ತಾಜಮಹಲ್ ನೋಡಲು ಹೋದ ಪ್ರವಾಸಿಗರು ತಮ್ಮ ತನ್ನ ಪ್ರೀತಿಯ ಶ್ವಾನವನ್ನು ಕಾರಿನಲ್ಲೇ ಲಾಕ್ ಮಾಡಿ ಹೋಗಿದ್ದು, ಇದರಿಂದ ಕಾರೊಳಗೆ ಉಸಿರುಕಟ್ಟಿ ಶ್ವಾನ ಪ್ರಾಣ ಬಿಟ್ಟಿದೆ.
ಆಗ್ರಾ: ವಿಶ್ವಪ್ರಸಿದ್ಧ ಪ್ರವಾಸಿ ತಾಣ, ಜಗತ್ತಿನ ಪ್ರೇಮಸೌಧ ತಾಜಮಹಲ್ ನೋಡಲು ಹೋದ ಪ್ರವಾಸಿಗರು ತಮ್ಮ ತನ್ನ ಪ್ರೀತಿಯ ಶ್ವಾನವನ್ನು ಕಾರಿನಲ್ಲೇ ಲಾಕ್ ಮಾಡಿ ಹೋಗಿದ್ದು, ಇದರಿಂದ ಕಾರೊಳಗೆ ಉಸಿರುಕಟ್ಟಿ ಶ್ವಾನ ಪ್ರಾಣ ಬಿಟ್ಟಿದೆ. ಮಾಲೀಕನ ನಿರ್ಲಕ್ಷ್ಯದಿಂದಾಗಿ ಶ್ವಾನವೊಂದು ವಿನಾಕಾರಣ ಪ್ರಾಣ ಬಿಡುವಂತಾಗಿದೆ. ಭಾನುವಾರ ಮಧ್ಯಾಹ್ನದ ನಂತರ ಈ ಅನಾಹುತ ಸಂಭವಿಸಿದೆ. ಇಬ್ಬರು ಇಬ್ಬರು ಹುಡುಗರು ಹಾಗೂ ಹುಡುಗಿಯರಿದ್ದ ಪ್ರವಾಸಿಗರು ತಾಜ್‌ಮಹಲ್ ನೋಡಲು ಬಂದಿದ್ದು, ಈ ವೇಳೆ ತಮ್ಮ ಕಾರನ್ನು ತಾಜ್‌ಮಹಲ್ ಪಶ್ಚಿಮಗೇಟ್‌ನ ಪಾರ್ಕಿಂಗ್ ಪ್ರದೇಶದಲ್ಲಿ ಪಾರ್ಕ್ ಮಾಡಿದ್ದಾರೆ. ಅಲ್ಲದೇ ತಮ್ಮ ಪ್ರೀತಿಯ ಶ್ವಾನವನ್ನು ಕಾರೊಳಗೆಯೇ ಲಾಕ್ ಮಾಡಿದ್ದಾರೆ. ನಂತರ ತಾಜ್ ಮಹಲ್ ನೋಡಿ ಎರಡು ಗಂಟೆ ಕಳೆದು ಬರುವ ವೇಳೆ ಶ್ವಾನ ಶವವಾಗಿದೆ.
ಈ ಪ್ರವಾಸಿಗರು ಹರ್ಯಾಣದವರಾಗಿದ್ದು, ಇವರು ನಾಯಿಗೆ (dog) ಉಸಿರಾಡುವುದಕ್ಕೆ ಗಾಳಿ ಪೂರೈಕೆಯಾಗಲಿ ಎಂದುಕಾರಿನ ಹಿಂಬದಿಯ ಕಿಟಕಿಯನ್ನು ಸ್ವಲ್ಪ ತೆರೆದಿಟ್ಟು ಹೋಗಿದ್ದರು. ಆದರೆ ನಾಯಿಯ ಕತ್ತಿನಲ್ಲಿದ್ದ ಸಂಕೊಲೆ ಹ್ಯಾಂಡ್ಬ್ರೇಕ್‌ಗೆ ಸಿಲುಕಿಕೊಂಡು ಬಿಗಿಗೊಂಡು ನಾಯಿ ಸಾವಿಗೀಡಾಗಿದೆ ಎಂದು ಶಂಕಿಸಲಾಗಿದೆ. ಕಾರಿನ ಬಾಗಿಲುಗಳು (car Door) ಬಂದ್ ಆಗಿದ್ದರಿಂದ ಸೆಕೆ ತಡೆಯಲಾಗದೇ ಅದು ಕಾರಿನಿಂದ ಹೊರಗೆ ಹಾರಲು ಯತ್ನಿಸಿದ ವೇಳೆ ಅದರ ಕತ್ತಿನಲ್ಲಿದ್ದ ಬೆಲ್ಟ್ ಹ್ಯಾಂಡ್‌ಬ್ರೇಕ್‌ಗೆ ಸಿಲುಕಿಕೊಂಡು ಬಿಗಿಗೊಂಡ ಪರಿಣಾಮ ಈ ಅವಘಡ ಸಂಭವಿಸಿರಬಹುದು ಎಂದು ತಾಜ್‌ಗಂಜ್ ಪೊಲೀಸ್ ಠಾಣೆಯ ಉಸ್ತುವಾರಿ ದೇವೇಂದ್ರ ಶಂಕರ್ ಪಾಂಡೆ ಹೇಳಿದ್ದಾರೆ.
ತಾಜ್‌ಮಹಲ್ ನೋಡಲು ಸ್ಟ್ರೆಚರ್‌ನಲ್ಲಿ ಅಮ್ಮನ ಕರೆತಂದ ಮಗ
ನಾಯಿಯೂ ಕಾರಿನಿಂದ ಹೊರಗೆ ಬರುವ ಸಲುವಾಗಿ ಆಗಾಗ ಹಾರಲು ಯತ್ನಿಸಿದ್ದರಿಂದ ಕತ್ತಿನ ಬೆಲ್ಟ್ ಬಿಗಿಗೊಂಡು ಈ ಅನಾಹುತ ಸಂಭವಿಸಿದೆ. ಕಾರನ್ನು ಕಸ್ಟಡಿಗೆ ಪಡೆದು ಸಾವಿನ ಕಾರಣ ತಿಳಿಯಲು ಶ್ವಾನದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ಮಧ್ಯೆ ಈ ಘಟನೆಯನ್ನು ಪ್ರವಾಸಿಗರು ಯಾರೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ (social Media) ಪೋಸ್ಟ್ ಮಾಡಿದ್ದು ವೈರಲ್ ಆಗಿದೆ.
ಆ ವೀಡಿಯೋದಲ್ಲಿ ಪ್ರವಾಸಿಗರೊಬ್ಬರು, ಜನರಿಗೆ ಮನವಿ ಮಾಡುತ್ತಿದ್ದಾರೆ. ಯಾರೂ ಕೂಡ ತಮ್ಮ ಶ್ವಾನಗಳನ್ನು ಕಾರಿನ ಒಳಗೆ ಲಾಕ್ ಮಾಡಿ ಹೋಗದಂತೆ ಅವರು ಮನವಿ ಮಾಡಿದ್ದಾರೆ. ಈ ಘಟನೆಯಲ್ಲಿ ಪ್ರವಾಸಿ ಮಾರ್ಗದರ್ಶಿ ಶ್ವಾನದ ಮಾಲೀಕರಿಗೆ ಶ್ವಾನವನ್ನು ಕಾರಿನ ಲಾಕ್ ಮಾಡದೇ ಶ್ವಾನಗಳನ್ನು ನೋಡಿಕೊಳ್ಳುವ ಪ್ರದೇಶದಲ್ಲಿ ಬಿಟ್ಟು ಹೋಗಿ ಎಂದು ಮನವಿ ಮಾಡಿದ್ದರು. ಆದರೂ ಅವರು ಶ್ವಾನವನ್ನು ಕಾರಿನಲ್ಲಿ ಬಿಟ್ಟು ಹೋದರು. ಪರಿಣಾಮ ಶ್ವಾನ ಶವವಾಗಿದೆ ಎಂದು ಅವರು ವೀಡಿಯೋದಲ್ಲಿ ಹೇಳುತ್ತಿದ್ದಾರೆ.
ಅಮ್ಮನ ತ್ಯಾಗಕ್ಕೆ ಸಾಟಿಯುಂಟೇ..ತಾಯಿಯ ನೆನಪಿಗಾಗಿ ಮಿನಿ ತಾಜ್‌ಮಹಲ್ ಕಟ್ಟಿಸಿದ ಮಗ
ಈ ವೀಡಿಯೋ ನೋಡಿದ ಅನೇಕರು ಶ್ವಾನದ ಮಾಲೀಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶ್ವಾನವನ್ನು ಕಾಳಜಿ ಮಾಡಲಾಗದಿದ್ದರೆ ಶೋಕಿಗೋಸ್ಕರ ಸಾಕದಿರಿ ಎಂದು ವೀಡಿಯೋ ನೋಡಿದ ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇಂತಹವರ ವಿರುದ್ಧ ಪ್ರಕರಣ ದಾಖಲಿಸಬೇಕು. ಶ್ವಾನವನ್ನು ಕಾಳಜಿ ಮಾಡಲಾಗದಿದ್ದರೆ ಏಕೆ ಸಾಕುತ್ತೀರಿ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.
