ಈ ಅಜ್ಜಿ ಭಾರಿ ಹುಷಾರು ಮರೆ... 70ಕ್ಕೆ ಡಿವೋರ್ಸ್ 73ಕ್ಕೆ ಹೊಸ ಲವ್
- 70ನೇ ವರ್ಷದಲ್ಲಿ 40 ವರ್ಷದ ದಾಂಪತ್ಯ ಜೀವನ ಅಂತ್ಯಗೊಳಿಸಿದ ಅಜ್ಜಿ
- 73ನೇ ವರ್ಷದಲ್ಲಿ ಮತ್ತೆ ಹೊಸ ಪ್ರೀತಿಯೊಂದಿಗೆ ಪಯಣ
- ಯುವ ಪ್ರೇಮಿಗಳಲ್ಲಿ ಪ್ರೀತಿಯ ಕಿಚ್ಚು ಹಚ್ಚಿದ ಅಜ್ಜಿಯ ಟ್ವಿಟ್
ಕ್ಯಾಲಿಫೋರ್ನಿಯಾ(ಫೆ. 15): 73 ವರ್ಷದ ಅಜ್ಜಿಯೊಬ್ಬರು ತಮಗೆ ಈ ವಯಸ್ಸಿನಲ್ಲಿ ನಿಜವಾದ ಪ್ರೀತಿ ಸಿಕ್ಕಿರುವ ಬಗ್ಗೆ ಟ್ವಿಟ್ಟರ್‌ನಲ್ಲಿ ವಿಷಯ ಹಂಚಿಕೊಂಡಿದ್ದು, ಈ ಟ್ವಿಟ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೀವನದಲ್ಲಿ ನಿಜವಾದ ಪ್ರೀತಿಯನ್ನು ಪತ್ತೆ ಮಾಡುವುದು ನಿಜವಾಗಿಯೂ ಕಷ್ಟದ ಕೆಲಸ. ಬಹುತೇಕರ ಬದುಕಿನಲ್ಲಿ ನಿಜವಾದ ಪ್ರೀತಿ ಸಿಗದೆ ಕೊರಗುವುದನ್ನು ನೀವು ನೋಡಿರಬಹುದು. ಆದರೆ ಇಲ್ಲೊಬ್ಬರು ಅಜ್ಜಿ ತಮ್ಮ 73ನೇ ವರ್ಷದಲ್ಲಿ ನಿಜವಾದ ಪ್ರೀತಿ ಸಿಕ್ಕಿದ್ದಾಗಿ ಟ್ವಿಟ್ ಮಾಡಿದ್ದಾರೆ. ಪ್ರೇಮಿಗಳ ದಿನ ನಿನ್ನೆಯಷ್ಟೇ ಕಳೆದಿದ್ದು, ಪ್ರೇಮಿಗಳ ದಿನಕ್ಕೆ ಎರಡು ದಿನಗಳಿರುವಾಗ ಅಜ್ಜಿ ಮಾಡಿದ ಟ್ವಿಟ್ ಯುವ ಪ್ರೇಮಿಗಳಲ್ಲಿ, ಪ್ರೇಮವನ್ನು ಅರಸುತ್ತಿರುವವರಲ್ಲಿ ಮತ್ತಷ್ಟು ಉತ್ಸಾಹ ತುಂಬಿತ್ತು.
ಅಮೆರಿಕದ (America) ಈ ಅಜ್ಜಿ ಕರೋಲ್ ಮ್ಯಾಕ್ (Carol Mack) ಮೂರು ವರ್ಷಗಳ ಹಿಂದೆ ಅವರ 40 ವರ್ಷಗಳ ದಾಂಪತ್ಯ ಜೀವನದಿಂದ ವಿಚ್ಚೇದನ ಪಡೆದುಕೊಂಡಿದ್ದರು. ಇದಾದ ಬಳಿಕ ಈ ಇಳಿ ವಯಸ್ಸಿನಲ್ಲಿ ಹೇಗೆ ನಿಜ ಪ್ರೀತಿ ಸಿಕ್ಕಿತ್ತು ಎಂಬುದನ್ನು ಅವರು ಬರೆದುಕೊಂಡಿದ್ದು, ಅಜ್ಜಿಯ ಈ ಟ್ವಿಟ್‌ನ್ನು 10 ಲಕ್ಷಕ್ಕೂ ಹೆಚ್ಚು ಜನ ಮೆಚ್ಚಿದ್ದಾರೆ. ಅಲ್ಲದೇ 72,000 ಜನ ರಿಟ್ವಿಟ್ ಮಾಡಿದ್ದಾರೆ.
ಜೀವನವು ತುಂಬಾ ವಿಚಿತ್ರವಾಗಿದೆ. ಸುಮಾರು ನಾಲ್ಕು ದಶಕಗಳ ದಾಂಪತ್ಯದ ಬಳಿಕ 70 ನೇ ವಯಸ್ಸಿನಲ್ಲಿ ಮತ್ತೆ ಏಕಾಂಗಿಯಾಗಿರುತ್ತೇನೆ ಎಂದು ನಾನು ಎಂದಿಗೂ ನಿರೀಕ್ಷಿಸಿರಲಿಲ್ಲ. ಮತ್ತು 73 ನೇ ವಯಸ್ಸಿನಲ್ಲಿ ಅದೂ ಈ ಕೋವಿಡ್ ಸಾಂಕ್ರಾಮಿಕ ರೋಗದ ಮಧ್ಯದಲ್ಲಿ ನಿಜವಾದ ಪ್ರೀತಿಯನ್ನು ಕಂಡುಕೊಳ್ಳುವೆ ಎಂಬುದನ್ನು ನಾನು ಖಂಡಿತವಾಗಿಯೂ ನಿರೀಕ್ಷಿಸಿರಲಿಲ್ಲ ಎಂದು ಅವರು ಬರೆದುಕೊಂಡಿದ್ದಾರೆ. 73 ವರ್ಷದ ಈ ಅಜ್ಜಿಯ ಟ್ವಿಟರ್ ಖಾತೆಯಲ್ಲಿ ಅವರು ನಿವೃತ್ತಿ ಹೊಂದಿದ' ನರ್ಸ್, ವಕೀಲರು, ಶಿಕ್ಷಣತಜ್ಞರು, ಹಕ್ಕುಗಳ ವಕೀಲರು ಮತ್ತು ಸಾರ್ವಜನಿಕ ಭಾಷಣಕಾರರು ಎಂದು ಬರೆದುಕೊಂಡಿದೆ.
ನೀರಿನಾಳಕ್ಕಿಳಿದು ಪ್ರಪೋಸ್ ಮಾಡಿದ..ಮೇಲೆ ಬರಲಾರದೆ ಸಾವು ಕಂಡ; ಟ್ರೂ ಲವ್ ಸ್ಟೋರಿ
ಕ್ಯಾಲಿಫೋರ್ನಿಯಾದಲ್ಲಿ (California) ವಾಸಿಸುವ ಕರೋಲ್ ಮ್ಯಾಕ್, ತಮ್ಮ ಜೀವನದಲ್ಲಿ ಮತ್ತೊಮ್ಮೆ ಪ್ರೀತಿಯನ್ನು ಕಂಡುಕೊಂಡ ಬಗ್ಗೆ ತುಂಬಾ ಖುಷಿಯಾಗಿದ್ದಾರೆ. ಆದರೆ ಅವರು ತಮ್ಮ ಹೊಸ ಪ್ರೇಮಿಯ ಗುರುತನ್ನು ಬಹಿರಂಗಪಡಿಸಲಿಲ್ಲ. ಇತ್ತ ಅವರು ಹೊಸ ಪ್ರೀತಿಯ ಬಗ್ಗೆ ಹೇಳಿಕೊಂಡ ನಂತರ ಅವರ ಕೆಲವು ಟ್ವಿಟ್ಟರ್ ಫಾಲೋವರ್ಸ್‌ಗಳು ಅವರಲ್ಲಿ ಏಕೆ ನಿಮ್ಮ ದಾಂಪತ್ಯ ಕೊನೆಗೊಂಡಿತು. ನಿಮ್ಮ ಪತಿ ಮೃತಪಟ್ಟರೇ ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕರೋಲ್ ಮ್ಯಾಕ್, ಪತಿ ತೀರಿಕೊಂಡಿಲ್ಲ, ಆದರೆ ಅವರು ತನಗೆ ಮೋಸ ಮಾಡುತ್ತಿರುವುದು ತಿಳಿದು ಈ ಸಂಬಂಧವನ್ನು ಡಿವೋರ್ಸ್ ಮೂಲಕ ಕೊನೆಗೊಳಿಸಿದ್ದಾಗಿ ಹೇಳಿದ್ದಾರೆ.
ಧನ್ಯವಾದಗಳು! ನಾನು ನಿಜವಾಗಿಯೂ ನನ್ನ ಪತಿಯನ್ನು ಕಳೆದುಕೊಂಡಿಲ್ಲ. ಆದರೆ ಆತ ಪಕ್ಕದಲ್ಲಿಇನ್ನೊಬ್ಬ ಮಹಿಳೆಯನ್ನು ಹೊಂದಿರುವುದನ್ನು ತಿಳಿದಾಗ ನಾನೇ ಆತನನ್ನು ಒದ್ದು ಹೊರಗೆ ಹಾಕಿದೆ ಮತ್ತು ನಾನು ಎಂದಿಗೂ ಹಿಂತಿರುಗಿ ನೋಡಲಿಲ್ಲ ಎಂದು ಈ ಅಜ್ಜಿ ಹುರುಪಿನಿಂದ ಹೇಳಿಕೊಂಡಿದ್ದಾರೆ.
Long Distance Relationships: ಸಿಗಲಾರದ ಸಂಗಾತಿಯೊಂದಿಗೆ ಆಚರಿಸಿ ಡಿಜಿಟಲ್ ವ್ಯಾಲೆಂಟೈನ್ಸ್ ಡೇ
ನಾನು ನಿಜವಾಗಿ ಅರೇಂಜ್ಡ್ ಮ್ಯಾರೇಜ್‌ಗಳಲ್ಲಿ ನಂಬಿಕೆಯುಳ್ಳವಳು. ಪಾಲಕರು ತಮ್ಮ ಮಕ್ಕಳ ಬಗ್ಗೆ ಚೆನ್ನಾಗಿ ತಿಳಿದಿರುತ್ತಾರೆ ಮತ್ತು ಅವರು ಬೆಳೆದ ಮಕ್ಕಳಿಗೆ ಆಯ್ಕೆಯನ್ನು ಬಿಡುವುದಿಲ್ಲ. ಅಲ್ಲದೆ, ಸಾಮಾನ್ಯ ಮೌಲ್ಯಗಳು ಮತ್ತು ಉತ್ತಮ ನಂಬಿಕೆಯು ಸಂತೋಷದ ದಾಂಪತ್ಯವನ್ನು ನೀಡಬಹುದು ಎಂದು ನಾನು ನಂಬುತ್ತೇನೆ. ನನ್ನ ವಯಸ್ಸಿನಲ್ಲಿ, ನಾನು ನಾನೇ ಆಗಿದ್ದೆ ಎಂದು ಅವರು ಭಾರತದಲ್ಲಿನ ಪೋಷಕರು ನಿಶ್ಚಯಗೊಳಿಸಿ ಮಾಡುವ ಮದುವೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಈ ಟ್ವೀಟ್‌ಗೆ ಇದೀಗ ಅಭಿನಂದನಾ ಸಂದೇಶಗಳ ಮಹಾಪೂರವೇ ಹರಿದು ಬಂದಿದೆ.