Asianet Suvarna News Asianet Suvarna News

ಸಹಾಯ ಮಾಡಲಾಗುತ್ತಿಲ್ಲ, ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ತನ್ನಿ; AAP ಶಾಸಕನ ಮನವಿ!

ಆಸ್ಪತ್ರೆ ಇಲ್ಲ, ಬೆಡ್, ಇಲ್ಲ ಆಕ್ಸಿಜನ್ ಸಿಗುತ್ತಿಲ್ಲ, ನನ್ನ ಸ್ನೇಹಿತನೆ ಆಕ್ಸಿನ್ ಇಲ್ಲದೆ ನರಳಾಡುತ್ತಿದ್ದಾನೆ. ಆತನ ಮಕ್ಕಳು ಆಮ್ಲಜನಕಕ್ಕಾಗಿ ಒದ್ದಾಡುತ್ತಿದ್ದಾರೆ. 6 ಬಾರಿ ಗೆದ್ದು ಬಂದರೂ ಏನೂ ಮಾಡಲಾಗದ ಪರಿಸ್ಥಿತಿ, ರಾಷ್ಟ್ರಪತಿ ಆಳ್ವಿಕೆ ತನ್ನಿ ಎಂದು ಆಮ್ ಆದ್ಮಿ ಶಾಸಕ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

Not able to Help people AAP MLA request High court for President Rule in Delhi ckm
Author
Bengaluru, First Published Apr 30, 2021, 6:34 PM IST

ನವದೆಹಲಿ(ಏ.30): ಕೊರೋನಾ ಭೀಕರತೆ ಸಿಕ್ಕಿ ಗಿರ ಗಿರನೆ ತಿರುಗುತ್ತಿರುವ ನಗರಗಳ ಪೈಕಿ ದೆಹಲಿ ಕೂಡ ಒಂದಾಗಿದೆ. ರಾಷ್ಟ್ರ ರಾಜಧಾನಿ ಪರಿಸ್ಥಿತಿ ಚಿಂತಾಜನಕವಾಗಿದೆ. ಸೋಂಕಿತರ ನರಳಾತ, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುತ್ತಿದೆ.  ಅಧಿಕಾರಿಗಳು, ಶಾಸಕರು ,ಮಂತ್ರಿಗಳು ಏನೂ ಮಾಡಲಾಗದ ಸ್ಥಿತಿ ತಲುಪಿದೆ. ಇದೀಗ ದೆಹಲಿ ಆಮ್ ಆದ್ಮಿ ಪಕ್ಷದ ಶಾಸಕ ಶೋಯೆಬ್ ಇಕ್ಬಾಲ್ ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆಯೊಂದೇ ದಾರಿ ಎಂದಿದ್ದಾರೆ.

ಪ್ರಾಣಿಗಳ ಚಿತಾಗಾರದಲ್ಲಿಯೇ ಸೋಂಕಿತರ ಮೃತದೇಹ ಅಂತ್ಯಸಂಸ್ಕಾರ.

6 ಬಾರಿ ಶಾಸಕನಾಗಿರುವ ನನಗೆ ನನ್ನ ಸ್ನೇಹಿತನಿಗೆ ನೆರವು ನೀಡಲು ಸಾಧ್ಯವಾಗುತ್ತಿಲ್ಲ. ಕ್ಷೇತ್ರದ ಜನರಿಗೆ ನೆರವು ನೀಡಲು ಸಾಧ್ಯವಾಗುತ್ತಿಲ್ಲ. ಆಕ್ಸಿಜನ್ ಸಿಗುತ್ತಿಲ್ಲ.  ಹೀಗಾಗಿ ದೆಹಲಿಯಲಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತನ್ನಿ ಎಂದು ಮತಿಯಾ ಮಹಲ್ ಕ್ಷೇತ್ರದ ಶಾಸಕ ಇಕ್ಬಾಲ್, ದೆಹಲಿ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.

ದೆಹಲಿಯಲ್ಲಿ ಕೊರೋನಾ ಸ್ಫೋಟ: ರಾಮಲೀಲಾ ಮೈದಾನಲ್ಲಿ ಬೃಹತ್ ಕೋವಿಡ್ ಸೆಂಟರ್!

ದೆಹಲಿಯ ಚಿಂತಾಜನಕ ಸ್ಥಿತಿಯಿಂದ ನೋವುಂಟಾಗಿದೆ.   ನನಗೆ ನಿದ್ದೆ ಬರುತ್ತಿಲ್ಲ. ಜನರಿಗೆ ಆಮ್ಲಜನಕ ಮತ್ತು ಔಷಧಿಗಳು ಸಿಗುತ್ತಿಲ್ಲ. ನನ್ನ ಸ್ನೇಹಿತ ಬಳಲುತ್ತಿದ್ದಾನೆ. ಆಸ್ಪತ್ರೆಯಲ್ಲಿ ಆಮ್ಲಜನಕ ಅಥವಾ ವೆಂಟಿಲೇಟರ್ ಸಿಗುತ್ತಿಲ್ಲ. ರಿಮೆಡೆಸಿವಿರ್ ಲಸಿಕೆ ಸಿಗುತ್ತಿಲ್ಲ. ಸ್ನೇಹಿತನ ಮಕ್ಕಳು ತಂದೆಯನ್ನು ಉಳಿಸಲು ಓಡಾಡುತ್ತಿದ್ದಾರೆ. ಆದರೆ ಶಾಸಕನಾಗಿರುವ ನನಗೆ ಏನೂ ಮಾಡಲಾಗುತ್ತಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.

ಸಂಬಂಧ ಪಟ್ಟ ಅಧಿಕಾರಿಗಳ, ನೋಡಲ್ ಅಧಿಕಾರಿಗಳ ಸಂಪರ್ಕ ಸಾಧ್ಯವಾಗುತ್ತಿಲ್ಲ. ಏನು ಮಾಡಬೇಕು ಅನ್ನೋದು ತೋಚುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ರಾಷ್ಟ್ರಪತಿ ಆಳ್ವಿಕೆ ಸೂಕ್ತ ಎಂದು ಅಕ್ಬಾಲ್ ನೋವು ತೋಡಿಕೊಂಡಿದ್ದಾರೆ.

Follow Us:
Download App:
  • android
  • ios