ಹಾವಿನಿಂದ ಕಚ್ಚಿಸಿಕೊಂಡರೂ ಪರೀಕ್ಷೆ ಬರೆದ ಪಿಯು ವಿದ್ಯಾರ್ಥಿನಿ : ಸ್ಥಿತಿ ಗಂಭೀರ
ಹಾವಿನಿಂದ ಕಚ್ಚಿಸಿಕೊಂಡ ಬಳಿಕವೂ ವಿದ್ಯಾರ್ಥಿಯೋರ್ವಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದು, ನಂತರ ಅಸ್ವಸ್ಥಳಾದ ಘಟನೆ ಒಡಿಶಾದ ಕಿಯೋಂಜರ್‌ನಲ್ಲಿ ನಡೆದಿದೆ. ದ್ವಿತೀಯ ಪಿಯುಸಿ ಪರೀಕ್ಷೆಗೆ ಹೊರಟಿದ್ದ ವಿದ್ಯಾರ್ಥಿನಿಗೆ ಹಾವು ಕಚ್ಚಿದೆ.
ಭುವನೇಶ್ವರ್: ಹಾವಿನಿಂದ ಕಚ್ಚಿಸಿಕೊಂಡ ಬಳಿಕವೂ ವಿದ್ಯಾರ್ಥಿಯೋರ್ವಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದು, ನಂತರ ಅಸ್ವಸ್ಥಳಾದ ಘಟನೆ ಒಡಿಶಾದ ಕಿಯೋಂಜರ್‌ನಲ್ಲಿ ನಡೆದಿದೆ. ದ್ವಿತೀಯ ಪಿಯುಸಿ ಪರೀಕ್ಷೆಗೆ ಹೊರಟಿದ್ದ ವಿದ್ಯಾರ್ಥಿನಿಗೆ ಹಾವು ಕಚ್ಚಿದೆ. ಆದರೂ ವಿದ್ಯಾರ್ಥಿನಿ ಆಸ್ಪತ್ರೆಗೆ ಹೋಗದೇ ಪರೀಕ್ಷೆ ಬರೆಯಲು ತೆರಳಿದ್ದು, ಪರೀಕ್ಷೆ ಬರೆಯುತ್ತಿದ್ದಾಗಲೇ ಸ್ವಲ್ಪ ಹೊತ್ತಿನಲ್ಲಿ ಆಕೆ ಅಸ್ವಸ್ಥಳಾಗಿದ್ದಾಳೆ. ನಂತರ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಲಿಪ್ಸಾ ರಾಣಿ ಸಾಹೂ (Lipsa Rani Sahoo) ಎಂಬಾಕೆಯೇ ಹೀಗೆ ಹಾವು ಕಚ್ಚಿದರೂ ಆಸ್ಪತ್ರೆಗೆ ಹೋಗದೇ ಪರೀಕ್ಷೆ ಬರೆಯಲು ಹೋದ ವಿದ್ಯಾರ್ಥಿನಿ.
ದಧಿಬಬನ್ಪುರ (Dadhibabanpur) ನಿವಾಸಿಯಾದ ಆಕೆ ಪರೀಕ್ಷೆ ಬರೆಯುವ ಸಲುವಾಗಿ ಮನೆಯಿಂದ ಆನಂದ್‌ಪುರದಲ್ಲಿರುವ ಕಾಲೇಜಿಗೆ ( Anandapur College) ಹೊರಡುವ ಸಿದ್ಧತೆಯಲ್ಲಿದ್ದಾಗ ಆಕೆಗೆ ಹಾವೊಂದು ಕಚ್ಚಿದೆ. ಆದರೆ ಇದರ ಬಗ್ಗೆ ತಲೆಕೆಡಿಸಿಕೊಳ್ಳದ ಲಿಪ್ಸಾ ಕಾಲೇಜಿಗೆ ಹೊರಟು ಹೋಗಿದ್ದು ಪರೀಕ್ಷೆ ಬರೆದಿದ್ದಾಳೆ. ಆದರೆ ಪರೀಕ್ಷೆ ಮಧ್ಯೆ ಆಕೆ ಅಸ್ವಸ್ಥಳಾಗಿದ್ದು, ಸಂಕಟದ ಅನುಭವವಾಗಿದೆ.
ತಾಯಿಯ ಕಾಲಿನಿಂದ ವಿಷ ಹೀರಿದ ಮಗಳು; ಕಚ್ಚಿದ್ದು ನಾಗರಹಾವಲ್ಲ ಎಂಬ ಸುದ್ದಿ ಸುಳ್ಳು ಎಂದ ಯುವತಿ
ನಂತರ ಪರೀಕ್ಷಾ ( examination center) ಕೊಠಡಿಯಿಂದಲೇ ಆಕೆಯನ್ನು ಆನಂದ್‌ಪುರದ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪರೀಕ್ಷೆಗೆ ತೆರಳುವ ಮುನ್ನ ಮನೆಯ ಹಿತ್ತಲಿಗೆ ಲಿಪ್ಸಾ ಹೋಗಿದ್ದು, ಈ ವೇಳೆ ಕಪ್ಪು ಬಣ್ಣದ ಹಾವೊಂದು ಆಕೆಗೆ ಕಚ್ಚಿದೆ. ಆದರೂ ಆಕೆ ಪರೀಕ್ಷೆ ಬರೆದಿದ್ದು, ನಂತರ ಮಧ್ಯದಲ್ಲಿ ಅಸ್ವಸ್ಥಳಾದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಾಲಕಿಯ ಸಂಬಂಧಿಯೊಬ್ಬರು ಹೇಳಿದ್ದಾರೆ.
Hassan: ಹಾವು ಕಡಿತ, ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್ ಸಿಗದೆ ಬಾಲಕ ಸಾವು
ಹಾವಿನ ವಿಷ ಜೀವ ತೆಗೆಯೋದು ಮಾತ್ರವಲ್ಲ, ಜೀವವನ್ನೂ ಉಳಿಸುತ್ತೆ!
ಹಾವು ಎಂದ ಕೂಡಲೇ ಪ್ರತಿಯೊಬ್ಬರಿಗೂ ಭಯವಾಗುತ್ತೆ. ಹಾವು ಕಚ್ಚಿದ್ರೆ, ಅದ್ರ ವಿಷ ಮೈಗೆ ಸೇರಿಕೊಂಡ್ರೆ, ಸಾವೇ ಗತಿ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಒಟ್ಟಲ್ಲಿ ಹಾವಿನ ವಿಷವನ್ನು ಸಾಕಷ್ಟು ಮಾರಣಾಂತಿಕವೆಂದು ಪರಿಗಣಿಸಲಾಗಿದೆ. ಆದರೆ ಇದು ಅನೇಕ ಗಂಭೀರ ರೋಗಗಳನ್ನು ಗುಣಪಡಿಸುತ್ತದೆ ಎಂದು ನಿಮಗೆ ತಿಳಿದಿದೆಯೇ?
ಭಾರತವನ್ನು 'ಹಾವುಗಳ ದೇಶ' ಎಂದು ಕರೆಯಲಾಗುತ್ತಿತ್ತು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು, ಆದರೆ ಯುಎಸ್‌ನಲ್ಲಿ ಹಾವು ಕಡಿತದ ಪ್ರಕರಣವು (Snake Bite) ವಿಶ್ವದಲ್ಲೇ ಅತ್ಯಧಿಕವಾಗಿದೆ. ಆದಾಗ್ಯೂ, ಯುಎಸ್ ನಲ್ಲಿ ಸರಿಯಾದ ಸಮಯ ಮತ್ತು ಉತ್ತಮ ಚಿಕಿತ್ಸೆಯಿಂದಾಗಿ ಸಾವಿನ ಸಂಖ್ಯೆ ಭಾರತಕ್ಕಿಂತ ಕಡಿಮೆಯಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವಿಶ್ವದಾದ್ಯಂತ ಪ್ರತಿ ವರ್ಷ ಸುಮಾರು ಐದು ಮಿಲಿಯನ್ ಹಾವು ಕಡಿತದ ಘಟನೆಗಳು ವರದಿಯಾಗುತ್ತವೆ, ಅದರಲ್ಲಿ 100,000 ಕ್ಕೂ ಹೆಚ್ಚು ಜನರು ಸಾಯುತ್ತಾರೆ. ಹಾವಿನ ವಿಷವನ್ನು ಜನರ ದೇಹಕ್ಕೆ ಎಷ್ಟು ಅಪಾಯಕಾರಿಯೋ ಅಷ್ಟೇ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ.
ಹಾವಿನ ವಿಷವನ್ನು ದೇಹದ ಅನೇಕ ರೋಗಗಳನ್ನು ತೆಗೆದುಹಾಕಲು ಬಳಸಲಾಗುತ್ತದೆ. ಮೊದಲನೆಯದಾಗಿ ದೇಹದಿಂದ ಹಾವಿನ ವಿಷ ತೆಗೆಯಲು ಹಾವಿನ ವಿಷವೇ (Snake Venom) ಬೇಕಾಗುತ್ತದೆ. ಹೊಲಗದ್ದೆಗಳಲ್ಲಿ ಅಥವಾ ತೋಟಗಳಲ್ಲಿ ಹಾವುಗಳನ್ನು ನೋಡಿದ ತಕ್ಷಣ, ನೀವು ಭಯದಿಂದ ಓಡಿಹೋಗಿರಬಹುದು, ಆದರೆ ಅದು ತೋಟ ಮತ್ತು ಹೊಲಗಳಿಗೆ ಸಾಕಷ್ಟು ಒಳ್ಳೆಯದು ಎಂದು ಪರಿಗಣಿಸಲಾಗಿದೆ ಎಂದು ನಿಮಗೆ ತಿಳಿದಿದೆಯೇ? ಹಾವುಗಳು ಹೊಲದಲ್ಲಿರುವ ಕೀಟಗಳನ್ನು ತಿನ್ನುತ್ತವೆ, ಇದು ಬೆಳೆಗಳನ್ನು ಹಾನಿಗೊಳಿಸಬಹುದು. ಅಷ್ಟೇ ಅಲ್ಲ, ಹಾವುಗಳು ಇಲಿಗಳನ್ನು ಸಹ ತಿನ್ನುತ್ತವೆ. ಆ ಮೂಲಕ ಹಾವುಗಳು ಬೆಳೆಗಳು ಮತ್ತು ಧಾನ್ಯಗಳನ್ನು ರಕ್ಷಿಸುತ್ತದೆ. ಅದೇ ಸಮಯದಲ್ಲಿ, ನಿಮ್ಮ ಬೆಳೆ ವ್ಯರ್ಥವಾಗುವುದಿಲ್ಲ. ಉತ್ತಮ ಫಸಲನ್ನು ಇದು ನೀಡುತ್ತದೆ.