ಶತವಧಾನಿ ಆರ್ ಗಣೇಶ್ ಸೇರಿ ಕರ್ನಾಟಕ 8 ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರಕಟ, ಇತ್ತೀಚೆಗೆ ನಿಧನರಾದ ಬಾಲಿವುಡ್ ನಟ ಧಮೇಂದ್ರ ಅವರಿಗೆ ಮರಣೋತ್ತರ ಪದ್ಮ ವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ನವದೆಹಲಿ (ಜ.25) ದೇಶದ ಪ್ರತಿಷ್ಠಿತ ಹಾಗೂ ಅತ್ಯುನ್ನತ ಪ್ರಶಸ್ತಿಗಳಾದ 2025ರ ಸಾಲಿನ ಸಾಧಕರಿಗೆ ಪದ್ಮಭೂಷಣ, ಪದ್ಮ ವಿಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿ ಪ್ರಕಟಗೊಂಡಿದೆ. ಐವರು ಸಾಧಕರಿಗೆ ಪದ್ಮ ವಿಭೂಷಣ ಹಾಗೂ 13 ಸಾಧಕರಿಗೆ ಪದ್ಮ ಭೂಷಣ ಪ್ರಶಸ್ತಿ ಗೌರವ ಸಿಕ್ಕಿದೆ. ವಿಶೇಷ ಅಂದರೆ ಅವಧಾನ ಸಾಧಕರು, ವಿದ್ವಾಂಸಕ, ಲೇಖಕ ಕರ್ನಾಟಕದ ವ ಶತವಧಾನಿ ಆರ್ ಗಣೇಶ್‌ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇನ್ನು ಪದ್ಮ ಭೂಷಣ, ಪದ್ಮಶ್ರೀ ಸೇರಿ ಒಟ್ಟು 8 ಮಂದಿ ಕರ್ನಾಟಕದ ಸಾಧಕರು ದೇಶದ ಅತ್ಯುನ್ನತ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಮೂಲಕ ಕರ್ನಾಟಕದ ಕೀರ್ತಿ ಪತಾಕೆ ದೇಶದಲ್ಲೇ ಹಾರಾಡಿದೆ.

Add Asianetnews Kannada as a Preferred SourcegooglePreferred

ಪದ್ಮ ಪ್ರಶಸ್ತಿ ವಿಜೇತ ಕರ್ನಾಟಕ ಸಾಧಕರು

  1. ಶತಾವಧಾನಿ ಗಣೇಶ್
  2. ಅಂಕೇಗೌಡ
  3. ಪ್ರಭಾಕರ ಕೋರೆ
  4. ಸುಶೀಲಮ್ಮ
  5. ಶಶಿ ಶೇಖರ ವೆಂಪತಿ
  6. ಶುಭಾ ವೆಂಕಟೇಶ ಅಯ್ಯಂಗಾರ್
  7. ಸುರೇಶ ಹನಗವಾಡಿ
  8. ಟಿ.ಟಿ.ಜಗನ್ನಾಥ

ಪದ್ಮ ವಿಭೂಷಣ ಸಾಧಕರ ಪಟ್ಟಿ

  • ಧರ್ಮೇಂದ್ರ ಸಿಂಗ್ ಡಿಯೋಲ್ (ಮಹಾರಾಷ್ಟ್ರ) ಕ್ಷೇತ್ರ: ಕಲೆ (ಸಿನಿಮಾ) (ಮರಣೋತ್ತರ)
  • ಕೆ. ಟಿ. ಥಾಮಸ್ (ಕೇರಳ) ಕ್ಷೇತ್ರ: ಸಾರ್ವಜನಿಕ ವ್ಯವಹಾರಗಳು (ನ್ಯಾಯಾಂಗ)
  • ಎನ್. ರಾಜಂ (ಉತ್ತರ ಪ್ರದೇಶ) ಕ್ಷೇತ್ರ: ಕಲೆ (ಸಂಗೀತ - ಪಿಟೀಲು)
  • ಪಿ. ನಾರಾಯಣನ್ (ಕೇರಳ) ಕ್ಷೇತ್ರ: ಸಾಹಿತ್ಯ ಮತ್ತು ಶಿಕ್ಷಣ
  • ವಿ. ಎಸ್. ಅಚ್ಯುತಾನಂದನ್ (ಕೇರಳ) ಕ್ಷೇತ್ರ: ಸಾರ್ವಜನಿಕ ವ್ಯವಹಾರಗಳು (ರಾಜಕೀಯ) (ಮರಣೋತ್ತರ)

ಪದ್ಮ ಭೂಷಣ ಪ್ರಶಸ್ತಿ

ಅಲ್ಕಾ ಯಾಗ್ನಿಕ್ (ಮಹಾರಾಷ್ಟ್ರ) ಕ್ಷೇತ್ರ: ಕಲೆ (ಹಿನ್ನೆಲೆ ಗಾಯನ)

ಭಗತ್ ಸಿಂಗ್ ಕೋಶ್ಯಾರಿ (ಉತ್ತರಾಖಂಡ)ಕ್ಷೇತ್ರ: ಸಾರ್ವಜನಿಕ ವ್ಯವಹಾರಗಳು

ಕಲ್ಲಿಪಟ್ಟಿ ರಾಮಸಾಮಿ ಪಳನಿಸ್ವಾಮಿ (ತಮಿಳುನಾಡು)ಕ್ಷೇತ್ರ: ವೈದ್ಯಕೀಯ

ಮಮ್ಮುಟ್ಟಿ (ಕೇರಳ)ಕ್ಷೇತ್ರ: ಕಲೆ (ಸಿನಿಮಾ)

ಡಾ. ನೋರಿ ದತ್ತಾತ್ರೇಯಡು (ಅಮೆರಿಕ/ತೆಲಂಗಾಣ)ಕ್ಷೇತ್ರ: ವೈದ್ಯಕೀಯ (ಆಂಕೊಲಾಜಿ)

ಪಿಯೂಷ್ ಪಾಂಡೆ (ಮಹಾರಾಷ್ಟ್ರ)ಕ್ಷೇತ್ರ: ಕಲೆ (ಜಾಹೀರಾತು ಮತ್ತು ಸಂವಹನ) (ಮರಣೋತ್ತರ)

ಎಸ್. ಕೆ. ಎಂ. ಮೈಲಾನಂದನ್ (ತಮಿಳುನಾಡು)ಕ್ಷೇತ್ರ: ಸಮಾಜ ಸೇವೆ

ಶತಾವಧಾನಿ ಆರ್. ಗಣೇಶ್ (ಕರ್ನಾಟಕ)ಕ್ಷೇತ್ರ: ಕಲೆ (ಸಾಹಿತ್ಯ/ಅವಧಾನ ಕಲೆ)

ಶಿಬು ಸೊರೇನ್ (ಜಾರ್ಖಂಡ್)ಕ್ಷೇತ್ರ: ಸಾರ್ವಜನಿಕ ವ್ಯವಹಾರಗಳು (ಮರಣೋತ್ತರ)

ಉದಯ್ ಕೋಟಕ್ (ಮಹಾರಾಷ್ಟ್ರ)ಕ್ಷೇತ್ರ: ವ್ಯಾಪಾರ ಮತ್ತು ಕೈಗಾರಿಕೆ (ಬ್ಯಾಂಕಿಂಗ್)

ವಿ. ಕೆ. ಮಲ್ಹೋತ್ರಾ (ದೆಹಲಿ)ಕ್ಷೇತ್ರ: ಸಾರ್ವಜನಿಕ ವ್ಯವಹಾರಗಳು (ಮರಣೋತ್ತರ)

ವೆಳ್ಳಪ್ಪಳ್ಳಿ ನಟೇಶನ್ (ಕೇರಳ)ಕ್ಷೇತ್ರ: ಸಾರ್ವಜನಿಕ ವ್ಯವಹಾರಗಳು

ವಿಜಯ್ ಅಮೃತರಾಜ್ (ತಮಿಳುನಾಡು)ಕ್ಷೇತ್ರ: ಕ್ರೀಡೆ (ಟೆನ್ನಿಸ್)

ಪದ್ಮ ಪ್ರಶಸ್ತಿ ಕ್ರೀಡಾ ಸಾಧಕರು

  • ಹರ್ಮನ್‌ಪ್ರೀತ್ ಕೌರ್ (ಮಹಿಳಾ ಕ್ರಿಕೆಟರ್)
  • ಕೆ ಪ್ರಜಾನಿವೆಲ್ (ಕ್ರೀಡೆ)
  • ಪ್ರವೀಣ್ ಕುಮಾರ್ (ಕ್ರೀಡೆ)
  • ರೋಹಿತ್ ಶರ್ಮಾ (ಕ್ರಿಕೆಟ್)
  • ಸವಿತಾ ಪೂನಿಯಾ (ಕ್ರೀಡೆ)
  • ವಿಜಯ್ ಅಮೃತರಾಜ್(ಕ್ರೀಡೆ)
  • ಬಲದೇವ್ ಸಿಂಗ್ (ಕ್ರೀಡೆ)
  • ಭಗವಾನ್‌ದಾಸ್ ರೈಕಾರ್
  • ವ್ಲಾದಿಮಿರ್ ಮೆಸ್ತವಿರಿಶಿವಿಲ್ (ಕ್ರೀಡೆ ) ಮರಣೋತ್ತರ

ಪದ್ಮಶ್ರೀ ಪ್ರಶಸ್ತಿ

ಈ ಬಾರಿ ಕರ್ನಾಟಕ ಮೂವರು ಸೈಲೆಂಟ್ ಸಾಧಕರು ಸೇರಿದಂತೆ ಒಟ್ಟು 45 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟಗೊಂಡಿದೆ. ಈ ಪೈಕಿ ಪುಸ್ತಕ ಪ್ರೇಮಿ, 10ಲಕ್ಷಕ್ಕೂ ಹೆಚ್ಚಿನ ಪುಸ್ತಕ ಸಂಗ್ರಹದ ಗ್ರಾಮೀಣ ಗ್ರಂಥಾಲಯ ಆರಂಭಿಸಿದ ಅಂಕೆಗೌಡ, ದಾವಣೆಗೆರೆಯಲ್ಲಿ ವೈದ್ಯ ಸೇವೆ ಮಾಡುತ್ತಾ ಜನರಿಗೆ ನೆರವಾಗಿರುವ ಸುರೇಶ್ ಹನಗವಾಡಿ ಹಾಗೂ ಬೆಂಗಳೂರಿನ ಸಮಾಜ ಸೇವಕಿ ಎಸ್ ಜಿ ಸುಶೀಲಮ್ಮಗೆ ಪದ್ಮಶ್ರೀ ಪ್ರಶಸ್ತಿ ಗೌರವ ಲಭವಿಸಿದೆ. ಇವರ ಜೊತೆಗೆ ದೇಶದ 45 ಪ್ರಮುಖ ಸಾಧಕರು ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದಾರೆ.