ಭಯೋತ್ಪಾದನೆ ಇಸ್ಲಾಮ್‌ ಧರ್ಮಕ್ಕೆ ತದ್ವಿರುದ್ಧವಾದುದು: ಅಜಿತ್ ದೋವಲ್

ಗಡಿಯಾಚೆಗಿನ ಭಯೋತ್ಪಾದನೆ ಹಾಗೂ ಐಎಸ್‌ಐಎಸ್‌ನಿಂದ ಪ್ರೇರಿತವಾದ ಭಯೋತ್ಪಾದನೆಯೂ ಮಾನವೀಯತೆಗೆ ಅಪಾಯವನ್ನುಂಟು ಮಾಡುತ್ತಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ದೋವಲ್ ಹೇಳಿದ್ದಾರೆ.

NSA Ajith doval adressing a conference about role of Ulema in fostering a culture of interfaith peace and social harmony in India and Indonesia akb

ದೆಹಲಿ: ಗಡಿಯಾಚೆಗಿನ ಭಯೋತ್ಪಾದನೆ ಹಾಗೂ ಐಎಸ್‌ಐಎಸ್‌ನಿಂದ ಪ್ರೇರಿತವಾದ ಭಯೋತ್ಪಾದನೆಯೂ ಮಾನವೀಯತೆಗೆ ಅಪಾಯವನ್ನುಂಟು ಮಾಡುತ್ತಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ದೋವಲ್ ಹೇಳಿದ್ದಾರೆ. ಭಾರತ ಮತ್ತು ಇಂಡೋನೇಷ್ಯಾದಲ್ಲಿ ಸರ್ವಧರ್ಮ ಶಾಂತಿ ಮತ್ತು ಸಾಮಾಜಿಕ ಸೌಹಾರ್ದತೆಯ ಸಂಸ್ಕೃತಿಯನ್ನು ಬೆಳೆಸುವಲ್ಲಿ ಮುಸ್ಲಿಂ ಧರ್ಮಗುರುಗಳ (ಉಲೇಮಾಗಳ) ಪಾತ್ರದ ಕುರಿತು ರಾಷ್ಟ್ರ ರಾಜಧಾನಿಯಲ್ಲಿ ನಡೆದ ಸಮಾವೇಶವನ್ನು ಉದ್ದೇಶಿಸಿ ದೋವಲ್ ಮಾತನಾಡಿದರು. 

ನಿಮ್ಮೆಲ್ಲರಿಗೂ ತಿಳಿದಿರುವಂತೆ, ನಮ್ಮ ಈ ಎರಡೂ ದೇಶಗಳು (ಭಾರತ- ಇಂಡೋನೇಷಿಯಾ) ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದದ ಬಲಿಪಶುಗಳಾಗಿವೆ. ನಾವು ಸಾಕಷ್ಟು ಪ್ರಮಾಣದಲ್ಲಿ ಸವಾಲುಗಳನ್ನು ಜಯಿಸಿದ್ದರೂ, ಗಡಿಯಾಚೆಗಿನ (cross-border terrorism) ಮತ್ತು ಐಸಿಸ್ ಪ್ರೇರಿತ ಭಯೋತ್ಪಾದನೆ (ISIS-inspired Terrorism) ದೇಶಕ್ಕೆ ಬೆದರಿಕೆಯೊಡ್ಡುತ್ತಿದೆ. ಐಸಿಸ್‌ನಿಂದ ಪ್ರೇರಣೆಗೊಂಡು ಭಯೋತ್ಪಾದನೆಗೆ ಇಳಿಯುತ್ತಿರುವ ವ್ಯಕ್ತಿಗಳು, ಭಯೋತ್ಪಾದಕ ತಂಡಗಳು ಮುಂತಾದವುಗಳ ನಿರ್ಮೂಲನೆಗೆ ನಾಗರಿಕ ಸಮಾಜದ ನೆರವು ಅಗತ್ಯ ಎಂದು ಹೇಳಿದರು.

 ಶಾಂತಿ ಕದಡುವ ಪಿಎಫ್ಐ ನಿಷೇಧಿಸಿ, ಅಜಿತ್ ದೋವಲ್ ಸಭೆಯಲ್ಲಿ ಮುಸ್ಲಿಮ್ ನಾಯಕರ ನಿರ್ಣಯ!

ಸಹಿಷ್ಣುತೆ, ಸಾಮರಸ್ಯ (harmony) ಮತ್ತು ಶಾಂತಿಯುತ ಸಹಬಾಳ್ವೆಯನ್ನು (peaceful co-existence) ಉತ್ತೇಜಿಸುವಲ್ಲಿ ಸಹಕಾರವನ್ನು ಹೆಚ್ಚಿಸುವ ಸಲುವಾಗಿ ಭಾರತ ಹಾಗೂ ಇಂಡೋನೇಷಿಯಾದ ಮುಸ್ಲಿಂ ವಿದ್ವಾಂಸರನ್ನು (Indonesian Ulema) ಒಟ್ಟುಗೂಡಿಸುವುದು ಈ  ಸಮಾವೇಶದ ಉದ್ದೇಶವಾಗಿದೆ. ಇದು ಹಿಂಸಾತ್ಮಕ ಉಗ್ರವಾದ, ಭಯೋತ್ಪಾದನೆ ಮತ್ತು ಮೂಲಭೂತವಾದದ ವಿರುದ್ಧದ ಹೋರಾಟವನ್ನು ಬಲಪಡಿಸುತ್ತದೆ ಎಂದು ದೋವಲ್ ಹೇಳಿದರು. 

ಉಗ್ರವಾದ (extremism), ಮೂಲಭೂತವಾದ ಮತ್ತು ಧರ್ಮದ ದುರುಪಯೋಗದ ಯಾವುದೇ ಉದ್ದೇಶಗಳು ಯಾವುದೇ ನೆಲೆಯಲ್ಲಿ ಸಮರ್ಥನೀಯವಲ್ಲ. ಇದು ಧರ್ಮಗೆಡಿಸುವ ಯತ್ನವಾಗಿದ್ದು, ಅದರ ವಿರುದ್ಧ ನಾವೆಲ್ಲರೂ ಧ್ವನಿ ಎತ್ತಬೇಕಾಗಿದೆ. ಉಗ್ರವಾದ ಮತ್ತು ಭಯೋತ್ಪಾದನೆ ಇಸ್ಲಾಂನ ಅರ್ಥಕ್ಕೆ ವಿರುದ್ಧವಾಗಿದೆ. ಏಕೆಂದರೆ ಇಸ್ಲಾಂ ಎಂದರೆ ಶಾಂತಿ ಮತ್ತು ಯೋಗಕ್ಷೇಮಕರವಾಗಿ ಇರುವುದು (ಸಲಾಮತಿ/ಅಸಲಾಂ). ಆದರೆ ಉಗ್ರವಾದದಂತ ದುಷ್ಟ ಶಕ್ತಿಗಳಿಗೆ ಒಡ್ಡುತ್ತಿರುವ ವಿರೋಧವನ್ನು ಯಾವುದೇ ಧರ್ಮದೊಂದಿಗಿನ ಘರ್ಷಣೆ ಎಂದು ಬಣ್ಣಿಸಬಾರದು. ಹಾಗೆ ಮಾಡಿದಲ್ಲಿ ಅದು ಕುತಂತ್ರವಾಗುತ್ತದೆ ಎಂದು ಅಜಿತ್ ದೋವಲ್ ಹೇಳಿದರು. 

ಅಗ್ನಿಪಥ್ ಕುರಿತಾಗಿ ಅಜಿತ್ ದೋವಲ್ ಹೇಳಿದ ಬೆಂಕಿಯಂಥ ಮಾತುಗಳು!

ಧರ್ಮಗಳ ನಡುವಿನ ಸಂಘರ್ಷ ಎಂದು ಭಾವಿಸುವ ಬದಲು ನಮ್ಮ ಧರ್ಮಗಳಲ್ಲಿ ಇರುವ ಮಾನವತಾವಾದ, ಶಾಂತಿ ಮತ್ತು ತಿಳುವಳಿಕೆಯ ಮೌಲ್ಯಗಳನ್ನು ಪ್ರತಿನಿಧಿಸುವ ನಮ್ಮ ಧರ್ಮಗಳ ನಿಜವಾದ ಸಂದೇಶದ ಮೇಲೆ ಎಲ್ಲರೂ ಗಮನಹರಿಸಬೇಕು. ಮುಸ್ಲಿಂ ಧರ್ಮಗ್ರಂಥ ಕುರಾನ್‌ನಲ್ಲಿ ಇರುವಂತೆ ಒಬ್ಬ ವ್ಯಕ್ತಿಯನ್ನು ಕೊಲ್ಲುವುದು ಎಲ್ಲಾ ಮಾನವೀಯತೆಯನ್ನು ಕೊಂದಂತೆ ಮತ್ತು ಒಬ್ಬನನ್ನು ಉಳಿಸುವುದು ಮಾನವೀಯತೆಯನ್ನು ಉಳಿಸಿದಂತೆ. 

ಇಸ್ಲಾಂ ಧರ್ಮವೂ ಜಿಹಾದ್ ಅಫ್ಜಲ್ (Jihad Afzal) ಎಂದು ಆದೇಶಿಸುತ್ತದೆ. ಅಂದರೆ ಅದರರ್ಥ ಮನುಷ್ಯನ ಇಂದ್ರಿಯ ಅಥವಾ ಅಹಂಕಾರದ ವಿರುದ್ಧ ಜಿಹಾದ್ (Jihad) ಮಾಡುವುದಾಗಿದ್ದು, ಮುಗ್ಧ ನಾಗರಿಕರ ವಿರುದ್ಧ ಅಲ್ಲ ಎಂದು ದೋವಲ್ ವಿವರಿಸಿದರು. ಈ ಸಮಾವೇಶದಲ್ಲಿ ಎನ್‌ಎಸ್‌ಎ ಅಜಿತ್ ದೋವಲ್ ಅವರ ಆಹ್ವಾನದ ಮೇರೆಗೆ ಒಂಡೋನೇಷ್ಯಾದ ರಾಜಕೀಯ, ಕಾನೂನು ಮತ್ತು ಭದ್ರತಾ ವ್ಯವಹಾರಗಳ ಸಮನ್ವಯ ಸಚಿವ ಮೊಹಮ್ಮದ್ ಮಹ್ಫುದ್ ಹಾಗೂ ಇಂಡೋನೇಷ್ಯಾದ ಉಲೇಮಾಗಳ ಉನ್ನತ ನಿಯೋಗದ ಜೊತೆ ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. 

Ajit Doval: ‘ನನ್ನ ಮೈಯಲ್ಲಿ ಚಿಪ್‌ ಇದೆ ’ ಅಜಿತ್ ದೋವಲ್ ಮನೆಗೆ ನುಗ್ಗಲು ಮುಂದಾದ ಬೆಂಗಳೂರಿನ ವ್ಯಕ್ತಿ

ಈ ಸಮಾವೇಶದಲ್ಲಿ ಇಂಡೋನೇಷ್ಯಾದಿಂದ (Indonesia) ಆಗಮಿಸಿದ ಉಲೇಮಾಗಳು ಇಲ್ಲಿನ ಧರ್ಮಗುರುಗಳೊಂದಿಗೆ ಸಂವಹನ ನಡೆಸಿದ್ದು, ಭಾರತ ಹಾಗೂ ಇಂಡೋನೇಷ್ಯಾದಲ್ಲಿ ಸರ್ವಧರ್ಮ ಶಾಂತಿ ಹಾಗೂ ಸಾಮಾಜಿಕ ಸೌಹಾರ್ದತೆಯ ಸಂಸ್ಖೃತಿಯನ್ನು ಬೆಳೆಸುವಲ್ಲಿ ಧರ್ಮಗುರುಗಳ ಪಾತ್ರದ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಮುಸ್ಲಿಂ ಮುಂದುವರಿಕೆ ಮತ್ತು ಬದಲಾವಣೆ, ಅಂತರ್ ಧರ್ಮೀಯ ಸಮಾಜದಲ್ಲಿ ನಂಬಿಕೆ ಸೌಹಾರ್ದತೆ, ಅಭ್ಯಾಸ ಹಾಗೂ ಅನುಭವ ಈ ಮೂರು ವಿಷಯಗಳ ಬಗ್ಗೆ ಈ ಸಮಾವೇಶದಲ್ಲಿ ಚರ್ಚೆ ನಡೆಯಲಿದೆ. ಪ್ರಸ್ತುತ ಇಂಡೋನೇಷ್ಯಾ ವಿಶ್ವದ ಅತೀ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು (Muslim population) ಹೊಂದಿರುವ ದೇಶವಾಗಿದೆ. ಈ ವರ್ಷದ ಮಾರ್ಚ್‌ನಲ್ಲಿ ಅಜಿತ್ ದೋವಲ್ ಇಂಡೋನೇಷ್ಯಾಕ್ಕೆ ತೆರಳಿ ಅಲ್ಲಿನ ಸಚಿವ ಮೆಹಫುದ್ ಅವರನ್ನು ಈ ಸಮಾವೇಶಕ್ಕಾಗಿ ಭಾರತಕ್ಕೆ ಆಹ್ವಾನಿಸಿದ್ದರು. 
 

Latest Videos
Follow Us:
Download App:
  • android
  • ios