Chikkamagaluru ಶ್ರೀಗಂಧ ಮರಗಳಿಗೆ ವೈಜ್ಞಾನಿಕ ಪರಿಹಾರಕ್ಕೆ ವಾರದ ಗಡುವು

ಶ್ರೀಗಂಧದ ಮರಗಳಿಗೆ ವೈಜ್ಞಾನಿಕ ಪರಿಹಾರ

ರೈತರಿಗೆ ಇದರಿಂದ ದೊಡ್ಡ ಅನ್ಯಾಯ

ಸ್ಪಂದಿಸದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ: ರೈತರ ಎಚ್ಚರಿಕೆ
 

chikkamagaluru news a week deadline for scientific relief for sandalwood trees san

ತರೀಕೆರೆ (ಮಾ.9) ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘ ಇಂದಿರಾ ನಗರ ಬೆಂಗಳೂರು ವತಿಯಿಂದ ವಿವಿಧ ಯೋಜನೆಗಳಡಿ ಭೂಸ್ವಾಧೀನ ಮಾಡಿದ ಪ್ರಕರಣಗಳಲ್ಲಿ ಶ್ರೀಗಂಧ ಮರಗಳಿಗೆ ವೈಜ್ಞಾನಿಕವಾಗಿ ಪರಿಹಾರ ಮೊತ್ತ ನಿಗದಿಪಡಿಸುವ ಕುರಿತು ಶಾಸಕ ಡಿ.ಎಸ್‌.ಸುರೇಶ್‌ (MLA DS Suresh) ಅವರಿಗೆ ಮನವಿ ಸಲ್ಲಿಸಲಾಯಿತು. ಅಲ್ಲದೇ, ಸದರಿ ಸಮಸ್ಯೆಯನ್ನು ಸರ್ಕಾರ ಮಧ್ಯೆ ಪ್ರವೇಶಿಸಿ 7 ದಿನಗಳೊಳಗೆ ಬಗೆಹರಿಸದ ಪಕ್ಷದಲ್ಲಿ ರಾಜ್ಯಾದ್ಯಂತ ತೀವ್ರ ಹೋರಾಟ (Protest) ಮಾಡಲಾಗುವುದು ಎಂದು ಎಚ್ಚರಿಸಿದರು.

ರಾಷ್ಟ್ರೀಯ ಹೆದ್ದಾರಿ- 206ರಲ್ಲಿ ಚಿಕ್ಕಮಗಳೂರು (Chikkamagaluru) ಜಿಲ್ಲೆ ತರೀಕೆರೆ ಪಟ್ಟಣದ ಬೈಪಾಸ್‌ ರಸ್ತೆ ನಿರ್ಮಾಣ ಕಾಮಗಾರಿಗಾಗಿ ಹಳೆಯೂರು ಗ್ರಾಮದಲ್ಲಿ ಭೂಸ್ವಾಧೀನ ಮಾಡಿರುವ ಟಿ.ಎನ್‌.ವಿಶುಕುಮಾರ್‌, ಪ್ರತಾಪ್‌ ಕುಮಾರ್‌ ಮತ್ತು ಇತರೇ 20 ರೈತರ ಜಮೀನುಗಳಲ್ಲಿ ಕಳೆದ 10 ವರ್ಷಗಲಿಂದ ಬೆಳೆಸಿರುವ ಶ್ರೀಗಂಧದ ಮರಗಳಿಗೆ (Sandalwood Trees ) ಕರ್ನಾಟಕ ಸಾಬೂನು ಮತ್ತು ಮಾರ್ಜಕ ಸಂಸ್ಥೆ ಮೌಲ್ಯಮಾಪನ (valuation) ಮಾಡಿರುವಂತೆ ಪರಿಹಾರಧನ ನೀಡುವಂತೆ ಆದೇಶವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI), ಅನಗತ್ಯವಾಗಿ ಅರಣ್ಯ ಇಲಾಖೆಯಿಂದ (Forest Dept) ಶ್ರೀಗಂಧ ಮರಗಳಿಗೆ ವಿವಾದಾತ್ಮಕ ಅಂಶಗಳಿಂದ ವಿವಿಧ ನ್ಯೂನತೆಗಳಿಂದ ಕೂಡಿರುವ ಅವೈಜ್ಞಾನಿಕವಾಗಿ ದರ ನಿಗದಿಪಡಿಸಿಕೊಂಡಿರುವ ಆದೇಶ ಜಾರಿಗೊಳಿಸದಿರಲು ಕೋರಿದೆ. ಇದು ಸಂತ್ರಸ್ಥ ರೈತರಿಗೆ ಮಾಡಿದ ಘೋರ ಅನ್ಯಾಯವಾಗಿದೆ. ಕಾನೂನು ಮತ್ತು ಪ್ರಾಕೃತಿಕ ನ್ಯಾಯಕ್ಕೆ ವಿರುದ್ಧವಾದ ಕ್ರಮವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಒಂದು ಶ್ರೀಗಂಧದ ಮರಕ್ಕೆ 2,44,000 ರು. ನೀಡುವುದರ ಬದಲಾಗಿ ಅರಣ್ಯ ಇಲಾಖೆಯಿಂದ 1,177 ರು. ಮೌಲ್ಯ ನಿಗದಿಪಡಿಸಲಾಗಿದೆ. ಇದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಅರಣ್ಯ ಇಲಾಖೆ ಸಂತ್ರಸ್ಥ ರೈತರಿಗೆ ಮಾಡಿರುವ ಮರಣ ಶಾಸನವಾಗಿದೆ. ಆದ್ದರಿಂದ ಈ ಅನ್ಯಾಯವನ್ನು ವಿರೋಧಿಸಿ ಸಂತ್ರಸ್ಥ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ ಆದೇಶದಂತೆ ಸಂತ್ರಸ್ಥ ರೈತರಿಗೆ ಸರ್ಕಾರ ಯೋಗ್ಯ ಪರಿಹಾರ ನೀಡಬೇಕು ಎಂದರು. ಮನವಿ ಸಲ್ಲಿಸುವ ಸಂದರ್ಭ ಶ್ರೀಗಂಧ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎನ್‌.ವಿಶುಕುಮಾರ್‌, ಮಾಜಿ ಪುರಸಭಾಧ್ಯಕ್ಷೆ ಅಶ್ವಿನಿ ರಘು, ಪಲ್ಲವಿ, ಮಲ್ಲಿಕಾರ್ಜುನ್‌, ತಿಪ್ಪೇಶಪ್ಪ ಮತ್ತಿತರರು ಭಾಗವಹಿಸಿದ್ದರು.

Chikkamagaluru: ಭರವಸೆ ಮರೆತ ಸಚಿವರು, ಮನೆ ಕಳೆದುಕೊಂಡವರಿಗೆ ಮೂರು ವರ್ಷವಾದ್ರೂ ಮನೆ ಇಲ್ಲ!
ಮಹಿಳಾ ದಿನ ಆಚರಣೆಗಷ್ಟೇ ಸೀಮಿತ ಸಲ್ಲ
ತರೀಕೆರೆ :
ಮಹಿಳೆಯರ ಅಭಿವೃದ್ಧಿ ಮಾತು ಮಹಿಳಾ ದಿನಾಚರಣೆಗೆ (Womens Day) ಮಾತ್ರ ಮೀಸಲಾಗಬಾರದು. ಮಹಿಳೆಯರು ಅಭಿವೃದ್ಧಿಯಾಗಲು ಆರ್ಥಿಕವಾಗಿ ಸಬಲರಾಗಬೇಕು ಎಂದು ಹಣಕಾಸು ಸಲಹೆಗಾರ ಶಿವಕುಮಾರ್‌ ಅಭಿಪ್ರಾಯಪಟ್ಟರು. ಮಂಗಳವಾರ ಜನನಿ ವೀರಶೈವ ಮಹಿಳಾ ಸಂಘ ವತಿಯಿಂದ ಅಜ್ಜಂಪುರ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಅಂತರ ರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ರಾಜ್ಯ ಸರ್ಕಾರದ ಅಧೀನ ಬ್ಯಾಂಕುಗಳಲ್ಲಿ ನಿಮ್ಮ ದುಡಿಮೆಯ ಉಳಿತಾಯವನ್ನು ತೊಡಗಿಸಿ, ಸಾಮಾಜಿಕ ಭದ್ರತಾ ಯೋಜನೆ, ಜೀವನ ಜ್ಯೋತಿ ವಿಮಾ ಯೋಜನೆ, ಅಟಲ್‌ ಪೆನ್ಷನ್‌ ಯೋಜನೆ ಮುಂತಾದ ಉಪಯುಕ್ತ ಯೋಜನೆಗಳ ಪ್ರಯೋಜನ ಪಡೆಯಿರಿ, ಅವುಗಳಲ್ಲಿ ಬಂಡವಾಳ ಕಡಿಮೆ ಇರುತ್ತದೆ ಎಂದು ಸಲಹೆ ನೀಡಿದರು.

Chikkamagaluru: ಕಾಡಾನೆ ಹಾವಳಿ ತಡೆಯಲು ರೈತರ ಹೊಸ ಪ್ರಯೋಗ ಸಕ್ಸಸ್..!
ಹಿರಿಯ ಪತ್ರಕರ್ತ ಮಲ್ಲಿಕಾರ್ಜುನಸ್ವಾಮಿ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಮಹಿಳೆಯರಿಗೆ ಅದ್ಯತೆ ಹಾಗೂ ಗೌರವ ಮೊದಲಿನಿಂದಲೂ ಇದೆ. ಹಾಗಾಗಿ ‘ಮಾತೃದೇವೋಭವ’ ಎಂದು ನಮ್ಮ ಪೂರ್ವಿಕರು ಸ್ತ್ರೀಯರನ್ನು ಪವಿತ್ರ ಭಾವದಿಂದ ಕಾಣುತ್ತಿದ್ದರು. ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲಿ ಮುನ್ನೆಲೆಗೆ ಬರುತ್ತಿದ್ದಾರೆ ಎಂದು ಅವರು ಹೇಳಿದರು. ಕಾರ್ಯದರ್ಶಿ ಕವಿತಾ ಕುಮಾರ್‌, ಲೇಖಕ ಅಪೂರ್ವ ಮಾತನಾಡಿದರು. ಮಹಿಳಾ ಸಂಘದ ಅಧ್ಯಕ್ಷೆ ರೇಣುಕಮ್ಮ ಬಾಬು ಅಧ್ಯಕ್ಷತೆ ವಹಿಸಿ, ಎರಡು ವರ್ಷಗಳ ಹಿಂದೆ ಮಹಿಳಾ ದಿನಾಚರಣೆಯಂದೇ ನಮ್ಮ ಸಂಘ ಪ್ರಾರಂಭವಾಯಿತು. ಹಾಗಾಗಿ ಈ ದಿನ ನಮಗೆ ಶುಭ ದಿನವಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವೀರಭದ್ರೇಶ್ವರ ಸಮುದಾಯ ಭವನದ ಸುರೇಶ್‌ (ಈರಣ್ಣ) ಶಶಿಕಲಾ ಶಿವಕುಮಾರ್‌ ಅವರು ಮಾತನಾಡಿದರು. ಶೀಲಾ ಹರೀಶ್‌ ಸ್ವಾಗತಿಸಿದರು. ಲತಾ ಕುಮಾರ್‌, ರಂಜಿತ ಪ್ರಾರ್ಥಿಸಿದರು. ಜ್ಯೋತಿ ವಂದಿಸಿದರು.

Latest Videos
Follow Us:
Download App:
  • android
  • ios