ಕೇಂದ್ರದ ವಿರೋಧ ಪಕ್ಷಗಳು ಹಾಗೂ ಜಮ್ಮು ಕಾಶ್ಮೀರದ ವಿರೋಧ ಪಕ್ಷಗಳ ನಿಯೋಗ ಗುರುವಾರ ನವದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗವನ್ನು ಭೇಟಿ ಮಾಡಿತು. ಈ ವೇಳೆ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಸುವಂತೆ ಈ ನಿಯೋಗ ಮನವಿ ಮಾಡಿದೆ.
ನವದೆಹಲಿ (ಮಾ.16): ನ್ಯಾಷನಲ್ ಕಾನ್ಫರೆನ್ಸ್, ಪೀಪಲ್‌ಸ್ ಡೆಮಾಕ್ರಟಿಕ್ ಪಾರ್ಟಿ ಮತ್ತು ಕಾಂಗ್ರೆಸ್ ನೇತೃತ್ವದ ನಿಯೋಗ ಹಾಗೂ ಕೇಂದ್ರದ ವಿರೋಧ ಪಕ್ಷಗಳ ನಿಯೋಗ ಗುರುವಾರ ಕೇಂದ್ರ ಚುನಾವಣಾ ಆಯೋಗಕ್ಕೆ ಭೇಟಿ ನೀಡಿ, ಜಮ್ಮು ಕಾಶ್ಮೀರದಲ್ಲಿ ಶೀಘ್ರವಾಗಿ ಚುನಾವಣೆ ನಡೆಸುವಂತೆ ಮನವಿ ನೀಡಿದ್ದಾರೆ. ಈ ವೇಳೆ ಜಮ್ಮು ಕಾಶ್ಮೀರ ರಾಜಕಾರಣದ ಹಿರಿಯ ನಾಯಕಿ ಮೆಹಬೂಬಾ ಮುಫ್ತಿ, ಫಾರುಖ್ ಅಬ್ದುಲ್ಲಾ, ಪ್ರಮೋದ್ ತಿವಾರಿ ಮತ್ತು ನಾಸಿರ್ ಹುಸೇ ಕೂಡ ಜಮ್ಮು ಕಾಶ್ಮೀರದ ವಿರೋಧ ಪಕ್ಷಗಳ ನಿಯೋಗದಲ್ಲಿದ್ದರು ಎಂದು ಎಎನ್‌ಐ ವರದಿ ಮಾಡಿದೆ. ಸಭೆಯ ನಂತರ ಮಾತನಾಡಿದ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಅವರು ಈ ವಿಷಯವನ್ನು ಪರಿಶೀಲಿಸುವುದಾಗಿ ಚುನಾವಣಾ ಸಂಸ್ಥೆ ಭರವಸೆ ನೀಡಿದೆ “ಭಾರತದ ಕಿರೀಟವಾಗಿರುವ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿರುವುದು ದುರದೃಷ್ಟಕರ. ನಾವು ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ಸರ್ಕಾರವನ್ನು ಬಯಸುತ್ತೇವೆ' ಎಂದು ಹೇಳಿದರು. ಸಭೆಯ ಮೊದಲು, ಸುದ್ದಿಗಾರರೊಂದಿಗೆ ಮಾತನಾಡಿದ ಅಬ್ದುಲ್ಲಾ, ಜಮ್ಮು ಮತ್ತು ಕಾಶ್ಮೀರದ 13 ಪಕ್ಷಗಳು ಇಂದು ಇಲ್ಲಿ ಸಭೆ ನಡೆಸಿದ್ದು, ಜೆ & ಕೆ ರಾಜ್ಯತ್ವವನ್ನು ಮರುಸ್ಥಾಪಿಸುವ ವಿಚಾರದಲ್ಲಿ ಒಮ್ಮತದ ನಿರ್ಣಯ ಹೊಂದಿದ್ದೇವೆ ಎಂದ ಹೇಳಿದರು.
ಜಮ್ಮು ಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಣೆಯಾಗಿದೆ ಎಂದು ಕೇಂದ್ರ ಹೇಳುತ್ತಿದೆ. ಆದರೆ, ಸರ್ಕಾರ ಚುನಾವಣೆಗಳನ್ನು ಏಕೆ ನಡೆಸುತ್ತಿಲ್ಲ ಎನ್ನುವುದು ನಮ್ಮ ಪ್ರಶ್ನೆಯಾಗಿದೆ. ಹಾಗಾಗಿ ಈ ವಿಚಾರದಲ್ಲಿ ಎಲ್ಲಾ ವಿರೋಧ ಪಕ್ಷಗಳ ನಿರ್ಧಾರ ಒಂದೇ ಆಗಿದೆ ಎಂದು ಫಾರುಖ್ ಅಬ್ದುಲ್ಲಾ ತಿಳಿಸಿದ್ದಾರೆ.
ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಕೂಡ ಜಮ್ಮು ಮತ್ತು ಕಾಶ್ಮೀರದ ರಾಜ್ಯತ್ವವನ್ನು ಮರುಸ್ಥಾಪಿಸುವ ವಿಷಯಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ. "ಜಮ್ಮು ಮತ್ತು ಕಾಶ್ಮೀರ ಜನರ ನೋವನ್ನು ಹಂಚಿಕೊಳ್ಳಲು ಮತ್ತು ಅವರಿಗೆ ಭರವಸೆ ನೀಡಲು ನಾವೆಲ್ಲರೂ ಶ್ರೀನಗರಕ್ಕೆ ಭೇಟಿ ನೀಡಲು ಸಿದ್ಧರಿದ್ದೇವೆ" ಎಂದು ಪವಾರ್ ರಾಷ್ಟ್ರ ರಾಜಧಾನಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು. 2019 ರ ಆಗಸ್ಟ್‌ನಲ್ಲಿ ಕೇಂದ್ರವು 370ನೇ ವಿಧಿಯನ್ನು ಹಿಂತೆಗೆದುಕೊಂಡ ನಂತರ ಜಮ್ಮು ಮತ್ತು ಕಾಶ್ಮೀರದ ರಾಜ್ಯತ್ವವನ್ನು ತೆಗೆದುಹಾಕಲಾಗಿತ್ತು. ಬಳಿಕ ಜಮ್ಮು ಕಾಶ್ಮೀರವನ್ನು ಮೂರು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತು. 90 ಸದಸ್ಯ ಬಲದ ವಿಧಾನಸಭೆಗೆ ಈ ವರ್ಷ ಚುನಾವಣೆ ನಡೆದರೆ, 2014ರ ನಂತರ ಮತ್ತು ರಾಜ್ಯ ಸ್ಥಾನಮಾನ ರದ್ದಾದ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಎನಿಸಲಿದೆ.
ಅಂದು ಶಿವನಿಗೆ ಜಾಗ ನೀಡುವುದಕ್ಕೆ ವಿರೋಧಿಸಿದ ಮುಫ್ತಿಯಿಂದ ಇಂದು ಶಿವನ ದರ್ಶನ : ಜಲಾಭಿಷೇಕ
ಸಭೆಯ ಬಳಿಕ ಮಾತನಾಡಿದ್ದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್, ಜಮ್ಮು ಕಾಶ್ಮೀರಕ್ಕೆ ರಾಜ್ಯತ್ವವನ್ನು ಮರಳು ನೀಡುವ ವಿಚಾರದಲ್ಲಿ ನಮ್ಮ ನಿರ್ಧಾರ ಸ್ಪಷ್ಟವಾಗಿದೆ. "ಜಮ್ಮು ಮತ್ತು ಕಾಶ್ಮೀರದ ಜನರ ನೋವನ್ನು ಹಂಚಿಕೊಳ್ಳಲು ಮತ್ತು ಅವರಿಗೆ ಭರವಸೆ ನೀಡಲು ನಾವೆಲ್ಲರೂ ಶ್ರೀನಗರಕ್ಕೆ ಭೇಟಿ ನೀಡಲು ಸಿದ್ಧರಿದ್ದೇವೆ" ಎಂದು ಪವಾರ್ ತಿಳಿಸಿದ್ದಾರೆ.
ಹಿಮಮಳೆಯಲ್ಲೇ ರಾಹುಲ್ ಗಾಂಧಿ ಭಾವುಕ ಭಾಷಣ, 'ಪ್ರೀತಿ ಪಾತ್ರರ ಕಳೆದುಕೊಂಡ ನೋವು ನನಗೆ ಗೊತ್ತಿದೆ'!
ಕೇಂದ್ರ ಚುನಾವಣಾ ಆಯೋಗದ ಕಚೇರಿಗೆ ಹೋಗುವ ಮುನ್ನ, ರಾಷ್ಟ್ರೀಯ ವಿರೋಧ ಪಕ್ಷಗಳ ನಾಯಕರು ಮತ್ತು ಜಮ್ಮು ಮತ್ತು ಕಾಶ್ಮೀರದ ವಿರೋಧ ಪಕ್ಷದ ನಾಯಕರು ದೆಹಲಿಯ ಸಾಂವಿಧಾನಿಕ ಕ್ಲಬ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿಯನ್ನು ಚರ್ಚಿಸಲು ಸಭೆ ನಡೆಸಿದರು ಮತ್ತು ಜನರ ಹಕ್ಕುಗಳನ್ನು ಮರುಸ್ಥಾಪಿಸಲು ಮತ್ತು ಜಮ್ಮು ಕಾಶ್ಮೀರಕ್ಕೆ ರಾಜ್ಯತ್ವವನ್ನು ಒತ್ತಾಯಿಸಿದರು. ಸಂಸದ ಫಾರೂಕ್ ಅಬ್ದುಲ್ಲಾ, ಸಿಪಿಐಎಂನ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಎನ್‌ಸಿಪಿಯ ಅಧ್ಯಕ್ಷ ಶರದ್ ಪವಾರ್, ಕಾಂಗ್ರೆಸ್, ಸಿಪಿಐ ಮತ್ತು ಆರ್‌ಜೆಡಿ ಮುಖಂಡರು ಭಾಗವಹಿಸಿದ್ದರು.
