Asianet Suvarna News Asianet Suvarna News

ಛತ್ತೀಸ್‌ಗಢದಲ್ಲಿ ಮತಯಂತ್ರ ಸಾಗಿಸುತ್ತಿದ್ದ ವಾಹನ ಸ್ಪೋಟಿಸಿದ ನಕ್ಸಲರು; ಯೋಧ ಬಲಿ: 2 ರಾಜ್ಯಗಳಲ್ಲಿ ಉತ್ತಮ ಮತದಾನ

ಛತ್ತೀಸ್‌ಗಢದ ಕೆಲವು ಭಾಗದಲ್ಲಿ ನಕ್ಸಲ್‌ ಚಟುವಟಿಕೆ ನಡೆದದ್ದು ಬಿಟ್ಟರೆ ಬಹುತೇಕ ಮತದಾನ ಶಾಂತಿಯುತವಾಗಿತ್ತು. ಗರಿಯಾಬಂದ್‌ ಜಿಲ್ಲೆಯಲ್ಲಿ ನಡೆದ ಬಾಂಬ್‌ ಸ್ಫೋಟದಲ್ಲಿ ಐಟಿಬಿಪಿಯ ಯೋಧರೊಬ್ಬರು ಮೃತಪಟ್ಟ ಘಟನೆ ನಡೆದಿದೆ.

over 76 percent turnout in madhya pradesh 72 percent voting in chhatisgarh phase 2 ash
Author
First Published Nov 18, 2023, 10:00 AM IST

ಭೋಪಾಲ್‌/ ರಾಯ್‌ಪುರ (ನವೆಂಬರ್ 18, 2023): ಪಂಚರಾಜ್ಯ ಚುನಾವಣೆಯ ಭಾಗವಾಗಿ ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢದಲ್ಲಿ ಶುಕ್ರವಾರ ಮತದಾನ ನಡೆದಿದ್ದು, ಈ ಎರಡು ರಾಜ್ಯಗಳಲ್ಲಿ ಕ್ರಮವಾಗಿ ಶೇ. 76.16 ರಷ್ಟು ಹಾಗೂ ಶೇ.68.15ರಷ್ಟು ಮತದಾನವಾಗಿದೆ.ಮ ಧ್ಯಪ್ರದೇಶದ 230 ಸ್ಥಾನಗಳಿಗೆ ಏಕಕಾಲದಲ್ಲಿ ಹಾಗೂ ಛತ್ತೀಸ್‌ಗಢದ 70 ಸ್ಥಾನಗಳಿಗೆ 2ನೇ ಹಂತದಲ್ಲಿ ಮತದಾನ ನಡೆದಿದೆ. 

ಮಧ್ಯಪ್ರದೇಶದಲ್ಲಿ ಕೆಲವು ಮತಗಟ್ಟೆಗಳು ನಕ್ಸಲ್‌ ಪೀಡಿತ ಪ್ರದೇಶದಲ್ಲಿರುವ ಬಾಲಘಾಟ್‌, ಮಾಂಡ್ಲಾ ಮತ್ತು ದಿಂಡೋರಿ ಜಿಲ್ಲಿಗಳಲ್ಲಿ ಮತದಾನವನ್ನು ಮಧ್ಯಾಹ್ನ 3 ಗಂಟೆಗೆ ಮುಕ್ತಾಯಗೊಳಿಸಲಾಯಿತು. ಉಳಿದ ಕಡೆಗಳಲ್ಲಿ ಸಾಯಂಕಾಲ 6 ಗಂಟೆಯವರೆಗೆ ಮತದಾನ ನಡೆದಿದೆ. ಬೈಹಾಲ್‌ ವಿಧಾನಸಭೆ ಕ್ಷೇತ್ರದಲ್ಲಿ ಅತಿ ಹೆಚ್ಚು ಶೇ. 80.38ರಷ್ಟು ಮತದಾನವಾಗಿದೆ. ಮಧ್ಯಪ್ರದೇಶದಲ್ಲಿ 230 ಕ್ಷೇತ್ರಗಳಿಗೆ 2,533 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಳೆದ ಚುನಾವಣೆಯಲ್ಲಿ ಶೇ. 75ರಷ್ಟು ಮತದಾನವಾಗಿತ್ತು.

ಇದನ್ನು ಓದಿ: ತೆಲಂಗಾಣ: ಕಾಂಗ್ರೆಸ್‌ ಭರ್ಜರಿ ‘ಗ್ಯಾರಂಟಿ’ ಪ್ರಣಾಳಿಕೆ; 6 ಗ್ಯಾರಂಟಿಗಳ ಜತೆಗೆ ಹಲವು ಭರವಸೆ!

ಛತ್ತೀಸ್‌ಗಢದ ಕೆಲವು ಭಾಗದಲ್ಲಿ ನಕ್ಸಲ್‌ ಚಟುವಟಿಕೆ ನಡೆದದ್ದು ಬಿಟ್ಟರೆ ಬಹುತೇಕ ಮತದಾನ ಶಾಂತಿಯುತವಾಗಿತ್ತು. ಗರಿಯಾಬಂದ್‌ ಜಿಲ್ಲೆಯಲ್ಲಿ ನಡೆದ ಬಾಂಬ್‌ ಸ್ಫೋಟದಲ್ಲಿ ಐಟಿಬಿಪಿಯ ಯೋಧರೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಛತ್ತೀಸ್‌ಗಢದಲ್ಲಿ ನ.7ರಂದು ಈಗಾಗಲೇ 20 ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಬಾಕಿ 70 ಕ್ಷೇತ್ರಗಳಿಗೆ 63 ಲಕ್ಷ ಮತದಾರರು ಶುಕ್ರವಾರ ಮತ ಹಾಕಲಿದ್ದಾರೆ. 958 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಎರಡೂ ರಾಜ್ಯಗಳ ಫಲಿತಾಂಶ ಡಿಸೆಂಬರ್ 3ರಂದು ಪ್ರಕಟವಾಗಲಿದೆ.

ಇದನ್ನೂ ಓದಿ: ಈ ರಾಜ್ಯದಲ್ಲಿ 450 ರೂ. ಗೆ ಸಿಗುತ್ತೆ ಗ್ಯಾಸ್‌ ಸಿಲಿಂಡರ್‌: ಬಿಜೆಪಿ ಘೋಷಣೆ

ನಕ್ಸಲರಿಗೆ ಯೋಧ ಬಲಿ
ಗರಿಯಾಬಂದ್‌: ಚುನಾವಣೆ ಮುಗಿದ ಬಳಿಕ ಮತಯಂತ್ರಗಳನ್ನು ಸಾಗಿಸುತ್ತಿದ್ದ ವಾಹನ ಗುರಿಯಾಗಿಸಿ ನಕ್ಸಲರು ನಡೆಸಿದ ಸ್ಫೋಟದಲ್ಲಿ ಐಟಿಬಿಪಿ ಯೋಧನೊಬ್ಬ ಶುಕ್ರವಾರ ಮೃತಪಟ್ಟಿದ್ದಾರೆ. ಗರಿಯಾಬಂದ್‌ ಜಿಲ್ಲೆಯ ಬಡೇ ಗೊಬ್ರಾ ಗ್ರಾಮದಿಂದ ಚುನಾವಣಾ ಸಿಬ್ಬಂದಿ ಮರಳುವ ವೇಳೆ ಈ ದುರ್ಘಟನೆ ಸಂಭವಿಸಿದೆ.

ಕ್ಷೇತ್ರದ ಎಲ್ಲ ಬೂತ್‌ ಸ್ತ್ರೀಯರಿಂದ ನಿರ್ವಹಣೆ
ರಾಯ್ಪುರ: ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿಧಾನಸಭಾ ಕ್ಷೇತ್ರವೊಂದರ ಎಲ್ಲಾ ಮತಗಟ್ಟೆಗಳನ್ನು ಪೂರ್ಣವಾಗಿ ಮಹಿಳೆಯರೇ ನಿರ್ವಹಿಸಿದ್ದಾರೆ. ಇಂಥ ದಾಖಲೆಗೆ ಶುಕ್ರವಾರ ಚುನಾವಣೆ ನಡೆದ ಛತ್ತೀಸ್‌ಗಢ ಉತ್ತರ ರಾಯ್ಪುರ ವಿಧಾನಸಭಾ ಕ್ಷೇತ್ರ ಪಾತ್ರವಾಗಿದೆ. ಕ್ಷೇತ್ರದ ಎಲ್ಲ 201 ಬೂತ್‌ಗಳನ್ನು ಮಹಿಳೆಯರು ನಿರ್ವಹಿಸಿದ್ದಾರೆ. ಇದಕ್ಕಾಗಿ ನಿಯೋಜಿತರಾಗಿದ್ದ 1,046 ಮಹಿಳೆಯರು ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: ಛತ್ತೀಸ್‌ಗಢಕ್ಕೆ ಕಾಂಗ್ರೆಸ್‌ ಬಳಿಕ ‘ಮೋದಿ ಗ್ಯಾರಂಟಿ’: 500 ರೂ.ಗೆ ಸಿಲಿಂಡರ್; ಅಯೋಧ್ಯೆಗೆ ತೆರಳಲು ಭಕ್ತರಿಗೆ ನೆರವು!

Follow Us:
Download App:
  • android
  • ios