Asianet Suvarna News Asianet Suvarna News

Electric Scooter: 1,999 ರೂಗೆ ಬುಕ್ ಮಾಡಿ ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಒಕಾಯ!

  • Faast ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಒಕಾಯ
  • 4.4 kW ಲೀಥಿಯಂ ಬ್ಯಾಟರಿ ಹಾಗೂ ಹಲವು ವಿಶೇಷತೆ
  • ಒಂದು ಬಾರಿ ಚಾರ್ಜ್ ಮಾಡಿದರೆ 150-200 ಕಿ.ಮೀ ಮೈಲೇಜ್
Okaya Electric laucnh Faast e scooter in India with rs 89999 bookings open ckm
Author
Bengaluru, First Published Dec 24, 2021, 7:22 PM IST

ನವದೆಹಲಿ(ಡಿ.24):  ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್(Electric Scooter) ಒಂದರ ಮೇಲೊಂದರಂತೆ ಬಿಡುಗಡೆಯಾಗುತ್ತಿದೆ. ಹೊಸ ಹೊಸ ಫೀಚರ್ಸ್, ಗರಿಷ್ಠ ಮೈಲೇಜ್, ಕೈಗೆಟುಕುವ ದರದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗುತ್ತಿದೆ. ವಿಶ್ವದಲ್ಲೇ ಭಾರತ(India) ಇದೀಗ ಎಲೆಕ್ಟ್ರಿಕ್ ಸ್ಕೂಟರ್ ಹಬ್ ಆಗಿ ಮಾರ್ಪಟ್ಟಿದೆ. ಇದೀಗ ಒಕಾಯ ಎಲೆಕ್ಟ್ರಿಕ್ ವೆಹಿಕಲ್ಸ್(Okaya Electric) ನೂತನ ಫಾಸ್ಟ್ ಸ್ಕೂಟರ್ ಬಿಡುಗಡೆ ಮಾಡಿದೆ. ವಿಶೇಷ ಅಂದರೆ ಇದು ಹೈ ಸ್ಪೀಡ್ ಸ್ಕೂಟರ್ ಎಂದು ಕಂಪನಿ ಹೇಳಿದೆ.

ಒಕಾಯ ಬಿಡುಗಡೆ ಮಾಡಿದ ನೂತನ ಸ್ಕೂಟರ್ Faast ಬೆಲೆ 89,999 ರೂಪಾಯಿ(ಎಕ್ಸ್ ಶೋ ರೂಂ). ಒಕಾಯ ವೆಬ್‌ಸೈಟ್ ಮೂಲಕ ಅಥವಾ ಡೀಲರ್‌ಶಿಪ್ ಬಳಿ ಕೇವಲ 1,999 ರೂಪಾಯಿ ನೀಡಿ ನೂತನ ಸ್ಕೂಟರ್ ಬುಕ್ ಮಾಡಬಹುದು(Bookings Open). ಒಂದು ಬಾರಿ ಚಾರ್ಜ್ ಮಾಡಿದರೆ 150 ರಿಂದ 200 ಕಿಲೋಮೀಟರ್ ಮೈಲೇಜ್ ನೀಡಲಿದೆ ಎಂದು ಕಂಪನಿ ಹೇಳಿದೆ.

Ola Electric Scooter ಮುಂದಿನ ವಾರದಿಂದ ಹೊಸ ನಗರ, ಪಟ್ಟಣದಲ್ಲಿ ಸ್ಕೂಟರ್ ಲಭ್ಯ!

ಒಕಾಯ ಕಂಪನಿಯ Faast ಎಲೆಕ್ಟ್ರಿಕ್ ಸ್ಕೂಟರ್ ವೇಗ 100 ಕಿ.ಮೀ ಪ್ರತಿ ಗಂಟೆಗೆ. 4.4 kW ಲಿಥಿಯಂ ಫಾಸ್ಫೇಟ್ ಬ್ಯಾಟರಿ ಹೊಂದಿದೆ. LED ಲೈಟ್ಸ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಡೇಟೈಮ್ ರನ್ನಿಂಗ್ ಲೈಟ್ಸ್, ಕಾಂಬಿ ಬ್ರೇಕಿಂಗ್ ಸಿಸ್ಟಮ್ ಹೊಂದಿದೆ. ಈ ಮೂಲಕ ಭಾರತವನ್ನು ಶೇಕಡಾ 100 ರಷ್ಟು ಎಲೆಕ್ಟ್ರಿಕ್ ವಾಹನ ಉತ್ಪಾದನೆಯತ್ತ ಸಾಗಲು ನೆರವಾಗಲಿದೆ.

ಪೆಟ್ರೋಲ್ ಎಂಜಿನ್ ಸ್ಕೂಟರ್ ರೀತಿಯ ಪರ್ಫಾಮೆನ್ಸ್ ಒಕಾಯ Faast ಎಲೆಕ್ಟ್ರಿಕ್ ಸ್ಕೂಟರ್ ನೀಡಲಿದೆ. ಎಕ್ಸಲರೇಟ್ ಹಾಗೂ ಟಾರ್ಕ್, ಉತ್ಪಾದನೆ ಇಂಧನ ಸ್ಕೂಟರ್ ಎಂಜಿನ್ ರೀತಿಯಲ್ಲೇ ಇರಲಿದೆ. ಈ ಮೂಲಕ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಹೊಸತನ ಪರಿಚಯಿಸಿದೆ. ಇದರಿಂದ ಹಲವರಿಗೆ ಅನುಭವವಾಗಿರುವ ಪವರ್ ಕೊರತೆಯನ್ನು ಈ ಎಲೆಕ್ಟ್ರಿಕ್ ಸ್ಕೂಟರ್ ನೀಗಿಸಲಿದೆ. ಇದೇ ಕಾರಣಕ್ಕೆ ಇದು ಹೈಸ್ಪೀಡ್ ಪರ್ಫಾಮೆನ್ಸ್ ಸ್ಕೂಟರ್ ಎಂದು ಕಂಪನಿ ಹೇಳಿದೆ.

Okinawa Electric Scooter sales ಇವಿ ಖರೀದಿಗೆ ಮುಗಿಬಿದ್ದ ಜನ, 2021ರಲ್ಲಿ ದಾಖಲೆ ಬರೆದ ಒಕಿನಾವಾ!

ಮತ್ತೊಂದು ವಿಶೇಷ ಅಂದರೆ ಒಕಾಯ ಎಲೆಕ್ಟ್ರಿಕ್ ಸ್ಕೂಟರ್ ಸಂಪೂರ್ಣವಾಗಿ ಭಾರತದಲ್ಲೇ ತಯಾರಾದ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ವಿದೇಶದಿಂದ ಆಮದು ಮಾಡಿಕೊಂಡು ಇಲ್ಲಿ ಜೋಡಣೆ ಮಾಡಿಲ್ಲ.  ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಹೈಸ್ಪೀಡ್ ಸ್ಕೂಟರ್ ಪರ್ಫಾಮೆನ್ಸ್ ನೀಡಬಲ್ಲ ಸ್ಕೂಟರ್ ಇದಾಗಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಪೆಟ್ರೋಲ್ ಸ್ಕೂಟರ್‌ಗೆ ಇರುವಂತ ಬೇಡಿಕೆ ಒಕಾಯ ಸ್ಕೂಟರ್‌ಗೆ ಇರಲಿದೆ ಅನ್ನೋ ವಿಶ್ವಾಸವಿದೆ ಎಂದು ಒಕಾಯ ಪವರ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಅಂಶುಲ್ ಗುಪ್ತಾ ಹೇಳಿದ್ದಾರೆ. 

ಒಕಾಯಾ ಈಗಾಗಲೇ ಫಾಸ್ಟೆಸ್ಟ್ ಚಾರ್ಚಿಂಗ್ ಸ್ಟೇಶನ್ ಅಳವಡಿಸಿ ಸೈ ಎನಿಸಿಕೊಂಡಿದೆ. ಎಲೆಕ್ಟ್ರಿಕ್ ಬ್ಯಾಟರಿ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಒಕಾಯಾ ಇದೀಗ ಅತ್ಯುತ್ತಮ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಭಾರತದಲ್ಲಿ 225 ಡೀಲರ್‌ಶಿಪ್ ತೆರೆಯಲು ಒಕಾಯ ಮುಂದಾಗಿದೆ. ಮುಂದಿನ 6 ತಿಂಗಳಲ್ಲಿ ಭಾರತದ ಎಲೆಕ್ಟ್ರಿಕ್ ಮಾರುಕಟ್ಟೆ ಆಕ್ರಮಿಸಿಕೊಳ್ಳಲ ಒಕಾಯ ಪ್ಲಾನ್ ಮಾಡಿದೆ.

Bounce Infinity e1 ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ವಿನಿಮಯ ಮತ್ತಷ್ಟು ಸುಲಭ, ನೋಬ್ರೋಕರ್ ಜೊತೆ ಒಪ್ಪಂದ!

ಇದರ ಜೊತೆಗೆ 2 ಕಿಲೋವ್ಯಾಟ್ ಹಾಗೂ 3 ಕಿಲೋವ್ಯಾಟ್ ಬ್ಯಾಟರಿ ಸಾಮರ್ಥ್ಯ ಸ್ಕೂಟರ್ ಅಭಿವೃದ್ಧಿಪಡಿಸುತ್ತಿದೆ. ಇದರ ಗರಿಷ್ಠ ವೇಗ 60 ರಿಂದ 80 ಕಿ.ಮೀ ಪ್ರತಿ ಗಂಟೆಗೆ. ಇನ್ನು ಒಂದು ಬಾರಿ ಚಾರ್ಜ್ ಮಾಡಿದರೆ 100 ಕಿ.ಮೀ ಮೈಲೇಜ್ ರೇಂಜ್ ಸ್ಕೂಟರ್ ಇದಾಗಿರಲಿದೆ. ಇದರ ವಿಶೇಷತೆ ಅಂದರೆ ಕೈಗೆಟುಕುವ ದರದಲ್ಲಿ ಇ ಸ್ಕೂಟರ್ ಬಿಡುಗಡೆಯಾಗಲಿದೆ. ಸದ್ಯ ಬಿಡುಮಾಡಿರುವ ಫಾಸ್ಟ್ ಸ್ಕೂಟರ್ 89,999 ರೂಪಾಯಿ. ಹೀಗಾಗಿ ಅಭಿವೃದ್ಧಿ ಪಡಿಸಲಾಗುತ್ತಿರುವ ಹೊಸ ಸ್ಕೂಟರ್ ಮತ್ತಷ್ಟು ಕಡಿಮೆ ಬೆಲೆಗೆ ಲಭ್ಯವಾಗಲಿದೆ ಎಂದು ಒಕಾಯ ಕಂಪನಿ ಹೇಳಿದೆ.

Follow Us:
Download App:
  • android
  • ios