ತ್ರಿಪುರ, ನಾಗಾಲ್ಯಾಂಡ್‌, ಮೇಘಾಲಯ ವಿಧಾನಸಭಾ ಚುನಾವಣಾ ಫಲಿತಾಂಶದ ಕುರಿತು ಪ್ರಕಟವಾಗಿದ್ದ ಚುನಾವಣೋತ್ತರ ಸಮೀಕ್ಷೆಗಳು ನಿಜವಾಗಿವೆ.

ನವದೆಹಲಿ: ತ್ರಿಪುರ, ನಾಗಾಲ್ಯಾಂಡ್‌, ಮೇಘಾಲಯ ವಿಧಾನಸಭಾ ಚುನಾವಣಾ ಫಲಿತಾಂಶದ ಕುರಿತು ಪ್ರಕಟವಾಗಿದ್ದ ಚುನಾವಣೋತ್ತರ ಸಮೀಕ್ಷೆಗಳು ನಿಜವಾಗಿವೆ. ಬಹುತೇಕ ಸಮೀಕ್ಷೆಗಳು ತ್ರಿಪುರ ಮತ್ತು ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಬಹುಮತ ಪಡೆದುಕೊಳ್ಳಲಿದ್ದು, ಮೇಘಾಲಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂದು ಸಮೀಕ್ಷೆಗಳು ಅಂದಾಜಿಸಿದ್ದವು.

ತ್ರಿಪುರಾದಲ್ಲಿ (tripura) ಬಿಜೆಪಿ 27ರಿಂದ 40 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು. ಕಾಂಗ್ರೆಸ್‌ ಹಾಗೂ ಎಡಪಕ್ಷಗಳ ಮೈತ್ರಿಕೂಟ 10ರಿಂದ 20 ಸ್ಥಾನಗಳಲ್ಲಿ ಜಯಗಳಿಸಬಹುದು. ತ್ರಿಪ್ರಾ ಪಕ್ಷ 9ರಿಂದ 17 ಸ್ಥಾನ ಗೆಲ್ಲಬಹುದು ಎಂದು ಜನ್‌ ಕೀ ಬಾತ್‌, ಝೀ ನ್ಯೂಸ್‌, ಟೈಮ್ಸ್‌ ನೌ ಮತ್ತು ಇಂಡಿಯಾ ಟುಟೇ ಸಮೀಕ್ಷೆಗಳು ಹೇಳಿದ್ದವು.

ನಾಗಾಲ್ಯಾಂಡ್‌ನ ಮೊದಲ ಮಹಿಳಾ ಶಾಸಕಿ, ಇತಿಹಾಸ ರಚಿಸಿದ ಬಿಜೆಪಿ ಮೈತ್ರಿಕೂಟದ ಹೆಕಾನಿ!

ಇನ್ನು ನಾಗಾಲ್ಯಾಂಡ್‌ (Nagaland) ಸಹ ಈ ಬಾರಿ ಬಿಜೆಪಿಗೆ (BJP) ತೆಕ್ಕೆಗೆ ಬೀಳಲಿದ್ದು, ಪಕ್ಷ 35ರಿಂದ 48 ಕ್ಷೇತ್ರಗಳಲ್ಲಿ ಜಯಗಳಿಸಬಹುದು ಎಂದು 3 ಸಮೀಕ್ಷೆಗಳು ಹೇಳಿದ್ದವು. ಕಾಂಗ್ರೆಸ್‌ ಎರಡರಿಂದ ಮೂರು ಸ್ಥಾನಗಳನ್ನಷ್ಟೇ ಗಳಿಸಲಿದ್ದು, ಎನ್‌ಪಿಎಫ್‌ ಸಹ ಎರಡಂಕಿ ಗಡಿ ದಾಟುವುದಿಲ್ಲ ಎಂದು ಬಹುತೇಕ ಸಮೀಕ್ಷೆಗಳು ಹೇಳಿದ್ದವು.

ಪ್ರಸ್ತುತ ಬಿಜೆಪಿ-ಎನ್‌ಪಿಪಿ ಸರ್ಕಾರ ಇರುವ ಮೇಘಾಲಯದಲ್ಲಿ (Meghalaya) ಮಿತ್ರಪಕ್ಷ ಎನ್‌ಪಿಪಿ ಈ ಬಾರಿ ಸ್ವತಂತ್ರವಾಗಿ ಸ್ಪರ್ಧಿಸಿದ್ದು, 18ರಿಂದ 26 ಕ್ಷೇತ್ರಗಳಲ್ಲಿ ಜಯ ಸಾಧಿಸಲಿದೆ. ಬಿಜೆಪಿ 3ರಿಂದ 11 ಸ್ಥಾನಗಳಲ್ಲಿ ಗೆಲ್ಲಲಿದೆ. ಆದರೆ ಟಿಎಂಸಿ (TMC)(TMC) ಗಣನೀಯವಾಗಿ 5ರಿಂದ 14 ಸ್ಥಾನ ಗೆಲ್ಲಬಹುದು. ಕಾಂಗ್ರೆಸ್‌ ಸಹ 3-4 ಸ್ಥಾನಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂದು ಸಮೀಕ್ಷೆಗಳು ಹೇಳಿದ್ದವು.

ಈಶಾನ್ಯ ರಾಜ್ಯದಲ್ಲಿ ಕೇಸರಿ ಸರ್ಕಾರ, ಯಶಸ್ವಿ ಗೆಲುವಿನ ಹಿಂದಿನ ತ್ರಿವೇಣಿ ಸೀಕ್ರೆಟ್ ಬಹಿರಂಗಗೊಳಿಸಿದ ಪ್ರಧಾನಿ ಮೋದಿ!