ಅಂಕೇಗೌಡ ಸೇರಿ ಮೂವರು ಕನ್ನಡಿಗರಿಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟ, ದೇಶದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಪದ್ಮ ಪುರಸ್ಕಾರ ಪ್ರಕಟಗೊಂಡಿದೆ. ಕರ್ನಾಟಕದ ಯಾರೆಲ್ಲೂ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ?
ನವದೆಹಲಿ (ಜ.25) ಗಣರಾಜ್ಯೋತ್ಸವ ದಿನ ಹಲವು ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಪದ್ಮ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಪ್ರತಿಷ್ಠಿತ ಪ್ರಶಸ್ತಿ ಪಟ್ಟಿ ಪ್ರಕಟಗೊಂಡಿದೆ. ವಿಶೇಷ ಅಂದರೆ ಈ ಬಾರಿ ಮೂವರು ಕನ್ನಡಿಗರಿಗೆ ಪದ್ಮ ಪ್ರಶಸ್ತಿ ಘೋಷಣೆಯಾಗಿದೆ.
ಮನೆಯನ್ನೇ ಪುಸ್ತಕ ಗ್ರಂಥಾಲಯ ಮಾಡಿದ ಅಂಕೆಗೌಡ, ಎಸ್‌ಜಿ ಸುಶೀಲಮ್ಮ, ಡಾ.ಸುರೇಶ್ ಹಗನವಾಡಿಗೆ ಪದ್ಮ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಇದರೊಂದಿಗೆ ಒಟ್ಟು 45 ಮಂದಿಗೆ ಪದ್ಮ ಪ್ರಶಸ್ತಿ ಗೌರವಕ್ಕೆ ಭಾಜನರಾಗಿದ್ದಾರೆ.
ಕನ್ನಡದ ಮೂವರು ಸಾಧಕರಿಗೆ ಗೌರವ
10 ಲಕ್ಷಕ್ಕೂ ಹೆಚ್ಚು ಪುಸ್ತಕಗಳಿರುವ ಗ್ರಂಥಾಲಯ ಮಾಡಿರುವ ಅಂಕೌಗೌಡ, ದಾವಣಗೆರೆಯಲ್ಲಿ ವೈದ್ಯ ಸುರೇಶ್ ಹಗನವಾಡಿ, ಬೆಂಗಳೂರಿನ ಸಮಾಜ ಸೇವಕಿ ಎಸ್‌ಜಿ ಸುಶೀಲಮ್ಮಗೆ ಪದ್ಮ ಪ್ರಶಸ್ತಿ ಘೋಷಣೆಯಾಗಿದೆ. ಪದ್ಮ ಪ್ರಶಸ್ತಿಗೆ ಭಾಜನರಾದ 45 ಸಾಧಕರ ಪಟ್ಟಿ ಇಲ್ಲಿದೆ.
- ಅಂಕೇಗೌಡ (ಕರ್ನಾಟಕ - ಸಾಹಿತ್ಯ ಮತ್ತು ಶಿಕ್ಷಣ)
- ಸುರೇಶ್ ಹನಗವಾಡಿ (ಕರ್ನಾಟಕ - ವೈದ್ಯಕೀಯ)
- ಎಸ್. ಜಿ. ಸುಶೀಲಮ್ಮ (ಕರ್ನಾಟಕ - ಸಮಾಜ ಸೇವೆ)
- ಅರ್ಮಿಡಾ ಫರ್ನಾಂಡಿಸ್ (ಮಹಾರಾಷ್ಟ್ರ - ವೈದ್ಯಕೀಯ)
- ಭಗವಾನ್ ದಾಸ್ ರೈಕ್ವಾರ್ (ಮಧ್ಯಪ್ರದೇಶ - ಸಮಾಜ ಸೇವೆ)
- ಭಿಕ್ಲ್ಯಾ ಲಡಕ್ಯಾ ಧಿಂಡಾ (ಮಹಾರಾಷ್ಟ್ರ - ಕಲೆ)
- ಬ್ರಿಜ್ ಲಾಲ್ ಭಟ್ (ಜಮ್ಮು ಮತ್ತು ಕಾಶ್ಮೀರ - ಸಾಹಿತ್ಯ ಮತ್ತು ಶಿಕ್ಷಣ)
- ಬುಧ್ರಿ ಟಾಟಿ (ಛತ್ತೀಸ್‌ಗಢ - ಸಮಾಜ ಸೇವೆ)
- ಚರಣ್ ಹೆಂಬ್ರಮ್ (ಪಶ್ಚಿಮ ಬಂಗಾಳ - ಕಲೆ)
- ಚಿರಂಜಿ ಲಾಲ್ ಯಾದವ್ (ಉತ್ತರ ಪ್ರದೇಶ - ಕಲೆ)
- ಧಾರ್ಮಿಕ್ ಲಾಲ್ ಚುನೀಲಾಲ್ ಪಾಂಡ್ಯ (ಗುಜರಾತ್ - ಕಲೆ)
- ಗಫ್ರುದ್ದೀನ್ ಮೇವಾಟಿ ಜೋಗಿ (ಹರಿಯಾಣ - ಕಲೆ)
- ಹ್ಯಾಲಿ ವಾರ್ (ಮೇಘಾಲಯ - ಸಮಾಜ ಸೇವೆ)
- ಇಂದರ್ಜಿತ್ ಸಿಂಗ್ ಸಿಧು (ಪಂಜಾಬ್ - ಕ್ರೀಡೆ)
- ಕೆ. ಪಜನಿವೇಲ್ (ಪುದುಚೇರಿ - ಕಲೆ)
- ಕೈಲಾಶ್ ಚಂದ್ರ ಪಂತ್ (ಉತ್ತರಾಖಂಡ - ಸಾಹಿತ್ಯ ಮತ್ತು ಶಿಕ್ಷಣ)
- ಖೇಮ್ ರಾಜ್ ಸುಂದ್ರಿಯಾಲ್ (ಉತ್ತರಾಖಂಡ - ಕಲೆ)
- ಕೊಲ್ಲಕ್ಕಾಯಿಲ್ ದೇವಕಿ ಅಮ್ಮ ಜಿ (ಕೇರಳ - ಪರಿಸರ)
- ಕುಮಾರಸ್ವಾಮಿ ತಂಗರಾಜ್ (ತೆಲಂಗಾಣ - ವಿಜ್ಞಾನ ಮತ್ತು ಇಂಜಿನಿಯರಿಂಗ್)
- ಮಹೇಂದ್ರ ಕುಮಾರ್ ಮಿಶ್ರಾ (ಒಡಿಶಾ - ಸಾಹಿತ್ಯ ಮತ್ತು ಶಿಕ್ಷಣ)
- ಮಿರ್ ಹಾಜಿಭಾಯಿ ಕಸಂಭಾಯಿ (ಗುಜರಾತ್ - ಕಲೆ)
- ಮೋಹನ್ ನಾಗರ್ (ಉತ್ತರ ಪ್ರದೇಶ - ಕಲೆ)
- ನರೇಶ್ ಚಂದ್ರ ದೇವ್ ವರ್ಮಾ (ತ್ರಿಪುರ - ಕಲೆ)
- ನೀಲೇಶ್ ವಿನೋದ್ ಚಂದ್ರ ಮಾಂಡ್ಲೆವಾಲಾ (ಗುಜರಾತ್ - ಸಮಾಜ ಸೇವೆ)
- ನೂರುದ್ದೀನ್ ಅಹ್ಮದ್ (ಅಸ್ಸಾಂ - ಕಲೆ)
- ಓದುವಾರ್ ತಿರುತಣಿ ಸ್ವಾಮಿನಾಥನ್ (ತಮಿಳುನಾಡು - ಕಲೆ)
- ಪದ್ಮಾ ಗುರ್ಮೇಟ್ (ಲಡಾಖ್ - ವೈದ್ಯಕೀಯ)
- ಪೋಖಿಲಾ ಲೆಕ್ತೆಪಿ (ಅಸ್ಸಾಂ - ಕಲೆ)
- ಪುಣ್ಯಮೂರ್ತಿ ನಟೇಸನ್ (ತಮಿಳುನಾಡು - ಕಲೆ)
- ಆರ್. ಕೃಷ್ಣನ್ (ತಮಿಳುನಾಡು - ಕಲೆ)
- ರಘುಪತ್ ಸಿಂಗ್ (ರಾಜಸ್ಥಾನ - ಕಲೆ)
- ರಘುವೀರ್ ತುಕಾರಾಮ್ ಖೇಡ್ಕರ್ (ಮಹಾರಾಷ್ಟ್ರ - ಕಲೆ)
- ರಾಜಸ್ತಪತಿ ಕಾಳಿಯಪ್ಪ ಗೌಂಡರ್ (ತಮಿಳುನಾಡು - ಕಲೆ)
- ರಾಮ ರೆಡ್ಡಿ ಮಾಮಿಡಿ (ತೆಲಂಗಾಣ - ಕಲೆ)
- ರಾಮಚಂದ್ರ ಗೋಡ್ಬೋಲೆ ಮತ್ತು ಸುನೀತಾ ಗೋಡ್ಬೋಲೆ (ಮಹಾರಾಷ್ಟ್ರ - ವೈದ್ಯಕೀಯ)
- ಸಂಗ್ಯುಸಾಂಗ್ ಎಸ್. ಪೊಂಗೆನರ್ (ನಾಗಾಲ್ಯಾಂಡ್ - ಕಲೆ)
- ಶಾಫಿ ಶೌಕ್ (ಜಮ್ಮು ಮತ್ತು ಕಾಶ್ಮೀರ - ಸಾಹಿತ್ಯ ಮತ್ತು ಶಿಕ್ಷಣ)
- ಶ್ರೀರಂಗ್ ದೇವಬಾ ಲಾಡ್ (ಮಹಾರಾಷ್ಟ್ರ - ಕಲೆ)
- ಶ್ಯಾಮ್ ಸುಂದರ್ (ಉತ್ತರ ಪ್ರದೇಶ - ಸಮಾಜ ಸೇವೆ)
- ಸಿಮಾಂಚಲ್ ಪಾತ್ರೋ (ಒಡಿಶಾ - ಕಲೆ)
- ಟಗಾ ರಾಮ್ ಭೀಲ್ (ರಾಜಸ್ಥಾನ - ಕಲೆ)
- ಟೆಚಿ ಗುಬಿನ್ (ಅರುಣಾಚಲ ಪ್ರದೇಶ - ಕಲೆ)
- ತಿರುವಾರೂರು ಭಕ್ತವತ್ಸಲಂ (ತಮಿಳುನಾಡು - ಕಲೆ)
- ವಿಶ್ವ ಬಂಧು (ಉತ್ತರ ಪ್ರದೇಶ - ಸಾಹಿತ್ಯ ಮತ್ತು ಶಿಕ್ಷಣ)
- ಯುಮ್ನಂ ಜಾತ್ರಾ ಸಿಂಗ್ (ಮಣಿಪುರ - ಕಲೆ)
ಅಂಕೆಗೌಡರ ಸಾಧನೆ
ಮೈಸೂರು ಸಮೀಪದ ಹರಹಳ್ಳಿ ಗ್ರಾಮದ ಅಂಕೆಗೌಡ ದೇಶದಲ್ಲಿ ಎಲ್ಲೂ ಇಲ್ಲದ ಅತೀ ದೊಡ್ಡ ಗ್ರಾಮೀಣ ಗ್ರಂಥಾಲಯವನ್ನು ಮಾಡಿದ್ದಾರೆ. ತಮ್ಮ ದುಡಿಮೆಯ ಹಣವನ್ನು ಮಾತ್ರವಲ್ಲ, ಗ್ರಂಥಾಲಾಯಕ್ಕಾಗಿ ತಮ್ಮ ಆಸ್ತಿ ಮಾರಿ ಮಕ್ಕಳು, ವಿದ್ಯಾರ್ಥಿಗಳಿಗೆ ಎಲ್ಲಾ ಪುಸ್ತಕಗಳು ಲಭ್ಯವಾಗಬೇಕು ಅನ್ನೋ ನಿಟ್ಟಿನಲ್ಲಿ ಸದ್ದಿಲ್ಲದೆ ಕಾರ್ಯನಿರ್ವಹಿಸಿದ ಸಾಧಕ ಅಂಕೆಗೌಡ. ಇವರ ಗ್ರಾಮೀಣ ಗ್ರಂಥಾಲಯದಲ್ಲಿ 10ಕ್ಕೂ ಹೆಚ್ಚು ಪುಸ್ತಕಗಳಿವೆ.
ಸದ್ದಿಲ್ಲದೆ ಸಾಧನೆ ಮಾಡಿದ ಸಾಧಕರು
ಅಂಕೆಗೌಡರ ರೀತಿ ಹಲವು ಸಾಧಕರನ್ನು ಕೇಂದ್ರ ಸರ್ಕಾರ ಗುರುತಿಸಿ ಗೌರವಿಸಿದೆ. ಸದ್ದಿಲ್ಲದೆ, ಎಲೆಮರೆ ಕಾಯಿಯಂತೆ ತಮ್ಮ ಕಾರ್ಯದಲ್ಲಿ ತಲ್ಲೀನನಾಗಿದ್ದ ಸಾಧಕರನ್ನು ಗುರುತಿಸಿದೆ. ಈ ಪೈಕಿ ಮಧ್ಯಪ್ರದೇಶದ ಭಗವದಾಸ್ ರೈಕ್ವಾರ್, ಮಹಾರಾಷ್ಟ್ರದ ಅರ್ಮಿಡಾ ಫರ್ನಾಂಡಿಸ್, ಜಮ್ಮು ಮತ್ತು ಕಾಶ್ಮೀರದ ಬ್ರಿಜ್ ಲಾಲ್ ಭಟ್, ಚತ್ತೀಸಘಡದ ಬುದ್ರಿ ಥಾಟಿ, ಒಡಿಶಾದ ಚರನ್ ಹೆಂಬರಮ್, ಉತ್ತರ ಪ್ರದೇಶದ ಚಿರಂಜಿ ಲಾಲ್ ಯಾದವ್, ಗುಜರಾತ್‌ನ ದರ್ಮಿಕಲಾಲ್ ಚುನಿಲಾಲ್ ಪಾಂಡ್ಯಗೆ ಪದ್ಮ ಪ್ರಶಸ್ತಿ ಘೋಷಣೆಯಾಗಿದೆ.
100 ವರ್ಷದ ಸ್ವಾತಂತ್ರ್ಯ ಹೋರಾಟಗಾರ್ತಿ ಲಿಬಿಯಾ ಲೋಬೋ ಸರ್ದೇಸಾಯಿ ಸೇರಿದಂತೆ ಹಲವು ಪ್ರಮುಖರಿಗೆ ಪದ್ಮ ಪ್ರಶಸ್ತಿ ಘೋಷಣೆಯಾಗಿದೆ.


