ಅಸ್ಟ್ರಾಜೆನೆಕಾದ ಕೋವಿಡ್ -19 ಲಸಿಕೆಯ ರೋಲ್‌ಔಟ್ ಮಾಹಿತಿಯು ಒಂದು ಡೋಸ್‌ನಿಂದ ಶೇಕಡಾ 80ರಷ್ಟು ಸೋಂಕಿತರ ಸಾವಿನ ಅಪಾಯವನ್ನು ತಡೆಯಬಹುದು ಎಂದುಪಬ್ಲಿಕ್ ಹೆಲ್ತ್ ಇಂಗ್ಲೆಂಡ್ ತಿಳಿಸಿದೆ.

ಫಿಜರ್-ಬಯೋಟೆಕ್ ಲಸಿಕೆಯ ಎರಡು ಡೋಸ್‌ಗಳ ನಂತರ ಕೊರೋನಾ ಸಾವಿನ ಸಾಧ್ಯತೆಯ ಅಪಾಯ ಇನ್ನಷ್ಟು ಕಡಿಮೆಯಾಗಿ ರಕ್ಷಣಾ ಸಾಧ್ಯತೆ 80% ರಿಂದ 97% ಕ್ಕೆ ಏರುತ್ತದೆ ಎಂದು ಅದು ಹೇಳಿದೆ.

ಸೀರಂಗೆ ಆಸ್ಟ್ರಾಜೆನೆಕಾ ಲೀಗಲ್‌ ನೋಟಿಸ್‌!

ಈಗಿನ ಪರಿಸ್ಥಿಯ ಆಧಾರದ ಮೇಲೆ ಅಸ್ಟ್ರಾಜೆನೆಕಾ ಲಸಿಕೆಯಿಂದ ಸಾವಿನ ಅಪಾಯ ತಪ್ಪಿಸುವ ಸಾಧ್ಯತೆ ಕುರಿತು ಈ ಅಧ್ಯಯನವು ಮೊದಲನೆಯದ್ದಾಗಿದೆ ಎಂದು ಪಿಹೆಚ್‌ಇ ಹೇಳಿದೆ.

ಅಧ್ಯಯನವು ಡಿಸೆಂಬರ್ ಮತ್ತು ಏಪ್ರಿಲ್ ನಡುವಿನ ಕೊರೋನಾ -19 ಹೊಸ ರೋಗಲಕ್ಷಣದ ಪ್ರಕರಣಗಳನ್ನು ಮತ್ತು ವ್ಯಾಕ್ಸಿನೇಷನ್ ಸ್ಥಿತಿಯಿಂದ ಪಾಸಿಟಿವ್ ಬಂದು 28 ದಿನಗಳಲ್ಲಿ ಮರಣ ಹೊಂದಿದ ಜನರನ್ನು ಪರಿಶೀಲನೆ ಮಾಡಲಾಗಿದೆ.

ಅಸ್ಟ್ರಾಜೆನೆಕಾ ಲಸಿಕೆಯ ಒಂದು ಡೋಸ್ ಪಡೆದ ಜನರು ಸಾವಿನ ಅಪಾಯದಿಂದ ಶೇ 55%ರಷ್ಟು ರಕ್ಷಿಸಲ್ಪಟ್ಟಿದ್ದಾರೆ. ಈ ಲಸಿಕೆಯ ಒಂದೇ ಡೋಸ್‌ ಲಸಿಕೆ ಹಾಕಿದ ವ್ಯಕ್ತಿಗಳಲ್ಲಿ ಸಾವಿನ ವಿರುದ್ಧ ಸುಮಾರು 80% ರಕ್ಷಣೆಗೆ ಸಮನಾಗಿರುತ್ತದೆ ಎಂದು ಪಿಹೆಚ್‌ಇ ಹೇಳಿಕೆಯಲ್ಲಿ ತಿಳಿಸಿದೆ.