ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ20 ವಿದೇಶಾಂಗ ಸಚಿವರ ಸಭೆ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧಕ್ಕೆ ಸಂಬಂಧಿಸಿದಂತೆ ಜಂಟಿ ಹೇಳಿಕೆ ಬಿಡುಗಡೆ ಮಾಡುವಲ್ಲಿ ವಿಫಲವಾಗಿದೆ.
ನವದೆಹಲಿ: ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ20 ವಿದೇಶಾಂಗ ಸಚಿವರ ಸಭೆ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧಕ್ಕೆ ಸಂಬಂಧಿಸಿದಂತೆ ಜಂಟಿ ಹೇಳಿಕೆ ಬಿಡುಗಡೆ ಮಾಡುವಲ್ಲಿ ವಿಫಲವಾಗಿದೆ.
ರಷ್ಯಾ ಉಕ್ರೇನ್ ಮೇಲೆ ಮಾಡಿರುವ ಆಕ್ರಮಣವನ್ನು ಯುದ್ಧ ಎಂದು ಕರೆಯಬೇಕು ಎಂದು ಹಲವು ದೇಶಗಳು ಹೇಳಿದರೂ ರಷ್ಯಾ ಹಾಗೂ ಚೀನಾ ಇದಕ್ಕೆ ಒಪ್ಪಿಗೆ ನೀಡಲಿಲ್ಲ. ಹಾಗಾಗಿ ಈ ವಿಷಯದಲ್ಲಿ ಒಮ್ಮತಕ್ಕೆ ಬರಲಾಗದ ಕಾರಣ ಜಂಟಿ ಹೇಳಿಕೆ ಬಿಡುಗಡೆಯಾಗಿಲ್ಲ ಎಂದು ವಿದೇಶಾಂಗ ಸಚಿವ (external affairs Minister) ಎಸ್.ಜೈಶಂಕರ್ (Jai Shankar) ಹೇಳಿದ್ದಾರೆ. ನಾವು ಪರಿಪೂರ್ಣವಾದ ಸಭೆಯ ಮನಸ್ಥಿತಿಯನ್ನು ಹೊಂದಿದ್ದೇವೆ ಹಾಗೂ ಎಲ್ಲಾ ವಿಷಯಗಳ ಕುರಿತಾಗಿ ಚರ್ಚಿಸಿದ್ದೇವೆ. ಅದರೆ ಕೆಲವು ಭಿನ್ನವಾದ ಅಭಿಪ್ರಾಯಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಒಮ್ಮತ ಸಾಧ್ಯವಾಗಿಲ್ಲ ಎಂದು ಅವರು ಹೇಳಿದ್ದಾರೆ.
ಚರ್ಚೆಯ ವೇಳೆ ಅಮೆರಿಕ ನೇತೃತ್ವದ ಪಾಶ್ಚಿಮಾತ್ಯ ರಾಷ್ಟ್ರಗಳು (Western countries) ಒಂದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದರೂ, ಚೀನಾ ಮತ್ತು ರಷ್ಯಾ ಭಿನ್ನವಾದ ಅಭಿಪ್ರಾಯವನ್ನು ನೀಡಿದವು.
ಜಾಗತಿಕ ಸಂಕಷ್ಟದ ಮಧ್ಯೆ ಭಾರತ ಉಜ್ವಲ; ಛಿದ್ರಗೊಂಡಿರುವ ವಿಶ್ವಕ್ಕೆ ಮೋದಿ ನಾಯಕತ್ವ ಅತ್ಯಂತ ನಿರ್ಣಾಯಕ: WEF ಮುಖ್ಯಸ್ಥ
