Asianet Suvarna News Asianet Suvarna News

ಈಗ ಖಾಲಿ ಆದ ಲೋಕಸಭಾ ಆಸನಗಳು 2024ರಲ್ಲಿ ಬಿಜೆಪಿಗರಿಂದ ಭರ್ತಿ: ಮೋದಿ

ಪಂಚರಾಜ್ಯ ಚುನಾವಣೆಯಲ್ಲಿ ಎದುರಿಸಿದ ಸೋಲಿನ ಹತಾಶೆಯಿಂದ ಪ್ರತಿಪಕ್ಷಗಳು ಸದನದಲ್ಲಿ ಕಾರ್ಯಕಲಾಪಕ್ಕೆ ಅಡ್ಡಿಪಡಿಸಲು ಯತ್ನಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

Opposition MPs suspend raw Now vacant seats will be filled by BJP in 2024 PM Modi said akb
Author
First Published Dec 20, 2023, 11:49 AM IST

ನವದೆಹಲಿ: ಪಂಚರಾಜ್ಯ ಚುನಾವಣೆಯಲ್ಲಿ ಎದುರಿಸಿದ ಸೋಲಿನ ಹತಾಶೆಯಿಂದ ಪ್ರತಿಪಕ್ಷಗಳು ಸದನದಲ್ಲಿ ಕಾರ್ಯಕಲಾಪಕ್ಕೆ ಅಡ್ಡಿಪಡಿಸಲು ಯತ್ನಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಅಲ್ಲದೆ, 141 ಸಂಸದರು ಸದನದಿಂದ ಅಮಾನತಾಗಿರುವುದನ್ನು ಉಲ್ಲೇಖಿಸಿರುವ ಅವರು, ಈಗ ಖಾಲಿ ಆಗಿರುವ ಆಸನಗಳನ್ನು ಬಿಜೆಪಿ ಸಂಸದರು 2024ರಲ್ಲಿ ಅಲಂಕರಿಸಲಿದ್ದಾರೆ. ಈ ಮೂಲಕ ಮುಂದಿನ ಚುನಾವಣೆ ಬಳಿಕ ವಿಪಕ್ಷಗಳು ಮತ್ತಷ್ಟು ಬಲಹೀನ ಆಗಲಿವೆ ಎಂದಿದ್ದಾರೆ.

ಮಂಗಳವಾರ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, ‘ಚುನಾವಣೆಯ ಸೋಲಿನಿಂದ ಹತಾಶಗಿಂಡು, ಪ್ರತಿಪಕ್ಷಗಳು ಸದನದಲ್ಲಿ ಉಂಟಾದ ಭದ್ರತಾ ಲೋಪಕ್ಕೆ ಬೆಂಬಲಿಸುವ ರೀತಿ ನಡೆದುಕೊಳ್ಳುತ್ತಿವೆ. ಭದ್ರತಾ ಲೋಪವು ಗಂಭೀರ ವಿಷಯವಾಗಿದ್ದು, ಅದನ್ನು ಬೆಂಬಲಿಸುವುದೂ ಸಹ ಭದ್ರತಾ ಲೋಪ ಮಾಡುವುದಕ್ಕೆ ಸಮನಾಗುತ್ತದೆ. ಇದರಿಂದಾಗಿ ಯುವಜನತೆ ದಾರಿ ತಪ್ಪುತ್ತಿದ್ದಾರೆ’ ಎಂದು ಕಿಡಿಕಾರಿದರು.

2024ರಲ್ಲಿ ಮೋದಿ Vs ಖರ್ಗೆ? ಒಬಿಸಿ ಮೋದಿ ವಿರುದ್ಧ ದಲಿತ ಅಸ್ತ್ರ ಪ್ರಯೋಗ ಪಕ್ಕಾನಾ..?

‘2014ರಲ್ಲಿ ಪ್ರಥಮ ಮತದಾನ ಮಾಡಿದವರು ಭ್ರಷ್ಟಾಚಾರ ಮತ್ತು ನಿರಾಶಾವಾದವನ್ನು ನೋಡಿರಲಿಲ್ಲ. ಆದರೆ ಇಂತಹ ಕೃತ್ಯವು ಹೊಸ ಮತದಾರರನ್ನು ಸಹ ನಕಾರಾತ್ಮಕ ರಾಜಕಾರಣಕ್ಕೆ ಸೆಳೆಯುತ್ತದೆ. ಈ ನಕಾರಾತ್ಮಕ ರಾಜಕಾರಣದ ಮೂಲ ಉದ್ದೇಶ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯುವುದಾಗಿದೆ. ಅದಕ್ಕಾಗಿ ಆರೋಗ್ಯ ಕ್ಷೀಣಿಸುತ್ತಿದ್ದವರು ಸಹ ಪುಟಿದೆದ್ದು ಕುಳಿತಿದ್ದಾರೆ. ಆದರೆ ಬಿಜೆಪಿಯ ಧ್ಯೇಯ ರಾಷ್ಟ್ರವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುವುದಾಗಿದೆ. ಹಾಗಾಗಿ ಸಂಸತ್‌ ಭವನದಲ್ಲಿ ಈಗ ಖಾಲಿಯಿರುವ ಎಲ್ಲ ಸ್ಥಾನಗಳನ್ನು 2024ರಲ್ಲಿ ಬಿಜೆಪಿಗರು ಅಲಂಕರಿಸಲಿದ್ದಾರೆ’ ಎಂದರು.

ಅಲ್ಲದೆ ಯುವಜನತೆಗೆ ರಜೆ ಇರುವ ಸಮಯದಲ್ಲಿ ರಾಷ್ಟ್ರದ ಮೂಲೆಮೂಲೆಗೂ ತೆರಳಿ ಅಭಿವೃದ್ಧಿಯ ಪಥವನ್ನು ಅವರಿಗೆ ಮನದಟ್ಟು ಮಾಡಿಸಬೇಕು ಎಂದು ಸಮಿತಿಯ ಸದಸ್ಯರನ್ನು ಕೋರಿದರು.

ಲೋಕಸಭೆಯಲ್ಲಿ 3ನೇ 2ರಷ್ಟು ವಿಪಕ್ಷ ಸಂಸದರು ಸಸ್ಪೆಂಡ್‌: ಸಂಸತ್ತಲ್ಲೀಗ ಬಿಜೆಪಿಗೆ ಎದುರಾಳಿಗಳೇ ಇಲ್ಲ!

Follow Us:
Download App:
  • android
  • ios