ನಾವೆಷ್ಟೇ ಡಿಜಿಟಲ್‌ ಇಂಡಿಯಾ ಎಂದು ಬಡಿದುಕೊಂಡರೂ, ದೇಶದ ಕಟ್ಟಕಡೆಯ ಪ್ರಜೆಗೆ ಇದನ್ನು ತಲುಪಿಸುವ ನಿಟ್ಟಿನಲ್ಲಿ ಸಂಪೂರ್ಣ ಶ್ರಮವನ್ನು ಅಧಿಕಾರಿಗಳು ಮಾಡೋದಿಲ್ಲ ಅನ್ನೋದಕ್ಕೆ ಈ ಸುದ್ದಿಯೇ ಸಾಕ್ಷಿ.  

ನವದೆಹಲಿ (ಏ.20): ಡಿಜಿಟಲ್‌ ಇಂಡಿಯಾ, ಕೈಬೆರಳ ತುದಿಯಲ್ಲೇ ಬ್ಯಾಂಕಿಂಗ್‌ ಇಂಥ ಎಷ್ಟೇ ಘೋಷಣೆಯನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದರೂ, ದೇಶದ ಕಟ್ಟಕಡೆಯ ಪ್ರಜೆಗೆ ಇದನ್ನು ತಲುಪಿಸಬೇಕಾದವರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು. ಇದರಲ್ಲಿ ಸೋಲು ಕಂಡಾಗ ಮಾತ್ರವೇ ಇಂಥ ವಿಡಿಯೋಗಳು ಕಾಣಸಿಗುತ್ತವೆ. ಇದು ಡಿಜಿಟಲ್‌ ಇಂಡಿಯಾ, ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಕೋಟಿಗಟ್ಟಲೆ ಹಣವನ್ನು ಕ್ಷಣಮಾತ್ರದಲ್ಲಿ ವರ್ಗಾವಣೆ ಮಾಡಬಹುದು. ಆದರೆ, ಇದೇ ವಿಚಾರ 70 ವರ್ಷದ ಈ ಅಜ್ಜಿಯ ಬಗ್ಗೆ ಹೇಳುವಂತಿಲ್ಲ. ಒಂದು ಕಾಲು ಮಾತ್ರವೇ ಸರಿಯಾಗಿರುವ 70 ವರ್ಷದ ಈ ಅಜ್ಜಿ, ತನ್ನ ಪಿಂಚಣಿ ಹಣಕ್ಕಾಗಿ ಬರಿಗಾಲಿನಲ್ಲಿ ಕಿಲೋಮೀಟರ್‌ಗಟ್ಟಲೆ ಸುಡುವ ಬಿಸಿಲಲ್ಲಿ ನಡೆದುಕೊಂಡು ಬ್ಯಾಂಕ್‌ಗೆ ಹೋಗಿದ್ದಾರೆ. ಆಘಾತಕಾರಿ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು, ಒಡಿಶಾದ ನಬರಂಗಪುರದಲ್ಲಿ ನಡೆದ ಘಟನೆ ಇದಾಗಿದೆ. ಪಿಂಚಣಿ ಹಣ ಪಡೆಯುವ ಸಲುವಾಗಿ ಬ್ಯಾಂಕ್‌ಗೆ ಹೋಗಬೇಕಾಗಿದ್ದ ಅಜ್ಜಿಗೆ ವೀಲ್‌ಚೇರ್‌ ಕೂಡ ಇದ್ದಿರಲಿಲ್ಲ. ಅದಕ್ಕಾಗಿ ಮುರಿದ ಕುರ್ಚಿಯನ್ನೇ ಆಸರೆಯನ್ನಾಗಿ ಮಾಡಿಕೊಂಡು, ರಸ್ತೆಯಲ್ಲಿ ಬರಿಗಾಲಿನಲ್ಲಿ ಹೋಗುತ್ತಿದ್ದಾಗ ಯಾರೋ ಒಬ್ಬರು ವಿಡಿಯೋ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದರು ವೈರಲ್‌ ಆದ ಬೆನ್ನಲ್ಲಿಯೇ ಎಸ್‌ಬಿಐ ಮ್ಯಾನೇಜರ್‌ ಪ್ರತಿಕ್ರಿಯೆ ನೀಡಿದ್ದು, ವಿಷಯ ಗಮನಕ್ಕೆ ಬಂದ ಬೆನ್ನಲ್ಲಿಯೇ ಕ್ರಮ ಕೈಗೊಂಡಿದ್ದು, ಮುಂದಿನ ತಿಂಗಳಿನಿಂದ ಅವರಿದ್ದಲ್ಲಿಗೆ ಪಿಂಚಣಿ ಹಣ ತಲುಪಲಿದ ಎಂದು ಹೇಳಿದ್ದಾರೆ.

ಇನ್ನು ಈ ವಿಡಿಯೋದಲ್ಲಿರುವ ಮಹಿಳೆಯ ಹೆಸರು ಸೂರ್ಯ ಹರಿಜನ್‌. ಒಡಿಶಾದ ನಬರಂಗಪುರದ ನಿವಾಸಿ. ವೀಡಿಯೋ ವೈರಲ್ ಆದ ನಂತರ ಮುಂದಿನ ಬಾರಿ ಸೂರ್ಯ ಹರಿಜನ್‌ ಅವರು ಈ ರೀತಿ ತೊಂದರೆ ಅನುಭವಿಸಬಾರದು ಎನ್ನುವ ಕಾರಣಕ್ಕೆ ಶೀಘ್ರವೇ ಒಂದು ಪರಿಹಾರ ವ್ಯವಸ್ಥೆ ಮಾಡುವುದಾಗಿ ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್‌ ತಿಳಿಸಿದ್ದರು.

ಕೃಶ ದೇಹದ ಕಾರಣಕ್ಕೆ ಕುರ್ಚಿಯ ಆಸರೆ ಪಡೆದು ಬ್ಯಾಂಕ್‌ಗೆ ಬಂದಿದ್ದ ಅಜ್ಜಿ: ದೇಶದೆಲ್ಲಡೆ ತಾಪಮಾನ ವಿಪರೀತ ಏರಿಕೆಯಾಗಿದೆ. ಒಡಿಶಾದಲ್ಲೂ ಬಹುತೇಕ ಎಲ್ಲಾ ಕಡೆ ತಾಪಮಾನ 30 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗಿದೆ. ದೇಶದ ಹೆಚ್ಚಿನ ರಾಜ್ಯಗಳು ಈ ಬಾರಿ ವಿಪರೀತ ಎನ್ನುವಷ್ಟು ಬಿಸಿಲಿಗೆ ಬಳಲು ಹೋಗಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಸರಿಯಾಗಿ ನಡೆಯಲೂ ಸಾಧ್ಯವಾಗದ, ಕೃಶವಾಗಿರುವ ದೇಹದ ಅಜ್ಜಿಯೊಬ್ಬರು ಕುರ್ಚಿಯ ಆಸರೆ ಪಡೆದುಕೊಂಡು ಬರಿಗಾಲಿನಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ವಿಡಿಯೋ ನೋಡಿದರೆ ಕರುಳ್‌ ಚುರಕ್‌ ಎನ್ನುತ್ತದೆ. ನಡೆಯಲು ಕುರ್ಚಿಯ ಆಸರೆ ಪಡೆದುಕೊಳ್ಳುವ ಸೂರ್ಯ ಹರಿಜನ್‌ ಕೊನೆಗೂ ಬ್ಯಾಂಕ್‌ಗೆ ಆಗಮಿಸಲು ಯಶಸ್ವು ಕೂಡ ಆಗಿದ್ದರು.

Scroll to load tweet…

ಆಗ ತಾನೆ ಹುಟ್ಟಿದ ಶಿಶುವನ್ನು ಬಾತ್‌ರೂಮ್‌ ಕಿಟಕಿಯಿಂದ ಎಸೆದು ಸಾಯಿಸಿದ ಮಹಿಳೆ!

ಸೂರ್ಯ ಹರಿಜನ ನಬರಂಗಪುರದ ಜಾರಿಗನ್ ಬ್ಲಾಕ್‌ನ ಬನುಗುಡ ಗ್ರಾಮದ ನಿವಾಸಿ. ಕೆಲವು ಮಾಧ್ಯಮಗಳ ವರದಿಗಳ ಪ್ರಕಾರ, ಸೂರ್ಯ ಅವರ ಮಗ ವಲಸೆ ಕಾರ್ಮಿಕರಾಗಿ ಕೆಲಸ ಮಾಡಲು ಬೇರೆ ರಾಜ್ಯಕ್ಕೆ ತೆರಳಿದ್ದಾರೆ. ಪರರ ದನ ಮೇಯಿಸಿಕೊಂಡು ಜೀವನ ಸಾಗಿಸುತ್ತಿರುವ ಕಿರಿಯ ಮಗನ ಜತೆ ಕುಟುಂಬದೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಕುಟುಂಬಕ್ಕೆ ಕೃಷಿ ಮಾಡಲು ಭೂಮಿ ಇಲ್ಲ. ಕಿರಿಯ ಮಗನೊಂದಿಗೆ ಸೂರ್ಯ ಹರಿಜನ್‌ ಗುಡಿಸಲಿನಲ್ಲಿ ವಾಸವಿದ್ದಾರೆ.

ಹೈಕೋರ್ಟ್‌ ಮೆಟ್ಟಿಲೇರಿದ ಐಶ್ವರ್ಯಾ ರೈ ಪುತ್ರಿ 11 ವರ್ಷದ ಆರಾಧ್ಯ ಬಚ್ಛನ್‌, ಏನ್‌ ವಿಷ್ಯ?

ತಾಂತ್ರಿಕ ಕಾರಣದಿಂದಾಗಿ ಹಣ ಬಂದಿರಲಿಲ್ಲ: ಈ ಹಿಂದೆ ಭಾರತ ಸರ್ಕಾರದ ನಿಯಮದಡಿ ನಗದು ಪಿಂಚಣಿ ನೀಡಲಾಗುತ್ತಿತ್ತು ಆದರೆ ಈಗ ವ್ಯವಸ್ಥೆ ಬದಲಾಗಿದೆ ಮತ್ತು ಫಲಾನುಭವಿಗಳ ಆನ್‌ಲೈನ್ ಖಾತೆಗೆ ಹಣವನ್ನು ವರ್ಗಾಯಿಸಲಾಗುತ್ತಿದೆ. ಬ್ಯಾಂಕ್ ಪ್ರಾಧಿಕಾರದ ಪ್ರಕಾರ, ಕೆಲವೊಮ್ಮೆ ಎಡಗೈ ಹೆಬ್ಬೆರಳಿನ ಗುರುತು ಮಾದರಿಯೊಂದಿಗೆ ಹೊಂದಿಕೆಯಾಗದ ಪರಿಸ್ಥಿತಿ ಎದುರಾಗುತ್ತದೆ. ಆಗ ಪಿಂಚಣಿ ಮೊತ್ತ ಪಾವತಿಯಲ್ಲಿ ಸಮಸ್ಯೆ ಎದುರಾಗುತ್ತದೆ. ಇದೇ ತಾಂತ್ರಿಕ ದೋಷದಿಂದ ಸೂರ್ಯ ಹರಿಜನ್‌ ಕಳೆದ ನಾಲ್ಕು ತಿಂಗಳಿಂದ ಪಿಂಚಣಿ ಪಡೆದಿಲ್ಲ. ವಿಡಿಯೋ ಬಗ್ಗೆ ಮಾಹಿತಿ ಪಡೆದ ಬ್ಯಾಂಕ್ ಮ್ಯಾನೇಜರ್, ಇನ್ನು ಮುಂದೆ ಅಜ್ಜಿ ಬ್ಯಾಂಕ್‌ಗೆ ಬರುವ ಅಗತ್ಯವಿಲ್ಲ. ಅವರಿದ್ದಲ್ಲಿಗೆ ವ್ಯವಸ್ಥೆ ಕಲ್ಪಿಸುವ ಮಾರ್ಗಗಳನ್ನು ಮಾಡಲಿದ್ದೇವೆ ಎಂದು ಹೇಳಿದ್ದಾರೆ.