ಆಗ ತಾನೆ ಹುಟ್ಟಿದ ಶಿಶುವನ್ನು ಬಾತ್‌ರೂಮ್ ಕಿಟಕಿಯಿಂದ ಎಸೆದು ಸಾಯಿಸಿದ ಮಹಿಳೆ!
25 ವರ್ಷದ ಮಹಿಳೆಯೊಬ್ಬಳು ತನ್ನ ನವಜಾತ ಶಿಶುವನ್ನು ಚಾಂದ್ಖೇಡಾದಲ್ಲಿನ ಅಪಾರ್ಟ್‌ಮೆಂಟ್‌ನ ಒಂಬತ್ತನೇ ಮಹಡಿಯಲ್ಲಿರುವ ತನ್ನ ಮನೆಯ ಶೌಚಾಲಯದ ಕಿಟಕಿಯಿಂದ ಎಸೆದು ಕೊಂದಿರುವ ಘಟನೆ ನಡೆದಿದೆ.
ಅಹಮದಾಬಾದ್ (ಏ.20): ನವಜಾತ ಶಿಶುವನ್ನು ಆಸ್ಪತ್ರೆಯ ಶೌಚಾಲಯದಿಂದ ಹೊರಗೆ ಎಸೆದು ಕೊಂದ ಘಟನೆ ಇತ್ತೀಚೆಗೆ ಪುಣೆಯಲ್ಲಿ ವರದಿಯಾಗಿತ್ತು. ಈಗ ಅದೇ ರೀತಿಯ ಘಟನೆ ಅಹಮದಾಬಾದ್‌ನಲ್ಲಿ ವರದಿಯಾಗಿದೆ. ಈ ಕಾರಣಕ್ಕೆ ಮಹಿಳೆಯ ವಿರುದ್ಧ ಐಪಿಸಿ ಸೆಕ್ಷನ್ 302, 318ರಲ್ಲಿ ಕೊಲೆ ಕೇಸ್ ದಾಖಲು ಮಾಡಲಾಗಿದೆ. ಪೊಲೀಸರಿಗೆ ಮಾಹಿತಿ ನೀಡಿರುವ ಆಕೆ, ತಾನು ಗರ್ಭಿಣಿಯಾಗಿದ್ದೇ ಗೊತ್ತಿಲ್ಲ ಎಂದು ಹೇಳಿದ್ದಾಳೆ. ಗಂಡು ಮಗುವಿಗೆ ಜನ್ಮ ನೀಡಿದ ಬೆನ್ನಲ್ಲಿಯೇ ಕಸ ಎಸೆಯುವ ರೀತಿಯಲ್ಲಿ 9ನೇ ಮಹಡಿಯಲ್ಲಿದ್ದ ತನ್ನ ಮನೆಯ ಶೌಚಾಲಯದ ಕಿಟಕಿಯಿಂದ ಹೊರಗೆ ಎಸೆದಿದ್ದಾಳೆ. ಚಾಂದ್ಖೇಡಾದಲ್ಲಿನ ಅಪಾರ್ಟ್‌ಮೆಂಟ್‌ನಲ್ಲಿ ಬುಧವಾರ ಬೆಳಗ್ಗೆ ಈ ಘಟನೆ ನಡೆದಿದೆ. ತನ್ನ ಬಾಯ್‌ಫ್ರೆಂಡ್ ಜೊತೆಗೆ ಹೊಂದಿದ್ದ ಸಂಬಂಧವನ್ನು ಮರೆಮಾಚಲು ಮಹಿಳೆ ಈ ಭೀಕರ ಕೊಲೆ ಮಾಡಿದ್ದಾಳೆ. ಅದಾಜು 25 ವರ್ಷದ ಯುವತಿ ಹೇಳಿರುವ ಪ್ರಕಾರ, ನಾನು ಗರ್ಭಿಣಿಯಾಗಿದ್ದು ನನಗೆ ತಿಳಿದಿರಲಿಲ್ಲ. ಋತುಚಕ್ರ ವಿಳಂಬವಾಗುತ್ತಿರುವುದಕ್ಕೆ ಅತಿಯಾದ ರಕ್ತಸ್ರಾವವೇ ಕಾರಣ ಎಂದು ಭಾವಿಸಿದ್ದೆ. ಆದರೆ, ಶೌಚಾಲಯದಲ್ಲಿ ನಾನು ಗಂಡುಮಗುವಿಗೆ ಜನ್ಮನೀಡಿದಾಗ, ಸಮಾಜಕ್ಕೆ ಹೆದರಿ ಅದನ್ನು ಶೌಚಾಲಯದ ಕಿಟಕಿಯಿಂದ ಹೊರಗೆ ಎಸೆದಿದ್ದೆ ಎಂದು ಹೇಳಿದ್ದಾಳೆ.
ಬೆಳಗ್ಗೆ 8 ಗಂಟೆ ಸುಮಾರಿಗೆ ನೆರೆಹೊರೆಯ ಮನೆಯವರಿಗೆ ಇದರ ಸದ್ದು ಕೇಳಿಸಿದೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನವಜಾತ ಶಿಶು ಬಿದ್ದ ಸ್ಥಳದ ಅಕ್ಕಪಕ್ಕ ರಕ್ತ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದನ್ನು ನೋಡಿದ್ದು, ಮಗು ತಕ್ಷಣವೇ ಸಾವು ಕಂಡಿದೆ ಎಂದು ಪೊಲೀಸರು ಹೇಳಿದ್ದಾರೆ.
ಶೀಲಾ (ಹೆಸರು ಬದಲಾಯಿಸಲಾಗಿದೆ) ಎಂ.ಕಾಮ್ ಪದವೀಧರೆಯಾಗಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆಕೆಗೆ ಈಗಾಗಲೇ ಮದುವೆಯಾಗಿದ್ದು, ಪತಿಯಿಂದ ದೂರವಿದ್ದಾಳೆ. ಚಾಂದ್ಖೇಡಾದಲ್ಲಿನ ತನ್ನ ಪೋಷಕರ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದಳು. ಈ ವೇಳೆ ತಾನು ಕೆಲಸ ಮಾಡುವ ಕಂಪನಿಯಲ್ಲಿದ್ದ ವ್ಯಕ್ತಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಅಪಾರ್ಟ್‌ಮೆಂಟ್‌ನಲ್ಲಿ ಶೀಲಾಳ ಜೊತೆ ಆಕೆಯ ಪಾಲಕರು, ಸೋದರ ಮತ್ತು ಸೋದರಿ ವಾಸವಿದ್ದಳು ಎಂದು ಚಾಂದ್ಖೇಡಾ ಪೋಲೀಸರು ತಿಳಿಸಿದ್ದಾರೆ.
ಆಕೆಗೆ ಅಕ್ರಮ ಸಂಬಂಧವಿತ್ತು. ಆದರೆ, ಇದನ್ನು ತನ್ನ ಪಾಲಕರಿಗೆ ತಿಳಿಸಿರಲಿಲ್ಲ. ತಾನು ಗರ್ಭಿಣಿಯಾಗಿದ್ದು ತನಗೇ ಗೊತ್ತಿರಲಿಲ್ಲ ಎಂದಿರುವ ಆಕೆ, ತನ್ನ ಬಾಯ್‌ಫ್ರೆಂಡ್‌ನ ಹೆಸರು ಹೇಳಲು ನಿರಾಕರಿಸಿದ್ದಾಳೆ ಎಂದು ಪ್ರಕರಣದ ವಿಚಾರಣೆ ನಡೆಸುತ್ತಿರುವ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಇದೇ ವೇಳೆ ಪೊಲೀಸರು ಆಕೆಯ ಬಾಯ್‌ಫ್ರೆಂಡ್‌ನ ಹುಡುಕಾಟದಲ್ಲಿದ್ದು, ಆತನಿಗೆ ಮದುವೆಯಾಗಿದೆಯೇ ಇಲ್ಲವೇ ಎನ್ನುವುದನ್ನು ಪರಿಶೀಲಿಸುತ್ತಿದ್ದಾರೆ. ನವಜಾತ ಶಿಶುವನ್ನು ಕೊಲೆ ಮಾಡಲು ಆತನೇ ಕುಮ್ಮಕ್ಕು ನೀಡಿದ್ದಾನೆಯೇ ಎನ್ನುವ ಕೋನದಲ್ಲಿಯೂ ತನಿಖೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಇನ್ನೊಂದು ಮೂಲಗಳ ಪ್ರಕಾರ ಪೊಲೀಸರು ಈಗಾಗಲೇ ಆಕೆಯ ಬಾಯ್‌ಫ್ರೆಂಡ್‌ನನ್ನು ಪತ್ತೆ ಮಾಡಿದ್ದಾರೆ ಎನ್ನಲಾಗಿದೆ. 'ಹಾಗೇನಾದರೂ ಆತನೇ ನವಜಾತ ಶಿಶುವನ್ನು ಎಸೆಯಲು ಒತ್ತಡ ಹೇರಿದ್ದ ಎನ್ನುವುದಾದರೆ, ಆತನ ವಿರುದ್ಧವೂ ಕೊಲೆ ಕೇಸ್‌ಅನ್ನು ದಾಖಲಿಸಲಿದ್ದೇವೆ' ಎಂದು ಪೊಲೀಸರು ಹೇಳಿದ್ದಾರೆ.
ಶೀಲಾ ವಿರುದ್ಧ ಐಪಿಸಿ ಸೆಕ್ಷನ್ 302 ಮತ್ತು ನವಜಾತ ಶಿಶುವನ್ನು ಕೊಂದು ಮರೆಮಾಚಿದ (ಐಪಿಸಿ 318) ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ. ಕೊಲೆಯ ಬಗ್ಗೆ ತಿಳಿದ ಬಳಿಕ, ಶೀಲಾಳನ್ನು ವಿಚಾರಿಸಲು ಕೂಡ ಪೊಲೀಸ್ ಕೆಲ ಸಮಯ ತೆಗೆದುಕೊಂಡರು, ಸ್ಕೈ ವಾಕ್ ಅಪಾರ್ಟ್‌ಮೆಂಟ್‌ನಲ್ಲಿನ ಸಾಕಷ್ಟು ನಿವಾಸಿಗಳನ್ನು ವಿಚಾರಣೆ ಮಾಡಿದ ಬಳಿಕ ಕೊನೆಗೆ ಶೀಲಾಳನ್ನು ವಿಚಾರಣೆ ಮಾಡಿ ಬಂಧಿಸಲಾಗಿದೆ.
ಮದುವೆ ಮನೆಯಲ್ಲಿ ಆಸಿಡ್ ದಾಳಿ, ವಧು-ವರರ ಮುಖ ಮಟಾಷ್!
'ನಾವು ಆಕೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಕರೆದುಕೊಂಡು ಹೋಗಿದ್ದೆವು. ಆಕೆಯ ಹಾಗೂ ಮಗುವಿನ ಡಿಎನ್‌ಎ ಪರೀಕ್ಷೆಯನ್ನೂ ಮಾಡಲಾಗಿತ್ತು. ಈ ಕುರಿತು ಶೀಲಾಳ ಪಾಲಕರು ಹಾಗೂ ಸಹೋದರ, ಸಹೋದರಿಯ ವಿಚಾರಣೆ ನಡೆಸಬೇಕಿದೆ. ಆದರೆ, ಶೀಲಾ ಗರ್ಭಿಣಿಯಾಗಿರುವ ಬಗ್ಗೆ ಅವರಿಗೂ ಯಾವುದೇ ಮಾಹಿತಿ ಇದ್ದಿರಲಿಲ್ಲ ಎಂದು ಕಾಣುತ್ತದೆ. ಆದರೆ, ಕುಟುಂಬದ ಸದಸ್ಯರನ್ನು ಖಂಡಿತಾ ಪ್ರಶ್ನೆ ಮಾಡಲಿದ್ದೇವೆ' ಎಂದು ಪೊಲೀಸರು ಹೇಳಿದ್ದಾರೆ.
ಹೈಕೋರ್ಟ್ ಮೆಟ್ಟಿಲೇರಿದ ಐಶ್ವರ್ಯಾ ರೈ ಪುತ್ರಿ 11 ವರ್ಷದ ಆರಾಧ್ಯ ಬಚ್ಛನ್, ಏನ್ ವಿಷ್ಯ?
ಶೀಲಾಗೆ ತನ್ನ ಮಗುವನ್ನು ಸಾಯಿಸಿರುವ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ ಹಾಗಾಗಿ ಆಕೆಯನ್ನು ಕೌನ್ಸಿಲರ್ ಬಳಿ ಕಳುಹಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಆಕೆ ತಾನಿ ಹಿಂದೆಂದೂ ಗರರ್ಭಿಣಿಯಾಗಿರಲಿಲ್ಲ. ಹಾಗಾಗಿ ತನ್ನ ಹೊಟ್ಟೆಯಲ್ಲಿ ಮಗುವೊಂದು ಇದೆ ಎನ್ನುವುದು ಕೂಡ ಆಕೆಯ ಗಮನಕ್ಕೆ ಬಂದಿರಲಿಲ್ಲ. ಆಕೆ ತನ್ನ ಮೊದಲ ಮದುವೆಯಿಂದಲೂ ಎಂದೂ ಗರ್ಭಿಣಿಯಾಗರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.