ನವದೆಹಲಿ[ಫೆ.03]: ಅನಿವಾಸಿ ಭಾರತೀಯ(ಎನ್‌ಆರ್‌ಐ)ರ ಜಾಗತಿಕ ಆದಾಯದ ಮೇಲೆ ತೆರಿಗೆ ವಿಧಿಸುವ ಯಾವುದೇ ಪ್ರಸ್ತಾವನೆ ಸರ್ಕಾರ ಮುಂದಿಲ್ಲ. ಆದರೆ, ಅನಿವಾಸಿ ಭಾರತೀಯರ ಭಾರತದಲ್ಲಿನ ಆದಾಯಕ್ಕೆ ಮಾತ್ರವೇ ತೆರಿಗೆ ವಿಧಿಸಲಾಗುತ್ತದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸ್ಪಷ್ಟನೆ ನೀಡಿದ್ದಾರೆ. ತೆರಿಗೆ ಪಾವತಿಯಿಂದ ಪಾರಾಗಲು ಎನ್‌ಆರ್‌ಐ ಮಾನ್ಯತೆ ದುರುಪಯೋಗ ಮಾಡಿಕೊಳ್ಳುವುದನ್ನು ತಪ್ಪಿಸಲು ಈ ಕ್ರಮ ವಹಿಸಲಾಗಿದೆ ಎಂದು ಹೇಳಿದರು.

ಶನಿವಾರ ಸಚಿವೆ ನಿರ್ಮಲಾ ಮಂಡಿಸಿದ 2020-21ನೇ ಬಜೆಟ್‌ ಭಾಷಣದ ವೇಳೆ ವಿದೇಶ ರಾಷ್ಟ್ರಗಳಲ್ಲೂ ತೆರಿಗೆ ಪಾವತಿಸದ ಎನ್‌ಆರ್‌ಐಗಳ ತೆರಿಗೆ ವಿಧಿಸಲಾಗುತ್ತದೆ ಎಂದು ಘೋಷಿಸಿದ್ದರು. ಇದು ಗಲ್‌್ಫ ರಾಷ್ಟ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎನ್‌ಆರ್‌ಐಗಳ ಆತಂಕಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆ ಈ ಬಗ್ಗೆ ಸ್ಪಷ್ಟನೆ ನೀಡಿದ ಸಚಿವೆ ನಿರ್ಮಲಾ, ದೇಶದಲ್ಲೇ ಉತ್ಪಾದನೆಯಾದ ಎನ್‌ಆರ್‌ಐಗಳ ಆದಾಯದ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಹಾಗೆಂದು, ವಿದೇಶಗಳಲ್ಲಿ ಗಳಿಸಿರುವ ಅನಿವಾಸಿ ಭಾರತೀಯರ ಆದಾಯದ ಮೇಲೆ ತೆರಿಗೆ ವಿಧಿಸಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.

ಕರ್ನಾಟಕಕ್ಕೆ ಕೇಂದ್ರದ ತೆರಿಗೆ ಪಾಲು 9000 ಕೋಟಿ ರು. ಖೋತಾ!

ಆದರೆ, ಭಾರತದಲ್ಲಿರುವ ಆಸ್ತಿ ಹೊಂದಿರುವ ಅನಿವಾಸಿ ಭಾರತೀಯರು ಆಸ್ತಿ ಗಳಿಸುವ ಆದಾಯಕ್ಕೆ ಭಾರತದಲ್ಲೂ ತೆರಿಗೆ ಕಟ್ಟುತ್ತಿಲ್ಲ. ವಿದೇಶದಲ್ಲೂ ತೆರಿಗೆ ವ್ಯಾಪ್ತಿಗೆ ಒಳಪಡುತ್ತಿಲ್ಲ. ಅಂಥದ್ದರ ಮೇಲೆ ಮಾತ್ರವೇ ತೆರಿಗೆ ವಿಧಿಸಲಾಗುತ್ತದೆ. ಅಲ್ಲದೆ, ಎನ್‌ಆರ್‌ಐಗಳು ವಿದೇಶದಲ್ಲಿದ್ದರೂ, ಅವರ ಆಸ್ತಿ ಭಾರತದಲ್ಲೇ ಇರುವ ಕಾರಣ, ಅದಕ್ಕೆ ತೆರಿಗೆ ವಿಧಿಸುವ ಪರಮಾಧಿಕಾರ ನನಗಿದೆ ಎಂದು ಮಾಧ್ಯಮಗಳ ಪ್ರತಿನಿಧಿಗಳ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮತ್ತೊಂದೆಡೆ, ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನ ವೇಳೆ ಕೇಂದ್ರ ಕಂದಾಯ ಕಾರ‍್ಯದರ್ಶಿ ಅಜಯ್‌ ಭೂಷಣ್‌ ಪಾಂಡೆ, ತೆರಿಗೆ ಪಾವತಿಯಿಂದ ಪಾರಾಗುವವರಿಗೆ ಮಾತ್ರವೇ ಇದು ಅನ್ವಯವಾಗಲಿದ್ದು, ಅನಿವಾಸಿ ಭಾರತೀಯರ ವಿದೇಶಿ ಗಳಿಕೆ ಮೇಲೆ ಏನೂ ಪರಿಣಾಮವಾಗಲ್ಲ ಎಂದಿದ್ದಾರೆ.

ಬೋರಿಂಗ್ ಬಜೆಟ್: ಕಣ್ಣು ಮಿಟುಕಿಸಿದ ಸಂಸದನ ವಿಡಿಯೋ ವೈರಲ್!