ಸೌದಿಗೆ ಪ್ರವಾಸ: ಪ್ರಧಾನಿ ಮೋದಿಗೆ ವೈಮಾನಿಕ ಮಾರ್ಗ ಅನುಮತಿ ನಿರಾಕರಿಸಿದ ಪಾಕ್
ಪ್ರಧಾನಿ ನರೇಂದ್ರ ಮೋದಿ ಸೌದಿ ಅರೇಬಿಯಾಗೆ ತೆರಳಲು ವೈಮಾನಿಕ ಮಾರ್ಗ ಬಳಸಲು ಪಾಕಿಸ್ತಾನ ಅನುಮತಿ ನಿರಾಕರಿಸಿದೆ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಮುಂಬಯಿ ಮಾರ್ಗವಾಗಿ ಸಮುದ್ರ ಮಾರ್ಗವಾಗಿ ರಿಯಾದ್‌ಗೆ ತೆರಳಲಿದ್ದಾರೆ.
ನವದೆಹಲಿ [ಅ.28]: ಪ್ರಧಾನಿ ನರೇಂದ್ರ ಮೋದಿ ಸೌದಿ ಅರೇಬಿಯಾ ಪ್ರವಾಸ ಕೈಗೊಳ್ಳುತ್ತಿದ್ದು ಆದರೆ ಅವರ ಪ್ರವಾಸಕ್ಕೆ ಬಳಸಬೇಕಾದ ವೈಮಾನಿಕ ಮಾರ್ಗಕ್ಕೆ ಪಾಕಿಸ್ತಾನ ಅನುಮತಿ ನಿರಾಕರಿಸಿದೆ.
ಪಾಕಿಸ್ತಾನ ವಿವಿಐಪಿ ಮಾರ್ಗ ಬಳಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೌದಿಗೆ ತೆರಳಲು ಹೆಚ್ಚಿನ ಸಮಯ ಹಿಡಿಯಲಿದ್ದು ಅವರು ಮುಂಬಯಿ ಮಾರ್ಗವಾಗಿ ರಿಯಾದ್ ಗೆ ತೆರಳಲಿದ್ದಾರೆ.
ಇನ್ನು ಈ ಬಗ್ಗೆ ಪಾಕಿಸ್ತಾನ ವಿದೇಶಾಂಗ ಸಚಿವ ಮಹಮ್ಮದ್ ಖುರೇಶಿ ಪ್ರತಿಕ್ರಿಯಿಸಿ ಪಾಕಿಸ್ತಾನವು ಭಾರತದ ಪ್ರಧಾನಿ ಮೋದಿ ಅವರಿಗೆ ಪಾಕ್ ವೈಮಾನಿಕ ಮಾರ್ಗ ಬಳಸಲು ಅವಕಾಶ ನಿರಾಕರಿಸಲು ನಿರ್ಧರಿಸಿದೆ. ಜಮ್ಮು ಕಾಶ್ಮೀರದಲ್ಲಿ ಮಾನವ ಹಕ್ಕು ಉಲ್ಲಂಘನೆ ಹಿನ್ನೆಲೆಯಲ್ಲಿ ಬ್ಲಾಕ್ ಆಚರಣೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಡಿಕೆಶಿ ಪರ ಬ್ಯಾಟಿಂಗ್; ಮೋದಿಗೆ ನಂಜಾವಧೂತ ಶ್ರೀ ವಾರ್ನಿಂಗ್!...
ಸೌದಿ ಅರೇಬಿಯಾಗೆ ತೆರಳಲಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಅಲ್ ಸೌದ್ ಭೇಟಿ ಮಾಡಲಿದ್ದು ಇಲ್ಲಿನ ಕಾರ್ಯಕ್ರಮ ಒಂದರಲ್ಲಿ ಪಾಲ್ಗೊಂಡು ಹೂಡಿಕೆ ವಿಚಾರಗಳ ಬಗ್ಗೆ ಪ್ರಧಾನಿ ಚರ್ಚೆ ನಡೆಸಲಿದ್ದಾರೆ.