Budget 2022: ಚುನಾವಣೆ, ರಾಜಕೀಯ ಭಿನ್ನಾಭಿಪ್ರಾಯ ಬದಿಗಿಟ್ಟು ಬಜೆಟ್‌ನಲ್ಲಿ ಭಾಗವಹಿಸಿ: ಪ್ರಧಾನಿ ಮೋದಿ!

*ಬಜೆಟ್ ಅಧಿವೇಶನದ ಆರಂಭಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಮಾತು
*ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಲು ಅಧಿವೇಶನವು ಒಂದು ಅವಕಾಶ
*ಶಾಸಕರು ಪೂರ್ಣ ಬದ್ಧತೆಯಿಂದ ಕಲಾಪದಲ್ಲಿ ಭಾಗವಹಿಸಬೇಕು: ಮೋದಿ

Budget 2022 PM Narendra Modi Urges parties to keep political diffrence aside during session mnj

ನವದೆಹಲಿ (ಜ. 31): ಬಜೆಟ್ ಅಧಿವೇಶನದ (Budget Session) ಆರಂಭಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ (Narendra Modi) ರಾಜಕೀಯ ಭಿನ್ನಾಭಿಪ್ರಾಯವನ್ನು ಬದಿಗಿಟ್ಟು ಎಲ್ಲಾ ಪಕ್ಷಗಳ ಬೆಂಬಲ ಮತ್ತು ಭಾಗವಹಿಸುವಿಕೆಯನ್ನು ನಿರೀಕ್ಷಿಸಿದ್ದಾರೆ. ಐದು ರಾಜ್ಯಗಳಲ್ಲಿ ಚುನಾವಣಾ ಪ್ರಚಾರದ ಹೊರತಾಗಿಯೂ, ದೇಶದ ಪ್ರಗತಿಯನ್ನು ವೇಗಗೊಳಿಸಲು ಮತ್ತು ಹೊಸ ಆರ್ಥಿಕ ಗುರಿಗಳನ್ನು ಸಾಧಿಸಲು ಸಂಸದರು ಗಂಭೀರ ಚರ್ಚೆಗಳಲ್ಲಿ ಭಾಗವಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸಂಸತ್ತಿನ ಹೊರಗೆ ಮಾತನಾಡಿದ ಪ್ರಧಾನಿ ಮೋದಿ ಆಗಾಗ್ಗೆ ಚುನಾವಣೆಗಳು ಸಂಸತ್ತಿನ ಕಲಾಪಗಳು ಮತ್ತು ಸದನದ ಚರ್ಚೆಗಳ ಮೇಲೆ ಪರಿಣಾಮ ಬೀರುತ್ತವೆ ಎಂದು  ಹೇಳಿದ್ದಾರೆ. "ಆದರೆ ನಾನು ಎಲ್ಲಾ ಸಂಸದರು ಮತ್ತು ಎಲ್ಲಾ ರಾಜಕೀಯ ಪಕ್ಷಗಳು ಚುನಾವಣೆಗಳು ಮತ್ತು ಚುನಾವಣಾ ಸಂಬಂಧಿತ ಭಿನ್ನಾಭಿಪ್ರಾಯಗಳನ್ನು ಬದಿಗಿಡಲು ವಿನಂತಿಸುತ್ತೇನೆ. ಕೇಂದ್ರ ಬಜೆಟ್‌ನ ಪ್ರಾಮುಖ್ಯತೆಯು ನಮ್ಮ ಭಿನ್ನಾಭಿಪ್ರಾಯಗಳನ್ನು ಮೀರಿದೆ. ಮುಂಬರುವ ಬಜೆಟ್ ಅಧಿವೇಶನವು ಇಡೀ ಮುಂಬರುವ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ನಾವೆಲ್ಲರೂ ಒಟ್ಟಾಗಿ ಇದನ್ನು ಯಶಸ್ವಿಗೊಳಿಸಬೇಕು’ ಎಂದು ಪ್ರಧಾನಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ: 11 ಕೋಟಿ ರೈತರಿಗೆ PM ಕಿಸಾನ್, ಜೀವ ಉಳಿಸಿಲು ಲಸಿಕೆ, ಅಭಿವೃದ್ಧಿ ಭಾರತ ಅಭಿನಂದಿಸಿದ ರಾಷ್ಟ್ರಪತಿ!

ಶಾಸಕರು ಪೂರ್ಣ ಬದ್ಧತೆಯಿಂದ ಕಲಾಪದಲ್ಲಿ ಭಾಗವಹಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ದೇಶವು ಹೊಸ ಆರ್ಥಿಕ ಎತ್ತರವನ್ನು ತಲುಪಲು ಸಹಾಯ ಮಾಡಲು ವೇದಿಕೆ ಸಿದ್ಧವಾಗಿದೆ ಎಂದ ಅವರು "ಮುಕ್ತ ಮನಸ್ಸಿನಿಂದ" ಮತ್ತು "ಸೂಕ್ಷ್ಮತೆ ಮತ್ತು ಉತ್ತಮ ಉದ್ದೇಶದಿಂದ" ಚರ್ಚೆಗಳನ್ನು ನಡೆಸಬೇಕು ಎಂದು  ಒತ್ತಾಯಿಸಿದ್ದಾರೆ. ಜಾಗತಿಕ ಪರಿಸ್ಥಿತಿಯನ್ನು ಉಲ್ಲೇಖಿಸಿದ ಅವರು ಭಾರತಕ್ಕೆ ಸಾಕಷ್ಟು ಅವಕಾಶಗಳಿವೆ ಎಂದು ಹೇಳಿದರು. "ಈ ಅಧಿವೇಶನವು ದೇಶದ ಆರ್ಥಿಕ ಪ್ರಗತಿ, ಲಸಿಕೆ ಕಾರ್ಯಕ್ರಮ ಮತ್ತು ಮೇಡ್ ಇನ್ ಇಂಡಿಯಾ ಲಸಿಕೆಗಳ ಬಗ್ಗೆ ವಿಶ್ವದಲ್ಲಿ ವಿಶ್ವಾಸವನ್ನು ಮೂಡಿಸುತ್ತದೆ." ಎಂದು ಹೇಳಿದ್ದಾರೆ.

ಬಜೆಟ್‌ ಅಧಿವೇಶನ್‌ ಆರಂಭ: ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡುವುದರೊಂದಿಗೆ ಬಜೆಟ್ ಅಧಿವೇಶನ ಆರಂಭವಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ತಮ್ಮ ನಾಲ್ಕನೇ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಕೋವಿಡ್ -19 ಸಾಂಕ್ರಾಮಿಕದ ಮೂರನೇ ಅಲೆ ಮಧ್ಯೆ  ಈ ವರ್ಷದ ಬಜೆಟ್ ಮಹತ್ವದ್ದಾಗಿದೆ. ]

ಫೆ.1ರಂದು ಬೆಳಗ್ಗೆ 11 ಗಂಟೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಸಭೆಯಲ್ಲಿ 2022-23ನೇ ಸಾಲಿನ ಬಜೆಟ್‌ ಅಧಿವೇಶನ ಮಂಡನೆ ಮಾಡಲಿದ್ದಾರೆ. ಹೀಗಾಗಿ ಈ ಎರಡೂ ದಿನಗಳ ಕಾಲ ಪ್ರಶ್ನೋತ್ತರ ಮತ್ತು ಶೂನ್ಯ ಅವಧಿ ಇರುವುದಿಲ್ಲ. ರಾಷ್ಟ್ರಪತಿ ಅವರ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನಿ ಮೋದಿ ಅವರು ಫೆ.7ರಂದು ಉತ್ತರಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಇದನ್ನೂ ಓದಿ: Economic Survey 2022:ಪ್ರಸಕ್ತ ಸಾಲಿನಲ್ಲಿ ದೇಶದ ಜಿಡಿಪಿ ಬೆಳವಣಿಗೆ ದರ ಶೇ. 9.2 ನಿರೀಕ್ಷೆ

ಕೊರೋನಾ ಹಿನ್ನೆಲೆಯಲ್ಲಿ ಮುಂಜಾಗ್ರತೆ: ಬಜೆಟ್‌ ಅಧಿವೇಶನದಲ್ಲಿ ಕೋವಿಡ್‌ ಮಾರ್ಗಸೂಚಿಗಳನ್ನು ಪಾಲಿಸುವ ನಿಟ್ಟಿನಲ್ಲಿ ಸಂಸತ್ತಿನ ಉಭಯ ಕಲಾಪವನ್ನು 2 ಹಂತಗಳಲ್ಲಿ ವಿಭಜಿಸಲಾಗಿದೆ. ಈ ಪೈಕಿ ಜ.31ರಿಂದ ಪೆ.11ರವರೆಗೆ 10 ಕಲಾಪಗಳು ಮತ್ತು ಉಳಿದ 19 ಕಲಾಪಗಳು ಮಾ.14ರಿಂದ ಏ.8ರವರೆಗೆ ನಡೆಯಲಿದೆ. ಸಾಮಾಜಿಕ ಅಂತರ ಪಾಲನೆಗಾಗಿ ರಾಜ್ಯಸಭೆ ಮತ್ತು ಲೋಕಸಭೆ ಕಲಾಪಗಳು ಪ್ರತ್ಯೇಕವಾಗಿ ನಡೆಯಲಿವೆ

ವಿಪಕ್ಷಗಳಿಗೆ ಪೆಗಾಸಸ್‌ ಅಸ್ತ್ರ: ಬಜೆಟ್‌ ಅಧಿವೇಶನ ಆರಂಭವಾಗಲಿರುವ ಬೆನ್ನಲ್ಲೇ, ಪೆಗಾಸಸ್‌ ಸ್ಪೈವೇರ್‌ ಅನ್ನು ಇಸ್ರೇಲ್‌ನಿಂದ ಭಾರತದ ಖರೀದಿಸಿದೆ ಎಂಬ ವರದಿಯು ವಿಪಕ್ಷಗಳಿಗೆ ವರದಾನವಾಗಿ ಪರಿಣಮಿಸಿದೆ. ಈಗಾಗಲೇ ರೈತರ ಸಮಸ್ಯೆಗಳು, ಗಡಿಬಿಕ್ಕಟ್ಟು, ಬೆಲೆ ಏರಿಕೆ ಮತ್ತು ಹಣದುಬ್ಬರ ವಿಚಾರಗಳನ್ನು ಬಳಸಿಕೊಂಡು ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗಿದ್ದ ಕಾಂಗ್ರೆಸ್‌ ಸೇರಿದಂತೆ ಇತರ ವಿಪಕ್ಷಗಳಿಗೆ ಪೆಗಾಸಸ್‌ ವಿಚಾರವು ಹೊಸ ಅಸ್ತ್ರವಾಗಿದೆ ಎನ್ನಲಾಗಿದೆ.

Latest Videos
Follow Us:
Download App:
  • android
  • ios