ತಿದೆ ಭಾರತ, ಅಮೆರಿಕ ಹೂಡಿಕೆದಾರ ರೇ ಡೇಲಿಯೋ ಭವಿಷ್ಯ!
