Asianet Suvarna News Asianet Suvarna News

ಅಂದು ಶಿವನಿಗೆ ಜಾಗ ನೀಡುವುದಕ್ಕೆ ವಿರೋಧಿಸಿದ ಮುಫ್ತಿಯಿಂದ ಇಂದು ಶಿವನ ದರ್ಶನ : ಜಲಾಭಿಷೇಕ

ಹಿಂದೊಮ್ಮೆ ಜಮ್ಮು ಕಾಶ್ಮೀರದ ಶಾಲೆಗಳಲ್ಲಿ ಭಜನೆ ಆರಂಭಿಸುವ ಬಗ್ಗೆ ಸರ್ಕಾರದ ಆದೇಶವೊಂದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದಿ ಜಮ್ಮು ಕಾಶ್ಮಿರದ ಪಿಡಿಪಿ ಪಕ್ಷದ ನಾಯಕಿ ಈಗ ಪೂಂಛ್‌ನಲ್ಲಿರುವ ನವಗೃಹ ದೇಗುಲಕ್ಕೆ ಭೇಟಿ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. 

Jammu kashmir PDP chief Mehabooba Mufti visits, Navagraha temple in Poonch, offer jalabhishek to Lord shiva, BJP condemns her act akb
Author
First Published Mar 16, 2023, 11:31 AM IST

ಶ್ರೀನಗರ: ಹಿಂದೊಮ್ಮೆ ಜಮ್ಮು ಕಾಶ್ಮೀರದ ಶಾಲೆಗಳಲ್ಲಿ ಭಜನೆ ಆರಂಭಿಸುವ ಬಗ್ಗೆ ಸರ್ಕಾರದ ಆದೇಶವೊಂದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದಿ ಜಮ್ಮು ಕಾಶ್ಮಿರದ ಪಿಡಿಪಿ ಪಕ್ಷದ ನಾಯಕಿ ಈಗ ಪೂಂಛ್‌ನಲ್ಲಿರುವ ನವಗೃಹ ದೇಗುಲಕ್ಕೆ ಭೇಟಿ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಜಮ್ಮು ಕಾಶ್ಮೀರದ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (PDP) ಮುಖ್ಯಸ್ಥೆಯಾಗಿರುವ ಮೆಹಬೂಬಾ ಮುಫ್ತಿ, ನಿನ್ನೆ ಜಮ್ಮು ಕಾಶ್ಮೀರದ ಪೂಂಛ್‌ ಜಿಲ್ಲೆಯಲ್ಲಿರುವ ನವಗ್ರಹ ಮಂದಿರಕ್ಕೆ ಭೇಟಿ ನೀಡಿದ್ದು, ಅಲ್ಲಿನ ಶಿವಲಿಂಗಕ್ಕೆ ಜಲಾಭಿಷೇಕ ಮಾಡಿದ್ದಾರೆ. ಮೆಹಬೂಬಾ ಮುಫ್ತಿ ದೇಗುಲದ ಒಳಗಿರುವ ಶಿವಲಿಂಗಕ್ಕೆ ಜಲಾಭಿಷೇಕ ಮಾಡುತ್ತಿರುವ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral video) ಆಗಿದೆ.  

ಆದರೆ ಮೆಹಬೂಬಾ ಮುಫ್ತಿ ದೇಗುಲ ಪ್ರವೇಶಿಸಿ ಜಲಾಭಿಷೇಕ (Jalabhishek) ಮಾಡಿರುವುದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಇದೊಂದು ರಾಜಕೀಯ ಗಿಮಿಕ್ ಆಗಿದ್ದು, ತುಷ್ಟೀಕರಣದ ರಾಜಕೀಯ ಎಂದು ಬಿಜೆಪಿ ಇದನ್ನು ಟೀಕಿಸಿದೆ. ಸಾಮಾಜಿಕ ಜಾಲತಾಣ ಬಳಕೆದಾರರು ಕೂಡ ಮೆಹಬೂಬಾ ಮುಫ್ತಿಯನ್ನು ದೇಗುಲದೊಳಗೆ ಬಿಟ್ಟಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದೂಗಳನ್ನು ಸದಾ ದ್ವೇಷಿಸುವ ಮುಫ್ತಿಗೆ ದೇಗುಲ ಪ್ರವೇಶಿಸಲು ಅವಕಾಶ ನೀಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. 

 

ಜಮ್ಮು ಕಾಶ್ಮೀರ ಬಿಜೆಪಿ ಘಟಕದ ವಕ್ತರ ರಣಬೀರ್ ಸಿಂಗ್ ಪಥನಿಯಾ (Ranbir Singh Pathania) ಈ ಬಗ್ಗೆ ಪ್ರತಿಕ್ರಿಯಿಸಿದ್ದು, 2008 ರಲ್ಲಿ ಮೆಹಬೂಬಾ ಮುಫ್ತಿ (Mehbooba Mufti) ಹಾಗೂ ಆಕೆಯ ಪಕ್ಷವೂ ಜಮ್ಮು ಕಾಶ್ಮೀರದ ಅಮರನಾಥದಲ್ಲಿರುವ ಅಮರನಾಥ ದೇಗುಲಕ್ಕೆ ಆಗಮಿಸುವ ಭಕ್ತರಿಗೆ ಯಾತ್ರಿ ಸ್ಥಳವನ್ನು ನಿರ್ಮಿಸುವುದಕ್ಕಾಗಿ  ತಾತ್ಕಾಲಿಕವಾಗಿ ಜಾಗ ವರ್ಗಾವಣೆ ಮಾಡಲು ಮುಂದಾದಾಗ ತೀವ್ರವಾಗಿ ವಿರೋಧಿಸಿದ್ದರು.  ಈಗ ಇವರು ಹಿಂದೂ ದೇಗುಲಕ್ಕೆ ಭೇಟಿ ನೀಡುತ್ತಿದ್ದಾರೆ. ಆಕೆಯ ಈ ದೇಗುಲ ಭೇಟಿ ಕೇವಲ ನಾಟಕ ಹಾಗೂ ರಾಜಕೀಯ ಗಿಮಿಕ್ ಆಗಿದೆ. ಇದರಿಂದ ಯಾವುದೇ ಫಲಿತಾಂಶ ಸಿಗಲಾರದು. ರಾಜಕೀಯ ಗಿಮಿಕ್‌ಗಳೆಲ್ಲಾ ಬದಲಾವಣೆ ತರುವಂತಹವಾಗಿದ್ದರೆ ಇಂದು ಜಮ್ಮುಕಾಶ್ಮೀರ ರಾಜ್ಯ ಸಮೃದ್ಧಿಯ ತೋಟವಾಗಿರುತ್ತಿತ್ತು ಎಂದು ಅವರು ಹೇಳಿದ್ದಾರೆ.

ಸುಳ್ಳು ಹೇಳಿ ಸಿಕ್ಕಿ ಬಿದ್ದ ಮೆಹಬೂಬಾ ಮುಫ್ತಿ, ಗೃಹಬಂಧನ ಠುಸ್ ಪಟಾಕಿ ಎಂದ ಪೊಲೀಸ್!

ಈ ಹಿಂದೆ ಜಮ್ಮು ಕಾಶ್ಮೀರದ ಶಾಲೆಗಳಲ್ಲಿ ಸರ್ವ ನಂಬಿಕೆಯ ಪ್ರಾರ್ಥನೆ - ರಘುಪತಿ ರಾಘವ ರಾಜಾ ರಾಮ್.. ಈಶ್ವರ ಅಲ್ಲಾ ತೇರೇ ನಾಮ್ ಅನ್ನು ಪಠಿಸಲು ಸರ್ಕಾರಿ ಆದೇಶ ಹೊರಡಿಸಲಾಗಿತ್ತು. ಆ ಸಂದರ್ಭದಲ್ಲಿ ಇದೇ ಮೆಹಬೂಬಾ ಮುಫ್ತಿ, ಮುಸ್ಲಿಂ ಮಕ್ಕಳನ್ನು ಶಾಲೆಗಳಲ್ಲಿ ಭಜನೆ (Bhajans) ಹಾಡುವಂತೆ ಒತ್ತಾಯಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ತನ್ನ ಹಿಂದುತ್ವದ ಅಜೆಂಡಾವನ್ನು (Hindutva Ajenda) ಮುಂದಿಡುತ್ತಿದೆ ಎಂದು ಆರೋಪಿಸಿದ್ದರು. 

ಮೆಹಬೂಬಾ ಮುಫ್ತಿಯವರ ಈ ಕಾಮೆಂಟ್‌ಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು.  ಮೆಹಬೂಬಾ 'ನಕಲಿ ಸುದ್ದಿ' ಮತ್ತು ವದಂತಿಗಳನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿತ್ತು. ಅಲ್ಲದೆ, ನ್ಯಾಷನಲ್‌ ಕಾನ್ಫರೆನ್ಸ್‌ (National Conference) ಅಧ್ಯಕ್ಷ ಫಾರೂಕ್‌ ಅಬ್ದುಲ್ಲಾ ಸಹ ಮೆಹಬೂಬಾ ಮುಫ್ತಿ ಹೇಳಿಕೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ನಾನೂ ಭಜನೆ ಹಾಡುತ್ತಿದ್ದೆ, ಭಜನೆ ಹಾಡಿದ ಕೂಡಲೇ ನಾನು ಹಿಂದೂ ಆಗಿದ್ದೀನಾ..? ಎಂದು ಅವರು ಪ್ರಶ್ನಿಸಿದ್ದರು. 

'ಈಶ್ವರ ಅಲ್ಲಾ ತೇರೇ ನಾಮ್‌..' ಎಂದ ಕಾಶ್ಮೀರ ಮಕ್ಕಳು, ಇದು ಹಿಂದುತ್ವದ ಅಜೆಂಡಾ ಎಂದ ಮೆಹಬೂಬಾ ಮುಫ್ತಿ!

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 153ನೇ ಜನ್ಮದಿನದ ಅಂಗವಾಗಿ ಕಳೆದ ವರ್ಷ ನಡೆದ ಸರಣಿ ಚಟುವಟಿಕೆಗಳ ಭಾಗವಾಗಿ ಜಮ್ಮು ಕಾಶ್ಮೀರದ ಶಾಲೆಗಳಲ್ಲಿ 'ರಘುಪತಿ ರಾಘವ್...' (Raghupati Raghav) ಪಠಣವನ್ನು ಮಾಡಲಾಗಿತ್ತು. 'ರಘುಪತಿ ರಾಘವ...' ಗಾಂಧೀಜಿಯವರ ಅಚ್ಚುಮೆಚ್ಚಿನ ಭಜನೆಗಳಲ್ಲಿ ಒಂದಾಗಿದ್ದರಿಂದ ಅದು ಆಚರಣೆಯ ಭಾಗವಾಗಿತ್ತು ಎಂದು ತಿಳಿದುಬಂದಿದೆ. 

ಕುಲ್ಗಾಮ್‌ನ ಶಾಲೆಯಲ್ಲಿ ವಿದ್ಯಾರ್ಥಿಗಳು 'ರಘುಪತಿ ರಾಘವ್ ರಾಜಾ ರಾಮ್' ಹಾಡುತ್ತಿರುವುದನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದ ಮೆಹಬೂಬಾ ಮುಫ್ತಿ,  "ಧಾರ್ಮಿಕ ವಿದ್ವಾಂಸರನ್ನು ಜೈಲಿಗಟ್ಟುವುದು, ಜಾಮಾ ಮಸೀದಿಯನ್ನು ಮುಚ್ಚುವುದು ಮತ್ತು ಇಲ್ಲಿನ ಶಾಲಾ ಮಕ್ಕಳಿಗೆ ಹಿಂದೂ ಗೀತೆಗಳನ್ನು ಹಾಡಲು ನಿರ್ದೇಶಿಸುವುದು ಕಾಶ್ಮೀರದಲ್ಲಿ ಕೇಂದ್ರ ಸರ್ಕಾರದ ನಿಜವಾದ ಹಿಂದುತ್ವದ ಅಜೆಂಡಾವನ್ನು ಬಹಿರಂಗಪಡಿಸುತ್ತದೆ ಎಂದು ಬರೆದುಕೊಂಡಿದ್ದರು. 

 

Follow Us:
Download App:
  • android
  • ios