Asianet Suvarna News Asianet Suvarna News

ನರ್ಸ್‌ಗಳ ಜತೆ ಬಜ್ಜಿ ತಿನ್ನೋಕೆ ಆಂಬ್ಯುಲೆನ್ಸ್ ಸೈರನ್‌ ಹಾಕ್ಕೊಂಡು ಬಂದ ಚಾಲಕ: ವಿಡಿಯೋ ವೈರಲ್‌

ಸೈರನ್‌ ಹಾಕ್ಕೊಂಡು ಹೋದ ಆಂಬ್ಯುಲೆನ್ಸ್‌ ಚಾಲಕ ಸ್ವಲ್ಪ ದೂರದ ನಂತರ ರಸ್ತೆ ಬದಿಯ ಉಪಾಹಾರ ಗೃಹದ ಬಳಿ ಬಜ್ಜಿ ತಿನ್ನುತ್ತಿದ್ದ ಹಾಗೂ ಜ್ಯೂಸ್‌ ಕುಡಿಯುತ್ತಿದ್ದ ವೇಳೆ ಟ್ರಾಫಿಕ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

on camera ambulance driver caught misusing siren for mirchi bajji juice in hyderabad ash
Author
First Published Jul 13, 2023, 4:42 PM IST

ಹೈದರಾಬಾದ್‌ (ಜುಲೈ 13, 2023): ಆಂಬ್ಯುಲೆನ್ಸ್ ಸೈರನ್‌ ಹಾಕಿದ್ರೆ ವಾಹನ ಸವಾರರು ಜಾಗ ಬಿಡ್ತಾರೆ ಅಂತ ಇದನ್ನು ದುರ್ಬಳಕೆ ಮಾಡಿಕೊಳ್ಳುವ ಪ್ರಕರಣಗಳೂ ಸಹ ವರದಿಯಾಗುತ್ತಿದೆ. ಇದೇ ರೀತಿ, ತೆಲಂಗಾಣದಲ್ಲಿ ಇಂತಹದ್ದೊಂದು ಘಟನೆ ನಡೆದಿದ್ದು, ಪೊಲೀಸರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

ಹೈದರಾಬಾದ್‌ನ ಬಶೀರ್‌ಬಾಗ್‌ನಲ್ಲಿ ಟ್ರಾಫಿಕ್ ಕ್ಲಿಯರೆನ್ಸ್ ಪಡೆಯಲು ಖಾಸಗಿ ಆಸ್ಪತ್ರೆಯ ಆಂಬ್ಯುಲೆನ್ಸ್‌ನ ಚಾಲಕ ಸೋಮವಾರ ವಾಹನದ ತುರ್ತು ಸೈರನ್ ಅನ್ನು ಬಳಸಿದ್ದಾನೆ. ನಂತರ ರಸ್ತೆ ಬದಿಯ ಉಪಾಹಾರ ಗೃಹದ ಬಳಿ ಬಜ್ಜಿ ತಿನ್ನುತ್ತಿದ್ದ ಹಾಗೂ ಜ್ಯೂಸ್‌ ಕುಡಿಯುತ್ತಿದ್ದ ವೇಳೆ ಟ್ರಾಫಿಕ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಇನ್ನು, ಘಟನೆಯ ವಿಡಿಯೋ ಪೊಲೀಸರ ಬಾಡಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನು ಓದಿ: ವೈದ್ಯರಿಗೆ ನಕಲಿ 500 ರೂ. ಫೀಸ್‌ ಕೊಟ್ಟು ಹೋದ ರೋಗಿ: ಮೋಸ ಹೋದ ಬಗ್ಗೆ ಡಾಕ್ಟರ್‌ ಹೇಳಿಕೊಂಡಿದ್ದು ಹೀಗೆ..

ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ತೆಲಂಗಾಣ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅಂಜನಿ ಕುಮಾರ್, “ಸೈರನ್‌ಗಳ ದುರುಪಯೋಗವನ್ನು ಉಲ್ಲೇಖಿಸಿ ತೆಲಂಗಾಣ ಪೊಲೀಸರು ಆಂಬ್ಯುಲೆನ್ಸ್ ಸೇವೆಗಳನ್ನು ಜವಾಬ್ದಾರಿಯುತವಾಗಿ ಬಳಸಲು ಮನವಿ ಮಾಡುತ್ತಾರೆ. ನಿಜವಾದ ತುರ್ತುಸ್ಥಿತಿಗಳಿಗೆ ಮಾತ್ರ ತ್ವರಿತ ಮತ್ತು ಸುರಕ್ಷಿತ ಮಾರ್ಗಕ್ಕಾಗಿ ಸೈರನ್‌ಗಳನ್ನು ಸಕ್ರಿಯಗೊಳಿಸುವ ಅಗತ್ಯವಿದೆ. ದುರುಪಯೋಗ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಲಾಗಿದೆ’’ ಎಂದು ಪೋಸ್ಟ್‌ ಮಾಡಿದ್ದಾರೆ. ಒಟ್ಟಾಗಿ, ನಾವು ತುರ್ತು ಪ್ರತಿಕ್ರಿಯೆ ಮತ್ತು ಸಮುದಾಯ ಸುರಕ್ಷತೆಯನ್ನು ಹೆಚ್ಚಿಸಬಹುದು ಎಂದೂ ಅವರು ಹೇಳಿದರು.

ಘಟನೆಯ ವಿವರ..
2 ನಿಮಿಷಗಳ ವೀಡಿಯೊದಲ್ಲಿ, ಆಂಬ್ಯುಲೆನ್ಸ್ ಚಾಲಕನು ಸೈರನ್ ಅನ್ನು ಏಕೆ ಬಳಸಿದೆನು ಮತ್ತು ಸ್ನ್ಯಾಕ್ಸ್‌ ಅಂಗಡಿಯ ಬಳಿ ನಿಲ್ಲಿಸಿದೆನು ಎಂಬುದನ್ನು ವಿವರಿಸಲು ಪೊಲೀಸರಿಗೆ ಕ್ಷಮೆ ಕೇಳಿದ್ದಾನೆ. ವಿಚಾರಣೆಯ ನಂತರ, ಆಂಬ್ಯುಲೆನ್ಸ್‌ನಲ್ಲಿ ಯಾವುದೇ ರೋಗಿಯಿಲ್ಲ ಎಂದು ಪೊಲೀಸರು ಕಂಡುಕೊಂಡರು.

ಇದನ್ನೂ ಓದಿ: ವಾಕಿಂಗ್ ಹೋಗ್ತಿದ್ದೋರ ಮೇಲೆ ಹರಿದ ಕಾರು: ತಾಯಿ - ಮಗು ಸೇರಿ ಮೂವರ ಬಲಿ; ಸಿಸಿ ಕ್ಯಾಮರಾದಲ್ಲಿ ಆಘಾತಕಾರಿ ದೃಶ್ಯ ಸೆರೆ

ಆಂಬುಲೆನ್ಸ್‌ ಸೈರನ್‌ ಬಳಸಿದ ಕಾರಣ ತುರ್ತು ಸೇವೆಗೆ ಎಂದು ಟ್ರಾಫಿಕ್ ಕಾನ್‌ಸ್ಟೆಬಲ್ ಭಾವಿಸಿದ್ದಾರೆ. ಆದರೆ ಟ್ರಾಫಿಕ್ ಸಿಗ್ನಲ್‌ನಿಂದ ಸುಮಾರು 100 ಮೀಟರ್ ದೂರದಲ್ಲಿರುವ ರಸ್ತೆ ಬದಿಯ ಉಪಾಹಾರ ಗೃಹದ ಬಳಿ ಆಂಬ್ಯುಲೆನ್ಸ್ ನಿಂತಿರುವುದನ್ನು ಅವರು ಗಮನಿಸಿದರು. ಅಲ್ಲದೆ, ಇಬ್ಬರು ನರ್ಸ್‌ಗಳು ಹಾಗೂ ಇತರರು ಸೇರಿ ಚಾಲಕ ಬಜ್ಜಿ ತಿಂದು ಜ್ಯೂಸ್‌ ಕುಡಿದಿದ್ದಾರೆ. ಇದನ್ನು ಕೇಳಿದ್ದಕ್ಕೆ, ಒಬ್ಬರು ನರ್ಸ್‌ಗೆ ಕೆಲವು ಆರೋಗ್ಯ ಸಮಸ್ಯೆ ಇದೆ ಎಂದು ಚಾಲಕ ಹೇಳುತ್ತಿರುವುದು ವಿಡಿಯೋ ಕ್ಲಿಪ್‌ನಲ್ಲಿ ಕೇಳಿಬರುತ್ತಿದೆ.

ಅದಕ್ಕೆ ಟ್ರಾಫಿಕ್ ಕಾನ್ಸ್‌ಟೇಬಲ್ ಡ್ರೈವರ್‌ಗೆ "ನೀನು ಸೈರನ್ ಹಾಕಿದ ಮೇಲೆ ನಾನು ಆಂಬುಲೆನ್ಸ್‌ಗೆ ಕ್ಲಿಯರೆನ್ಸ್ ಕೊಟ್ಟೆ. ಆದರೆ ಆಸ್ಪತ್ರೆಗೆ ಹೋಗದೆ ಮಿರ್ಚಿ ಬಜ್ಜಿ ತಿಂದು ಟೀ ಕುಡಿಯುತ್ತೀಯ. ರೋಗಿ ಎಲ್ಲಿ? ಮಿರ್ಚಿ ಬಜ್ಜಿ ತಿನ್ನೋದಕ್ಕೆ ನೀವು ಸೈರನ್ ಆನ್ ಮಾಡಿದ್ದೀರಾ?" ಎಂದು ಪ್ರಶ್ನೆ ಮಾಡಿದ್ದಾರೆ. ಹಾಗೆ, ಮೋಟಾರು ವಾಹನ ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕಾಗಿ ಚಾಲಕನ ವಿರುದ್ಧ 1,000 ರೂ. ದಂಡವನ್ನು ವಿಧಿಸಲಾಗಿದೆ ಎಂದು ಪೊಲೀಸರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಬುಡಕಟ್ಟು ವ್ಯಕ್ತಿ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಬಿಜೆಪಿ ನಾಯಕ: ಕಾಲು ತೊಳೆದು ಸನ್ಮಾನ ಮಾಡಿದ ಮಧ್ಯ ಪ್ರದೇಶ ಸಿಎಂ

Follow Us:
Download App:
  • android
  • ios