Asianet Suvarna News Asianet Suvarna News

ಕರ್ನಾಟಕ ಬಿಜೆಪಿ ಚುನಾವಣೆಗೆ ದೇಶದ ದೇವಮೂಲೆ ಫಲಿತಾಂಶ ಬೂಸ್ಟರ್ ಡೋಸ್

ತ್ರಿಪುರದಲ್ಲಿ ಸತತ 2ನೇ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಜಯಭೇರಿ ಮೂಲಕ ಅಧಿಕಾರ ಉಳಿಸಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. 

Northeast state result gave Booster dose to BJP in Karnataka Assembly election 2023 akb
Author
First Published Mar 3, 2023, 10:13 AM IST

ಅಗರ್ತಲಾ: ತ್ರಿಪುರದಲ್ಲಿ ಸತತ 2ನೇ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಜಯಭೇರಿ ಮೂಲಕ ಅಧಿಕಾರ ಉಳಿಸಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. 60 ವಿಧಾನಸಭೆ ಸ್ಥಾನಗಳಿರುವ ರಾಜ್ಯದಲ್ಲಿ ಬಿಜೆಪಿ ಮೈತ್ರಿಕೂಟ 33 ಸ್ಥಾನ ಗೆದ್ದು ವಿಜಯ ಪತಾಕೆ ಹಾರಿಸಿದೆ. ಕಳೆದ ಚುನಾವಣೆಯಲ್ಲಿ ಮೈತ್ರಿಕೂಟ 43 ಸ್ಥಾನ ಗೆದ್ದಿತ್ತು.

ಚುನಾವಣೆಗೆ ಹತ್ತು ತಿಂಗಳಿರುವಾಗ ನಾಲ್ಕು ವರ್ಷಗಳ ಮುಖ್ಯಮಂತ್ರಿ ಬಿಪ್ಲಬ್‌ ದೇಬ್‌ (Biplav dev) ಅವರನ್ನು ಪಕ್ಷ ಬದಲಿಸಿ 69 ವರ್ಷದ ಸೌಮ್ಯ ಸ್ವಭಾವದ ಸರ್ಜನ್‌ ಮಾಣಿಕ್‌ ಸಾಹಾ (Manik sha) ಅವರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಿತ್ತು. ಅವರು ಆಡಳಿತವಿರೋಧಿ ಅಲೆ ಹಿಮ್ಮೆಟ್ಟಿಸಿ ಪಕ್ಷವನ್ನು ಗೆಲುವಿನ ದಡ ದಾಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ವತಃ ಅವರು ಪ್ರತಿಷ್ಠಿತ ಟೌನ್‌ ಬಾರ್ಡೋವಲಿ (Town Bardovali) ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಆಶಿಶ್‌ ಕುಮಾರ್‌ ಸಾಹಾ ಅವರನ್ನು ಕೇವಲ 1257 ಮತಗಳ ಅಂತರದಿಂದ ಮಣಿಸಿದ್ದಾರೆ. ಬಿಜೆಪಿ ಶೇ.38.97ರಷ್ಟು ಮತ ಪಡೆದುಕೊಂಡಿದೆ.

ಇನ್ನುಳಿದಂತೆ ಸಿಪಿಎಂ 11, ಕಾಂಗ್ರೆಸ್‌ 3 ಹಾಗೂ ತಿಪ್ರಾ ಮೋಥಾ ಪಕ್ಷ 13 ಸ್ಥಾನಗಳನ್ನು ಗೆದ್ದಿವೆ. ನೆರೆ ರಾಜ್ಯದಲ್ಲಿ ಪಕ್ಷವನ್ನು ನೆಲೆಯೂರಿಸುವ ಕನಸು ಕಂಡಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನೇತೃತ್ವದ ಟಿಎಂಸಿ ಶೂನ್ಯ ಸಂಪಾದನೆ ಮಾಡಿದೆ.

ಈಶಾನ್ಯ ರಾಜ್ಯಗಳ ಚುನಾವಣೆ: ನಿಜವಾದ ಚುನಾವಣೋತ್ತರ ಸಮೀಕ್ಷೆಗಳು

ನಾಗಾಲ್ಯಾಂಡ್‌ನಲ್ಲಿ ಸತತ 2ನೇ ಬಾರಿಗೆ ಅಧಿಕಾರಕ್ಕೆ ಬಂದ ಮೈತ್ರಿಕೂಟ

ಕೊಹಿಮಾ: 60 ಸ್ಥಾನ ಬಲದ ನಾಗಾಲ್ಯಾಂಡ್‌ ವಿಧಾನಸಭೆಗೆ (Nagaland Assembly)ನಡೆದ ಚುನಾವಣೆಯಲ್ಲಿ , ನೆಫಿಯೋ ರಿಯೋ (Nefio Rio) ನೇತೃತ್ವದ ದ ನ್ಯಾಷನಲ್‌ ಡೆಮಾಕ್ರೆಟಿಕ್‌ ಪ್ರೋಗ್ರೇಸ್ಸಿವ್‌ ಪಾರ್ಟಿ (NDPP) ಮತ್ತು ಬಿಜೆಪಿ ಮೈತ್ರಿಕೂಟ 37 ಸ್ಥಾನ ಗೆದ್ದಿದೆ. ಈ ಮೂಲಕ ಸತತ 2ನೇ ಬಾರಿಗೆ ಅಧಿಕಾರಕ್ಕೆ ಏರಿದೆ. ಈ ಪೈಕಿ ಎನ್‌ಡಿಪಿಪಿ 26 ಮತ್ತು ಬಿಜೆಪಿ 12 ಸ್ಥಾನ ಗೆದ್ದುಕೊಂಡಿವೆ.

ಕಳೆದ ಬಾರಿಯಂತೆ ಈ ಬಾರಿಯೂ ಎನ್‌ಡಿಪಿಪಿ ಮತ್ತು ಬಿಜೆಪಿ 40:20 ಸೂತ್ರದಡಿ ಚುನಾವಣೆಗೆ ಸ್ಪರ್ಧಿಸಿದ್ದವು. ಎನ್‌ಡಿಪಿಪಿ ಶೇ.32.22, ಬಿಜೆಪಿ ಶೇ.18.81ರಷ್ಟುಮತ ಪಡೆದುಕೊಂಡಿವೆ. ಕಾಂಗ್ರೆಸ್‌ ಕೇವಲ ಶೇ.3.55ರಷ್ಟುಮತ ಪಡೆದಿದೆ. ಉಳಿದಂತೆ ಯಾವುದೇ ಪಕ್ಷಗಳು ಎರಡಂಕಿ ದಾಟುವಲ್ಲಿ ವಿಫಲವಾಗಿವೆ. ಇನ್ನು ಎನ್‌ಸಿಪಿ 7 ಎನ್‌ಪಿಪಿ 5, ಎಲ್‌ಜೆಪಿ 2, ಆರ್‌ಪಿಐ 2 , ಎನ್‌ಪಿಎಫ್‌ ತಲಾ 2 ಸ್ಥಾನ, ಜೆಡಿಯು 1 ಗೆದ್ದಿವೆ. ಪಕ್ಷೇತರರು 4 ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್‌ ಒಂದೇ ಒಂದು ಸ್ಥಾನ ಗೆಲ್ಲಲೂ ಸಫಲವಾಗಿಲ್ಲ.

ಈಶಾನ್ಯ ರಾಜ್ಯದಲ್ಲಿ ಕೇಸರಿ ಸರ್ಕಾರ, ಯಶಸ್ವಿ ಗೆಲುವಿನ ಹಿಂದಿನ ತ್ರಿವೇಣಿ ಸೀಕ್ರೆಟ್ ಬಹಿರಂಗಗೊಳಿಸಿದ ಪ್ರಧಾನಿ ಮೋದಿ!

ಪ್ರಧಾನಿ ಮೋದಿ ದೂರದೃಷ್ಟಿಮತ್ತು ಸಿಎಂ ರಿಯೋ ಉತ್ತಮ ಆಡಳಿತ ರಾಜ್ಯದಲ್ಲಿ ಮೈತ್ರಿಕೂಟಕ್ಕೆ ಮತ್ತೊಮ್ಮೆ ಅಧಿಕಾರ ದಕ್ಕಿಸಿಕೊಟ್ಟಿದೆ. ಇದು ರಾಜ್ಯವನ್ನು ಅಭಿವೃದ್ಧಿಯಲ್ಲಿ ಮತ್ತಷ್ಟುಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ

ಮೇಘಾಲಯಕ್ಕೆ ಮತ್ತೆ ಎನ್‌ಪಿಪಿ

ಶಿಲ್ಲಾಂಗ್‌: ಮೇಘಾಲಯ ವಿಧಾನಸಭೆಯ 59 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾನ್ರಾಡ್‌ ಸಂಗ್ಮಾ ನೇತೃತ್ವದ ನ್ಯಾಷನಲ್‌ ಪೀಪಲ್ಸ್‌ ಪಾರ್ಟಿ (NPP) 27 ಪಕ್ಷಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಅಂದರೆ ಬಹುಮತಕ್ಕೆ ಅಗತ್ಯವಾದ 30 ಸ್ಥಾನಗಳಿಗೆ 3 ಸ್ಥಾನಗಳ ಕೊರತೆ ಎದುರಿಸಿದೆ. ಹೀಗಾಗಿ ಅದು ಸರ್ಕಾರದ ಹಿಂದಿನ ಮಿತ್ರಪಕ್ಷವಾಗಿದ್ದ ಬಿಜೆಪಿಯ ಬೆಂಬಲ ಕೋರಿದ್ದು, ಬಿಜೆಪಿ ಕೂಡಾ ಬೆಂಬಲ ಪ್ರಕಟಿಸಿದೆ. ಹೀಗಾಗಿ 2 ಸ್ಥಾನ ಗೆದ್ದ ಬಿಜೆಪಿ ಸರ್ಕಾರದ ಭಾಗವಾಗುವುದು ಖಚಿತವಾಗಿದೆ.

ಉಳಿದಂತೆ ಎನ್‌ಪಿಪಿಯ ಮಿತ್ರಪಕ್ಷ ಯುಡಿಪಿ 11 ಸ್ಥಾನ ಗೆದ್ದು 2ನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇನ್ನು ಕಾಂಗ್ರೆಸ್‌ ಮತ್ತು ಮಮತಾ ನೇತೃತ್ವದ ಟಿಎಂಸಿ ತಲಾ 5 ಸ್ಥಾನ ಗೆದ್ದಿವೆ. ನೂತನವಾಗಿ ರಚನೆಯಾಗಿದ್ದ ವಿಪಿಪಿ 4 ಸ್ಥಾನ, ಎಚ್‌ಎಸ್‌ಪಿಡಿಪಿ ಮತ್ತು ಪಿಡಿಎಫ್‌ ತಲಾ 2 ಸ್ಥಾನ ಗೆದ್ದಿವೆ. ಇಬ್ಬರು ಪಕ್ಷೇತರರು ಕೂಡಾ ಗೆಲುವು ಸಾಧಿಸಿದ್ದಾರೆ. ಈ ನಡುವೆ ಮುಖ್ಯಮಂತ್ರಿ ಸಂಗ್ಮಾ ಶುಕ್ರವಾರ ಬೆಳಗ್ಗೆ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಯ ಹಕ್ಕು ಮಂಡನೆ ಮಾಡಲಿದ್ದಾರೆ. ಈ ವೇಳೆ ಪಕ್ಷದ ಎಲ್ಲಾ ಚುನಾಯಿತ ಸದಸ್ಯರು ಅವರ ಜೊತೆಗೆ ಹಾಜರಿರಲಿದ್ದಾರೆ.

ಮೆಘಾಲಯದಲ್ಲೂ ಬಿಜೆಪಿ ಸರ್ಕಾರ, ಅಮಿತ್ ಶಾಗೆ ಕರೆ ಮಾಡಿ ಬೆಂಬಲ ಕೇಳಿದ 26 ಸ್ಥಾನ ಗೆದ್ದ NPP!

Follow Us:
Download App:
  • android
  • ios