ಹಿಂದಿ ಹೇರಿಕೆ ವಿರುದ್ಧ ದಶಕಗಳಿಂದ ದೊಡ್ಡಮಟ್ಟದಲ್ಲಿ ಧ್ವನಿ ಎತ್ತುತ್ತಿರುವ ದಕ್ಷಿಣದ ಏಕೈಕ ರಾಜ್ಯವಾದ ತಮಿಳುನಾಡು, ಇದೀಗ ಹಿಂದಿಯೇತರ ಭಾಷೆಯಲ್ಲಿ ರಚಿತ ಅತ್ಯುತ್ತಮ ಕೃತಿಗಳಿಗೆ ವಾರ್ಷಿಕ ಪ್ರಶಸ್ತಿ ನೀಡುವ ಘೋಷಣೆ ಮಾಡಿದೆ.
ಚೆನ್ನೈ: ಹಿಂದಿ ಹೇರಿಕೆ ವಿರುದ್ಧ ದಶಕಗಳಿಂದ ದೊಡ್ಡಮಟ್ಟದಲ್ಲಿ ಧ್ವನಿ ಎತ್ತುತ್ತಿರುವ ದಕ್ಷಿಣದ ಏಕೈಕ ರಾಜ್ಯವಾದ ತಮಿಳುನಾಡು, ಇದೀಗ ಹಿಂದಿಯೇತರ ಭಾಷೆಯಲ್ಲಿ ರಚಿತ ಅತ್ಯುತ್ತಮ ಕೃತಿಗಳಿಗೆ ವಾರ್ಷಿಕ ಪ್ರಶಸ್ತಿ ನೀಡುವ ಘೋಷಣೆ ಮಾಡಿದೆ.
ರಾಜ್ಯ ಸರ್ಕಾರದ ವತಿಯಿಂದ
ರಾಜ್ಯ ಸರ್ಕಾರದ ವತಿಯಿಂದ ಹಿಂದಿಯೇತರ ಭಾಷೆಗಳಲ್ಲಿನ ಅತ್ಯುತ್ತಮ ಕೃತಿಗಳಿಗೆ ವಾರ್ಷಿಕ ಸಾಹಿತ್ಯ ಪ್ರಶಸ್ತಿ ನೀಡುವುದಾಗಿ ಸ್ವತಃ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಘೋಷಿಸಿದ್ದಾರೆ.
ಶಾಸ್ತ್ರೀಯ ಭಾಷಾ ಸಾಹಿತ್ಯ
‘ಶಾಸ್ತ್ರೀಯ ಭಾಷಾ ಸಾಹಿತ್ಯ’ ಎಂಬ ಹೆಸರಿನಲ್ಲಿ ಮೊದಲ ಹಂತದಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ, ಒಡಿಯಾ, ಬಂಗಾಳಿ ಮತ್ತು ಮರಾಠಿ ಭಾಷೆಗಳಲ್ಲಿನ ಅತ್ಯುತ್ತಮ ಕೃತಿಗಳಿಗೆ ಪ್ರಶಸ್ತಿಯನ್ನು ಸರ್ಕಾರ ನೀಡಲಿದೆ. ಪುರಸ್ಕೃತರಿಗೆ 5 ಲಕ್ಷ ರು. ನಗದು ಬಹುಮಾನ ನೀಡಲಾಗುವುದು.


