Asianet Suvarna News Asianet Suvarna News

ಛತ್ತೀಸ್‌ಗಢಕ್ಕೆ ಕಾಂಗ್ರೆಸ್‌ ಬಳಿಕ ‘ಮೋದಿ ಗ್ಯಾರಂಟಿ’: 500 ರೂ.ಗೆ ಸಿಲಿಂಡರ್; ಅಯೋಧ್ಯೆಗೆ ತೆರಳಲು ಭಕ್ತರಿಗೆ ನೆರವು!

ಕೇಂದ್ರ ಗೃಹ ಸಚಿವ ಅಮಿತ್‌ ಶಾ, ‘ಛತ್ತೀಸ್‌ಗಢಕ್ಕೆ ಮೋದಿ ಗ್ಯಾರಂಟಿ’ ಎಂಬ ಶೀರ್ಷಿಕೆಯಡಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅಮಿತ್‌ ಶಾ ‘ಇದು ಕೇವಲ ಬಿಜೆಪಿಯ ಪ್ರಣಾಳಿಕೆ ಮಾತ್ರವಲ್ಲ. ಇದು ನಮಗೆ ‘ಸಂಕಲ್ಪ ಪತ್ರ’ ಎಂದು ಹೇಳಿದರು.

chhattisgarh assembly polls bjp releases modi ki guarantee 2023 manifesto promises lpg cylinders govt jobs ash
Author
First Published Nov 4, 2023, 8:59 AM IST

ರಾಯ್‌ಪುರ (ನವೆಂಬರ್ 4, 2023): ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ವಿವಾಹಿತ ಮಹಿಳೆಯರಿಗೆ ವಾರ್ಷಿಕ 12,000 ರೂ., ಭೂರಹಿತ ಕಾರ್ಮಿಕರಿಗೆ ವಾರ್ಷಿಕವಾಗಿ 10,000 ರೂ. ಆರ್ಥಿಕ ನೆರವು, 500 ರೂ.ಗೆ ಅಡುಗೆ ಅನಿಲ ಸಿಲಿಂಡರ್‌. ರಾಜ್ಯದ ಜನರಿಗೆ ಅಯೋಧ್ಯೆ ಶ್ರೀರಾಮನ ದರ್ಶನದ ಭರವಸೆಯನ್ನು ಛತ್ತೀಸ್‌ಗಢ ಬಿಜೆಪಿ ನೀಡಿದೆ.

ರಾಯ್‌ಪುರದಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ‘ಛತ್ತೀಸ್‌ಗಢಕ್ಕೆ ಮೋದಿ ಗ್ಯಾರಂಟಿ’ ಎಂಬ ಶೀರ್ಷಿಕೆಯಡಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅಮಿತ್‌ ಶಾ ‘ಇದು ಕೇವಲ ಬಿಜೆಪಿಯ ಪ್ರಣಾಳಿಕೆ ಮಾತ್ರವಲ್ಲ. ಇದು ನಮಗೆ ‘ಸಂಕಲ್ಪ ಪತ್ರ’ ಎಂದು ಹೇಳಿದರು.

ಇದನ್ನು ಓದಿ: ವಿಧಾನಸಭೆ ಚುನಾವಣಾ ಪ್ರಚಾರದ ವೇಳೆ ಸಂಸದನಿಗೆ ಚಾಕು ಇರಿತ: ಆರೋಪಿಗೆ ಹಿಗ್ಗಾಮುಗ್ಗ ಥಳಿತ; ಪೊಲೀಸ್‌ ವಶಕ್ಕೆ

ಪ್ರಣಾಳಿಕೆಯ ಅಂಶಗಳು:
‘ಮಹತರಿ ವಂದನ್‌ ಯೋಜನೆ’ಯಡಿ ವಿವಾಹಿತ ಮಹಿಳೆಯರಿಗೆ ವರ್ಷಕ್ಕೆ 12,000 ರೂ. ಆರ್ಥಿಕ ನೆರವು. ‘ದೀನದಯಾಳ್‌ ಉಪಾಧ್ಯಾಯ’ ಯೋಜನೆಯಡಿ ಭೂಮಿ ರಹಿತ ಕಾರ್ಮಿಕರಿಗೆ ವರ್ಷಕ್ಕೆ 10,000 ರೂ.. ಅಧಿಕಾರಕ್ಕೆ ಬಂದ 2 ವರ್ಷಗಳಲ್ಲಿ 1 ಲಕ್ಷ ಸರ್ಕಾರಿ ಹುದ್ದೆ ಭರ್ತಿ. ಬಡಕುಟುಂಬದ ಮಹಿಳೆಯರಿಗೆ 500 ರೂ.ಗೆ ಎಲ್‌ಪಿಜಿ, ವಿದ್ಯಾರ್ಥಿಗಳಿಗೆ ನೇರ ನಗದು ವರ್ಗಾವಣೆ ಮೂಲಕ ಕಾಲೇಜಿಗೆ ತೆರಳಲು ಪ್ರಯಾಣ ಭತ್ಯೆ, ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ 18 ಲಕ್ಷ ಮನೆಗಳ ನಿರ್ಮಾಣಕ್ಕೆ ಹಣ ಮಂಜೂರು, 2 ವರ್ಷದಲ್ಲಿ ಪ್ರತಿ ಮನೆಗೆ ನಲ್ಲಿ ನೀರಿನ ಸಂಪರ್ಕ, ‘ಕೃಷಿ ಉನ್ನತಿ ಯೋಜನೆ’ಯಡಿ ಪ್ರತಿ ಎಕೆರೆಗೆ 21 ಕ್ವಿಂಟಾಲ್‌ ಲೆಕ್ಕದಲ್ಲಿ ಕ್ವಿಂಟಾಲ್‌ ಭತ್ತವನ್ನು 3,100 ರೂ.ಗಳಿಗೆ ಖರೀದಿಸಲಾಗುವುದು ಎಂದು ಬಿಜೆಪಿ ಘೋಷಿಸಿದೆ.

ಇದನ್ನೂ ಓದಿ: ರಾಜಸ್ಥಾನ ಕಾಂಗ್ರೆಸ್‌ನಿಂದ 7 ಗ್ಯಾರಂಟಿ; ಅಧಿಕಾರಕ್ಕೆ ಬಂದ್ರೆ ಕರ್ನಾಟಕ ರೀತಿ ಎಲ್ಲ ಗ್ಯಾರಂಟಿ ಜಾರಿ: ಗೆಹ್ಲೋಟ್‌ ಘೋಷಣೆ

Follow Us:
Download App:
  • android
  • ios