ವಿಜಯವಾಡದ ಪ್ರವಾಸೋದ್ಯಮ ಕಚೇರಿಯಲ್ಲಿ ಹಿರಿಯ ಅಧಿಕಾರಿಯೊಬ್ಬರು ಕಚೇರಿ ಸಮಯದ ನಂತರ ವಿವಿಧ ಮಹಿಳೆಯರೊಂದಿಗೆ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಧಿಕಾರಿಯ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ಕೇಳಿಬಂದಿದೆ. ದೂರುಗಳ ನಂತರ ಭದ್ರತಾ ಸಿಬ್ಬಂದಿ ಸಿಸಿಟಿವಿ ಪರಿಶೀಲಿಸಿ ಘಟನೆ ಬಯಲಿಗೆಳೆದಿದ್ದಾರೆ.
ಸರ್ಕಾರಿ ಕಚೇರಿಗಳು, ಸಂಸ್ಥೆಗಳಲ್ಲಿ ಶಿಸ್ತಿನಿಂದ ಕರ್ತವ್ಯ ನಿರ್ವಹಿಸುವವರು ಅತಿ ವಿರಳ ಎನ್ನುವ ಮಾತು ಬಹಳ ಹಿಂದಿನಿಂದಲೂ ಇದೆ. ಕೆಲವೊಂದು ಸರ್ಕಾರಿ ಕಚೇರಿಗಳಿಗೆ ಕರ್ತವ್ಯ ನಿಮಿತ್ತ ಹೋದಾಗ ಅಲ್ಲಿಯ ಕೆಲವು ಸಿಬ್ಬಂದಿ ನಡೆದುಕೊಳ್ಳುವ ರೀತಿ, ಗ್ರಾಹಕರು ಬಂದಾಗ ತೋರುವ ನಿರ್ಲಕ್ಷ್ಯ, ಉದಾಸೀನತೆ, ಕೆಲಸ ಮಾಡದೇ ಆಲಸ್ಯದಿಂದ ಇರುವ ಪರಿ, ಹರಟೆಯಲ್ಲಿಯೇ ಕಾಲ ಕಳೆಯುವ ಪರಿ... ಇವೆಲ್ಲವುಗಳಿಂದ ಕಿರಿಕಿರಿ ಅನುಭವಿಸುವ ಜನರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುವುದನ್ನು ನೋಡಿದರೆ ಗೊತ್ತಾಗುತ್ತದೆ. ತಮಗೆ ಕೈತುಂಬಾ ಸರ್ಕಾರ ಸಂಬಳ ಕೊಡುವುದು ಗ್ರಾಹಕರಿಗೆ ಸೇವೆ ಒದಗಿಸಲು ಎನ್ನುವುದನ್ನೇ ಮರೆತು, ಯಾಕಾದರೂ ಬಂದರೋ ಎನ್ನುವ ರೀತಿಯಲ್ಲಿ ನಡೆದುಕೊಳ್ಳುವುದು ಕೆಲವು ಸರ್ಕಾರಿ ಕಚೇರಿಗಳಲ್ಲಿ, ಬ್ಯಾಂಕ್ ಇತ್ಯಾದಿಗಳಲ್ಲಿ ಬಹುತೇಕ ಮಂದಿಯ ಗಮನಕ್ಕೆ ಬಂದಿರಲಿಕ್ಕೆ ಸಾಕು. ಇದೇ ಕಾರಣಕ್ಕೆ ಕೆಲವೊಮ್ಮೆ ಸರ್ಕಾರಿ ಸಂಸ್ಥೆಗಳನ್ನು ಖಾಸಗಿಯವರಿಗೆ ವಹಿಸಿಕೊಡಬೇಕು ಎಂದು ಜನರೇ ಆಡಿಕೊಳ್ಳುವುದು ಇದೆ!
ಆದರೆ ಇವೆಲ್ಲವನ್ನೂ ಮೀರಿ ಇದೀಗ ಸರ್ಕಾರಿ ಕಚೇರಿಯಲ್ಲಿನ ಲವ್ವಿಡವ್ವಿಯೊಂದು ಅಲ್ಲಿಯ ಸಿಸಿಟಿವಿಯಲ್ಲಿ ಬಯಲಾಗಿದ್ದು, ಇದೀಗ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಭಾರಿ ಹಲ್ಚಲ್ ಸೃಷ್ಟಿಸುತ್ತಿದೆ. ಕಚೇರಿಯೊಂದಲ್ಲಿ ಡ್ಯೂಟಿ ಸಮಯ ಮುಗಿದು ಸಂಜೆಯ ವೇಳೆ ಬಾಗಿಲು ಹಾಕಿದ ಬಳಿಕ ಅಲ್ಲಿಗೆ ಬೈಕ್‌ನಲ್ಲಿ ಬೇರೆ ಬೇರೆ ಯುವತಿಯರ ಜೊತೆ ಬರುವ ಅಧಿಕಾರಿಯೊಬ್ಬ ತನ್ನಾಟ ಶುರು ಮಾಡಿಕೊಳ್ಳುವುದು ಸಿಸಿಟಿವಿಯಲ್ಲಿ ಸೆರೆಯಾಗಿಬಿಟ್ಟಿದೆ. ಅಲ್ಲೊಂದು ಸಿಸಿಟಿವಿ ಇದೆ ಎನ್ನುವುದನ್ನೂ ಮರೆತು, ಈ ಅಧಿಕಾರಿ ಹೀಗೆಲ್ಲಾ ಮಾಡಿದ್ದಾರೆ!
ಮದ್ವೆ ಹೆಸ್ರಲ್ಲಿ 12 ಮಂದಿಗೆ ಟೋಪಿ ಹಾಕಿದ 21ರ ಖತರ್ನಾಕ್ ಲೇಡಿ ಭಯಾನಕ ಸ್ಟೋರಿ ಕೇಳಿ!
ಆಂಧ್ರಪ್ರದೇಶದ ವಿಜಯವಾಡದಲ್ಲಿರುವ ಪ್ರವಾಸೋದ್ಯಮ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಉನ್ನತ ಹುದ್ದೆಯಲ್ಲಿರುವ ಒಬ್ಬ ಅಧಿಕಾರಿ ಕೆಲಸದ ಸಮಯ ಮುಗಿದ ನಂತರ ಮತ್ತು ಕಚೇರಿಗೆ ಬೀಗ ಹಾಕಿದ ನಂತರ ತಮ್ಮ ಬೈಕ್‌ನಲ್ಲಿ ಮಹಿಳೆಯೊಬ್ಬಳ ಜೊತೆ ಕಚೇರಿಗೆ ಬಂದು ಕೆಲವು ಗಂಟೆಗಳ ನಂತರ ಹಿಂತಿರುಗುವುದು ದಾಖಲಾಗಿದೆ. ಅಲ್ಲಿಯ ಸಿಸಿಟಿವಿಯಲ್ಲಿಯೂ ಇವರ ಆಟ ದಾಖಲಾಗಿದೆ. ಬೆಕ್ಕು ಕಣ್ಣುಮುಚ್ಚು ಹಾಲು ಕುಡಿದರೆ.... ಎನ್ನುವ ಗಾದೆಯಂತೆ, ಇವರ ಆಟವೂ ಬೇರೆಯವರಿಗೆ ತಿಳಿದುಬಿಟ್ಟಿದೆ.
ಪದೇ ಪದೇ ದೂರುಗಳು ಬಂದ ನಂತರ ಭದ್ರತಾ ಅಧಿಕಾರಿಗಳು ಮೊದಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಎಲ್ಲವೂ ಬಟಾಬಯಲಾಗಿದೆ. ಪ್ರವಾಸೋದ್ಯಮ ಅಧಿಕಾರಿ ಹಲವು ದಿನಗಳ ಕಾಲ ಕಚೇರಿ ಸಮಯ ಮುಗಿದ ನಂತರ ಹಲವಾರು ಮಹಿಳೆಯರೊಂದಿಗೆ ತನ್ನ ಬೈಕ್‌ನಲ್ಲಿ ಕಚೇರಿಗೆ ಬರುತ್ತಿರುವುದು ಮತ್ತು ನಂತರ ಕೆಲವು ಗಂಟೆಗಳ ನಂತರ ಹಿಂತಿರುಗುತ್ತಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡುಬಂದಿದೆ. ಏತನ್ಮಧ್ಯೆ, ಈ ಹಿರಿಯ ಅಧಿಕಾರಿಯ ಹೆಸರನ್ನು ಬಿಡುಗಡೆ ಮಾಡಲಾಗಿಲ್ಲ. ಕಚೇರಿ ಸಮಯ ಮುಗಿದ ನಂತರ, ಸಂಜೆ 7 ಗಂಟೆಗೆ ಅಧಿಕಾರಿ ಮಹಿಳೆಯರೊಂದಿಗೆ ಬೈಕ್‌ನಲ್ಲಿ ಕಚೇರಿಗೆ ಬಂದರು. ಈ ವಿಷಯ ಕಚೇರಿಯಲ್ಲಿ ಚರ್ಚೆಯಾಯಿತು ಮತ್ತು ನಂತರ ಭದ್ರತಾ ಅಧಿಕಾರಿಗಳು ಸಿಸಿಟಿವಿಯನ್ನು ಪರಿಶೀಲಿಸಿದರು. ಇದಾದ ನಂತರ, ಕಚೇರಿಯ ಹಿರಿಯ ಅಧಿಕಾರಿಗಳು ಸಹ ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಿದರು ಎಂದು ಹೇಳಲಾಗಿದೆ. ಸರ್ಕಾರಿ ಕಚೇರಿಯಲ್ಲಿ ಅನೈತಿಕ ವರ್ತನೆ ತೋರಿದ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಮಾಧ್ಯಮಗಳಲ್ಲಿ ಬೇಡಿಕೆ ವ್ಯಕ್ತವಾಗಿತ್ತು.
ರೇಷ್ಮಾ ಆಂಟಿಗೆ ಪತಿಯಿಂದ ಹಲ್ಲೆ? ಅಪ್ಪನಿಗೂ ಚೂರಿಯಿಂದ ಇರಿತ: ವಿಡಿಯೋ ವೈರಲ್


