ಮೋದಿ ಮರ್ ಜಾ ಎಂದು ವಿರೋಧಿಗಳು ಎಲ್ಲೆಡೆ ಹೇಳತೊಡಗಿದರು. ಆದರೆ ದೇಶ ಹೇಳುತ್ತಿದೆ ಮೋದಿ ಮತ್ ಜಾ. ಬಿಜೆಪಿಯ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸಿ ಲೇಬಲ್ ಮಾಡುವ ಕಾರ್ಯ ಮಾಡಲಾಯಿತು. ಆದರೆ ಬಿಜೆಪಿ ಮೇಲೆ ಜನತೆಗೆ ನಂಬಿಕೆ ಇದೆ ಎಂದು ಮೋದಿ ಹೇಳಿದ್ದಾರೆ. ಪ್ರಧಾನಿ ಮೋದಿ ಭಾಷಣಧ ಹೈಲೈಟ್ಸ್ ಇಲ್ಲಿದೆ.
ನವದೆಹಲಿ(ಮಾ.02): ಬಿಜೆಪಿ ಒಂದರ ಮೇಲೊಂದರಂತೆ ಗೆಲುವು ಸಾಧಿಸುತ್ತಿರುವುದು ಹಲವರಿಗೆ ಸಂಕಟ ತರುತ್ತಿದೆ. ಬಿಜೆಪಿಯ ಗೆಲುವಿನ ಸೀಕ್ರೆಟ್ ಏನು ಎಂದು ಯೋಚನೆ ಮಾಡಿದ ಹಲವರ ಹೊಟ್ಟೆಯಲ್ಲಿ ತಳಮಳ ಹೆಚ್ಚಾಗಿದೆ. ಆದರೆ ಬಿಜೆಪಿ ಸರ್ಕಾರದ ಕಾರ್ಯ, ಬಿಜೆಪಿ ಸರ್ಕಾರ ಸಂಸ್ಕೃತಿ, ಬಿಜೆಪಿ ಸರ್ಕಾರದ ಕಾರ್ಯಕರ್ತರ ಸೇವಾ ಮನೋಭಾವ. ಈ ತ್ರಿವೇಣಿ ಸಂಗಮ ಬಿಜೆಪಿ ಯಶಸ್ಸಿನ ಹಿಂದಿನ ಶಕ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನಾಗಾಲ್ಯಾಂಡ್, ತ್ರಿಪುರಾದಲ್ಲಿ ಬಿಜೆಪಿ ಭರ್ಜರಿ ಗೆಲುವಿನ ಬೆನ್ನಲ್ಲೇ ದೆಹಲಿ ಪ್ರಧಾನ ಕಚೇರಿಗೆ ಪ್ರಧಾನಿ ಮೋದಿ, ಜೆಪಿ ನಡ್ಡಾ ಸೇರಿದಂತೆ ಹಲವರು ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಮೋದಿ, ಈಶಾನ್ಯ ರಾಜ್ಯದ ಗೆಲುವನ್ನು ಕೊಂಡಾಡಿದರು. ಮಾತು ಆರಂಭಿಸುವ ಮೊದಲು ಪ್ರಧಾನಿ ಮೋದಿ, ಸೇರಿದ ಜನರು ಈಶಾನ್ಯ ರಾಜ್ಯಗಳ ಜನರಿಗೆ ನಾವು ಗೌರವ ನೀಡಬೇಕಿದೆ. ಬಿಜೆಪಿಗೆ ಅಭೂತಪೂರ್ವ ಗೆಲುವು ದೊರಕಿಸಿಕೊಟ್ಟ ಜನರಿಗೆ ನೀವೆಲ್ಲಾ ಮೊಬೈಲ್ ಫ್ಲಾಶ್ ಲೈಟ್ ಹಾಕಿ ಗೌರವ ಸೂಚಿಸಬೇಕು ಎಂದರು. ಇದಕ್ಕೆ ಸೇರಿದ್ದ ಜನಸ್ತೋಮ ಫ್ಲಾಶ್ ಲೈಟ್ ಆನ್ ಮಾಡಿ ಗೌರವ ಸೂಚಿಸಿತು. ತ್ರಿಪುರಾ, ನಾಗಾಲ್ಯಾಂಡ್ ಹಾಗೂ ಮೆಘಾಲಯ ಜನತೆಗೆ ನಾನು ಧನ್ಯವಾದ ಹೇಳುತ್ತಿದ್ದೇನೆ. ಶಿರಬಾಗಿ ನಮಿಸುತ್ತೇನೆ ಎಂದು ಮೋದಿ ಹೇಳಿದರು.
ಮೆಘಾಲಯದಲ್ಲೂ ಬಿಜೆಪಿ ಸರ್ಕಾರ, ಅಮಿತ್ ಶಾಗೆ ಕರೆ ಮಾಡಿ ಬೆಂಬಲ ಕೇಳಿದ 26 ಸ್ಥಾನ ಗೆದ್ದ NPP!
ಬಿಜೆಪಿ ಹಾಗೂ ನಮ್ಮ ಮಿತ್ರ ಪಕ್ಷಗಳಿಗೆ ಜನರು ಭರಪೂರ ಬೆಂಬಲ ನೀಡಿದ್ದಾರೆ. ಮೂರು ರಾಜ್ಯಗಳ ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ. ದೆಹಲಿ ಯಲ್ಲಿ ಬಿಜೆಪಿ ಕಾರ್ಯಕರ್ತರು ಕೆಲಸ ಮಾಡುವುದು ಅಷ್ಟು ಕಷ್ಟದ ಮಾತಲ್ಲ. ಆಧರೆ ಈಶಾನ್ಯ ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಕೆಲಸ ಸುಲಭವಾಗಿರಲಿಲ್ಲ. ಕಠಿಣ ಪರಿಸ್ಥಿತಿಯಲ್ಲೂ ಸಾಧನೆ ಮಾಡಿದ್ದಾರೆ. ಇಂದಿನ ಫಲಿತಾಂಶ, ಭಾರತ ಹಾಗೂ ವಿಶ್ವಕ್ಕೆ ಒಂದು ಸಂದೇಶ ನೀಡಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸ್ಥಿರ ಸರ್ಕಾರದ ಸೂಚನೆ ಸಿಕ್ಕಿದೆ.ಒಂದು ಸಮಯವಿತ್ತು, ಈಶಾನ್ಯ ರಾಜ್ಯದಲ್ಲಿ ಚುನಾವಣೆ ನಡೆಯುತ್ತಿತ್ತು. ಫಲಿತಾಂಶ ಬರುತ್ತಿತ್ತು. ಆದರೆ ದೆಹಲಿಯಲ್ಲಿದ್ದ ಸರ್ಕಾರಕ್ಕೆ ದೊಡ ವಿಷವೇ ಆಗಿರಲಿಲ್ಲ. ಚರ್ಚೆಯೂ ಆಗುತ್ತಿರಲಿಲ್ಲ. ಇದೀಗ ಈಶಾನ್ಯ ರಾಜ್ಯದಲ್ಲಿ ಅಭಿವೃದ್ಧಿ ತ್ವರಿತಗತಿಯಲ್ಲಿ ಸಾಗುತ್ತಿದೆ ಎಂದು ಮೋದಿ ಹೇಳಿದ್ದಾರೆ.
ತ್ರಿಪುರಾದಲ್ಲಿ ಒಂದು ಕಾಲವಿತ್ತು. ಬಿಜೆಪಿ ಪಕ್ಷದ ಧ್ವಜ ಕೂಡ ಹಾರಿಸಲು ಸಾಧ್ಯವಾಗುತ್ತಿರಲಿಲ್ಲ. ಆಧರೆ ಇದೀಗ ತ್ರಿಪುರಾದಲ್ಲಿ ಕಮಲ ಅರಳಿದೆ. ಈಶಾನ್ಯ ರಾಜ್ಯದಲ್ಲಿ ಆಗಿರುವ ಅಭಿವೃದ್ಧಿ ಇದಕ್ಕೆ ಕಾರಣ ಎಂದಿದ್ದಾರೆ. ಇದು ಹೊಸ ಆಲೋಚನೆಯ ಪ್ರತಿಬಿಂಬವಾಗಿದೆ. ಇಂದು ಈಶಾನ್ಯ ರಾಜ್ಯ ದಿಲ್ಲಿಯಿಂದ ದೂರವಿಲ್ಲ, ಹೃದಯದಿಂದಲೂ ದೂರವಿಲ್ಲ. ಕೆಲದಿನಗಳ ಹಿಂದೆ ಈಶಾನ್ಯ ರಾಜ್ಯಕ್ಕೆ ತೆರಳಿದ್ದೆ. ಹಲವರು ಹೇಳಿದ್ದರು. ನಿಮ್ಮ ಹಾಫ್ ಸೆಂಚುರಿಗೆ ಶುಭಾಶಯ ಎಂದಿದ್ದರು. ಇದೇನು ಎಂದು ಕೇಳಿದ್ದೆ? ನೀವು ಪ್ರಧಾನ ಮಂತ್ರಿಯಾದ ಬಳಿಕ 50ಕ್ಕೂ ಹೆಚ್ಚು ಬಾರಿ ಈಶಾನ್ಯ ರಾಜ್ಯಕ್ಕೆ ಆಗಮಿಸಿದ್ದೀರಿ. ಇದಕ್ಕಾಗಿ ಹಾಫ್ ಸೆಂಚುರಿಗೆ ಶುಭಾಶಯ ಎಂದರು. ಇದು ಶುಭಾಶಯದ ಮಾತಲ್ಲ, ಅಲ್ಲಿನ ಪ್ರಗತಿ, ಅಭಿವೃದ್ಧಿ ಜೊತೆಗೆ ಒಂದು ಭೇಟಿಯಿಂದ ಅಲ್ಲಿನ ಜನರ ಪ್ರೀತಿಯನ್ನು ಅವರ ಮಾತಿನಲ್ಲಿ ನೋಡಿದೆ ಎಂದರು.
ನಾಗಾಲ್ಯಾಂಡ್‌ನ ಮೊದಲ ಮಹಿಳಾ ಶಾಸಕಿ, ಇತಿಹಾಸ ರಚಿಸಿದ ಬಿಜೆಪಿ ಮೈತ್ರಿಕೂಟದ ಹೆಕಾನಿ!
ಕೇಂದ್ರದ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಈಶಾನ್ಯ ರಾಜ್ಯಕ್ಕೆ ಇತರ ರಾಜ್ಯಗಳಷ್ಟೇ ಮಹತ್ವ ನೀಡಿದೆ. ಇಂದು ಹಲವರು ಬಿಜೆಪಿಯ ಯಶಸ್ವಿಗೆ ಕಾರಣ ಹುಡುಕುತ್ತಿದ್ದಾರೆ. ಬಿಜೆಪಿಯ ಗೆಲುವಿನ ದಾರಿ ಯಾವುದು ಎಂದು ಹುಡುಕಿ ಹುಡುಕಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ನಾನು ಹೆಚ್ಚು ಟಿವಿ ನೋಡುವುದಿಲ್ಲ. ನನಗೆ ಗೊತ್ತಿಲ್ಲ, ಸದ್ಯ ಯಾರಾದರೂ ಇವಿಎಂ ಮೇಲೆ ಆರೋಪ ಮಾಡಿದ್ದಾರಾ?ಎಂದು ಮೋದಿ ಪ್ರಶ್ನಿಸಿದರು.
ಬಿಜೆಪಿ ಸರ್ಕಾರದ ಕಾರ್ಯ, ಬಿಜೆಪಿ ಸರ್ಕಾರ ಸಂಸ್ಕೃತಿ, ಬಿಜೆಪಿ ಸರ್ಕಾರದ ಕಾರ್ಯಕರ್ತರ ಸೇವಾ ಮನೋಭಾವ. ಈ ತ್ರೀವೇಣಿ ಸಂಗಮ ಬಿಜೆಪಿಯ ಗೆಲುವಿನ ಹಿಂದಿರುವ ಶಕ್ತಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ನಾವು ಸಬ್ ಕಾ ಸಾಥ್,ಸಬ್ ಕಾ ವಿಕಾಸ್ ಹಾಗೂ ಸಬ್ ಕಾ ಪ್ರಯಾಸ್ ತತ್ವದಡಿಯಲ್ಲಿ ಆಡಳಿತ ನಡೆಸುತ್ತಿದ್ದೇವೆ. ನಮ್ಮ ಕೆಲಸ, ಯೋಜನೆಗಳಲ್ಲಿ ಯಾವುದೇ ಭೇದ ಭಾವ ಮಾಡಿಲ್ಲ. ನಾವು ಪ್ರತಿಯೊಬ್ಬರಿಗಾಗಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಪ್ರೇರಣೆ,ಒಂದು ಭಾರತ ಹಾಗೂ ಶ್ರೇಷ್ಠ ಭಾರತ ಎಂದು ಮೋದಿ ಹೇಳಿದರು. ನಮಗೆ ದೇಶ ಹಾಗೂ ದೇಶವಾಸಿ ಮೊದಲು ಎಂದರು.
ಬಿಜೆಪಿ ಕಾರ್ಯಕರ್ತರ ಸೇವಾ ಮನೋಭಾವವೇ ನಮ್ಮ ಶಕ್ತಿ ಎಂದರು. ಯಾವುದೇ ಕಠಿಣ ಪರಿಸ್ಥಿತಿಯಲ್ಲೂ ಕಾರ್ಯಕರ್ತರು ನಿಸ್ವಾರ್ಥ ಸೇವೆ ಮೂಲಕ ಬಿಜೆಪಿ ಶಕ್ತಿ ಹೆಚ್ಚಿಸುತ್ತಾರೆ.ಹಲವು ರಾಜ್ಯಗಳಲ್ಲಿ ಬಿಜೆಪಿ ಕಾರ್ಯಕ್ರರ್ತರ ಮೇಲೆ ಹಲ್ಲೆಯಾಗಿದೆ. ಹಿನ್ನಡೆಯಾಗಿದೆ. ಆದರೆ ಕಾರ್ಯಕರ್ತರು ಯಾವುದೇ ಅಂಜಿಕೆ ಇಲ್ಲದೆ, ನಿಸ್ವಾರ್ಥ ಸೇವೆಯಿಂದ ಕೆಲಸ ಮಾಡಿ ಶಕ್ತಿ ನೀಡಿದ್ದಾರೆ. ಇಂತಹ ಕಾರ್ಯಕರ್ತರಿರುವ ಬಿಜೆಪಿಗೆ ಯಾವೂದು ಕಷ್ಟವಲ್ಲ ಎಂದಿದ್ದಾರೆ.
ಈಶಾನ್ಯ ರಾಜ್ಯದ ಮೂಲೆ ಮೂಲೆಗೆ ವಿದ್ಯುತ್ ನೀಡುವುದು, ನೀರು, ಗ್ಯಾಸ್ ಸಂಪರ್ಕ ಈ ಹಿಂದಿನ ಸರ್ಕಾರಕ್ಕೆ ಬೆಟ್ಟದಷ್ಟು ದೊಡ್ಡ ಸವಾಲಾಗಿತ್ತು. ಹೀಗಾಗಿ ಈ ಹಿಂದಿನ ಸರ್ಕಾರದಲ್ಲಿ ಇಂತಹ ಯಾವುದೇ ಆಲೋಚನೆ ಇರಲಿಲ್ಲ. ಆದರೆ ಬಿಜೆಪಿ ಸರ್ಕಾರ ಎಲ್ಲವನ್ನೂ ನೀಡಿದೆ.ಸಂಪರ್ಕ ಸುಲಭವಾಗಿಸಿದೆ. ರೈಲು, ರಸ್ತೆ, ವಿಮಾನ ನಿಲ್ದಾಣಗಳು ನಿರ್ಮಾಣಗೊಳ್ಳುತ್ತಿದೆ. ಸುಲಫಭವಾಗಿ ದೇಶದ ಯಾವುದೇ ಮೂಲೆಗೆ ಕೆಲವೆ ಗಂಟೆಗಳಲ್ಲಿ ತಲುಪಲು ಸಾಧ್ಯವಾಗಲಿದೆ ಎಂದರು.
ಕೆಲ ಕಟ್ಟರ್, ಮೂಲಭೂತವಾದಿಗಳು ಮೋದಿ ಮರ್ ಜಾ ಎಂದು ಹೇಳುತ್ತಿದ್ದಾರೆ. ಆದರೆ ದೇಶದ ಜನರು ಹೇಳುತ್ತಿದ್ದಾರೆ ಮತ್ ಜಾ ಮೋದಿ ಎಂದು ಪ್ರಾಸವಾಗಿ ವಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದರು. ಇಂದಿನ ಫಲಿತಾಂಶದ ಬಳಿಕ ಕಾಂಗ್ರೆಸ್ ಬಟಾ ಬಯಲಾಗಿದೆ. ಕಾಂಗ್ರೆಸ್ ಅಧ್ಯಕ್ಷ ಹೇಳಿದ್ದರು, ಇದು ಸಣ್ಣ ರಾಜ್ಯ ಎಂದಿದ್ದಾರೆ. ಕಾಂಗ್ರೆಸ್ ನವರಿಗೆ ಈಶಾನ್ಯ ರಾಜ್ಯಗಳು ಮೊದಲಿನಿಂದಲೂ ಕಡೆಗಣಿಸಿದ್ದಾರೆ. ಸಣ್ಣ ಸಣ್ಣ ರಾಜ್ಯ ಎಂದು ಕಾಂಗ್ರೆಸ್ ತಿರಸ್ಕಾರ ಮಾಡುತ್ತಲೇ ಬಂದಿದೆ. ಇದು ಈಶಾನ್ಯ ರಾಜ್ಯಗಳಿಗೆ ಮಾಡಿದ ಅವಾಮಾನವಾಗಿದೆ.
