ಈ ಹಣ್ಣು ಹಣ್ಣು ಅಜ್ಜಿ ಮಾತನಾಡೋ ಇಂಗ್ಲಿಷ್‌ಗೆ ನೆಟ್ಟಿಗರು ಫಿದಾ!
- ಇಂಗ್ಲೀಷ್ ಮಾತನಾಡುವ ಅಜ್ಜಿಯ ವಿಡಿಯೋ ವೈರಲ್
- ತರಕಾರಿಗಳು ಮತ್ತು ಪ್ರಾಣಿಗಳ ಹೆಸರು ಇಂಗ್ಲೀಷ್‌ನಲ್ಲಿ ಹೇಳುವ ಅಜ್ಜಿ
- ಅಜ್ಜಿಯ ಮುದ್ದಾದ ವಿಡಿಯೋಗೆ ಇಂಟರ್‌ನೆಟ್ ಫಿದಾ
ಕಾಶ್ಮೀರ(ಫೆ.15): ಕಾಶ್ಮೀರದ ಅಜ್ಜಿಯೊಬ್ಬರು ಮುದ್ದು ಮುದ್ದಾಗಿ ಇಂಗ್ಲೀಷ್ ಪದಗಳನ್ನು ಹೇಳುತ್ತಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅಜ್ಜಿಯೊಬ್ಬರು ಹಣ್ಣು ಹಾಗೂ ತರಕಾರಿಗಳ ಹೆಸರನ್ನು ಇಂಗ್ಲೀಷ್‌ನಲ್ಲಿ ಹೇಳುತ್ತಾರೆ. ಈ ವಿಡಿಯೋವನ್ನು ಟ್ವಿಟರ್ ಬಳಕೆದಾರರಾದ ಸೈಯದ್ ಸ್ಲೀಟ್ ಶಾ (Syed Sleet Shah) ಎಂಬವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಫೆಬ್ರವರಿ 14 ರಂದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಈಗಾಗಲೇ 63,000 ಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಈ ವಿಡಿಯೋದಲ್ಲಿ ಕಾಶ್ಮೀರದ ತುಂಬಾ ವಯಸ್ಸಾಗಿರುವ ಅಜ್ಜಿಯೊಬ್ಬರು ತಮ್ಮ ಬೊಚ್ಚು ಬಾಯಲ್ಲಿ ತರಕಾರಿಗಳು ಮತ್ತು ಪ್ರಾಣಿಗಳ ಹೆಸರನ್ನು ಇಂಗ್ಲೀಷ್‌ನಲ್ಲಿ ಹೇಳುವುದನ್ನು ಕಾಣಬಹುದು.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವೀಡಿಯೋದಲ್ಲಿ ಅಜ್ಜಿಯ ಮೊಮ್ಮಗನಂತೆ ಕಾಣುವ ಯುವಕನೋರ್ವ ಕಾಶ್ಮೀರಿ ಭಾಷೆಯಲ್ಲಿ ಹಣ್ಣುಗಳು ಮತ್ತು ತರಕಾರಿಗಳ ಹೆಸರನ್ನು ಹೇಳುತ್ತಾನೆ. ಆಗ ವಯಸ್ಸಾದ ಅಜ್ಜಿ ಅವುಗಳ ಹೆಸರನ್ನುಇಂಗ್ಲೀಷ್‌ನಲ್ಲಿ ಹೇಳುತ್ತಾನೆ. ಇನ್ನು ಬೆಕ್ಕನ್ನು ಗುರುತಿಸುವಾಗ ಆಕೆ ತಪ್ಪುತ್ತಾಳೆ. ಆಗ ಯುವಕ ಅದನ್ನು ಸರಿಪಡಿಸುತ್ತಾನೆ. ಬಳಿಕ ಆಕೆ ಅದನ್ನು ಕ್ಯಾಟ್ ಎಂದು ಇಂಗ್ಲೀಷ್‌ನಲ್ಲಿ ಉಚ್ಚರಿಸುತ್ತಾಳೆ. ಈ ಅಜ್ಜಿಯ ಮುದ್ದಾದ ಉಚ್ಚಾರಣೆಯೂ ಸಾಮಾಜಿಕ ಜಾಲತಾಣದಲ್ಲಿ ನೋಡುಗರ ಮೆಚ್ಚುಗೆಯನ್ನು ಗಳಿಸಿದೆ.
ಅಜ್ಜಿಗೆ ಹೊಡೆದ ಲಾಟರಿ... ಬಂದ ಹಣದಲ್ಲಿ ಸರಿ ಅರ್ಧ ಟಿಕೆಟ್ ಮಾರಿದವನಿಗೆ ನೀಡಿ ಉದಾರತೆ
ಇದೊಂದು ಜೀವನದ ವೃತ್ತವಿದ್ದಂತೆ ನಾವು ಶಿಶುವಾಗಿದ್ದಾಗ ಹೇಗೆ ಮಾತನಾಡಬೇಕು ಮತ್ತು ತಿರುವುಗಳು ಹೇಗೆ ಎಂದು ಅವರು ನಮಗೆ ಕಲಿಸಿದರು ಇನ್ನೂ ಹೆಚ್ಚು ಉಪಯುಕ್ತವಾದ ವಿಷಯವೆಂದರೆ ಕಲಿಕೆಯು ಜೀವನದಲ್ಲಿ ಸ್ಥಿರವಾದ ಪ್ರಕ್ರಿಯೆಯಾಗಿದೆ ಎಂದು ಬರೆದು ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ.
ಆದರೆ ಇವರು ಕಾಶ್ಮೀರದ ಯಾವ ಪ್ರದೇಶದವರು ಎಂದು ಇನ್ನೂ ತಿಳಿದಿಲ್ಲವಾದರೂ, ವೀಡಿಯೊವನ್ನು ರೆಕಾರ್ಡ್ ಮಾಡುತ್ತಿರುವ ಪುರುಷನ ಉಚ್ಚಾರಣೆಯು ಅವರು ಕಾಶ್ಮೀರ ಕಣಿವೆಯ ಗ್ರಾಮಾಂತರ ಜಿಲ್ಲೆಗೆ ಸೇರಿದವರು ಎಂದು ಸೂಚಿಸುತ್ತದೆ ಎಂದು ಪಿಟಿಐ ವರದಿ ಮಾಡಿದೆ.
ಈ ಅಜ್ಜಿ ಭಾರಿ ಹುಷಾರು ಮರೆ... 70ಕ್ಕೆ ಡಿವೋರ್ಸ್ 73ಕ್ಕೆ ಹೊಸ ಲವ್