Asianet Suvarna News Asianet Suvarna News

ಪುರಿ ಜಗನ್ನಾಥನ ಭಕ್ತಾದಿಗಳು ಗಮನಿಸಿ, ಈ ನಿಯಮ ಪಾಲಿಸದೇ ಇದ್ರೆ ದರ್ಶನ ಸಾಧ್ಯವಾಗೋದಿಲ್ಲ!

ಹಿಂದೂಗಳ ಅತ್ಯಂತ ಪವಿತ್ರ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಒಡಿಶಾದ ಪುರಿಯ ಜಗನ್ನಾಥ ದೇವಾಲಯದ ಪಾವಿತ್ರ್ಯತೆ ಕಾಪಾಡುವ ಸಲುವಾಗಿ ಆಡಳಿತ ಮಂಡಳಿಯು 2024ರ ಜನವರಿ 1 ರಿಂದಲೇ ಹೊಸ ನೀತಿಯನ್ನು ಜಾರಿ ಮಾಡಿದೆ. 
 

Odisha Puri Jagannath Temple enforces dress code mandatory for devotees san
Author
First Published Jan 2, 2024, 1:22 PM IST

ಸಿಂಧು ಕೆ ಟಿ, ಕುವೆಂಪು ವಿಶ್ವವಿದ್ಯಾಲಯ

ಭುವನೇಶ್ವರ (ಜ.2): ಒಡಿಶಾದ ಪುರಿ ಜಗನ್ನಾಥ ದೇವಾಲಯದಲ್ಲಿ (Puri Jagannath Temple in Odisha) 2024ರ ಜನವರಿ 1ರಿಂದ ಭಕ್ತರಿಗೆ ವಸ್ತ್ರ ಸಂಹಿತೆಯ ನಿಯಮ (Dress code Rule)ವನ್ನು ಜಾರಿಗೆ ತಂದಿದೆ. ಐತಿಹಾಸಿಕ ಶ್ರೀ ಜಗನ್ನಾಥ ದೇವಾಲಯದ (Jagannath Temple) ಪಾವಿತ್ರ್ಯತೆ ಕಾಪಾಡುವ ನಿಟ್ಟಿನಲ್ಲಿ ಭಕ್ತರಿಗೆ ಡ್ರೆಸ್ ಕೋಡ್ (Dress code) ಅನ್ನು ಕಡ್ಡಾಯಗೊಳಿಸಿರುವುದಾಗಿ ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ. ಭಕ್ತರು ಸಭ್ಯ ಬಟ್ಟೆಗಳನ್ನು ಧರಿಸದಿದ್ದರೆ, ದೇವಾಲಯ ಪ್ರವೇಶ ನಿಷೇಧಿಸಲಾಗುವುದು ಎಂದು ತಿಳಿಸಿದೆ. ಹಾಫ್ ಪ್ಯಾಂಟ್, ಶಾರ್ಟ್ಸ್, ಟೋರ್ನ್ ಜೀನ್ಸ್, ಸ್ಕರ್ಟ್ ಮತ್ತು ತೋಳಿಲ್ಲದ ಉಡುಪುಗಳನ್ನು (Dress) ನಿಷೇಧಿಸಲಾಗಿದೆ. ಕೆಲವು ಭಕ್ತರು ದೇವಾಲಯದ ಘನತೆ ಮತ್ತು ಪಾವಿತ್ರ್ಯತೆಯನ್ನು ಕಡೆಗಣಿಸಿ, ಯಾವುದೋ ಪ್ರವಾಸ ಅಥವಾ ಪಾರ್ಟಿಗೆ ಹೋಗುವಂತೆ ದೇವಾಲಯಕ್ಕೆ ಪ್ರವೇಶಿಸಿರುವುದನ್ನು ಶ್ರೀ ಜಗನ್ನಾಥ ದೇವಾಲಯದ ಆಡಳಿತ ಮಂಡಳಿ ಗಮನಿಸಿ ಭಕ್ತರಿಗೆ ವಸ್ತ್ರ ಸಂಹಿತೆ ತರಲು  ಈ ನಿರ್ಧಾರ ಕೈಗೊಂಡಿದೆ. 

ಅಕ್ಟೋಬರ್‌ನಲ್ಲಿ, ಶ್ರೀ ಜಗನ್ನಾಥ ದೇವಾಲಯದ ಆಡಳಿತ ಸಮಿತಿಯು 2024ರ ಜನವರಿ 1 ರಿಂದ ಅನುಚಿತವಾದ ಬಟ್ಟೆಗಳನ್ನು ಧರಿಸಿರುವ ಭಕ್ತರನ್ನು ದೇವಾಲಯಕ್ಕೆ ಅನುಮತಿಸದಿರಲು ನಿರ್ಧರಿಸಿತ್ತು. ಹೊಸ ವರ್ಷದಿಂದ ಜಗನ್ನಾಥ ದೇವಾಲಯಕ್ಕೆ ಬರುವ ಭಕ್ತರಿಗೆ ಅವರು ಧರಿಸಬೇಕಾದ ಉಡುಪುಗಳ ಬಗ್ಗೆ ತಿಳಿಸಲಾಯಿತು. ಪುರುಷರಿಗೆ ಧೋತಿ ಮತ್ತು ಟವೆಲ್  ಧರಿಸಲು ಅವಕಾಶವಿದ್ದರೆ, ಮಹಿಳೆಯರಿಗೆ ಸೀರೆ ಮತ್ತು ಸಲ್ವಾರ್ ಧರಿಸಲು ಅವಕಾಶವಿದೆ.

ಶ್ರೀ ಜಗನ್ನಾಥ ದೇವಾಲಯವು ಹಿಂದೂಗಳ (Hindu)ಅತ್ಯಂತ ಪೂಜ್ಯ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿರುವುದರಿಂದ, ಭಕ್ತರು ಸ್ಥಳದ ಪಾವಿತ್ರ್ಯತೆಯನ್ನು ಗೌರವಿಸಬೇಕು ಎಂದು ಶ್ರೀ ಜಗನ್ನಾಥ ದೇವಾಲಯದ ಆಡಳಿತದ (SJTA) ಮುಖ್ಯ ಆಡಳಿತಾಧಿಕಾರಿ ರಂಜನ್ ದಾಸ್ (Ranjan Das) ಹೇಳಿದರು. ಅಲ್ಲದೆ,  2024 ರ ಹೊಸ ವರ್ಷದಿಂದಲೇ ದೇವಾಲಯದ ಅವರಣದಲ್ಲಿ ಗುಟ್ಕಾ ಮತ್ತು ಪಾನ್‌ ಬಳಕೆ ನಿಷೇಧಿಸಲಾಗಿದೆ. ದೇವಾಲಯದಲ್ಲಿ ಈ ರೀತಿಯ ಅಸಭ್ಯ ವರ್ತನೆಗೆ ಇನ್ನೂ ಮುಂದೆ ಯಾವುದೇ ಅವಕಾಶವಿರುವುದಿಲ್ಲ. ಒಂದು ವೇಳೆ ಭಕ್ತರು ನಿಯಮ ಉಲ್ಲಂಘಿಸಿದರೆ, ದಂಡವನ್ನು ವಿಧಿಸಲಾಗುತ್ತದೆ ಎಂದು  ಆಡಳಿತ ಮಂಡಳಿ ತಿಳಿಸಿದೆ. ಹಾಗೆಯೇ ಪ್ಲಾಸ್ಟಿಕ್ ಮತ್ತು ಪಾಲಿಥಿನ್ ಬಳಕೆಯನ್ನು ಕೂಡ ನಿಷೇಧಿಸಲಾಗಿದೆ. 

2024 ರ ಮೊದಲ ದಿನದಂದು ಪುರುಷ ಭಕ್ತರು ಧೋತಿ ಮತ್ತು ಟವೆಲ್ ಧರಿಸಿ ಕಾಣಿಸಿಕೊಂಡರು ಮತ್ತು ಮಹಿಳೆಯರು ಸೀರೆ ಅಥವಾ ಸಲ್ವಾರ್ ಕಮೀಜ್‌ಗಳನ್ನು ಧರಿಸಿ ದೇವರ ದರ್ಶನ ಪಡೆದರು. ಹೊಸ ವರ್ಷದ ದಿನದಂದು ಹೆಚ್ಚಿನ ಸಂಖ್ಯೆಯ ಭಕ್ತರು ದೇವರ ದರ್ಶನ ಪಡೆಯಲು ಆಗಮಿಸಿದ್ದರು. ವರದಿಗಳ ಪ್ರಕಾರ ಜ.೧ ರ ಮಧ್ಯಾಹ್ನ 12 ಗಂಟೆಯವರೆಗೆ 1,80,000 ಕ್ಕೂ ಹೆಚ್ಚು ಭಕ್ತರು ಜಗನ್ನಾಥ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. 

Puri Jagannath Ratha Yatra: ರಥದ ಹಗ್ಗ ಮುಟ್ಟಿದರೆ ಜಗನ್ನಾಥನ ಪಾದ ಸ್ಪರ್ಶಿಸಿದಂತೆ!

ಕಳೆದ ವರ್ಷದ ಜನವರಿ 1 ಕ್ಕೆ ಹೋಲಿಸಿದರೆ ಸುಮಾರು ಎರಡು ಪಟ್ಟು ಹೆಚ್ಚು ಭಕ್ತರು  ದೇವಾಲಯಕ್ಕೆ ಭೇಟಿ ನೀಡಿದ್ದಾರೆ ಎಂದು ಕೇಂದ್ರ ವ್ಯಾಪ್ತಿಯ ಪೊಲೀಸ್ ಮಹಾನಿರೀಕ್ಷಕ ಆಶಿಶ್ ಕುಮಾರ್ ಸಿಂಗ್ (Ashish Kumar Singh) ತಿಳಿಸಿದ್ದಾರೆ.

ಪುರಿ ಜಗನ್ನಾಥ ದೇಗುಲದ ಮೇಲೊಂದು NO FLYING ZONE, ಇಲ್ಲಿ ಹಕ್ಕಿಯೂ ಹಾರೋಲ್ಲ

Follow Us:
Download App:
  • android
  • ios