Asianet Suvarna News Asianet Suvarna News

ಲೋಕಸಭೆಯಲ್ಲಿ 3ನೇ 2ರಷ್ಟು ವಿಪಕ್ಷ ಸಂಸದರು ಸಸ್ಪೆಂಡ್‌: ಸಂಸತ್ತಲ್ಲೀಗ ಬಿಜೆಪಿಗೆ ಎದುರಾಳಿಗಳೇ ಇಲ್ಲ!

ಲೋಕಸಭೆಯ ಮೇಲಿನ ದಾಳಿ ಪ್ರಕರಣದಲ್ಲಿ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಒತ್ತಾಯಿಸಿದ ಪ್ರಕರಣದಲ್ಲಿ ಅಮಾನತಾದ ಸಂಸದರ ಸಂಖ್ಯೆ 141ಕ್ಕೆ ಏರುವುದರೊಂದಿಗೆ ಸಂಸತ್ತಿನ ಉಭಯ ಸದನಗಳಲ್ಲೀಗ ಸರ್ಕಾರಕ್ಕೆ ಎದುರಾಳಿಗಳೇ ಇಲ್ಲದಂತಾಗಿದೆ.

MPs suspended raw 3rd 2 percent of opposition MPs in Lok Sabha suspended BJP has no opponents in Parliament now akb
Author
First Published Dec 20, 2023, 7:14 AM IST

ನವದೆಹಲಿ: ಲೋಕಸಭೆಯ ಮೇಲಿನ ದಾಳಿ ಪ್ರಕರಣದಲ್ಲಿ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಒತ್ತಾಯಿಸಿದ ಪ್ರಕರಣದಲ್ಲಿ ಅಮಾನತಾದ ಸಂಸದರ ಸಂಖ್ಯೆ 141ಕ್ಕೆ ಏರುವುದರೊಂದಿಗೆ ಸಂಸತ್ತಿನ ಉಭಯ ಸದನಗಳಲ್ಲೀಗ ಸರ್ಕಾರಕ್ಕೆ ಎದುರಾಳಿಗಳೇ ಇಲ್ಲದಂತಾಗಿದೆ.

ಪ್ರಸಕ್ತ ಲೋಕಸಭೆಯಿಂದ 95 ಮತ್ತು ರಾಜ್ಯಸಭೆಯಿಂದ 46 ಸದಸ್ಯರನ್ನು ಅಧಿವೇಶನ ಉಳಿದ ಅವಧಿಗೆ ಅಮಾನತು ಮಾಡಲಾಗಿದೆ. ಲೋಕಸಭೆಯಲ್ಲಿ ಸರ್ಕಾರಕ್ಕೆ ಮೊದಲೇ ಬಹುಮತವಿದ್ದ ಕಾರಣ ಅಲ್ಲಿ ಸರ್ಕಾರಕ್ಕೆ ಯಾವುದೇ ಮಸೂದೆ ಅಂಗೀಕಾರಕ್ಕೆ ತೊಂದರೆ ಇರಲಿಲ್ಲ. ಆದರೆ ರಾಜ್ಯಸಭೆಯಲ್ಲಿ ವಿಪಕ್ಷಗಳ ಮೇಲುಗೈ ಇದ್ದ ಕಾರಣ, ಅಲ್ಲಿ ಮಸೂದೆ ಅಂಗೀಕಾರಕ್ಕೆ ತಿಣುಕಾಡಬೇಕಿತ್ತು. ಆದರೆ ಇದೀಗ ಅರ್ಧಕ್ಕಿಂತ ಹೆಚ್ಚು ವಿಪಕ್ಷ ಸದಸ್ಯರು ರಾಜ್ಯಸಭೆಯಿಂದ ಅಮಾನತುಗೊಂಡಿರುವ ಕಾರಣ ಸರ್ಕಾರಕ್ಕೆ ಉಭಯ ಸದನಗಳಲ್ಲಿ ಎದುರಾಳಿಗಳೇ ಇಲ್ಲದಂತಾಗಿದೆ.

ಇತಿಹಾಸದಲ್ಲೇ ಮೊದಲು: ರಾಜ್ಯದ ಮೂವರು ಸೇರಿ ಸಂಸತ್ತಿಂದ ಒಂದೇ ದಿನ ವಿಪಕ್ಷಗಳ 78 ಸದಸ್ಯರು ಸಸ್ಪೆಂಡ್‌!

ಲೋಕಸಭೆ ಕಥೆ:

ಲೋಕಸಭೆಯ ಸದಸ್ಯ ಬಲ 543. ಆದರೆ ಹಾಲಿ 21 ಸ್ಥಾನ ಖಾಲಿ ಇದೆ. ಹೀಗಾಗಿ ಸದನದ ಬಲ 522ಕ್ಕೆ ಇಳಿದಿದೆ. ಈ ಪೈಕಿ 322 ಸದಸ್ಯರು ಎನ್‌ಡಿಎ ಮೈತ್ರಿಕೂಟಕ್ಕೆ ಸೇರಿದವರು.

ಲೋಕಸಭೆಯಲ್ಲಿ ವಿಪಕ್ಷಗಳ 142 ಸದಸ್ಯರಿದ್ದಾರೆ. ಈ ಪೈಕಿ ಶೇ.67ರಷ್ಟು ಜನರನ್ನು ಅಂದರೆ 95 ಜನರನ್ನು ಅಮಾನತು ಮಾಡಲಾಗಿದೆ. ಹೀಗಾಗಿ 47 ಜನರು ಮಾತ್ರವೇ ಉಳಿದಿದ್ದಾರೆ. ಇನ್ನು ಇಂಡಿಯಾ ಮೈತ್ರಿಕೂಟದ ಲೆಕ್ಕ ಹಾಕಿದರೆ ಅವರ 138 ಸದಸ್ಯರ ಪೈಕಿ 43 ಜನರು ಮಾತ್ರವೇ ಉಳಿದುಕೊಂಡಿದ್ದಾರೆ. ಕಾಂಗ್ರೆಸ್‌ನಲ್ಲಿ ಸೋನಿಯಾ (Sonia Gandhi), ರಾಹುಲ್‌ (Rahul Gandhi)ಸೇರಿ 9 ಸದಸ್ಯರು ಮಾತ್ರವೇ ಉಳಿದುಕೊಂಡಿದ್ದಾರೆ.

ಕೇರಳದಲ್ಲಿ ಒಂದೇ ದಿನ 115 ಕೋವಿಡ್ ಪ್ರಕರಣ ಪತ್ತೆ, ಸಿಂಗಾಪುರದಲ್ಲಿ ತುರ್ತು ಆರೋಗ್ಯ ಪರಿಸ್ಥಿತಿ!

ರಾಜ್ಯಸಭೆ ಕಥೆ:

ರಾಜ್ಯಸಭೆ 250 ಸದಸ್ಯಬಲದ ಪೈಕಿ 238 ವಿಧಾನಸಭೆಗಳಿಂದ ಆಯ್ಕೆಯಾಗುತ್ತಾರೆ. 12 ಜನರ ನಾಮ ನಿರ್ದೇಶನ ಮಾಡಲಾಗುತ್ತದೆ. ಹಾಲಿ ಇಂಡಿಯಾ ಮೈತ್ರಿಕೂಟದ 128 ಮತ್ತು ಎನ್‌ಡಿಎದ 108 ಸದಸ್ಯರಿದ್ದಾರೆ. ಈ ಪೈಕಿ 45 ವಿಪಕ್ಷ ಸದಸ್ಯರನ್ನು ಅಮಾನತು ಮಾಡಿರುವ ಕಾರಣ, ವಿಪಕ್ಷಗಳ ಸದಸ್ಯ ಬಲ 80ರ ಆಸುಪಾಸಿಗೆ ಕುಸಿದಿದೆ.

Follow Us:
Download App:
  • android
  • ios