Asianet Suvarna News Asianet Suvarna News

PM Modi UP Virtual Rally: ಬಿಜೆಪಿ ವಿರುದ್ಧ ಸೇಡು ತೀರಿಸಿಕೊಳ್ಳುವುದು ಪ್ರತಿಪಕ್ಷಗಳ ಏಕೈಕ ಅಜೆಂಡಾ: ಪ್ರಧಾನಿ!

*ಪ್ರಧಾನಿ ಮೋದಿ ಮೊದಲ ಚುನಾವಣಾ ವರ್ಚುವಲ್ ರ‍್ಯಾಲಿ
*21 ವಿಧಾನಸಭೆಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ
*ಬಿಜೆಪಿ 'ಸಬ್ಕಾ ಸಾಥ್, ಸಬ್ಕಾ ವಿಕಾಸ್' ಖಾತ್ರಿಪಡಿಸಿದೆ: ಮೋದಿ‌

opposition inducing voters to seek revenge on the BJP in Uttar Pradesh says PM Narendra Modi mnj
Author
Bengaluru, First Published Jan 31, 2022, 3:01 PM IST

ನವದೆಹಲಿ(ಜ. 31): ‌ ಉತ್ತರ ಪ್ರದೇಶ ಚುನಾವಣಾ (Uttar Pradesh) ಅಖಾಡದಲ್ಲಿ ಪ್ರಧಾನಿ ಮೋದಿ (PM Modi) ಇಂದು ಎಂಟ್ರಿ ಕೊಟ್ಟಿದ್ದಾರೆ. ಕೊರೊನಾ, ಒಮಿಕ್ರೋನ್ ಹಿನ್ನಲೆಯಲ್ಲಿ ರಾಜಕೀಯ ಸಮಾವೇಶಗಳಿಗೆ ನಿರ್ಬಂಧ ಇದೆ. ಈ ಬೆನಲ್ಲೇ ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ ಮೊದಲ ವರ್ಚುವಲ್ ರ‍್ಯಾಲಿ 'ಜನ್ ಚೌಪಾಲ್' (Jan Chaupal) ಉದ್ದೇಶಿಸಿ ಮಾತನಾಡಿದರು.ಮೊದಲ ಹಂತದಲ್ಲಿ ಮತದಾನ ನಡೆಯಲಿರುವ ಪಶ್ಚಿಮ ಉತ್ತರ ಪ್ರದೇಶದ ಐದು ಜಿಲ್ಲೆಗಳ 21 ವಿಧಾನಸಭಾ ಸ್ಥಾನಗಳಲ್ಲಿ 98 ಮಂಡಲಗಳಲ್ಲಿ ಈ ರ‍್ಯಾಲಿಯನ್ನು ಪ್ರಸಾರ ಮಾಡಲಾಯಿತು.

ದೆಹಲಿಯಿಂದಲೇ ಮಾತನಾಡಿದ ಮೋದಿ, ಪ್ರತಿಪಕ್ಷಗಳು "ಸೇಡು ತೀರಿಸಿಕೊಳ್ಳಲು" ನಿರ್ಧರಿಸಿರುವುದರಿಂದ ಯಾವುದೇ ವಿಧಾನದಿಂದ ಮತ್ತೆ ಅಧಿಕಾರಕ್ಕೆ ಬರಲು ಅವಕಾಶವನ್ನು ಹುಡುಕುತ್ತಿವೆ ಎಂದು ಹೇಳಿದರು. ಬಿಜೆಪಿಯ ಡಬಲ್ ಇಂಜಿನ್ ಸರ್ಕಾರವು 'ಸಬ್ಕಾ ಸಾಥ್, ಸಬ್ಕಾ ವಿಕಾಸ್' ಅನ್ನು ಖಾತ್ರಿಪಡಿಸಿದೆ ಎಂದು ಮೋದಿ ಹೇಳಿದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಉಪಮುಖ್ಯಮಂತ್ರಿ ದಿನೇಶ್ ಶರ್ಮಾ ಅವರು ಕ್ರಮವಾಗಿ ಆಗ್ರಾ ಮತ್ತು ಲಕ್ನೋದಲ್ಲಿನ ಸ್ಟುಡಿಯೋಗಳಿಂದ ವರ್ಚುವಲ್ ರ‍್ಯಾಲಿಯಲ್ಲಿ ಭಾಗವಹಿಸಿದ್ದರು. 

ಇದನ್ನೂ ಓದಿ: Budget 2022: ಚುನಾವಣೆ, ರಾಜಕೀಯ ಭಿನ್ನಾಭಿಪ್ರಾಯ ಬದಿಗಿಟ್ಟು ಬಜೆಟ್‌ನಲ್ಲಿ ಭಾಗವಹಿಸಿ: ಪ್ರಧಾನಿ ಮೋದಿ!

ಬಿಜೆಪಿ ವಿರುದ್ಧ ಸೇಡು: ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಯಾವುದೇ ಪಕ್ಷ ಅಥವಾ ಅಭ್ಯರ್ಥಿ ಹೆಸರು ಹೇಳಲಿಲ್ಲ ಆದರೆ ಈ ಹಿಂದೆ, ಎಸ್‌ಪಿ ನಾಯಕ ಆದಿಲ್ ಚೌಧರಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ "ಸೇಡು ತೀರಿಸಿಕೊಳ್ಳುವುದಾಗಿ" ಹೇಳಿದ್ದ  ವೀಡಿಯೊ ವೈರಲ್ ಆಗಿತ್ತು ಎಂಬುದು ಉಲ್ಲೇಖನೀಯ. ಉತ್ತರ ಪ್ರದೇಶದಲ್ಲಿ ಬಿಜೆಪಿ ವಿರುದ್ಧ ಸೇಡು ತೀರಿಸಿಕೊಳ್ಳಲು ಪ್ರತಿಪಕ್ಷಗಳು ಮತದಾರರನ್ನು ಪ್ರೇರೇಪಿಸುತ್ತಿವೆ ಎಂದು ಆರೋಪಿಸಿದ ಪ್ರಧಾನಿ ನರೇಂದ್ರ ಮೋದಿ, ಇದು ಯೋಗಿ ಆದಿತ್ಯನಾಥ್ ಸರ್ಕಾರದ ಅಭಿವೃದ್ಧಿ ನೀತಿಗಳನ್ನು ಸಹಿಸದೇ ಮಾಡುತ್ತಿರುವ ಷಡ್ಯಂತ್ರ ಎಂದು ಹೇಳಿದ್ದಾರೆ. ಬಡವರಿಗಾಗಿ ಮನೆಗಳು, ಹಿಂದುಳಿದ ವರ್ಗಗಳ ನೀತಿಗಳು, ವೈದ್ಯಕೀಯ ಕಾಲೇಜುಗಳು, ಎಕ್ಸ್‌ಪ್ರೆಸ್‌ವೇಗಳ ಮೂಲಕ ಹೆಚ್ಚಿನ ಸಂಪರ್ಕ, ಮುಸ್ಲಿಂ ಮಹಿಳೆಯರಿಗಾಗಿ ಯೋಜನೆಗಳನ್ನು ಸೇರಿದಂತೆ ಹಲವು ಯೋಜನೆಗಳನ್ನು ಮೋದಿ ಭಾಷಣದಲ್ಲಿ ಉಲ್ಲೇಖಿಸಿದರು. 

ಇದನ್ನೂ ಓದಿ: 5 States Election: ಉತ್ತರ ಪ್ರದೇಶಕ್ಕೆ ಮೋದಿ ಎಂಟ್ರಿ, ಬಿಜೆಪಿಗೆ ಗಜ ಬಲ

ಜನ್ ಚೌಪಾಲ್ ಕಾರ್ಯಕ್ರಮದ ಮೂಲಕ ಶಾಮ್ಲಿ, ಮುಜಾಫರ್‌ನಗರ, ಬಾಗ್‌ಪತ್, ಸಹರಾನ್‌ಪುರ ಮತ್ತು ಗೌತಮ್ ಬುಧ್ ನಗರದ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಮೋದಿ "ನಾವು ಉತ್ತರ ಪ್ರದೇಶದಲ್ಲಿ ಬದಲಾವಣೆ ತರಲು ಪ್ರಯತ್ನಿಸುತ್ತಿದ್ದೇವೆ ಮತ್ತು ಪ್ರತಿಪಕ್ಷಗಳು ಸೇಡು ತೀರಿಸಿಕೊಳ್ಳಲು ಬಯಸುತ್ತವೆ. ಈ ಜನರು ಅಂತಹವರಿಗೆ ಟಿಕೆಟ್ ನೀಡಿದ್ದಾರೆ ಅವರ ನಡವಳಿಕೆಯೇ ಇದಕ್ಕೆ ಸಾಕ್ಷಿ. ಗಲಭೆ ಮನಸ್ಥಿತಿ ಹೊಂದಿರುವ ಜನರು ಕ್ರಿಮಿನಲ್‌ಗಳು ರಾಜ್ಯದಲ್ಲಿ ಅವರಿಗೆ ಬೆಂಬಲ ನೀಡುವ ಸರ್ಕಾರವನ್ನು ಬಯಸುತ್ತಾರೆ, ”ಎಂದು  ಹೇಳಿದರು. 

"ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಭಾರತವು ಪ್ರತಿ ಬಡ ಕುಟುಂಬವನ್ನು ತಲುಪಿದೆ. 15 ಕೋಟಿ ನಾಗರಿಕರು ಉಚಿತ ಪಡಿತರವನ್ನು ಪಡೆಯುತ್ತಿದ್ದಾರೆ. ಇದೇ ಯುಪಿಯಲ್ಲಿ 5 ವರ್ಷಗಳ ಹಿಂದೆ, ಬಡವರಿಗೆ ನೀಡಬೇಕಾದ ಪಡಿತರವನ್ನು ಪಡಿತರ ಅಂಗಡಿಗಳಿಂದ ಕದಿಯಲಾಗುತ್ತಿತ್ತು. ಇಂದು, ಪ್ರತಿ ತುತ್ತು ಬಡವರ ಮನೆಗೆ ತಲುಪುತ್ತಿದೆ, ಇದು ಕಳೆದ ಐದು ವರ್ಷಗಳಲ್ಲಿ ಬಂದಿರುವ ಬದಲಾವಣೆಯಾಗಿದೆ. ನಾವು ಈಗ ಸಣ್ಣ ರೈತರ ಬಗ್ಗೆ ಚಿಂತಿಸಬೇಕಾಗಿದೆ. ಅದಕ್ಕಾಗಿ ಕೆಲಸ ಮಾಡಲು ಪ್ರಾರಂಭಿಸಿದ್ದೇವೆ. ಸಣ್ಣ ರೈತರು ಗ್ರಾಮೀಣ ಭಾಗದ ಚಿತ್ರಣವ್ನು ಬದಲಾಯಿಸುತ್ತಾರೆ" ಎಂದು ಮೋದಿ ಹೇಳಿದರು.

Follow Us:
Download App:
  • android
  • ios