ಇತ್ತೀಚೆಗೆ, ರೋಗಿಯೊಬ್ಬರು ಕನ್ಸಲ್ಟೇಷನ್‌ ನಂತರ ಈ ನೋಟನ್ನು ಪಾವತಿ ಮಾಡಿದ್ದಾರೆ. ನನ್ನ ಕ್ಲಿನಿಕ್‌ನ ರಿಸೆಪ್ಷನಿಸ್ಟ್‌ ಅದನ್ನು ಚೆಕ್‌ ಮಾಡಲಿಲ್ಲ ಎಂದು ವೈದ್ಯರು ನಕಲಿ ನೋಟನ್ನು ಪಡದುಕೊಂಡ ಬಗ್ಗೆ ಹೇಳಿದ್ದಾರೆ. 

ನವದೆಹಲಿ (ಜುಲೈ 10, 2023): ಮೆಟಾದ ಹೊಸದಾಗಿ ಪ್ರಾರಂಭಿಸಲಾದ ಅಪ್ಲಿಕೇಶನ್‌ ಥ್ರೆಡ್ಸ್‌ ಬಗ್ಗೆ ನೀವು ಕೇಳಿರಬಹುದು. ಆಥವಾ ಈಗಾಗಲೇ ನೀವು ಇದರಲ್ಲಿ ಅಕೌಂಟ್‌ ಅನ್ನು ಓಪನ್‌ ಮಾಡಿರಬಹುದು. ಇಂಟರ್ನೆಟ್ ಬಳಕೆದಾರರು ಥ್ರೆಡ್ಸ್‌ ಅನ್ನು ಬಳಸಲು ಪ್ರಾರಂಭಿಸಿದ್ದು, ಮತ್ತು ಅಪ್ಲಿಕೇಶನ್‌ನಲ್ಲಿ ತಮ್ಮ ದೈನಂದಿನ ಜೀವನದ ನವೀಕರಣಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿದ್ದಾರೆ. ಈ ಲೇಖನದಲ್ಲಿ ವೈದ್ಯರೊಬ್ಬರು ಥ್ರೆಡ್ಸ್‌ನಲ್ಲಿ ಹಂಚಿಕೊಂಡ ಪೋಸ್ಟ್ ವೈರಲ್‌ ಆಗಿದ್ದು, ಇದಕ್ಕೆ ಕಾರಣ ಇಲ್ಲಿದೆ ನೋಡಿ..

ಆರ್ಥೋಪೆಡಿಕ್ ಸರ್ಜನ್ ಡಾ. ಮನನ್ ವೋರಾ ಅವರು ಹಂಚಿಕೊಂಡ ಪೋಸ್ಟ್, ಅವರು ತಮ್ಮ ರೋಗಿಗಳೊಬ್ಬರಿಂದ ನಕಲಿ 500 ರೂ ನೋಟನ್ನು ಹೇಗೆ ಪಡೆದರು ಎಂಬುದರ ಕುರಿತು ಮಾತನಾಡಿದ್ದಾರೆ. “ಇತ್ತೀಚೆಗೆ, ರೋಗಿಯೊಬ್ಬರು ಕನ್ಸಲ್ಟೇಷನ್‌ ನಂತರ ಈ ನೋಟನ್ನು ಪಾವತಿ ಮಾಡಿದ್ದಾರೆ. ನನ್ನ ಕ್ಲಿನಿಕ್‌ನ ರಿಸೆಪ್ಷನಿಸ್ಟ್‌ ಅದನ್ನು ಚೆಕ್‌ ಮಾಡಲಿಲ್ಲ. (ನಾನೂ ನೀವು ಇದನ್ನು ಸಾಮಾನ್ಯವಾಗಿ ನಿರೀಕ್ಷಿಸುವುದಿಲ್ಲ, ಸರಿ?) ಆದರೆ ವೈದ್ಯರನ್ನು ವಂಚಿಸಲು ಜನರು ಈ ಹಾದಿ ಹಿಡಿಯುತ್ತಾರೆ ಎಂಬುದನ್ನು ತೋರಿಸುತ್ತದೆ. ಹಾಗೂ, ಅವರಿಗೂ ಅದರ ಬಗ್ಗೆ ತಿಳಿದಿರಲಿಲ್ಲ ಮತ್ತು ಅವರನ್ನು ಅದನ್ನು ಹಾಗೇ ನೀಡಿದ್ದಾರೆ ಎಂದು ನಾನು ನಂಬಲು ನಿರಾಕರಿಸುತ್ತೇನೆ’’ ಎಂದು ಡಾ. ಅರೋರಾ ಬರೆದುಕೊಂಡಿದ್ದಾರೆ.

ಇದನ್ನು ಓದಿ: ವಾಕಿಂಗ್ ಹೋಗ್ತಿದ್ದೋರ ಮೇಲೆ ಹರಿದ ಕಾರು: ತಾಯಿ - ಮಗು ಸೇರಿ ಮೂವರ ಬಲಿ; ಸಿಸಿ ಕ್ಯಾಮರಾದಲ್ಲಿ ಆಘಾತಕಾರಿ ದೃಶ್ಯ ಸೆರೆ

"ಆದರೂ, ನಾನು ಇದಕ್ಕಾಗಿ ನಕ್ಕಿದ್ದೇನೆ ಮತ್ತು ನಾನು ಈ ನೋಟನ್ನು ನನ್ನೊಂದಿಗೆ ಉಳಿಸಿಕೊಂಡಿದ್ದೇನೆ. ಏಕೆಂದರೆ ನನಗೆ ‘’500’’ ವಂಚನೆ ಮಾಡಿದರೂ ಸರಿಯೇ, ಇದು ಒಂದು ಮೋಜಿನ ಸ್ಮರಣೆಯಾಗಿದೆ’’ ಎಂದು ಹೇಳಿಕೊಂಡಿದ್ದಾರೆ.

ಈ ಪೋಸ್ಟ್ ಅನ್ನು ಇಲ್ಲಿ ನೋಡಿ..

ಇದನ್ನೂ ಓದಿ: ಬುಡಕಟ್ಟು ಯುವಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಬಿಜೆಪಿ ನಾಯಕ ಬಂಧನ: ಆರೋಪಿ ಮೇಲೆ ಕಠಿಣ ಕ್ರಮ ಎಂದ ಸಿಎಂ

ಈ ಪೋಸ್ಟ್ ಅನೇಕ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದ್ದು, ಇದರಲ್ಲಿ ಕೆಲವರು ರೋಗಿಯ ಕಡೆಯಿಂದ ಇದು ಅತ್ಯಂತ ತಪ್ಪು ಕೆಲಸ ಎಂದು ಹೇಳಿದರು. ಕೆಲವರು ವೈದ್ಯರಿಗೆ ಸಹಾನುಭೂತಿ ತೋರಿಸಿದ್ದು ಮತ್ತು ನಕಲಿ ನೋಟು ಗುರುತಿಸುವುದು ಕಷ್ಟ ಎಂದು ಹೇಳಿದ್ದಾರೆ. ನೆಟ್ಟಿಗರೊಬ್ಬರು ಇದಕ್ಕೆ ನಾವು ನಿಮಗೆ ಸಹಾನುಭೂತಿ ತೋರಿಸಬೇಕೋ ಅಥವಾ ನಗಬೇಕೋ ಎಂದು ಕಾಮೆಂಟ್‌ ಮಾಡಿದ್ದಾರೆ. ನೋಟ್‌ಬ್ಯಾನ್‌ ಮಾಡುತ್ತಿರುವುದು ಏಕೆ ಎಂಬುದಕ್ಕೆ ನಮಗೆ ಈಗ ಕಾರಣ ಗೊತ್ತಾಗಿದೆ ಎಂದೂ ಸಾಮಾಜಿಕ ಬಳಕೆದಾರರೊಬ್ಬರು ಟ್ವೀಟ್‌ ಮಾಡಿದ್ದಾರೆ. 

ಇದನ್ನೂ ಓದಿ: ಬುಡಕಟ್ಟು ವ್ಯಕ್ತಿ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಬಿಜೆಪಿ ನಾಯಕ: ಕಾಲು ತೊಳೆದು ಸನ್ಮಾನ ಮಾಡಿದ ಮಧ್ಯ ಪ್ರದೇಶ ಸಿಎಂ

ಇದನ್ನೂ ಓದಿ: ಅಬ್ಬಾ! ದೊಡ್ಡ ನರಿಯನ್ನೇ ಬೇಟೆಯಾಡಿ ಎತ್ತಿಕೊಂಡು ಹಾರಿಹೋದ ಹದ್ದು: ವಿಡಿಯೋ ವೈರಲ್