ಪುಣೆಯಲ್ಲಿ ಇಲೆಕ್ಟ್ರಿಕ್‌ ಸ್ಕೂಟರ್‌ಗೆ ಬೆಂಕಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ವಾಹನ ಸುರಕ್ಷತೆಯ ಬಗ್ಗೆ ಪ್ರಶ್ನೆ ಮಾಡಿದ ಘಟನೆ

ಪುಣೆ: ಪುಣೆಯಲ್ಲಿ ಓಲಾ ಇಲೆಕ್ಟ್ರಿಕ್‌ ಸ್ಕೂಟರ್ ಒಂದು ಬೆಂಕಿಗಾಹುತಿಯಾಗಿದೆ. ಇಲೆಕ್ಟ್ರಿಕ್‌ ಸ್ಕೂಟರ್‌ಗೆ ಬೆಂಕಿ ಹೊತ್ತಿಕೊಂಡ ಉರಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯ ಕುರಿತು ತನಿಖೆ ಆರಂಭಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಓಲಾ ಸಂಸ್ಥೆ ಹೇಳಿದೆ. ರಸ್ತೆ ಬದಿಯ ಪಾದಚಾರಿ ಮಾರ್ಗದಲ್ಲಿ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ದೊಡ್ಡ ಜ್ವಾಲೆ ಮತ್ತು ಹೊಗೆಯೊಂದಿಗೆ ಸುಟ್ಟುಹೋದ ವೀಡಿಯೊ ವೈರಲ್ ಆಗಿತ್ತು. ಘಟನೆಯ ಬಳಿಕ ಈ ಇಲೆಕ್ಟ್ರಿಕ್‌ ಸ್ಕೂಟರ್‌ನ ಸುರಕ್ಷತಾ ಮಾನದಂಡಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಘಟನೆಯ ಕುರಿತು ಪ್ರತಿಕ್ರಿಯಿಸಿದ ಓಲಾ ಸಹ-ಸಂಸ್ಥಾಪಕ ಮತ್ತು ಸಿಇಒ ಭವಿಶ್ ಅಗರ್ವಾಲ್ (Bhavish Aggarwal), ಗ್ರಾಹಕರ ಸುರಕ್ಷತೆ ಮೊದಲ ಆದ್ಯತೆಯಾಗಿದೆ. ನಾವು ಇದನ್ನು ತನಿಖೆ ಮಾಡುತ್ತಿದ್ದೇವೆ ಮತ್ತು ಅದನ್ನು ಸರಿಪಡಿಸುತ್ತೇವೆ ಎಂದು ಹೇಳಿದರು.ಟ್ವಿಟರ್‌ನಲ್ಲಿ ವಿವರವಾದ ಹೇಳಿಕೆಯಲ್ಲಿ, 'ಪುಣೆಯಲ್ಲಿ ನಮ್ಮ ಸ್ಕೂಟರ್ ಒಂದರಲ್ಲಿ ಸಂಭವಿಸಿದ ಅಗ್ನಿ ಅನಾಹುತದ ಘಟನೆಯ ಬಗ್ಗೆ ನಮಗೆ ತಿಳಿದಿದೆ ಮತ್ತು ಮೂಲ ಕಾರಣವನ್ನು ಅರ್ಥಮಾಡಿಕೊಳ್ಳಲು ತನಿಖೆ ನಡೆಸುತ್ತಿದ್ದೇವೆ ಮತ್ತು ಮುಂದಿನ ಕೆಲವು ದಿನಗಳಲ್ಲಿ ನವೀಕರಣಗಳನ್ನು ಹಂಚಿಕೊಳ್ಳುತ್ತೇವೆ ಎಂದು ಬೆಂಗಳೂರು ಮೂಲದ ಓಲಾ ಕಂಪನಿಯು ಹೇಳಿದೆ.

Scroll to load tweet…

ಸಂಪೂರ್ಣವಾಗಿ ಸುರಕ್ಷಿತವಾಗಿರುವ ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ಗ್ರಾಹಕರೊಂದಿಗೆ ಸಂಸ್ಥೆ ನಿರಂತರವಾಗಿ ಸಂಪರ್ಕದಲ್ಲಿದೆ ಎಂದು ಕಂಪನಿಯು ಹೇಳಿದೆ. ವಾಹನ ಸುರಕ್ಷತೆಯು ಅತ್ಯಂತ ಮಹತ್ವದ್ದಾಗಿದೆ ಎಂದು ಪ್ರತಿಪಾದಿಸಿದ ಓಲಾ ಇಲೆಕ್ಟ್ರಿಕ್ (electric scooter) 'ನಾವು ಈ ಒಂದು ಘಟನೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಮತ್ತು ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಮತ್ತು ಮುಂದಿನ ದಿನಗಳಲ್ಲಿ ಹೆಚ್ಚಿನ ವಿವರ ಹಂಚಿಕೊಳ್ಳುತ್ತೇವೆ'ಎಂದು ಹೇಳಿದೆ. ಓಲಾ ಕಂಪನಿಯು ಎಲೆಕ್ಟ್ರಿಕ್ ಸ್ಕೂಟರ್‌ನ ವಿತರಣೆಯನ್ನು ಪ್ರಾರಂಭಿಸಿದ ನಂತರ ಈ ರೀತಿ ಬೆಂಕಿ ಅನಾಹುತವಾಗಿರುವ ಮೊದಲ ಘಟನೆ ಇದಾಗಿದೆ. 

Scroll to load tweet…

ಕಳೆದ ವರ್ಷ ಓಲಾ ಇಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿ ಸದ್ದು ಮಾಡಿದ್ದ ಓಲಾ (Ola), ನಂತರ ತನ್ನ ಗ್ರಾಹಕರ ಚಾರ್ಜಿಂಗ್ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಮುಂದಾಗಿತ್ತು. ಓಲಾ ಇಲೆಕ್ಟ್ರಿಕ್, ಹೈಪರ್ ಚಾರ್ಜರ್ (hyper charger) ಎಂಬ ಚಾರ್ಜಿಂಗ್ ಸಂಪರ್ಕವನ್ನು ದೇಶಾದ್ಯಂತ ಅಳವಡಿಸಲು ಮುಂದಾಗಿತ್ತು. ಓಲಾ ಎಲೆಕ್ಟ್ರಿಕ್ ಕಳೆದ ವರ್ಷ ಎಸ್1 ಹಾಗೂ ಎಸ್1 ಪ್ರೋ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿತ್ತು. 

Electric Scooter: 1,999 ರೂಗೆ ಬುಕ್ ಮಾಡಿ ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಒಕಾಯ!

ಹೈಪರ್ ಚಾರ್ಜರ್ ಅಳವಡಿಕೆ ಕುರಿತು ಓಲಾ ಸಿಇಒ ಹಾಗೂ ಸಹ-ಸಂಸ್ಥಾಪಕ ಭವೀಶ್ ಅಗರ್ವಾಲ್ (Bhaveesh agarwal) ಟ್ವೀಟ್ ಮಾಡಿದ್ದು, ಮುಂದಿನ ದಿನಗಳಲ್ಲಿ ಚಾರ್ಜಿಂಗ್ ಸೌಕರ್ಯಗಳನ್ನು ದೇಶಾದ್ಯಂತ ಹೆಚ್ಚಿಸುವುದಾಗಿ ಮಾಹಿತಿ ನೀಡಿದ್ದರು. ತಮ್ಮ ಟ್ವೀಟ್‌ನಲ್ಲಿ ಅವರು, ಈ ವರ್ಷದ ಅಂತ್ಯದೊಳಗೆ ದೇಶಾದ್ಯಂತ ಇಂತಹ 4 ಸಾವಿರಕ್ಕೂ ಹೆಚ್ಚು ಚಾರ್ಜರ್ಗಳನ್ನು ಅಳವಡಿಸಲು ಓಲಾ ಎಲೆಕ್ಟ್ರಿಕ್ ಗುರಿ ಹೊಂದಿದೆ ಎಂದು ಘೋಷಣೆ ಮಾಡಿದ್ದರು. ಸದ್ಯ ಹೈಪರ್ ಚಾರ್ಜರ್‌ಗಳನ್ನು ಬಿಪಿಸಿಎಲ್ಪೆ ಟ್ರೋಲ್ ಪಂಪ್‌ಗಳು, ಹಾಗೂ ವಸತಿ ಸಂಕೀರ್ಣಗಳಲ್ಲಿ ಕೂಡ ಹೈಪರ್‌ ಚಾರ್ಜರ್‌ಗಳನ್ನು ಅಳವಡಿಕೆ ಮಾಡಲಾಗುತ್ತಿದೆ. ಇದು ತಮ್ಮ ಎಸ್1 (S1) ಹಾಗೂ ಎಸ್1 ಪ್ರೋ (S1 pro) ಗ್ರಾಹಕರಿಗೆ ಚಾರ್ಜಿಂಗ್ ಸಮಸ್ಯೆ ಪರಿಹಾರಕ್ಕೆ ನೆರವಾಗುತ್ತದೆ ಎಂದಿದ್ದಾರೆ.

Ola Hypercharger ಚಾರ್ಜಿಂಗ್ ಚಿಂತೆ ಬಿಡಿ, ಇ-ಸ್ಕೂಟರ್ಗಳಿಗೆ ಹೈಪರ್ ಚಾರ್ಜರ್ ಅಳವಡಿಕೆ ಆರಂಭಿಸಿದ ಓಲಾ!