Asianet Suvarna News Asianet Suvarna News

ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ನಾಯಿಮರಿಯ ರಕ್ಷಿಸಿದ ಯುವಕ: ವೀಡಿಯೋ ವೈರಲ್

ವಾಹದಲ್ಲಿ ಸಿಲುಕಿದ್ದ ಪುಟ್ಟ ನಾಯಿಮರಿಯೊಂದನ್ನು  ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

North India raining Youth rescues puppy from flood Video from Chandigarh goes viral akb
Author
First Published Jul 13, 2023, 3:21 PM IST | Last Updated Jul 13, 2023, 3:23 PM IST

ಚಂಡೀಗಢ: ಧಾರಾಕಾರ ಸುರಿದ ಮಳೆಗೆ ಉತ್ತರ ಭಾರತ ತತ್ತರಿಸಿದ್ದು, ಪ್ರಸ್ತುತ ಮಳೆ ಕಡಿಮೆಯಾದರೂ, ಮಳೆಯ ಅವಾಂತರ ಮಾತ್ರ ಕಡಿಮೆ ಆಗಿಲ್ಲ, ಅಲ್ಲಲ್ಲಿ ನೀರು ತುಂಬಿಕೊಂಡಿದ್ದು, ಜನ ಪರದಾಡುವಂತಾಗಿದೆ. ಈ ಮಧ್ಯೆ  ಪ್ರವಾಹದಲ್ಲಿ ಸಿಲುಕಿದ್ದ ಪುಟ್ಟ ನಾಯಿಮರಿಯೊಂದನ್ನು  ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಚಂಡೀಗಢದಲ್ಲಿ ಈ ಘಟನೆ ನಡೆದಿದ್ದು, ಚಂಡೀಗಢ ಎಸ್‌ಎಸ್‌ಪಿ ಈ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದಾರೆ. ಚಂಡೀಗಢ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ಧನ್ಯವಾದಗಳು , ಮಳೆಯಿಂದ ನೀರು ತುಂಬಿ ಹರಿಯುತ್ತಿದ್ದ ಖುದಾ ಲಹೋರ್ ಬ್ರಿಡ್ಜ್ ಕೆಳಗೆ ಸಿಲುಕಿಕೊಂಡಿದ್ದ ನಾಯಿ ಮರಿಯನ್ನು ಚಂಡೀಗಢ ಪೊಲೀಸರ ನೆರವಿನೊಂದಿಗೆ ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದರು, ಅವರಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. 

ನಾಯಿಯ ಕಾರೊಳಗೆ ಬಿಟ್ಟು ತಾಜ್‌ಮಹಲ್ ನೋಡಲು ಹೋದ ಪ್ರವಾಸಿಗರು: ಉಸಿರುಕಟ್ಟಿ ಶ್ವಾನ ಸಾವು

ಅವರು ಹಂಚಿಕೊಂಡಿರುವ 40 ಸೆಕೆಂಡ್‌ಗಳ ವೀಡಿಯೋದಲ್ಲಿ, ವ್ಯಕ್ತಿಯೊಬ್ಬರು ಕಬ್ಬಿಣದ ಸರಳಿನ ಏಣಿಯಲ್ಲಿ ಇಳಿದು ಹೋಗಿ ನಾಯಿಮರಿಯನ್ನು ರಕ್ಷಿಸಿ, ಒಂದು ಕೈಯಲ್ಲಿ ನಾಯಿಮರಿಯನ್ನು ಹಿಡಿದುಕೊಂಡು ಕಷ್ಟಪಟ್ಟು ಏಣಿಯನ್ನು ಏರುತ್ತಿರುವುದನ್ನು ಕಾಣಬಹುದಾಗಿದೆ. ಬ್ರಿಡ್ಜ್‌ನಿಂದ ಕೆಳಗೆ ಹರಿಯುತ್ತಿರುವ ಹೊಳೆಗೆ ಏಣಿ ಇರಿಸಲಾಗಿದ್ದು, ಯುವಕ ತನ್ನ ಪ್ರಾಣದ ಹಂಗು ತೊರೆದು ನಾಯಿಯನ್ನು ರಕ್ಷಿಸುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. 

ಮೂರು ವರ್ಷದ ಬಳಿಕ ಬಂದ ಮಾಲೀಕ : ಶ್ವಾನದ ಖುಷಿ ನೋಡಿ: ವೀಡಿಯೋ ವೈರಲ್

ಈ ವೀಡಿಯೋ ನೋಡಿದ ಅನೇಕರು ನಾಯಿಯನ್ನು ರಕ್ಷಿಸಿದ ಯುವಕನ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅನೇಕರು ಒಳ್ಳೆಯ ಕೆಲಸ ಎಂದು ಕಾಮೆಂಟ್ ಮಾಡಿದ್ದರೆ, ಮತ್ತೆ ಕೆಲವರು ಯುವಕನಿಗೆ ಧನ್ಯವಾದ ಸಮರ್ಪಿಸಿದ್ದಾರೆ.  ದೇವರು ಅವರಿಗೆ ಒಳ್ಳೆಯದು ಮಾಡಲಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 


ಮನೆಯತ್ತ ಬಂದ ಚಿರತೆಯನ್ನು ಬೊಗಳಿ ದೂರ ಓಡಿಸಿದ ಶ್ವಾನ: ವೀಡಿಯೋ ವೈರಲ್

ಕಾಡಂಚಿನ ಗ್ರಾಮಗಳ ವ್ಯಾಪ್ತಿಯಲ್ಲಿ ಕಾಡು ಪ್ರಾಣಿಗಳ ಹಾವಳಿ ಇತ್ತೀಚೆಗೆ ಹೆಚ್ಚಾಗಿದ್ದು ನಾಡಿಗೆ ದಾಂಗುಡಿ ಇಟ್ಟು ಜನರ ,ಸಾಕು ಪ್ರಾಣಿಗಳನ್ನು ಹೊತ್ತೊಯ್ಯುತ್ತವೆ. ಅದೇ ರೀತಿ ಇಲ್ಲೊಂದು ಕಡೆ ಆಹಾರ ಅರಸಿ ನಾಡಿನತ್ತ ಬಂದು ಮನೆಗೆ ನುಗ್ಗಲು ಯತ್ನಿಸಿದ ಚಿರತೆಯೊಂದನ್ನು ಮನೆಯ ಸಾಕುನಾಯಿಯೊಂದು ಬೊಗಳಿ ದೂರ ಓಡಿಸಿದೆ. ಈ ದೃಶ್ಯ ಮನೆಯಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಾರಾಷ್ಟ್ರದ ಅಹ್ಮದ್‌ನಗರದಲ್ಲಿ ಈ ಘಟನೆ ನಡೆದಿದೆ.  ಈ ವೀಡಿಯೋವನ್ನು ಸುದ್ದಿಸಂಸ್ಥೆ ಎಎನ್‌ಐ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದೆ. 54 ಸೆಕೆಂಡ್‌ಗಳ ವೀಡಿಯೋದಲ್ಲಿ ಚಿರತೆಯೊಂದು ಮೆಲ್ಲ ಮೆಲ್ಲನೇ ಮನೆಯತ್ತ ಬಂದು ಸೀದಾ ಮನೆಗೆ ನುಗ್ಗಲು ಯತ್ನಿಸುವುದನ್ನು ಕಾಣಬಹುದಾಗಿದೆ. ಕೂಡಲೇ  ಅಲ್ಲಿದ ನಾಯಿ ಜೋರಾಗಿ ಬೊಗಳಿ ಚಿರತೆಯನ್ನು ಹಿಮ್ಮೆಟ್ಟಿಸಲು ನೋಡಿದೆ. ನಾಯಿಯ ಬೊಬ್ಬೆಗೆ ಬೆದರಿದ ಚಿರತೆ ನಂತರ ಬಂದ ದಾರಿಗೆ ಸುಂಕವಿಲ್ಲದಂತೆ ದೂರ ಓಡಿದೆ. 

ಚಿರತೆ ಬಾಯಿಯಿಂದ ಮಾಲೀಕ ಹಾಗೂ ಶ್ವಾನವನ್ನು ರಕ್ಷಿಸಿದ ಹಸು

ಕೆಲದಿನಗಳ ಹಿಂದೆ ದಾವಣಗೆರೆಯ ಚನ್ನಗಿರಿ ತಾಲೂಕಿನಲ್ಲಿ ಹಸುವೊಂದು ಮಾಲೀಕ ಹಾಗೂ ಮನೆಯ ಸಾಕುನಾಯಿಯನ್ನು ಚಿರತೆಯಿಂದ ರಕ್ಷಿಸಿದ ಅಪರೂಪದ ಘಟನೆ ನಡೆದಿತ್ತು. ಕೊಡಗೀಕೆರೆ ಭದ್ರಾ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ಪ್ರದೇಶ ಉಬ್ರಾಣಿ ಹೋಬಳಿಯಲ್ಲಿ ಬರುವ ತಮ್ಮ ಜಮೀನಿನಲ್ಲಿ ಎಂದಿನಂತೆ ರೈತ ಕರಿಹಾಲಪ್ಪ ಹಸು ಮೇಯಿಸಲು ಹೋಗಿದ್ದಾರೆ ಇವರ ಜೊತೆ ಇವರ ಶ್ವಾನವೂ ಹೋಗಿದೆ. ಈ ಸಂದರ್ಭದಲ್ಲಿ ಏಕಾಏಕಿ ಕಾಡಿನ ಮೂಲೆಯಿಂದ ಬಂದ ಚಿರತೆ,  ಕರಿಹಾಲಪ್ಪ ಹಾಗೂ ಆತನ ನಾಯಿಯ ಮೇಲೆ  ದಾಳಿ ನಡೆಸಿದೆ. ಧೃತಿಗೆಡದ ಕರಿಹಾಲಪ್ಪ ಚಿರತೆ ದಾಳಿಯಿಂದ ತಪ್ಪಿಸಿಕೊಳ್ಳಲು ಹೋರಾಟ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಆತನ‌ ಬೆನ್ನಿನ ಮೇಲೆ ಚಿರತೆ ಉಗರಿನಿಂದ ಪರಚಿದೆ. ಬೊಗಳಿ ಪ್ರತಿರೋಧ ಒಡ್ಡುತ್ತಿದ್ದ ನಾಯಿಯ ಮೇಲೂ ಚಿರತೆ ದಾಳಿ ಮಾಡಿದೆ. ಈ ವೇಳೆ ಅವರ ಹಸು ಗೌರಿ ತನ್ನ ಕೊಂಬಿನಿಂದ ಚಿರತೆಯನ್ನು ಎತ್ತಿ ಎಸೆದಿದೆ. 

Latest Videos
Follow Us:
Download App:
  • android
  • ios