Asianet Suvarna News Asianet Suvarna News

ಪುರಿ ಜಗನ್ನಾಥ ದೇಗುಲದ ಮೇಲೊಂದು NO FLYING ZONE, ಇಲ್ಲಿ ಹಕ್ಕಿಯೂ ಹಾರೋಲ್ಲ

ಪುರು ಜಗನ್ನಾಥ ಮಂದಿರವೇ ಕೌತುಕದ ಆಗಲ. ಇಲ್ಲಿ ಒಂದರೆಡು ವಿಶೇಷತೆಗಳು ಇರೋದಲ್ಲ. ಹತ್ತು ಹಲವು ಕೌತುಕಮಯ ವಿಷಯಗಳು ವಿಜ್ಞಾನದ ತರ್ಕಕ್ಕೂ ಸಿಗದು. 

either bird or aeroplane fly on puri jagannath temple of orissa
Author
First Published Jul 3, 2023, 12:30 PM IST

- ರಜನಿ ಎಂ.ಜಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಜಗನ್ನಾಥನನ್ನು  ಗುಂಡೀಚಾ ದೇವಸ್ಥಾನದಲ್ಲಿ ದರ್ಶನ ಮಾಡಿದ್ದೇವಾದರೂ ಆತನ ಮೂಲಸ್ಥಾನ ಶ್ರೀ ಮಂದಿರವನ್ನು ನೋಡದೇ ಬರುವುದು ಹೇಗೆ? ಬಹುದಾ ಯಾತ್ರೆಯ ದಿನ ಅಂದರೆ ಗುಂಡೀಚಾ ದೇವಸ್ಥಾನದಿಂದ ಶ್ರೀಮಂದಿರಕ್ಕೆ ರಥೋತ್ಸವ  ತಿರುಗಿ ಬರುವ ದಿನ ಬೆಳಗ್ಗೆ ಶ್ರೀ ಮಂದಿರಕ್ಕೆ ಭೇಟಿ ನೀಡಿದೆ. ಕಳಿಂಗ ಶೈಲಿಯಲ್ಲಿ ನಿರ್ಮಿತವಾದ ಈ ದೇವಸ್ಥಾನ  ತನ್ನ ಅತ್ಯುನ್ನತ  ರಚನಾ ಕೌಶಲದಿಂದ, ಶಿಲ್ಪ ಕಲೆಯಿಂದ ಜಗತ್ಪಸಿದ್ಧವಾಗಿದೆ. ಬೃಹತ್​​ ಆಲದ ಮರದ ಕೆಳಗೆ ಇರುವ ವಟಗಣೇಶನ್ನು ದರ್ಶನ ಮಾಡಿಕೊಂಡು ಮುಖ್ಯ ದೇಗುಲ ಪ್ರವೇಶಿಸಿದೆ. ಆದರೆ ರಥಯಾತ್ರೆಯ ಪ್ರಯುಕ್ತ ಅಲ್ಲಿ ಜಗನ್ನಾಥ, ಬಲಭದ್ರ, ಸುಭದ್ರಾ ಇರಲ್ಲಿಲ್ಲವಾದ್ದರಿಂದ ಮದುಮಗನಿಲ್ಲದ ಮದುವೆ ಮನೆಯಂತೆ ಖಾಲಿ ಖಾಲಿ ಎನಿಸಿತು. ಈ ಸಮಯದಲ್ಲಿ ಇಡೀ ದೇಗುಲಕ್ಕೆ ಸುಣ್ಣ ಬಣ್ಣ ಮಾಡುತ್ತಿರುತ್ತಾರೆ. ಆನಂತರ ಪಕ್ಕದಲ್ಲಿರುವ ಲಕ್ಷ್ಮೀ ದೇಗುಲಕ್ಕೆ ಹೋಗಿ ಕೈಮುಗಿದು ಬಂದೆವು. 

ದೇವಸ್ಥಾನದಲ್ಲಿ ಜಗನ್ನಾಥನಿಲ್ಲದ ಕೊರತೆ ನೀಗಿಸಿದ್ದು ದೇಗುಲದ ಬೃಹತ್​ ಶಿಖರ. ಸುಮಾರು 12ನೇ ಶತಮಾನದಲ್ಲಿ ನಿರ್ಮಿತವಾದ  ಈ ದೇವಸ್ಥಾನದಲ್ಲಿ ಗೋಪುರ ನೋಡುತ್ತಿದ್ದರೆ ದೇವರೇ ಅಲ್ಲಿ ನೆಲಸಿದ್ದಾನೆ ಎನಿಸುವುದಂತೂ ದಿಟ. ಎಂಥ ಕೆತ್ತನೆ, ಏನೂ ತಾದ್ಯಾತ್ಮ! ಒಂದರ ಮೇಲೊಂದು ಬ್ರೆಡ್​ ಪೀಸ್​​ ಜೋಡಿಸಿಟ್ಟಂತೆ ಭಾಸವಾಗುವ, ರೇಖಾಗಣಿತದ ಎಲ್ಲ ಸೂತ್ರಗಳನ್ನು ಅರೆದುಕುಡಿದಂತಿರುವ ಈ ಬೃಹತ್​ ಗೋಪುರದ ಕೆತ್ತನೆ ನಮ್ಮ ಮೈಮರೆಸಿಬಿಡುವಂತಿದೆ.

Puri Ratha Yatra: ಬಟ್ಟಲುಗಣ್ಣಿನ ಭಗವಂತ ಗರ್ಭಗುಡಿ ಬಿಟ್ಟು ಹೊರಬರುವುದೇಕೆ?
 
ಅನೇಕ ರಹಸ್ಯಗಳನ್ನು ತನ್ನಲ್ಲಿ ಬಚ್ಚಿಟ್ಟುಕೊಂಡಿರೋ ಈ ದೇವಾಲಯದ ಬಗ್ಗೆ ನೂರಾರು ಕತೆಗಳಿವೆ. ದೇಗುಲದ ಕಳಶದ ಮೇಲೆ ಹಾರುಡುವ ಧ್ವಜವನ್ನು ಪ್ರತಿನಿತ್ಯ ಸಂಜೆ 5 ಗಂಟೆಗೆ ಬದಲಾಯಿಸಬೇಕಂತೆ. ಒಂದು ದಿನ ಬದಲಾಯಿಸದಿದ್ದರೆ 12 ವರ್ಷ ದೇಗುಲದ ಬಾಗಿಲು ತೆರೆಯುವಂತಿಲ್ಲ ಎಂಬ ನಿಯಮವೂ ಇದೆಯಂತೆ. ಗೋಪುರವನ್ನೇರಲು ಇಲ್ಲಿ ಮೆಟ್ಟಿಲುಗಳಿಲ್ಲ. ಪ್ರತಿ ದಿನ ಮಳೆ, ಚಳಿ ಎನ್ನದೆ ಪ್ರತಿ ನಿತ್ಯ ಹೊರಗಿನಿಂದಲೇ ಹತ್ತಿ ಧ್ವಜವನ್ನು ಬದಲಿಸಬೇಕು.  

ಈ ಧ್ವಜವು  ಕೆಳಗಿನ ಗಾಳಿಯ ದಿಕ್ಕಿಗೆ ವಿರುದ್ಧವಾಗಿ ಹಾರುತ್ತದೆ ಎಂಬ ಪ್ರತೀತಿಯೂ ಇದೆ. ಭಕ್ತರೊಬ್ಬರು ತಮ್ಮ ವೇಲ್​​​​ ಗಾಳಿಯ ದಿಕ್ಕಿಗೆ ಹಾರಿಸಿ ಧ್ವಜ ಹೇಗೆ ವಿರುದ್ಧ ದಿಕ್ಕಿಗೆ ಹಾರುತ್ತಿದೆ ಎಂದು ತೋರಿಸಿದರು. ಕೆಳಗೆ ಒಂದು ದಿಕ್ಕಿನಲ್ಲಿ ಗಾಳಿ (Wind), ಗೋಪುರದ ಮೇಲೆ ಇನ್ನೊಂದು ದಿಕ್ಕಿನಲ್ಲಿ ಗಾಳಿ ಹಾರುತ್ತದೆಯೇ? ಇದೆಂಥ ಪ್ರಾಕೃತಿಕ ವೈಚಿತ್ರವಿರಬಹುದು (Natural Weird Thing) ಎಂದು ಭಕ್ತರು (Devotees) ಅಚ್ಚರಿಪಡುವುದು ಇಲ್ಲಿ ಸಾಮಾನ್ಯ.

Puri Jagannath Ratha Yatra: ಚಿಕ್ಕಮ್ಮನ ಮನೆಗೆ ಅಣ್ಣ, ತಂಗಿಯೊಡನೆ ಹೊರಡೋ ಕೃಷ್ಣ!

ಅಲ್ಲದೇ ಪುರಿ ಜಗನ್ನಾಥ ದೇಗುಲದ ಮೇಲ್ಭಾಗವನ್ನು ನೋ ಫ್ಲೈಯಿಂಗ್​ ಝೋನ್ (No Flying Zone)​ ಎಂದು ಕರೆಯುತ್ತಾರೆ. ದೇಗುಲದ ಮೇಲೆ ಯಾವುದೇ ವಿಮಾನ ಹಾರಾಡುವುದಿಲ್ಲ. ಮಾತ್ರವಲ್ಲ, ಯಾವುದೇ ಹಕ್ಕಿ ಪಕ್ಷಿಯೂ ಗೋಪುರದ ಮೇಲ್ಭಾಗ ಹಾರುವುದಿಲ್ಲ ಎನ್ನಲಾಗುತ್ತದೆ. ಈ ವಿಸ್ಮಯಕ್ಕೆ ವಿಜ್ಞಾನದಲ್ಲಿಯೂ ಉತ್ತರವಿಲ್ಲ. 

Latest Videos
Follow Us:
Download App:
  • android
  • ios