Asianet Suvarna News Asianet Suvarna News

Ajit Doval: ನೇತಾಜಿ ಇದ್ದಿದ್ರೆ ದೇಶ ವಿಭಜನೆ ಆಗ್ತಿರ್ಲಿಲ್ಲ, ಸ್ವಾತಂತ್ರ್ಯದ ವಿಚಾರದಲ್ಲಿ ರಾಜಿ ಮಾಡಿಕೊಂಡವರಲ್ಲ!

ಸಂಪೂರ್ಣ ಸ್ವಾತಂತ್ರ್ಯದ ಹೊರತಾಗಿ ಏನನ್ನೂ ನಾನು ಸ್ವೀಕರಿಸೋದಿಲ್ಲ ಎಂದಿದ್ದ ನೇತಾಜಿ ಸುಭಾಷ್‌ ಚಂದ್ರ ಬೋಸ್ ಅದಕ್ಕಾಗಿ ತಾವು ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಕಾಂಗ್ರೆಸ್ ಪಕ್ಷಕ್ಕೂ ರಾಜೀನಾಮೆ ನೀಡಿದ್ದರು.

NSA Ajit Doval says India would not have been partitioned if Netaji was there san
Author
First Published Jun 17, 2023, 4:07 PM IST

ನವದೆಹಲಿ (ಜೂ.17): ಬಹುಶಃ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಏನಾದರೂ ಬದುಕಿದ್ದರೆ, ಭಾರತ ಎಂದಿಗೂ ವಿಭಜನೆ ಆಗುತ್ತಿರಲಿಲ್ಲ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಹೇಳಿದ್ದಾರೆ. ಶನಿವಾರ ದೆಹಲಿಯಲ್ಲಿ ಮೊದಲ ಆವೃತ್ತಿಯ ನೇತಾಜಿ ಸುಭಾಷ್‌ ಚಂದ್ರಬೋಸ್‌ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನೇತಾಜಿ ತಮ್ಮ ಜೀವನದ ವಿವಿಧ ಹಂತಗಳಲ್ಲಿ ದಿಟ್ಟತನವನ್ನು ತೋರಿಸಿದ್ದರು. ಮಹಾತ್ಮ ಗಾಂಧಿಯವರ ಎದುರೂ ಕೂಡ ದಿಟ್ಟವಾಗಿ ನಿಂತಿದ್ದರು ಎಂದು ದೋವಲ್‌ ತಿಳಿಸಿದ್ದಾರೆ. 'ಆದರೆ, ಅಂದು ಗಾಂಧೀಜಿಯವರು ತಮ್ಮ ರಾಜಕೀಯ ಜೀವನದ ಉತ್ತುಂಗದಲ್ಲಿದ್ದರು. ಆ ಬಳಿಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನೇತಾಜಿ, ಕಾಂಗ್ರೆಸ್‌ನಿಂದ ಸಂಪೂರ್ಣವಾಗಿ ಹೊರಬಂದು ತಮ್ಮ ಹೋರಾಟವನ್ನು ಹೊಸದಾಗಿ ಆರಂಭ ಮಾಡಿದ್ದರು' ಎಂದಿದ್ದಾರೆ. ನಾನಿಲ್ಲಿ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂದು ಹೇಳಲು ಬಂದಿಲ್ಲ. ಆದರೆ, ಭಾರತದ ಇತಿಹಾಸದಲ್ಲಿ ಹಾಗೂ ಪ್ರಪಂಚದ ಇತಿಹಾಸದಲ್ಲಿ ಪ್ರವಾಹದ ವಿರುದ್ಧ ಈಜುವ ಧೈರ್ಯವನ್ನು ಹೊಂದಿದ್ದ ವ್ಯಕ್ತಿಗಳು ಬಹಳ ಕಡಿಮೆ. ಪ್ರವಾಹದ ವಿರುದ್ಧ ನೇತಾಜಿ ಅವರ ಹೋರಾಟ ಸುಲಭವೂ ಆಗಿರಲಿಲ್ಲ. ನೇತಾಜಿ ಹೋರಾಟದಲಲ್ಲಿ ಏಕಾಂಗಿಯಾಗಿದ್ದರು. ಜಪಾನ್‌ ಹೊರತಾಗಿ ಯಾವುದೇ ದೇಶವೂ ಅವರಿಗೆ ಬೆಂಬಲ ನೀಡಲಿಲ್ಲ ಎಂದರು ಹೇಳಿದ್ದಾರೆ.

"ನಾನು ಬ್ರಿಟಿಷರ ವಿರುದ್ಧ ಹೋರಾಡುತ್ತೇನೆ, ನಾನು ಸ್ವಾತಂತ್ರ್ಯಕ್ಕಾಗಿ ಎಂದೂ ಭಿಕ್ಷೆ ಬೇಡುವುದಿಲ್ಲ. ಅದು ನನ್ನ ಹಕ್ಕು ಮತ್ತು ನಾನು ಅದನ್ನು ಪಡೆದೇ ತೀರುತ್ತೇನೆ" ಎಂಬ ಆಲೋಚನೆ ಅವರ ಮನಸ್ಸಿನಲ್ಲಿ ಇದ್ದಿತ್ತು. ಸ್ವಾತಂತ್ರ್ಯದ ಸಮಯದಲ್ಲಿ ಸುಭಾಷ್‌ ಚಂದ್ರ ಬೋಸ್‌ ಏನಾದರೂ ಬದುಕಿದ್ದರೆ, ಖಂಡಿತಾ ಭಾರತ ವಿಭಜನೆಯಾಗುತ್ತಿರಲಿಲ್ಲ. ಸ್ವತಃ ಪಾಕಿಸ್ತಾನದ ನಾಯಕ ಮೊಹಮದ್‌ ಅಲಿ ಜಿಲ್ಲಾ ಕೂಡ ನಾನೇನಾದರೂ ಒಪ್ಪುವ ಹೋರಾಟಗಾರನಿದ್ದರೆ, ಅದು ಸುಭಾಷ್‌ ಚಂದ್ರ ಬೋಸ್ ಮಾತ್ರ ಎಂದು ಹೇಳಿದ್ದರು ಎಂದು ಧೋವಲ್‌ ತಿಳಿಸಿದ್ದಾರೆ.

"ಜೀವನದಲ್ಲಿ ನಮ್ಮ ಪ್ರಯತ್ನಗಳು ಮುಖ್ಯವೋ ಅಥವಾ ಫಲಿತಾಂಶವು ಮುಖ್ಯವೋ ಎಂಬ ಪ್ರಶ್ನೆಯು ಆಗಾಗ್ಗೆ ಮನಸ್ಸಿನಲ್ಲಿ ಬರುತ್ತದೆ. ಸುಭಾಸ್ ಬೋಸ್ ಅವರ ಮಹತ್ತರವಾದ ಪ್ರಯತ್ನಗಳನ್ನು ಯಾರೂ ಸಂದೇಹಿಸಲಾರರು, ಗಾಂಧಿಯವರು ಕೂಡ ಅಭಿಮಾನಿಯಾಗಿದ್ದರು. ಆದರೆ ಜನರು ಸಾಮಾನ್ಯವಾಗಿ ನೀವು ನೀಡುವ ಫಲಿತಾಂಶಗಳ ಮೂಲಕ ನಿಮ್ಮನ್ನು ನಿರ್ಣಯಿಸುತ್ತಾರೆ. ಹಾಗಂತ, ಇಡೀ ಸುಭಾಸ್ ಬೋಸ್ ಪ್ರಯತ್ನ ವ್ಯರ್ಥವೇ? ಎಂದು ಧೋವಲ್‌ ಪ್ರಶ್ನೆ ಮಾಡಿದ್ದಾರೆ.

ಭಾರತ ಯಾವುದೇ ದೇಶದ ಮಿಲಿಟರಿ ಮೈತ್ರಿಯ ಭಾಗವಾಗಿಲ್ಲ: ಅಮೆರಿಕ ಜತೆಗಿನ ಸಂಬಂಧದ ಬಗ್ಗೆ ಚೀನಾಗೆ ಸ್ಪಷ್ಟನೆ

ಅವರ ಮರಣದ ಬಳಿಕವೂ, ನನಗೆ ಗೊತ್ತಿಲ್ಲ ಅದು ಯಾವಾಗ ಆಯಿತು ಅನ್ನೋದು. ಆದರೆ, ಈಗಲೂ ಅವರು ಸೃಷ್ಟಿಸಿದ ರಾಷ್ಟ್ರೀಯತೆಯ ಕಲ್ಪನೆಗಳಿಗೆ  ನಾವು ಹೆದರುತ್ತಿದ್ದೇವೆ. ಸ್ವತಃ ಸಭಾಷ್‌ ಚಂದ್ರ ಬೋಸ್‌ ಅವರೇ ಅನೇಕ ಭಾರತೀಯರು ಈ ಹಾದಿಯಲ್ಲಿ ಹೋಗಬೇಕು ಎಂದು ಬಯಸಿದ್ದರು ಎಂದು ಎನ್‌ಎಸ್‌ಎ ಹೇಳಿದ್ದಾರೆ. ನೇತಾಜಿಯ ವಿಚಾರದಲ್ಲಿ ಇತಿಹಾಸ ಬಹಳ ನಿರ್ದಯವಾಗಿ ನಡೆಸಿಕೊಂಡಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ನೇತಾಜಿಯವರ ಇತಿಹಾಸವನ್ನು ಪುನರುಜ್ಜೀವನಗೊಳಿಸಲು ಉತ್ಸುಕರಾಗಿರುವುದು ನನಗೆ ತುಂಬಾ ಸಂತೋಷವಾಗಿದೆ ಎಂದು ಅಜಿತ್‌ ದೋವಲ್‌ ಹೇಳಿದ್ದಾರೆ.

ಭಯೋತ್ಪಾದನೆ ಇಸ್ಲಾಮ್‌ ಧರ್ಮಕ್ಕೆ ತದ್ವಿರುದ್ಧವಾದುದು: ಅಜಿತ್ ದೋವಲ್

Follow Us:
Download App:
  • android
  • ios