ಪಹಲ್ಗಾಮ್‌ನ ಬೈಸರನ್‌ ಕಣಿವೆಯಲ್ಲಿ ಭಯೋತ್ಪಾದಕರು ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ನಿರ್ಬಂಧಿಸಿ ೨೫ ಪ್ರವಾಸಿಗರನ್ನು ಹತ್ಯೆಗೈದರು. ನಾಲ್ಕು ಉಗ್ರರು ದಾಳಿ ನಡೆಸಿದ್ದು, ಮಿಲಿಟರಿ ಸಮವಸ್ತ್ರ ಮತ್ತು ಸಾಂಪ್ರದಾಯಿಕ ಉಡುಪು ಧರಿಸಿದ್ದರು. ಪ್ರವಾಸಿಗರನ್ನು ಬೇರ್ಪಡಿಸಿ, ಕಲ್ಮಾ ಪಠಿಸಲು ಒತ್ತಾಯಿಸಿ ಗುಂಡು ಹಾರಿಸಿದರು. ಎನ್‌ಐಎ ತನಿಖೆ ನಡೆಸುತ್ತಿದ್ದು, ಉಗ್ರರು ಮೊಬೈಲ್ ಪೇ ಅಪ್ಲಿಕೇಶನ್ ಬಳಸಿರಬಹುದೆಂಬ ಶಂಕೆಯಿದೆ.

ನವದೆಹಲಿ (ಏ.29): ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಬದುಕುಳಿದವರು ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ಅಲ್ಲಿನ ಕಣ್ಣೀರ ಕಥೆಯನ್ನು ಬಹಿರಂಗಪಡಿಸಿದೆ. ಬೈಸರಣ್‌ ಕಣಿವೆಯಲ್ಲಿ ಪ್ರವಾಸಿಗರು ತಪ್ಪಿಸಿಕೊಳ್ಳಲು ಯಾವುದೇ ಮಾರ್ಗಗಳು ಇದ್ದಿರಲಿಲ್ಲ ಎನ್ನುವುದನ್ನು ಬಹಿರಂಗಪಡಿಸಿದೆ. ಭಯೋತ್ಪಾದಕರು ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ನಿರ್ಬಂಧಿಸಿದ್ದರು. 

ತನಿಖಾ ಸಂಸ್ಥೆಗಳು ದಾಖಲಿಸಿಕೊಂಡಿರುವ ಹೇಳಿಕೆಗಳು, ಪಾಕಿಸ್ತಾನ ಮೂಲದ ಭಯೋತ್ಪಾದಕರು ಹತ್ಯಾಕಾಂಡವನ್ನು ಹೇಗೆ ನಡೆಸಿದ್ದಾರೆ ಎಂಬುದರ ಮೇಲೆ ಬೆಳಕು ಚೆಲ್ಲಿವೆ. ಪಹಲ್ಗಾಮ್‌ ದಾಳಿಯಲ್ಲಿ 25 ಪ್ರವಾಸಿಗರು ಒಬ್ಬ ಕಾಶ್ಮೀರಿ ವ್ಯಕ್ತಿ ಸಾವು ಕಂಡಿದ್ದರು. ಒಟ್ಟು ನಾಲ್ಕು ಮಂದಿ ಟೆರರಿಸ್ಟ್‌ಗಳು ಈ ಕೃತ್ಯ ಎಸಗಿದ್ದಾರೆ. ಇಬ್ಬರು ಎಂಟ್ರಿಗೇಟ್‌ನಿಂದ ಬಂದಿದ್ದರೆ, ಇಬ್ಬ ಉಗ್ರ ಎಕ್ಸಿಟ್‌ ಗೇಟ್‌ನಿಂದ ಬಂದಿದ್ದ.

ತನಿಖಾ ಸಂಸ್ಥೆಗಳ ಪ್ರಕಾರ, ನಾಲ್ಕನೇ ಭಯೋತ್ಪಾದಕ ಕಾಡಿನಲ್ಲಿ ಅಡಗಿಕೊಂಡಿರುವ ಸಾಧ್ಯತೆ ಇದ್ದು, ಬಹುಶಃ ಉಗ್ರರಿಗೆ ಬೆಂಬಲ ನೀಡಲು ಅವನು ಅಲ್ಲಿದಿದ್ದಿರುವ ಸಾಧ್ಯತೆ ಇದೆ.

'ಮಿನಿ ಸ್ವಿಟ್ಜರ್ಲೆಂಡ್' ಎಂದು ಕರೆಯಲ್ಪಡುವ ಪ್ರಮುಖ ಪ್ರವಾಸಿ ತಾಣವಾದ ಬೈಸರನ್‌ನಲ್ಲಿ ಪಿಕ್ನಿಕ್ ಮಾಡಿ ಆಹಾರವನ್ನು ಆನಂದಿಸುತ್ತಿದ್ದ ವೇಳೆ, ಇವರಲ್ಲಿ ಮೂವರು ಮಾತ್ರ ಪ್ರವಾಸಿಗರ ರೂಪದಲ್ಲಿ ಅಲ್ಲಿದ್ದ ಹಿಂದೂ ಪ್ರವಾಸಿಗರ ಮೇಲೆ ಗುಂಡು ಹಾರಿಸಿದ್ದ. ಇಬ್ಬರು ಭಯೋತ್ಪಾದಕರು ಮಿಲಿಟರಿ ಸಮವಸ್ತ್ರದಲ್ಲಿದ್ದರೆ, ಮೂರನೆಯವರು ಸಾಂಪ್ರದಾಯಿಕ ಕಾಶ್ಮೀರಿ ಫೆರಾನ್ ಧರಿಸಿದ್ದ.

ಎಕ್ಸಿಟ್‌ ಗೇಟ್‌ನಲ್ಲಿ ಮೊದಲ ಗನ್‌ಶಾಟ್‌: ಬೈಸರನ್‌ನ ಪ್ರವಾಸಿ ತಾಣದ ಎಕ್ಸಿಟ್‌ ಗೇಟ್‌ನಲ್ಲಿ ಮೊದಲ ಗನ್‌ಶಾಟ್‌ ಬಿದ್ದಿತ್ತು. ಇದರ ಬೆನ್ನಲ್ಲಿಯೇ ಪ್ರವಾಸಿಗರು ಎಂಟ್ರಿ ಗೇಟ್‌ ಬಳಿಕ ಭೀತಿಯಿಂದ ಓಡಲು ಆರಂಭಿಸಿದ್ದರು. ಈ ವೇಳೆ ಅಲ್ಲಿದ್ದ ಮತ್ತಿಬ್ಬರು ಟೆರರಿಸ್ಟ್‌ಗಳು ಹೊಂಚು ಹಾಕಿ ಅವರ ಮೇಲೆ ದಾಳಿ ಮಾಡಲು ನಿಂತಿದ್ದರು.

ಎಂಟ್ರಿ ಗೇಟ್‌ನಲ್ಲಿ ನಿಂತಿದ್ದ ಇಬ್ಬರು ಟೆರರಿಸ್ಟ್‌ಗಳು ಎಲ್ಲರನ್ನೂ ಒಂದುಗೂಡಿಸಿ, ಪುರುಷರು ಹಾಗೂ ಮಹಿಳೆಯರು ಬೇರೆ ಬೇರೆಯಾಗಿ ನಿಲ್ಲುವಂತೆ ತಿಳಿಸಿದ್ದರು. ಆದರೆ, ಇದಕ್ಕೆ ಕೆಲವರು ವಿರೋಧಿಸಿದ್ದರು.ಈ ವೇಳೆ ಟೆರರಿಸ್ಟ್‌ಗಳು ಹಿಂದೂಗಳು ಮುಸ್ಲಿಮರು ಬೇರೆ ಬೇರೆಯಾಗಿ ನಿಲ್ಲಿ ಎಂದಿದ್ದರು. ಇದಕ್ಕೂ ಕೂಡ ಪ್ರವಾಸಿಗರು ವಿರೋಧಿಸಿದ್ದರು.

ನಂತರ ಭಯೋತ್ಪಾದಕರು ಪ್ರವಾಸಿಗರ ಮೇಲೆ ಗುಂಡು ಹಾರಿಸುವ ಮೊದಲು ಕಲ್ಮಾ (ಇಸ್ಲಾಮಿಕ್ ನಂಬಿಕೆಯ ಘೋಷಣೆ) ಪಠಿಸುವಂತೆ ತಿಳಿಸಿದ್ದ. ಪ್ರವೇಶ ದ್ವಾರದ ಮೂಲಕ ಬಂದ ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಭಯೋತ್ಪಾದಕರಿಂದ ಗನ್‌ಶಾಟ್‌ ತಿಂದು ಸಾವು ಕಂಡ ಮೊದಲ ವ್ಯಕ್ತಿ ಆಗಿದ್ದರು.

ಚಹಾ ಅಂಗಡಿ ಹಾಗೂ ಭೇಲ್‌ಪುರಿ ಸ್ಟಾಲ್‌ನ ಬಳಿಕ ದೊಡ್ಡ ಪ್ರಮಾಣದ ಸಾವುಗಳು ದಾಖಲಾಗಿದೆ. ಅಲ್ಲಿಯೇ ಹೆಚ್ಚಿನ ಜನರು ಒಟ್ಟುಗೂಡಿದ್ದರು. ದಾಳಿಯ ಬಳಿಕ ಟೆರರಿಸ್ಟ್‌ಗಳು ಪಾರ್ಕ್‌ನ ಎಡಗಡೆ ಇದ್ದ ಗೋಡೆಯನ್ನು ಹಾರಿ ಪರಾರಿಯಾಗಿದ್ದರು.

ದಾಳಿ ನಡೆದ ಸ್ಥಳದಲ್ಲಿ ಎನ್‌ಐಎ ಟೀಮ್‌ ತನಿಖೆ: ದಾಳಿಯ ದೃಶ್ಯವನ್ನು ಮರುಸೃಷ್ಟಿಸಲು ಆರು ಸದಸ್ಯರ NIA ತಂಡವು ಇಬ್ಬರು FSL ಸದಸ್ಯರೊಂದಿಗೆ ಬೈಸರನ್ ಕಣಿವೆಯನ್ನು ತಲುಪಿದೆ. ಅರಣ್ಯ ಪ್ರದೇಶ ಮತ್ತು ಭಯೋತ್ಪಾದಕರ ನಿರ್ಗಮನ ಮಾರ್ಗವನ್ನು NIA ವೀಡಿಯೊ ಮಾಡುತ್ತಿದೆ. ಬೈಸರನ್ ಪ್ರದೇಶದಲ್ಲಿ ಅಂಗಡಿಗಳನ್ನು ಹೊಂದಿರುವ ಮತ್ತು ಪೋನಿ ರೈಡ್ ಆಪರೇಟರ್‌ಗಳ ಸುಮಾರು 45 ಸ್ಥಳೀಯರನ್ನು ವಿಚಾರಣೆ ನಡೆಸಲಾಗುತ್ತಿದೆ. ಗುಂಡು ಹಾರಿಸಿದಾಗ ಪ್ರವಾಸಿಗರೊಬ್ಬರು 'ಅಲ್ಲಾಹು ಅಕ್ಬರ್' ಎಂದು ಮೂರು ಬಾರಿ ಹೇಳಿದ ವೀಡಿಯೊದಲ್ಲಿ ಸೆರೆಹಿಡಿಯಲಾದ ಜಿಪ್‌ಲೈನ್ ಆಪರೇಟರ್‌ನನ್ನು ಸಹ ವಿಚಾರಣೆ ನಡೆಸಲಾಗುತ್ತಿದೆ.

15 ಸ್ಥಳೀಯ ಕಾಶ್ಮೀರಿಗಳ ಹಿಡಿದು ರುಬ್ಬಿದ NIA: ಬಯಲಾಯ್ತು ಹಲವು ಸ್ಫೋಟಕ ಸಂಗತಿ

ಭಯೋತ್ಪಾದಕರು "ಮೊಬೈಲ್ ಪೇಯ್ಡ್ ಅಪ್ಲಿಕೇಶನ್" ಬಳಸಿರಬಹುದು ಎಂದು NIA ಉನ್ನತ ಅಧಿಕಾರಿಗಳು ಹೇಳಿದ್ದಾರೆ. ಅವರು ತಮ್ಮ ಪಾಕಿಸ್ತಾನಿ ನಿರ್ವಾಹಕರೊಂದಿಗೆ "ಪಾವತಿಸಿದ ಎನ್‌ಕ್ರಿಪ್ಟ್ ಮಾಡಿದ ಮೊಬೈಲ್" ಮೂಲಕ ಸಂವಹನ ನಡೆಸಿರಬಹುದು ಎಂದು ಅಂದಾಜಿಸಲಾಗಿದೆ. ಅದೇ ಸಮಯದಲ್ಲಿ, ಭದ್ರತಾ ಪಡೆಗಳು ದಕ್ಷಿಣ ಕಾಶ್ಮೀರದಲ್ಲಿ ತಮ್ಮ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ.

ನೀರು ಮಾತ್ರವಲ್ಲ, ಪಾಕಿಸ್ತಾನಕ್ಕೆ ಈ ವಸ್ತುಗಳ ಪೂರೈಕೆಯನ್ನು ಭಾರತ ನಿಲ್ಲಿಸಬಹುದು!