ನವದೆಹಲಿ(ನ.02): ಅಮೆರಿಕದಲ್ಲಿ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಧಾನಿ ಮೋದಿ, ಇದೀಗ ಥೈಲಾಂಡ್‌ನಲ್ಲಿ  ಸವಸ್ದಿ ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಅಮೆರಿಕಾದಲ್ಲಿ ಹೌಡಿ ಮೋದಿ: ಭಾರತದಲ್ಲಿ ‘ಎಲ್ಲಾ ಚೆನ್ನಾಗಿದೆ’ ನೋಡಿ!

ಇಂದಿನಿಂದ ಮೂರು ದಿನಗಳ ಅಧಿಕೃತ ಥೈಲ್ಯಾಂಡ್ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ, ಸಂಜೆ ಬ್ಯಾಂಕಾಕ್‌ನಲ್ಲಿ 'ಸವಸ್ದಿ ಪಿಎಂ ಮೋದಿ' ಕಾರ್ಯಕ್ರಮದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಈ ಕುರಿತು ಖುದ್ದು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಥೈಲ್ಯಾಂಡ್ ಪ್ರಗತಿಯಲ್ಲಿ ಅನಿವಾಸಿ ಭಾರತೀಯರ ಪಾತ್ರ ಅತ್ಯಂತ ದೊಡ್ಡದು ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

 ಅಸಿಯಾನ್​-ಇಂಡಿಯಾ, ಈಸ್ಟ್​ ಏಷ್ಯಾ, ಆರ್​ಸಿಇಪಿ ಶೃಂಗಸಭೆಗಳಲ್ಲಿ ಭಾಗವಹಿಸಲಿರುವ ಪ್ರಧಾನಿ, ಥಾಯ್ಲೆಂಡ್ ಪ್ರಧಾನಿ ಪ್ರಯೂತ್ ಛಾನ್​-ಒ-ಚಾ ಅವರನ್ನು ಭೇಟಿ ಮಾಡಿ ಮಾತುಕತಡೆ ನಡೆಸಲಿದ್ದಾರೆ.

ಮೋದಿ-ಟ್ರಂಪ್ ಸ್ನೇಹವೆಷ್ಟು ಆಳವಿದೆ? ಎಲ್ಲಾ ಈ ಫೋಟೋಗಳೇ ವಿವರಿಸುತ್ತೆ!