ನವದೆಹಲಿ(ಏ.08): ‘ಕೋವಿಶೀಲ್ಡ್‌’ ಲಸಿಕೆ ಉತ್ಪಾದಿಸುವ ಸೀರಂ ಇನ್ಸ್‌ಟಿಟ್ಯೂಟ್‌ಗೂ ಹಾಗೂ ಈ ಲಸಿಕೆ ಕಂಡುಹಿಡಿದ ಬ್ರಿಟನ್‌ನ ಆಸ್ಟ್ರಾಜೆನೆಕಾ ಕಂಪನಿಗೂ ಕಾನೂನು ಸಂಘರ್ಷ ಆರಂಭವಾಗಿದೆ.

ಲಸಿಕೆ ವಿತರಣೆಗೆ ಸೀರಂ ವಿಳಂಬ ಮಾಡುತ್ತಿದೆ ಎಂದು ಆಸ್ಟ್ರಾಜೆನೆಕಾ ಕಂಪನಿಯು ಸೀರಂಗೆ ಲೀಗಲ್‌ ನೋಟಿಸ್‌ ಜಾರಿ ಮಾಡಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.

ಆಸ್ಟ್ರಾಜೆನೆಕಾ ಹಾಗೂ ಆಕ್ಸ್‌ಫರ್ಡ್‌ ವಿವಿ ಜಂಟಿಯಾಗಿ ಕೋವಿಶೀಲ್ಡ್‌ ಲಸಿಕೆಯನ್ನು ಕಂಡುಹಿಡಿದಿವೆ. ಇದರ ಉತ್ಪಾದನೆಯನ್ನು ಪುಣೆಯ ಸೀರಂ ಇನ್ಸ್‌ಟಿಟ್ಯೂಟ್‌ ಮಾಡುತ್ತಿದ್ದು, ವಿಶ್ವದೆಲ್ಲೆಡೆ ಪೂರೈಕೆಯ ಹೊಣೆ ಹೊತ್ತಿದೆ.

ಇತ್ತೀಚೆಗಷ್ಟೇ ಸೀರಂ ಮುಖ್ಯಸ್ಥ ಅದರ್‌ ಪೂನಾವಾಲಾ ಅವರು, ‘ಲಸಿಕೆ ಉತ್ಪಾದನಾ ಕೇಂದ್ರ ಒತ್ತಡದಲ್ಲಿದೆ’ ಎಂದಿದ್ದರು. ಈ ಮೂಲಕ ಬೇಡಿಕೆಗೆ ತಕ್ಕಂತೆ ಉತ್ಪಾದನೆ ಆಗುತ್ತಿಲ್ಲ ಎಂದು ಪರೋಕ್ಷವಾಗಿ ಒಪ್ಪಿಕೊಂಡಿದ್ದರು.