Asianet Suvarna News Asianet Suvarna News

ಹಾಡುತ್ತಲೇ ಕುಸಿದು ಬಿದ್ದು ಕೊನೆಯುಸಿರೆಳೆದ ಗಾಯಕ: ನವರಾತ್ರಿ ಸಂಭ್ರಮದ ವೇಳೆ ದುರಂತ

ನವರಾತ್ರಿಗೆ ಅಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಾಡುತ್ತಲೇ ಗಾಯಕರೊಬ್ಬರು  ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ. 

Odisha Famous singer Murali Mohapatra Dies While Performing On Stage in Koraput Durga Puja cultural event akb
Author
First Published Oct 5, 2022, 8:32 AM IST

ಕೊರಪುಟ್: ನವರಾತ್ರಿಗೆ ಅಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಾಡುತ್ತಲೇ ಗಾಯಕರೊಬ್ಬರು ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ. ಒಡಿಶಾದ ಖ್ಯಾತ ಗಾಯಕ ಮುರಲಿ ಮೊಹಪಾತ್ರ ಹೀಗೆ ಹಾಡುತ್ತಲೇ ವೇದಿಕೆಯಲ್ಲಿ ಮೃತಪಟ್ಟವರು.  ಮುರಲಿ ಮೊಹಪಾತ್ರ ನಿಧನಕ್ಕೆ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಸಂತಾಪ ವ್ಯಕ್ತಪಡಿಸಿದ್ದಾರೆ. 

ಒಡಿಶಾದ ಕೊರಪುಟ್‌ ಜಿಲ್ಲೆಯಲ್ಲಿ ದಸರಾ ಪ್ರಯುಕ್ತ ದುರ್ಗಾ ಪೂಜಾ ಪೆಂಡಾಲ್ ಅವರು ಆಯೋಜಿಸಿದ ಸಾಂಸ್ಕೃತಿಕ ಸಂಭ್ರಮದಲ್ಲಿ ಮುರಲಿ ಮೊಹಪಾತ್ರ ಹಾಡುತ್ತಿದ್ದರು. ಅವರ ಕೊನೆಕ್ಷಣಗಳು ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ(Social Media) ವೈರಲ್ ಆಗಿದೆ. ಮೊಹಪಾತ್ರ ಕಾರ್ಯಕ್ರಮದ ವೇಳೆಯೇ ಅಸ್ವಸ್ಥರಾಗಿದ್ದು, ಅವರ ಜೊತೆ ಸಹ ಗಾಯಕಿ ಹಾಡುತ್ತಿದ್ದರೆ, ಈ ವೇಳೆ ಅವರು ಸ್ಟೇಜ್‌ನಲ್ಲಿಯೇ ಪಕ್ಕದಲ್ಲಿದ್ದ ಚೇರೊಂದರ ಮೇಲೆ ಕುಳಿತಿದ್ದಾರೆ. ನಂತರ ಕೆಲ ಕ್ಷಣದಲ್ಲಿ ಚೇರ್‌ನಿಂದ ಅವರು ಕೆಳಗೆ ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಬದುಕಿಸಿಕೊಳ್ಳಲಾಗಿಲ್ಲ. 

ನೋಡ ನೋಡುತ್ತಿದ್ದಂತೆ ಹೃದಯಾಘಾತ ಸಾವನ್ನಪ್ಪಿದ ಯುವ ಕುಸ್ತಿಪಟು..!

ಅವರು ಕೊರಪುಟ್ ಜಿಲ್ಲೆಯ ಜೆಯೊರ್ ನಗರದಲ್ಲಿ(Jeyore town) ಭಾನುವಾರ ರಾತ್ರಿ ನವರಾತ್ರಿಗೆ ಆಯೋಜಿಸಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಾಡುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಹೃದಯಘಾತದಿಂದ ಅವರು ಮೃತಪಟ್ಟಿದ್ದಾರೆ ಎಂದು ಅವರ ಸಹೋದರ ವಿಭುತಿ ಪ್ರಸಾದ್ ಮೊಹಪಾತ್ರ (Bibhuti Prasad Mohapatra) ತಿಳಿಸಿದ್ದಾರೆ. ಖ್ಯಾತ ಗಾಯಕನ ಸಾವಿಗೆ ಒಡಿಶಾ ಸಿಎಂ ನವೀನ್ ಪಟ್ನಾಯಕ್ (Naveen Patnaik) ವಿಷಾದ ವ್ಯಕ್ತಪಡಿಸಿದ್ದಾರೆ. 

 

ಜನಪ್ರಿಯ ಗಾಯಕ ಮುರಲಿ ಮೊಹಪಾತ್ರ (Murali Mohapatra) ಅವರ ಅಕಾಲಿಕ ನಿಧನದಿಂದ ಬಹಳ ದುಃಖವಾಗಿದೆ. ಅವರ ಸಿಹಿಯಾದ ಧ್ವನಿ ಕೇಳುಗರ ಹೃದಯದಲ್ಲಿ ಸದಾ ಅನುರಣಿಸಲಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ದುಃಖ ಬರಿಸುವ ಶಕ್ತಿ ನೀಡಲಿ ಎಂದು ಪಟ್ನಾಯಕ್ ಟ್ವಿಟ್ ಮಾಡಿದ್ದಾರೆ.  ಈ ದುರ್ಘಟನೆ, ಈ ಹಿಂದೆ ನಿಧನರಾದ ಖ್ಯಾತ ಗಾಯಕ ಕೆಕೆ (singer KK) ಅವರ ಸಾವನ್ನು ನೆನಪಿಸಿದೆ. ಅವರು ಕೋಲ್ಕತ್ತಾದ (Kolkata) ಕಾರ್ಯಕ್ರಮವೊಂದರಲ್ಲಿ ಹೀಗೆ ದಿಢೀರ್ ಕುಸಿದು ಬಿದ್ದು ಮೃತಪಟ್ಟಿದ್ದರು.  ಗಾಯಕ ಮೊಹಪಾತ್ರ ಸರ್ಕಾರಿ ನೌಕರರಾಗಿದ್ದು (government employee), ಹಾಡುವುದು ಅವರ ಹವ್ಯಾಸವಾಗಿತ್ತು, ಜೆಯ್‌ಪೊರ್‌ನ ಸಬ್ ಕಲೆಕ್ಟರ್‌ (sub-collector) ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಅವರು ಇನ್ನೇನು 9 ತಿಂಗಳಲ್ಲಿ ಅವರು ನಿವೃತ್ತರಾಗಬೇಕಾಗಿತ್ತು. 

ಚಿರಂಜೀವಿ ಹನುಮನ ವೇಷ ತೊಟ್ಟ ಕಲಾವಿದ ವೇದಿಕೆಯಲ್ಲೇ ಚಿರನಿದ್ರೆಗೆ ಜಾರಿದ

ಗಾಯಕ ಮೊಹಪಾತ್ರ ಸ್ನೇಹಿತ ಪ್ರಶಾಂತ್ ಕುಮಾರ್ (Prasant Kumar Mishra) ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಹಾಡುವ ಮೊದಲೇ ಗಾಯಕ ಮೊಹಪಾತ್ರ ಅವರು ಕಾರ್ಯಕ್ರಮದಲ್ಲಿ ಇದ್ದ ಪ್ರೇಕ್ಷಕರಲ್ಲಿ 'ತನಗೆ ಹುಷಾರಿಲ್ಲ, ಏನಾದರೂ ತಪ್ಪಾದಲ್ಲಿ ಸಹಕರಿಸಿ ಎಂದು ಮನವಿ ಮಾಡಿದ್ದರು ಎಂದು ಹೇಳಿದ್ದಾರೆ. ಮೊಹಪಾತ್ರ ಅವರು ಒಡಿಶಾದ ಲೆಜೆಂಡರಿ ಗಾಯಕ, ಹಾಡುಗಾರ, ಹಾಗೂ ಸಂಯೋಜಕ ಅಕ್ಷಯ್ ಮೊಹಂತಿ ಅವರ ಸ್ಟೈಲ್‌ನಲ್ಲಿ ಹಾಡುತ್ತಿದ್ದರು. ಹೀಗಾಗಿ ಅಲ್ಲಿನ ಜನ ಅವರನ್ನು ಜೇಯ್‌ಪೊರ್‌ನ ಅಕ್ಷಯ್ ಮೊಹಂತಿ (Akshaya Mohanty of Jeypore) ಎಂದೇ ಕರೆಯುತ್ತಿದ್ದರು. 

Follow Us:
Download App:
  • android
  • ios